For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯ ಹೆಚ್ಚಿಸಲು 'ಅಕ್ಕಿ ಹಿಟ್ಟಿನ' ಫೇಸ್ ಪ್ಯಾಕ್

ತ್ವಚೆಯ ಆರೈಕೆಗೆ ಅಕ್ಕಿಹಿಟ್ಟು ಪ್ರಮುಖ ಪಾತ್ರ ವಹಿಸಿದ್ದು ಇವರ ಸೌಂದರ್ಯವನ್ನು ಹೆಚ್ಚಿಸಿರುವ ಗುಟ್ಟನ್ನು ಇಂದು ಅರಿಯೋಣ....

By Manu
|

ಅಕ್ಕಿಯನ್ನು ಬೇಯಿಸಿದ ಬಳಿಕ ಸೋಸಿದ ನೀರಿನಿಂದ ಮುಖವನ್ನು ತೊಳೆದುಕೊಳ್ಳುವುದರ ಮಹತ್ವವನ್ನು ನೀವು ಈಗಾಗಲೇ ಅರಿತಿದ್ದೀರಿ. ಅಂತೆಯೇ ಅಕ್ಕಿಹಿಟ್ಟನ್ನು ಮುಖಲೇಪದ ರೂಪದಲ್ಲಿ ಬಳಸುವುದರಿಂದಲೂ ಹಲವಾರು ಪ್ರಯೋಜನಗಳಿವೆ. ಅಕ್ಕಿ ತೊಳೆದ ನೀರಿನಲ್ಲಿದೆ ಸೌಂದರ್ಯದ ಗುಟ್ಟು...

ಭಾರತ, ಚೀನಾ ಮತ್ತಿತರ ದೇಶಗಳಲ್ಲಿ ಈ ವಿಧಾನ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಅತಿ ಕಡಿಮೆ ಖರ್ಚಿನಲ್ಲಿ ಮುಖದ ಅಂದವನ್ನು ಹೆಚ್ಚಿಸುತ್ತದೆ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲದಿರುವ ಕಾರಣ ಇವು ಸುರಕ್ಷಿತವೂ ಆಗಿವೆ. ಬನ್ನಿ ಕೆಲವು ಫಲಪ್ರದ ವಿಧಾನಗಳನ್ನು ಇಂದಿನ ಲೇಖನದಲ್ಲಿ ನೋಡೋಣ... ತ್ವಚೆ ಮತ್ತು ಕೂದಲಿಗೆ ಅಕ್ಕಿ ನೀರಿನಿಂದಾಗುವ ಪ್ರಯೋಜನಗಳೇನು?

ಪೂರ್ವಾರ್ಧ ಗೋಳದ ಮಹಿಳೆಯರು ಅತ್ತ ಗಾಢವೂ ಅಲ್ಲದ, ಇತ್ತ ಪೂರ್ಣ ಬಿಳಿಚೂ ಆಲ್ಲದ ನೈಸರ್ಗಿಕ ತ್ವಚೆಯ ವರ್ಣವನ್ನು ಹೊಂದಿದ್ದು ಹೆಚ್ಚು ಆರೋಗ್ಯಕರವಾಗಿರುತ್ತಾರೆ. ಇವರ ತ್ವಚೆಯ ಆರೈಕೆಗೆ ಅಕ್ಕಿಹಿಟ್ಟು ಪ್ರಮುಖ ಪಾತ್ರ ವಹಿಸಿದ್ದು ಇವರ ಸೌಂದರ್ಯವನ್ನು ಹೆಚ್ಚಿಸಿರುವ ಗುಟ್ಟನ್ನು ಇಂದು ಅರಿಯೋಣ....


ತ್ವಚೆಯ ವರ್ಣ ಬಿಳಿಚಿಸಲು

ತ್ವಚೆಯ ವರ್ಣ ಬಿಳಿಚಿಸಲು

ಸಮಪ್ರಮಾಣದಲ್ಲಿ ಅಕ್ಕಿಹಿಟ್ಟು ಮತ್ತು ಮೊಸರನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಮುಖದ ಮೇಲೆ ಹಾಗೂ ಕುತ್ತಿಗೆಗೆ ಹಚ್ಚಿ ಸುಮಾರು ಹತ್ತರಿಂದ ಹದಿನೈದು ನಿಮಿಷದ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಈ ವಿಧಾನದಿಂದ ನಿಧಾನವಾಗಿ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ.

