For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ 'ಬೀಟ್‌ರೂಟ್' ಫೇಸ್ ಮಾಸ್ಕ್

ಬೀಟ್ರೂಟ್ ರಸವನ್ನು ಬಳಸಿ ತಯಾರಿಸಿದ ಮುಖಲೇಪವನ್ನು ಹಚ್ಚಿಕೊಳ್ಳುವ ಮೂಲಕ ಹಲವು ವಿಧದಲ್ಲಿ ತ್ವಚೆಗೆ ಪ್ರಯೋಜನವನ್ನು ಪಡೆಯಬಹುದು.

By Arshad
|

ಬೀಟ್‌ರೂಟ್ ಆರೋಗ್ಯಕ್ಕೆ ಎಷ್ಟು ಉತ್ತಮವೋ, ಅಂತೆಯೇ ಸೌಂದರ್ಯಕ್ಕೂ ಉತ್ತಮವಾಗಿದೆ. ಆದರೆ ಇದರ ಬಣ್ಣ ಮತ್ತು ರುಚಿಯನ್ನು ಹೆಚ್ಚಿನವರು ಇಷ್ಟಪಡದೇ ಇರುವ ಕಾರಣ ಇದು ಎಲ್ಲಾ ಗುಣಗಳಿದ್ದು ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಇದು ವಿಶ್ವದ ಅತ್ಯಂತ ಪೌಷ್ಟಿಕ ಆಹಾರಗಳಲ್ಲೊಂದಾಗಿದೆ. ಕೆಂಪು ಕೆಂಪಾದ ಗಡ್ಡೆ ಬೀಟ್‌ರೂಟ್‌ನ ವೈಶಿಷ್ಟ್ಯವೇನು?

ಇದರಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಪ್ರೋಟೀನುಗಳು ಮತ್ತು ಆಂಟಿ ಆಕ್ಸಿಡೆಂಟುಗಳಿದ್ದು ತ್ವಚೆಯ ಕಾಂತಿಯನ್ನು ಹೆಚ್ಚೂ ಕಡಿಮೆ ತಕ್ಷಣವೇ ಹೆಚ್ಚಿಸಲು ನೆರವಾಗುತ್ತದೆ. ಅಬ್ಬಬ್ಬಾ ಬೀಟ್‌ರೂಟ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ..?

ಬೀಟ್ರೂಟ್ ರಸವನ್ನು ಬಳಸಿ ತಯಾರಿಸಿದ ಮುಖಲೇಪವನ್ನು ಹಚ್ಚಿಕೊಳ್ಳುವ ಮೂಲಕ ಹಲವು ವಿಧದಲ್ಲಿ ತ್ವಚೆಗೆ ಪ್ರಯೋಜನವನ್ನು ಪಡೆಯಬಹುದು. ವಿಶೇಷವಾಗಿ ಬಳಲಿದ ತ್ವಚೆಗೆ ತಕ್ಷಣವೇ ಆರೈಕೆ ನೀಡಿ ಮೊದಲಿನಂತಾಗಿಸಲು ಹಾಗೂ ಚರ್ಮದ ತೊಂದರೆಗಳಿಂದ ಮುಕ್ತಿ ಪಡೆಯಲು ಈ ಮುಖಲೇಪ ಉತ್ತಮವಾಗಿದೆ. ಬನ್ನಿ, ಕಳೆಗುಂದಿದ ತ್ವಚೆಯ ಆರೈಕೆಗೆ ಬೀಟ್ರೂಟ್ ಬಳಸಿ ತಯಾರಿಸಬಹುದಾದ ವಿವಿಧ ಮುಖಲೇಪಗಳ ಬಗ್ಗೆ ಅರಿಯೋಣ....

