For Quick Alerts
ALLOW NOTIFICATIONS  
For Daily Alerts

ನೀವು ನಂಬಲೇಬೇಕು, ಕೆಂಪು ವೈನ್‌ನಿಂದ ಸೌಂದರ್ಯ ವೃದ್ಧಿ!

By Deepu
|

ಪ್ರತಿ ಮಹಿಳೆಯೂ ಬಯಸುವ ತ್ವಚೆ ಎಂದರೆ ಕಲೆಯಿಲ್ಲದ, ಸಹಜವರ್ಣದ, ಕಾಂತಿಯುಕ್ತ ತ್ವಚೆ. ಈ ಸುಂದರ ತ್ವಚೆಯನ್ನು ಹೊಂದಿರುವ ಮಹಿಳೆಯರು ಮೇಕಪ್‌ನ ಅಗತ್ಯವೇ ಇಲ್ಲದೇ ಆತ್ಮವಿಶ್ವಾಸದಿಂದ ಹೊರಗೆ ಹೋಗಲು ಸಾಧ್ಯ. ಈ ಬಗೆಯ ತ್ವಚೆಯನ್ನು ಪಡೆಯಲು ಕೆಂಪು ವೈನ್ ನೆರವಾಗುತ್ತದೆ. ಕೆಂಪು ವೈನ್: ಅದೇನು ಮಾಯೆ, ಅದೇನು ಜಾದೂ..!

ಹೌದು, ನಿಮ್ಮ ನೆಚ್ಚಿನ ಕೆಂಪು ವೈನ್ ನಿಮ್ಮ ಮುಖದ ಕಳೆಯನ್ನು ಹೆಚ್ಚಿಸಲೂ ಸಮರ್ಥವಿದೆ. ನಿಯಮಿತ ಪ್ರಮಾಣದಲ್ಲಿ ಕೆಂಪು ವೈನ್ ಸೇವಿಸುವುದರಿಂದಲೂ ಕೆಲವಾರು ಪ್ರಯೋಜನಗಳಿವೆ. ವಿಶೇಷವಾಗಿ ಹೃದಯಕ್ಕೆ ಉತ್ತಮವಾಗಿದ್ದು ಹಲವು ಬಗೆಯ ಕ್ಯಾನ್ಸರ್ ಆವರಿಸುವುದರ ವಿರುದ್ದ ರಕ್ಷಣೆ ನೀಡುತ್ತದೆ. ಆರೋಗ್ಯ ಟಿಪ್ಸ್: ಕೆಂಪು ವೈನ್ ಸೇವನೆಯಿಂದ ಆರೋಗ್ಯ ವೃದ್ಧಿ!

ಫ್ರಾನ್ಸ್ ದೇಶದ ಮಹಿಳೆಯರು ಮೇಕಪ್ ಇಲ್ಲದೆಯೇ ಸಹಜ ಕಾಂತಿಯಿಂದ ಹೇಗೆ ಬೆಳಗುತ್ತಾರೆ ಎಂಬ ವಿಷಯದ ಬಗ್ಗೆ ಹಲವರು ತಲೆ ಕೆಡಿಸಿಕೊಂಡು ಸಾಕಷ್ಟು ಸಂಶೋಧನೆಗಳನ್ನು ನಡೆಸಿದ್ದಾರೆ. ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳದೇ, ಈ ಸಂಶೋಧನೆಗಳ ಉಪಯೋಗವನ್ನು ಪಡೆದು ಮುಖದ ತ್ವಚೆಯ ಆರೋಗ್ಯವನ್ನು ವೃದ್ಧಿಸಿಕೊಳ್ಳೋಣ. ಬನ್ನಿ, ಮುಂದಿನ ಬಾರಿ ಕೆಂಪು ವೈನ್ ಮನೆಗೆ ತಂದಾಗ ಪೂರ್ಣವಾಗಿ ಕುಡಿದು ಖಾಲಿ ಮಾಡದೇ ಕೊಂಚ ಸೌಂದರ್ಯವೃದ್ಧಿಗಾಗಿಯೂ ಬಳಸಿಕೊಳ್ಳೋಣ. ಹೇಗೆ ಎಂದು ಕೇಳಿದಿರಾ? ಮುಂದೆ ಓದಿ?......


ವೃದ್ಧಾಪ್ಯವನ್ನು ದೂರಾಗಿಸುತ್ತವೆ

ವೃದ್ಧಾಪ್ಯವನ್ನು ದೂರಾಗಿಸುತ್ತವೆ

ಈ ಮುಖಲೇಪದ ಬಳಕೆಯಿಂದ ಚರ್ಮದಲ್ಲಿ ಕೊಲ್ಯಾಜೆನ್ ಎಂಬ ಕಣಗಳು ಹೆಚ್ಚುವ ಮೂಲಕ ಚರ್ಮದ ಸೆಳೆತ ಹೆಚ್ಚುತ್ತದೆ. ಇದರಿಂದ ನೆರಿಗೆಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ವೃದ್ಧಾಪ್ಯದ ಚಿಹ್ನೆಗಳು ಮೂಡುವುದನ್ನು ತಡವಾಗಿಸುತ್ತದೆ. ಈ ಪ್ರಯೋಜನದದ ಬಗ್ಗೆ ತಿಳಿದ ಬಳಿಕವೂ ಈ ಮುಖಲೇಪವನ್ನು ತಪ್ಪಿಸಲು ಯಾರಿಗೆ ಮನಸ್ಸಾಗುತ್ತದೆ?

