For Quick Alerts
ALLOW NOTIFICATIONS  
For Daily Alerts

ಕಣ್ಣಿನ ಕಪ್ಪು ವರ್ತುಲಗಳ ನಿವಾರಣೆಗೆ ಮನೆಮದ್ದು

By Arshad
|

ಕಣ್ಣಕೆಳಗಿನ ಕಪ್ಪು ವರ್ತುಲಗಳು (ಡಾರ್ಕ್ ಸರ್ಕಲ್‌) ಪುರುಷರನ್ನೂ ಮಹಿಳೆಯರನ್ನೂ ಸಮಾನವಾಗಿ ಕಾಡುತ್ತವೆ. ಇದಕ್ಕೆ ಕೆಲವಾರು ಕಾರಣಗಳಿವೆ. ಮಾನಸಿಕ ಒತ್ತಡ, ನಿದ್ದೆಯ ಕೊರತೆ, ಹಾರ್ಮೋನುಗಳ ಬದಲಾವಣೆ, ಬದಲಾದ ಜೀವನಶೈಲಿ, ಅನುವಂಶಿಕ ಕಾರಣಗಳು ಮೊದಲಾದವು ಪ್ರಮುಖವಾಗಿವೆ. ಕಣ್ಣಿನ ಸುತ್ತ ಕಪ್ಪು ಕಲೆ ನಿವಾರಣೆಗೆ 6 ಮನೆಮದ್ದು

ಆದರೆ ಇದಕ್ಕೆ ಸರಿಯಾದ ಸಮಯದಲ್ಲಿ ಆರೈಕೆ ನೀಡದೇ ಹೋದರೆ ಇವು ಇನ್ನಷ್ಟು ಗಾಢವಾಗುತ್ತಾ ಸಹಜ ಸೌಂದರ್ಯವನ್ನೇ ಕಸಿದುಕೊಳ್ಳಬಹುದು ಹಾಗೂ ಆರೋಗ್ಯದಲ್ಲಿಯೂ ತೀವ್ರ ತೊಂದರೆಗಳನ್ನು ತಂದೊಡ್ಡಬಹುದು. ಈ ತೊಂದರೆಗೆ ರಾಸಾಯನಿಕ ಆಧಾರಿತ ಪ್ರಸಾಧನಗಳೇನೋ ಇವೆ. ಆದರೆ ಇವು ಎಲ್ಲರಿಗೂ ಸೂಕ್ತವಲ್ಲ. ಕೆಲವರ ಚರ್ಮ ಸೂಕ್ಷ್ಮವಾಗಿದ್ದು ಈ ರಾಸಾಯನಿಕಗಳು ಹಾನಿ ಎಸಗಬಹುದು. ಆದ್ದರಿಂದ ಸುರಕ್ಷಿತವಾದ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಎರಡೇ ದಿನಗಳಲ್ಲಿ ಈ ಕಪ್ಪುವರ್ತುಲಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು.....

ಟೊಮೆಟೊ

ಟೊಮೆಟೊ

ಒಂದು ಚಿಕ್ಕಚಮಚ ಟೊಮೆಟೊ ಜ್ಯೂಸ್ ಮತ್ತು ಒಂದು ಚಿಕ್ಕಚಮಚ ಲಿಂಬೆರಸ ಬೆರೆಸಿ ಕಪ್ಪು ವರ್ತುಲಗಳ ಮೇಲೆ ಹಚ್ಚಿಕೊಳ್ಳಿ. ಸುಮಾರು ಹತ್ತು ನಿಮಿಷ ಹಾಗೇ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ಪುನರಾವರ್ತಿಸಿ. ಈ ಮಿಶ್ರಣದೊಂದಿಗೆ ಕೊಂಚ ಪುದೀನಾ ಎಲೆಗಳನ್ನು ಅರೆದು ನಿಯಮಿತವಾಗಿ ಹಚ್ಚಿಕೊಳ್ಳುವ ಮೂಲಕವೂ ಕಪ್ಪುವರ್ತುಲಗಳು ಕಡಿಮೆಯಾಗುತ್ತವೆ ಹಾಗೂ ಮುಂದೆ ಬರುವುದರಿಂದ ತಪ್ಪಿಸುತ್ತದೆ.