ಬೀಟ್ರೂಟ್ ಮತ್ತು ಬಾದಾಮಿ ಎಣ್ಣೆಯ ಮುಖಲೇಪನ

ಬೀಟ್ರೂಟ್ ಮತ್ತು ಬಾದಾಮಿ ಎಣ್ಣೆಯ ಮುಖಲೇಪನ

ಬೀಟ್ರೂಟ್ ನ ಕೆಲವು ತೆಳುವಾದ ಬಿಲ್ಲೆಗಳನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನೀರಿಲ್ಲದೇ ಅರೆದು ನಯವಾದ ಲೇಪ ತಯಾರಿಸಿ. ಈ ಲೇಪನದ ಸುಮಾರು ಒಂದು ಚಮದಷ್ಟು ಪ್ರಮಾಣಕ್ಕೆ ಸುಮಾರು ಮೂರರಿಂದ ನಾಲ್ಕು ಹನಿ ಬಾದಾಮಿ ಎಣ್ಣೆ ಮತ್ತು ಒಂದೆರಡು ಹನಿ ಆಲಿವ್ ಎಣ್ಣೆಯನ್ನು ಬೆರೆಸಿ ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಿ. ಕೆಲವು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಂಡರೆ ಕಳೆಗುಂದಿದ ಚರ್ಮ ತಕ್ಷಣವೇ ಕಾಂತಿಯುಕ್ತವಾಗುತ್ತದೆ.

ಬೀಟ್ರೂಟ್ ಮತ್ತು ಮುಲ್ತಾನಿ ಮಿಟ್ಟಿ ಮುಖಲೇಪ

ಬೀಟ್ರೂಟ್ ಮತ್ತು ಮುಲ್ತಾನಿ ಮಿಟ್ಟಿ ಮುಖಲೇಪ

ಈ ಮುಖಲೇಪವನ್ನು ತಯಾರಿಸಲು ಮೊದಲಿನಂತೆಯೇ ಎರಡು ಚಮಚ ಬೀಟ್ರೂಟ್ ಲೇಪವನ್ನು ತಯಾರಿಸಿ ಇದಕ್ಕೆ ಎರಡು ಚಮಚದಷ್ಟು ಮುಲ್ತಾನಿ ಮಿಟ್ಟಿ ಹಾಗೂ ಒಂದು ಚಮಚ ಲಿಂಬೆರಸ ಬೆರೆಸಿ. ಈ ಲೇಪನವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನದಿಂದ ವಿಶೇಷವಾಗಿ ಬಿಸಿಲಿನಿಂದ ಬಾಡಿದ್ದ ಮತ್ತು ಕಪ್ಪಗಾಗಿದ್ದ ಚರ್ಮ ತಕ್ಷಣವೇ ಸಹಜವರ್ಣ ಮತ್ತು ಕಾಂತಿ ಪಡೆಯುತ್ತದೆ. ಅಲ್ಲದೇ ಮೊಡವೆಗಳ ಕಲೆ ಮತ್ತು ಇತರ ಗುರುತುಗಳನ್ನೂ ನಿವಾರಿಸುತ್ತದೆ.

ಬೀಟ್ರೂಟ್ ಮತ್ತು ಕಿತ್ತಳೆ ರಸದ ಮುಖಲೇಪ

ಬೀಟ್ರೂಟ್ ಮತ್ತು ಕಿತ್ತಳೆ ರಸದ ಮುಖಲೇಪ

ಕೊಂಚ ಬೀಟ್ರೂಟ್ ಮತ್ತು ಕಿತ್ತಳೆಯ ರಸವನ್ನು ಬೆರೆಸಿ ಈ ದ್ರವವನ್ನು ಮುಖದ ಮೇಲೆ ಹಚ್ಚಿಕೊಂಡು ಒಣಗಲು ಬಿಡಿ. ಈ ಲೇಪನದಿಂದ ಸೂರ್ಯನ ಅತಿನೇರಳೆ ಕಿರಣಗಳ ವಿರುದ್ದ ರಕ್ಷಣೆ ಪಡೆಯಲು ಸಾಧ್ಯ. ಆದ್ದರಿಂದ ಬಿಸಿಲಿಗೆ ಹೊರಹೋಗುವ ಮುನ್ನ ಈ ಲೇಪನವನ್ನು ಹಚ್ಚಿ ತಣ್ಣೀರಿನಿಂದ ಮುಖ ತೊಳೆದುಕೊಂಡು ಹೊರಡುವುದು ಉತ್ತಮ. ಬೀಟ್ರೂಟ್ ನಲ್ಲಿ ಕಬ್ಬಿಣದ ಅಂಶ ಹೆಚ್ಚಿರುವ ಕಾರಣ ಚರ್ಮಕ್ಕೆ ಆಗುವ ಘಾಸಿಯಿಂದ ಹೆಚ್ಚಿನ ರಕ್ಷಣೆ ದೊರಕುತ್ತದೆ.