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಕ್ಕೆ

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಕ್ಕೆ

ಇಂದಿನ ದಿನಗಳಲ್ಲಿ ಹೊರಗೆ ಕೆಲಸ ಮಾಡುವ ಉದ್ಯೋಗಸ್ಥೆಯರಿಗೆ ಕಣ್ಣ ಕೆಳಗಿನ ಕಪ್ಪು ವರ್ತುಲ ಬಹುವಾಗಿ ಕಾಡುತ್ತಿದೆ. ಇದನ್ನು ಸರಿಯಾಗಿಸಲು ಹರಳೆಣ್ಣೆ ಮತ್ತು ಅಕ್ಕಿಹಿಟ್ಟನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ.

ಕಣ್ಣ ಕೆಳಗಿನ ವರ್ತುಲದ ಮೇಲೆ ಹಚ್ಚಿ...

ಕಣ್ಣ ಕೆಳಗಿನ ವರ್ತುಲದ ಮೇಲೆ ಹಚ್ಚಿ...

ಈ ಲೇಪನವನ್ನು ಕಣ್ಣ ಕೆಳಗಿನ ವರ್ತುಲದ ಮೇಲೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಆರೈಕೆಯಿಂದ ಕಪ್ಪು ವರ್ತುಲ ಹಾಗೂ ಚೀಲದಂತೆ ತುಂಬಿಕೊಂಡಿರುವುದೂ ಕಡಿಮೆಯಾಗುತ್ತದೆ.

ಮುಖದ ಪೌಡರ್ ರೂಪದಲ್ಲಿ ಬಳಸಲು...

ಮುಖದ ಪೌಡರ್ ರೂಪದಲ್ಲಿ ಬಳಸಲು...

ಮೆಕ್ಕೆ ಜೋಳದ ಹಿಟ್ಟು (cornstarch powder) ಹಾಗೂ ಕೊಂಚ ಅಕ್ಕಿಹಿಟ್ಟನ್ನು ಬೆರೆಸಿ ನಿಮ್ಮ ಮುಖದ ಪೌಡರ್ ಅನ್ನು ಮನೆಯಲ್ಲಿಯೇ ತಯಾರಿಸಿ. ಈ ಪೌಡರ್ ನುಣುಪಾಗಿಯೂ, ಸೌಮ್ಯವಾಗಿಯೂ ಇದ್ದು ಮುಖದ ಎಣ್ಣೆಪಸೆಯನ್ನು ಸಮರ್ಥವಾಗಿ ನಿವಾರಿಸುತ್ತದೆ ಹಾಗೂ ಮುಖದ ಅಂದವನ್ನು ಬಹಳ ಹೊತ್ತಿನವರೆಗೆ ಕಾಪಾಡುತ್ತದೆ.

ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸಲು...

ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸಲು...

ಕೊಂಚ ಅಕ್ಕಿಪುಡಿ ಹಾಗೂ ಸೌತೆಕಾಯಿಯ ರಸ ಹಾಗೂ ಕೊಂಚ ಲಿಂಬೆ ರಸ ಸೇರಿಸಿ ನಯವಾದ ಲೇಪನ ತಯಾರಿಸಿ.

ವಾರಕ್ಕೊಮ್ಮೆ ಅಥವಾ ಎರಡು ಬಾರಿ....

ವಾರಕ್ಕೊಮ್ಮೆ ಅಥವಾ ಎರಡು ಬಾರಿ....

ಈ ಲೇಪನವನ್ನು ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹತ್ತು ನಿಮಿಷಗಳ ಕಾಲ ಹಚ್ಚಿಕೊಳ್ಳುವ ಮೂಲಕ ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ. ಕೆಲವು ಹಳೆಯ ಕಲೆಗಳನ್ನು ತೊಲಗಿಸುವ ಮೂಲಕ ಇಅದ್ರ ಬೋನಸ್ ಉಪಯೋಗವನ್ನೂ ಪಡೆಯಬಹುದು.

English summary

Benefits Of Using Rice flour Face Packs

You must have heard of the benefits of using rice water on your face. Also, there are several benefits of using rice powder in face packs, and we will tell you about a few of them here. It is one of the famous Asian beauty secrets to use rice water and rice powder for your face. It provides a cost-effective way to get many skincare benefits.
X
Desktop Bottom Promotion