2-3 ಚಮಚ ಜೇನಿನೊಂದಿಗೆ ವೈನ್ ಬೆರೆಸಿ ಲೇಪಿಸಿದರೆ ಹೆಚ್ಚು ಕಾಂತಿಯುಕ್ತವಾಗುವುದಲ್ಲದೆ ಅತಿ ಬೇಗ ಸುಕ್ಕು ಬರುವುದನ್ನು ತಡೆಯುತ್ತದೆ.

ಮುಖದ ಕಾಂತಿ ಹೆಚ್ಚಲು

ಮುಖದ ಕಾಂತಿ ಹೆಚ್ಚಲು

ಕೆಂಪು ವೈನ್ ನಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳು ಚರ್ಮದ ಕಾಂತಿ ಹೆಚ್ಚಲು ನೆರವಾಗುತ್ತವೆ. ಇದೇ ಕಾರಣಕ್ಕೆ ಇಂದು ಕೆಂಪು ವೈನ್ ಆಧಾರಿತ ಮುಖಲೇಪಗಳು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿವೆ.ವೈನ್ ನಿಂದ ತ್ವಚೆ ಫೈನ್ ; ಸುಕೋಮಲೆಯರಿಗೆ ಮಾತ್ರ

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಕೆಂಪು ವೈನ್‌ನಲ್ಲಿರುವ ಉರಿಯೂತ ನಿವಾರಕ ಗುಣ ಚರ್ಮದ ಅಡಿಯಲ್ಲಿ ಸೋಂಕಾಗುವುದನ್ನು ತಪ್ಪಿಸಿ ತನ್ಮೂಲಕ ಮೊಡವೆಗಳಾಗದಂತೆ ಚರ್ಮವನ್ನು ಕಾಪಾಡುತ್ತದೆ.

ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ

ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ

ಬಿಸಿಲು ಅಥವಾ ಬೇರೆ ಕಾರಣದಿಂದ ಚರ್ಮದ ಬಣ್ಣ ಗಾಢವಾಗಿದ್ದರೆ ಇದಕ್ಕೆ ಕೆಂಪು ವೈನ್ ನಲ್ಲಿರುವ ಆಲ್ಕೋಹಾಲ್ ಉತ್ತಮವಾದ ಆರೈಕೆಯನ್ನು ನೀಡಿ ಕಲ್ಮಶಗಳನ್ನು ನಿವಾರಿಸಿ ಚರ್ಮದ ವರ್ಣದ್ರವ್ಯಗಳನ್ನು ತಿಳಿಯಾಗಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ.

ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸುತ್ತದೆ

ಸೂಕ್ಷ್ಮರಂಧ್ರಗಳನ್ನು ಕಿರಿದಾಗಿಸುತ್ತದೆ

ಯಾವುದೋ ಕಾರಣಕ್ಕೆ ಚರ್ಮದ ಸೂಕ್ಷ್ಮರಂಧ್ರಗಳು ದೊಡ್ಡದಾಗಿದ್ದರೆ ಇದರಲ್ಲಿ ಕಲ್ಮಶ ಮತ್ತು ಕೊಳೆ ತುಂಬಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಇದಕ್ಕಾಗಿ ಕೆಲವು ಹನಿ ಕೆಂಫು ವೈನ್ ಅನ್ನು ಕೊಂಚ ನೀರಿನಲ್ಲಿ ಬೆರೆಸಿ ಹತ್ತಿಯುಂಡೆಯಲ್ಲಿ ತೋಯಿಸಿ ಚರ್ಮವನ್ನು ಕೊಂಚ ಒತ್ತಡದಿಂದ ಒರೆಸಿಕೊಳ್ಳಿ. ಇದರಿಂದ ಚರ್ಮ ಸ್ವಚ್ಛಗೊಳ್ಳುವುದು ಮಾತ್ರವಲ್ಲದೇ ಸೂಕ್ಷ್ಮರಂಧ್ರಗಳೂ ಕಿರಿದಾಗುತ್ತವೆ.

English summary

Amazing Benefits Of A Red Wine Facial

All women want is to get clear skin. There is nothing better than looking at your skin with no makeup on and actually loving it. Here we will tell you about the benefits of getting a wine facial. Yes, your favourite beverage can now be used to bring magic to your face. There are actually many benefits of drinking wine as well. It is supposed to be good for the heart and reduce the risk of cancer.
X
Desktop Bottom Promotion