ಒಣಚರ್ಮದ ತೊಂದರೆಯನ್ನು ನಿವಾರಿಸುತ್ತದೆ

ಒಣಚರ್ಮದ ತೊಂದರೆಯನ್ನು ನಿವಾರಿಸುತ್ತದೆ

ಸಮಪ್ರಮಾಣದಲ್ಲಿ ಬೀಟ್ ರೂಟ್ ರಸ ಮತ್ತು ಹಸಿಹಾಲನ್ನು ಬೆರೆಸಿ ಇದಕ್ಕೆ ಕೆಲವು ಹನಿ ಜೇನುತುಪ್ಪ ಬೆರೆಸಿ ಒಣಚರ್ಮದ ಮೇಲೆ ತೆಳುವಾಗಿ ಹಚ್ಚಿಕೊಂಡು ಹತ್ತು ನಿಮಿಷದ ಬಳಿಕ ತೊಳೆದುಕೊಳ್ಳುವುದರಿಂದ ಚರ್ಮಕ್ಕೆ ಹೆಚ್ಚಿನ ಆದ್ರತೆ ದೊರೆತು ಒಣಚರ್ಮವಾಗಿರುವ ಸ್ಥಿತಿಯಿಂದ ಹೊರಬರುತ್ತದೆ.

ತುಟಿಗಳ ಸೌಂದರ್ಯ ಹೆಚ್ಚಿಸುತ್ತದೆ

ತುಟಿಗಳ ಸೌಂದರ್ಯ ಹೆಚ್ಚಿಸುತ್ತದೆ

ನಿಮ್ಮ ತುಟಿಗಳ ಸೌಂದರ್ಯವನ್ನು ಹೆಚ್ಚಿಸಲೂ ಬೀಟ್ ರೂಟ್ ಉತ್ತಮವಾಗಿದೆ. ಇದಕ್ಕಾಗಿ ಪ್ರತಿ ರಾತ್ರಿ ಮಲಗುವ ಮುನ್ನ ಬೀಟ್ ರೂಟ್ ರಸದ ಕೆಲವು ಹನಿಗಳನ್ನು ತೆಳುವಾಗಿ ತುಟಿಗಳ ಮೇಲೆ ಹಚ್ಚಿ ನಿದ್ರಿಸಿ, ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಕೂದಲುದುರುವುದನ್ನು ನಿಲ್ಲಿಸುತ್ತದೆ

ಕೂದಲುದುರುವುದನ್ನು ನಿಲ್ಲಿಸುತ್ತದೆ

ಕೂದಲುದುರುವುದನ್ನು ನಿಲ್ಲಿಸುತ್ತದೆ ಕೂದಲ ಉದುರುವಿಕೆಗೆ ಕೂದಲ ಬುಡ ದೃಢವಾಗಿಲ್ಲದಿರುವುದು ಪ್ರಮುಖ ಕಾರಣವಾಗಿದೆ. ಇದಕ್ಕಾಗಿ ಬೀಟ್ ರೂಟ್ ರಸ ಮತ್ತು ಹಸಿ ಶುಂಠಿಯ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಕೂದಲ ಬುಡಕ್ಕೆ ಸ್ನಾನಕ್ಕೂ ಮೊದಲು ನಯವಾಗಿ ಮಸಾಜ್ ಮಾಡಿ ಹದಿನೈದು ನಿಮಿಷ ಒಣಗಲು ಬಿಟ್ಟು ಬಳಿಕ ಸ್ನಾನ ಮಾಡಿ.

English summary

Beetroot Face Masks For Distressed Skin

Beet juice can be used in several face packs and masks, as it helps to rejuvenate your skin and give it a radiant glow. It has also been a perfect food for treating all kinds of skin problems easily. So, now let’s check the different beetroot face masks that you can use on distressed and dull skin.
X
Desktop Bottom Promotion