ಆಲೂಗಡ್ಡೆ ತುರಿ

ಆಲೂಗಡ್ಡೆ ತುರಿ

ಒಂದು ಹಸಿ ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು ಇದರಿಂದ ರಸವನ್ನು ಹಿಂಡಿ. ಒಂದು ಹತ್ತಿಯುಂಡೆಯನ್ನು ಈ ರಸದಲ್ಲಿ ಅದ್ದಿ ಕಣ್ಣುಗಳನ್ನು ಮುಚ್ಚಿಕೊಂಡು ಈ ಹತ್ತಿಯುಂಡೆಯನ್ನು ಕಪ್ಪು ವರ್ತುಲ, ಕಣ್ಣಿನ ರೆಪ್ಪೆ, ಹುಬ್ಬುಗಳವರೆಗೆ ವ್ಯಾಪಿಸುವಂತೆ ಇರಿಸಿ. ನಿಮ್ಮ ಕಣ್ಣುಗಳ ವರ್ತುಲಗಳು ಎಷ್ಟು ದೊಡ್ಡದಿರುತ್ತದೆಯೋ ಅದಕ್ಕಿಂತಲೂ ಕೊಂಚ ದೊಡ್ಡದೇ ಇರುವ ಹತ್ತಿಯುಂಡೆಯನ್ನು ತಯಾರಿಸಿಟ್ಟುಕೊಳ್ಳಿ. ಈ ಉಂಡೆಗಳು ಸುಮಾರು ಹತ್ತು ನಿಮಿಷವಾದರೂ ಹಾಗೇ ಇರಲಿ. ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.ತ್ವಚೆಯ ಆರೈಕೆಗೆ ತೊಗರಿಕಾಳು-ಆಲೂಗಡ್ಡೆಯ ಫೇಸ್‌ ಪ್ಯಾಕ್

ಹಸಿ ಹಾಲು

ಹಸಿ ಹಾಲು

ಒಂದು ಹತ್ತಿಯುಂಡೆಯನ್ನು ತಣ್ಣಗಿರುವ ಹಸಿ ಹಾಲಿನಲ್ಲಿ ಅದ್ದಿ. ಹಸಿ ಹಾಲು ಲಭ್ಯವಿಲ್ಲದಿದ್ದರೆ ಐಸ್ ಕರಗಿದ ತಣ್ಣನೆಯ ನೀರೂ ಆಗಬಹುದು. ಈ ಉಂಡೆಯನ್ನು ಇಡಿಯ ಕಣ್ಣಿನ ಭಾಗ ಆವರಿರುವಂತೆ ಇರಿಸಿ ಕೊಂಚ ಕಾಲದ ಬಳಿಕ ನಿವಾರಿಸಿ ತಣ್ಣೀರಿನಿಂದ ತೊಳೆದುಕೊಳ್ಳಿ.ಬ್ಯೂಟಿ ಟಿಪ್ಸ್: ಮುಖದ ಗೌರವರ್ಣಕ್ಕೆ ಹಾಲಿನ ಫೇಸ್ ಪ್ಯಾಕ್

ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ

ಬಾದಾಮಿಯಲ್ಲಿ ವಿಟಮಿನ್ ಇ ಹೇರಳವಾಗಿದ್ದು ಇದರ ತಣಿಸುವ ಗುಣ ಚರ್ಮವನ್ನು ಕೋಮಲವಾಗಿಸಲು ನೆರವಾಗುತ್ತದೆ. ಬಾದಾಮಿ ಎಣ್ಣೆಯ ಸರಿಯಾದ ಬಳಕೆಯಿಂದ ಒಂದೇ ವಾರದಲ್ಲಿ ಕಪ್ಪು ವರ್ತುಲಗಳು ಮಾಯವಾಗುತ್ತವೆ. ಇದಕ್ಕಾಗಿ ಕೊಂಚ ಬಾದಾಮಿ ಎಣ್ಣೆಯನ್ನು ಕಪ್ಪು ವರ್ತುಲದ ಮೇಲೆ ಹಾಕಿ ನಯವಾಗಿ ಮಸಾಜ್ ಮಾಡಿ. ರಾತ್ರಿ ಮಲಗುವ ಮುನ್ನ ಮಸಾಜ್ ಮಾಡಿ ಇಡಿಯ ರಾತ್ರಿ ಹಾಗೇ ಬಿಟ್ಟು ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಬಾದಾಮಿ ಎಣ್ಣೆ-ದುಬಾರಿಯಾದರೂ ಕೂದಲಿಗೆ ಒಳ್ಳೆಯದು

