For Quick Alerts
ALLOW NOTIFICATIONS  
For Daily Alerts

ಮುಖದ ಅಂದ ಹೆಚ್ಚಿಸುವ-'ಟೊಮೆಟೊ ಹಣ್ಣಿನ' ಫೇಸ್ ಪ್ಯಾಕ್

ಚರ್ಮದ ಆರೈಕೆಗೆ ಟೊಮೇಟೋ ಉತ್ತಮವೇ? ಈ ಪ್ರಶ್ನೆಗೆ ಸೌಂದರ್ಯತಜ್ಞರು ಹೌದು ಎಂದೇ ಉತ್ತರಿಸುತ್ತಾರೆ. ಏಕೆಂದರೆ ಟೊಮೆಟೊಗೆ ಕೆಂಪು ಬಣ್ಣ ಬರಲು ಕಾಣವಾದ ಲೈಕೋಪೀನ್ ಎಂಬ ಪೋಷಕಾಂಶ ಚರ್ಮದ ಆರೈಕೆಗೆ ಉತ್ತಮವಾಗಿದೆ

By Hemanth
|

ಹಣ್ಣು ಅಲ್ಲದ ತರಕಾರಿಯು ಆಗಿರದ ಟೊಮೆಟೊದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಟೊಮೆಟೊದಲ್ಲಿರುವ ಕೆಲವೊಂದು ಅಂಶಗಳು ನಮ್ಮ ದೇಹಕ್ಕೆ ತುಂಬಾ ಲಾಭಕಾರಿ. ಭಾರತೀಯರು ಮಾತ್ರವಲ್ಲದೆ ವಿಶ್ವದೆಲ್ಲೆಡೆಯಲ್ಲಿ ಟೊಮೆಟೊವನ್ನು ಹೆಚ್ಚಿನ ಅಡುಗೆಗಳಲ್ಲಿ ಬಳಸುತ್ತಾರೆ. ಹಸಿಯಾಗಿ ತಿನ್ನುವ ಉದ್ದೇಶದಿಂದ ಟೊಮೆಟೊವನ್ನು ಸಲಾಡ್‌ಗಳಲ್ಲಿ ಬಳಕೆ ಮಾಡಲಾಗುತ್ತದೆ. ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ

ಟೊಮೆಟೊದಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ವಿಟಮಿನ್ ಸಿ ಸಮೃದ್ಧವಾಗಿದೆ. ಟೊಮೆಟೊದಲ್ಲಿರುವ ಲೈಕೊಪೆನೆ ಎನ್ನುವ ಅಂಶವು ಚರ್ಮದ ಬಣ್ಣವನ್ನು ಹೆಚ್ಚಿಸಿ ಬಿಸಿಲಿನಿಂದ ಆಗಿರುವಂತಹ ಕಲೆಗಳನ್ನು ನಿವಾರಣೆ ಮಾಡುತ್ತದೆ. ದೇಹದಲ್ಲಿರುವ ಫ್ರೀ ರ್ಯಾಡಿಕಲ್ ಅನ್ನು ಟೊಮೆಟೊದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಕೊಂದು ಹಾಕುವ ಕಾರಣದಿಂದ ವಯಸ್ಸಾಗುವ ಲಕ್ಷಣಗಳು ಗೋಚರಿಸುವುದಿಲ್ಲ.

ಟೊಮೆಟೊದಲ್ಲಿರುವ ಹಲವಾರು ರೀತಿಯ ಔಷಧೀಯ ಗುಣಗಳಿಂದ ಚರ್ಮದ ಸೋಂಕನ್ನು ಕೂಡ ತಡೆಗಟ್ಟಬಹುದು. ಟೊಮೆಟೊದಿಂದ ಮಾಡಿದ ಮಾಸ್ಕ್ ಬೇಸಿಗೆಯಲ್ಲಿ ನಿಮಗೆ ಯಾವ ರೀತಿ ನೆರವಿಗೆ ಬರಲಿದೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ಹೇಳಿಕೊಡಲಿದೆ...

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್

ಟೊಮೆಟೊ ಮತ್ತು ಜೇನುತುಪ್ಪದ ಮಾಸ್ಕ್

ಒಂದು ಟೊಮೆಟೊದ ತಿರುಳನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಎರಡು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಇದಕ್ಕೆ ಒಂದು ಚಮಚ ನಿಂಬೆರಸ ಹಾಕಿ ಮತ್ತು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ. ಟೊಮೆಟೊ, ಜೇನುತುಪ್ಪದ ಮಾಸ್ಕ್ ಒಣ ಚರ್ಮದವರಿಗೆ ತುಂಬಾ ಒಳ್ಳೆಯದು. ಟೊಮೆಟೊ ಮತ್ತು ಜೇನುತುಪ್ಪವು ಪೋಷಕಾಂಶಗಳನ್ನು ಹೊಂದಿರುವ ಕಾರಣದಿಂದ ಇದು ಚರ್ಮಕ್ಕೆ ಮಾಯಿಶ್ಚರೈಸ್ ನೀಡುವುದು.

ಟೊಮೆಟೊ ಮತ್ತು ಅವಕಾಡೊ ಫೇಸ್ ಮಾಸ್ಕ್

ಟೊಮೆಟೊ ಮತ್ತು ಅವಕಾಡೊ ಫೇಸ್ ಮಾಸ್ಕ್

ಟೊಮೆಟೊ ಮತ್ತು ಅವಕಾಡೊ ಫೇಸ್ ಮಾಸ್ಕ್ ಒಣ ಚರ್ಮಕ್ಕೆ ಪೋಷಣೆಯನ್ನು ನೀಡುವುದು. ಒಂದು ಟೊಮೆಟೊದ ತಿರುಳಿಗೆ ಒಂದು ಅವಕಾಡೊದ ತಿರುಳನ್ನು ಕಿವುಚಿ ಹಾಕಿಬಿಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಕಾಂತಿಯುತ ಹಾಗೂ ಮೊಶ್ಚಿರೈಸ್ ಹೊಂದಿರುವ ತ್ವಚೆಗಾಗಿ ಈ ಫೇಸ್ ಮಾಸ್ಕ್ ಅನ್ನು ಬಳಸಿ.

ಟೊಮೆಟೊ ಮತ್ತು ಮೊಸರಿನ ಫೇಸ್ ಮಾಸ್ಕ್

ಟೊಮೆಟೊ ಮತ್ತು ಮೊಸರಿನ ಫೇಸ್ ಮಾಸ್ಕ್

ಟೊಮೆಟೊ ಮತ್ತು ಮೊಸರಿನ ಮಾಸ್ಕ್ ಚರ್ಮದ ಬಣ್ಣವನ್ನು ಬಿಳಿಯಾಗಿಸಲು ತುಂಬಾ ಒಳ್ಳೆಯದು. ಒಂದು ಟೊಮೆಟೊ ತೆಗೆದುಕೊಳ್ಳಿ ಮತ್ತು ಅದಕ್ಕೆ ಮೊಸರನ್ನು ಸೇರಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಶಿನ ಹಾಕಿಕೊಳ್ಳಿ. ಈ ಎಲ್ಲದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಪ್ರತಿದಿನ ಈ ಮಾಸ್ಕ್ ಹಚ್ಚಿಕೊಂಡರೆ ಚರ್ಮ ಬಿಳಿಯಾಗುವುದು.

ಟೊಮಟೊ ಹಾಗೂ ಲಿಂಬೆ ರಸ

ಟೊಮಟೊ ಹಾಗೂ ಲಿಂಬೆ ರಸ

ಟೊಮಟೊವನ್ನು ಪೇಸ್ಟ್ ರೀತಿ ಮಾಡಿ ಲಿಂಬೆ ರಸ ಹಾಕಿ ಮಿಶ್ರ ಮಾಡಿ ಮುಖಕ್ಕೆ ಹಚ್ಚ 10 ನಿಮಿಷ ಬಿಡಬೇಕು. ನಂತರ ತಣ್ಣೀರಿನಿಂದ ಅಥವಾ ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು.ಈ ರೀತಿ ದಿನಾ ಮಾಡಿದರೆ ಮುಖ ನುಣಪನ್ನು ಪಡೆಯುತ್ತದೆ ಮತ್ತು ಮೊಡವೆ ಕಡಿಮೆಯಾಗುತ್ತದೆ.

ಹೊಳೆಯುವ ಮುಖವನ್ನು ಪಡೆಯಲು

ಹೊಳೆಯುವ ಮುಖವನ್ನು ಪಡೆಯಲು

ಟೊಮೆಟೊವನ್ನು ಚೆನ್ನಾಗಿ ಹಿಸುಕಿ ಪೇಸ್ಟ್ ರೀತಿ ಮಾಡಬೇಕು. ಅದಕ್ಕೆ ಸ್ವಲ್ಪ ಓಟ್ ಮೀಲ್ಸ್ ಮತ್ತು ಒಂದು ಚಮಚ ಮೊಸರು ಸೇರಿಸಬೇಕು. ನಂತರ ಚೆನ್ನಾಗಿ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 2-3 ನಿಮಿಷ ಉಜ್ಜಿ ಹಾಗೇ ಬಿಡಬೇಕು. ನಂತರ ತಣ್ಣಿರಿನಿಂದ ಮುಖ ತೊಳೆಯಬೇಕು. ಈ ರೀತಿ ಮಾಡಿ ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ ಹೋಗಲಾಡಿಸಿ ಹೊಳೆಯುವ ಮುಖವನ್ನು ಪಡೆಯಬಹುದು.

English summary

Different Tomato Face Mask Recipes You Should Try At Home

Differeent types of tomato face pack recipes help benefit your skin to the fullest. Well, here we mention to you some of the best tomato face mask recipes that you must try using at home, take a look.
X
Desktop Bottom Promotion