ಸೌತೆರಸವನ್ನು ಬಳಸಿ

ಸೌತೆರಸವನ್ನು ಬಳಸಿ

ಎಳೆಯ ಸೌತೆಕಾಯಿಯನ್ನು ಅಡ್ಡಲಾಗಿ ಕತ್ತರಿಸಿದಾಗ ಒಸರುವ ರಸದಲ್ಲಿ ಸಂಕೋಚಕ (astringent) ಗುಣವಿದೆ. ಇದು ನಿಮ್ಮ ಚರ್ಮವನ್ನು ಸಂಕುಚಿಸಲು ನೆರವಾಗುತ್ತದೆ. ಈ ರಸವನ್ನು ತೆಗೆಯುವ ಅತ್ಯುತ್ತಮ ವಿಧಾನವೆಂದರೆ ಸೌತೆಯ ತುದಿಯಲ್ಲಿ ಅಡ್ಡಲಾಗಿ ಬಿಲ್ಲೆಯೊಂದನ್ನು ಕತ್ತರಿಸಿ ಕತ್ತರಿಸಿದ ಭಾಗಕ್ಕೇ ಮತ್ತೆ ಅಂಟಿಸಿ ನಯವಾಗಿ ಉಜ್ಜಿ, ಸ್ವಲ್ಪ ಸಮಯದ ಬಳಿಕ ಎರಡೂ ಬದಿಗಳಿಂದ ಚಮಚದಿಂದ ರಸವನ್ನು ಕೆರೆದು ತೆಗೆಯಿರಿ. ಇದೇ ರೀತಿ ನಾಲ್ಕಾರು ಬಿಲ್ಲೆಗಳನ್ನು ಉಜ್ಜುತ್ತಾ ಬಂದರೆ ಒಂದು ಚಮಚದಷ್ಟು ರಸ ಸಂಗ್ರಹವಾಗುತ್ತದೆ. ಈ ರಸವನ್ನು ಮಲಗಿಕೊಂಡು ಕಣ್ಣುಗಳ ವರ್ತುಲಗಳ ಮೇಲೆ ದಪ್ಪನಾಗಿ ಹಚ್ಚಿ. ಸುಮಾರು ಹತ್ತು ಅಥವಾ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೌತೆಯನ್ನು ಜ್ಯೂಸರಿನಲ್ಲಿ ಕಡೆದು ರಸ ಹಿಂಡಿಯೂ ಬಳಸಬಹುದು, ಆದರೆ ಇದರ ಪರಿಣಾಮ ನಿಧಾನವಾಗಿರುತ್ತದೆ.

ಸನ್ ಸ್ಕ್ರೀನ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಬಳಸಿ

ಸನ್ ಸ್ಕ್ರೀನ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಬಳಸಿ

ಒಂದು ವೇಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಸನ್ ಸ್ಕ್ರೀನ್ ಬಳಸುವುದು ಅನಿವಾರ್ಯವಾದರೆ ಕಪ್ಪು ವರ್ತುಲಗಳಿಗೆ ಹಚ್ಚುವ ಸಂದರ್ಭದಲ್ಲಿ ಕೊಂಚ ನೀರಿನೊಂದಿಗೆ ಬೆರೆಸಿ ಹಚ್ಚಿ.

ಸತತವಾಗಿ ನೀರು ಕುಡಿಯುತ್ತಿರಿ

ಸತತವಾಗಿ ನೀರು ಕುಡಿಯುತ್ತಿರಿ

ದಿನದ ಎಲ್ಲಾ ಹೊತ್ತಿನಲ್ಲಿ ನೀರು ಸತತವಾಗಿ ಕುಡಿಯುತ್ತಿರಿ. ನೀರಿನ ಕೊರತೆ ಕಪ್ಪು ವರ್ತುಲಗಳು ಕಡಿಮೆಯಾಗುವ ಗತಿಯನ್ನು ದಮನಿಸುತ್ತದೆ. ದಿನದ ಮೊದಲ ಪಾನೀಯವನ್ನಾಗಿ ಲಿಂಬೆರಸ ಸೇರಿಸಿದ ನೀರು ಕುಡಿಯಿರಿ.

ಸಂತುಲಿತ ಆಹಾರ ಸೇವಿಸಿ

ಸಂತುಲಿತ ಆಹಾರ ಸೇವಿಸಿ

ನಿಮ್ಮ ಆಹಾರ ಹೆಚ್ಚು ಸಂತುಲಿತವಾಗಿರಲಿ. ಅಂದರೆ ವಿಟಮಿನ್ ಎ,ಸಿ,ಇ ಮತ್ತು ಕೆ ಹೆಚ್ಚಿರುವ ಹಸಿತರಕಾರಿಗಳು, ಮೊಸರು, ಚೀಸ್, ಹಸಿರು ಸೊಪ್ಪುಗಳು, ತಾಜಾ ಹಣ್ಣುಗಳು ಮತ್ತು ಹಣ್ಣುಗಳ ಜ್ಯೂಸ್ ಗಳನ್ನು ಸೇವಿಸಿ.

English summary

Easy home remedies to get rid of dark circles

Dark circles are not a serious skin problem, but they make people look tired, exhausted, unhealthy and older. You can easily get rid of unsightly shadows under your eyes using some easy home remedies.
X
Desktop Bottom Promotion