ಚಳಿಗಾಲ ಶುರುವಾಗಿ ಬಿಟ್ಟಿದೆ! ತ್ವಚೆ ಆರೈಕೆ ಹೀಗಿರಲಿ....

ಚಳಿಗಾಲದಲ್ಲಿ ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಕಟ್ಟುನಿಟ್ಟಾಗಿ ನಿಯಮಿತವಾಗಿ ಪಾಲಿಸಿಕೊಂಡು ಹೋದರೆ ಒಡೆದ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.

By: Hemanth
Subscribe to Boldsky

ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಇದ್ದೇ ಇರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೇವಲ ಆರೋಗ್ಯ ಮಾತ್ರವಲ್ಲ, ನಮ್ಮ ತ್ವಚೆಯ ಕಡೆ ಕೂಡ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಯಾಕೆಂದರೆ ಚಳಿಗಾಲದಲ್ಲಿ ಚರ್ಮವು ಒಡೆದು ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಚರ್ಮದ ಆರೈಕೆ ಬಗ್ಗೆ ಎಷ್ಟೇ ಮುತುವರ್ಜಿ ವಹಿಸಿದರೂ ಸಮಸ್ಯೆಯಿಂದ ಪಾರಾಗುವುದು ತುಂಬಾ ಕಷ್ಟವೆನಿಸುತ್ತದೆ.  ಕೊರೆಯುವ ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಅದರಲ್ಲೂ ಒಣಚರ್ಮವನ್ನು ಹೊಂದಿರುವವರಿಗೆ ಇದು ತೀರ ಸಾಮಾನ್ಯವಾಗಿರುತ್ತದೆ. ಒಣಚರ್ಮ ಮಾತ್ರವಲ್ಲದೆ ಎಣ್ಣೆಯಾಂಶವುಳ್ಳ ಚರ್ಮದವರಿಗೂ ಸಮಸ್ಯೆ ಕಾಡುತ್ತದೆ. ಚಳಿಗಾಲದಲ್ಲಿ ಪ್ರತಿಯೊಬ್ಬರು ಇದರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಿಕೊಳ್ಳಬೇಕು. ಈ ಲೇಖನದಲ್ಲಿ ನೀಡಿರುವ ಕೆಲವೊಂದು ಸಲಹೆಗಳನ್ನು ಬಳಸಿಕೊಂಡು ನೀವು ಚಳಿಗಾಲದಲ್ಲಿ ಚರ್ಮ ಒಡೆಯುವ ಸಮಸ್ಯೆಯಿಂದ ಪಾರಾಗಬಹುದು.   

ಇದಕ್ಕೆ ತಾಳ್ಮೆ ಹಾಗೂ ಸಮಯ ನೀಡಿದರೆ ನೀವು ಸಮಸ್ಯೆಯಿಂದ ಪಾರಾಗಬಹುದು. ಯಾರೂ ಕೂಡ ಚಳಿಗಾಲದಲ್ಲಿ ನೋವಿನ ತ್ವಚೆಯನ್ನು ಬಯಸುವುದಿಲ್ಲ. ಚರ್ಮವು ಒಡೆಯುವುದರಿಂದ ಕಾಂತಿಯುವ ತ್ವಚೆಯು ಸೌಂದರ್ಯವನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ ನೋವನ್ನು ನೀಡುವುದು. ಚಳಿಗಾಲದಲ್ಲಿ ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಕಟ್ಟುನಿಟ್ಟಾಗಿ ನಿಯಮಿತವಾಗಿ ಪಾಲಿಸಿಕೊಂಡು ಹೋದರೆ ಒಡೆದ ಚರ್ಮದ ಸಮಸ್ಯೆಯಿಂದ ದೂರ ಉಳಿಯಬಹುದು.     ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆ ಹೀಗಿರಲಿ

coconut oil
 

ಸ್ನಾನಕ್ಕೆ ಮೊದಲು ತೈಲ
ಸ್ನಾನಕ್ಕೆ ಮೊದಲು ತೈಲವನ್ನು ಹಚ್ಚಿಕೊಳ್ಳಿ. ಸಾಮಾನ್ಯವಾದ ತೆಂಗಿನ ಎಣ್ಣೆ ಒಳ್ಳೆಯದು. ಇದು ಚರ್ಮದಲ್ಲಿರುವ ತೇವಾಂಶವನ್ನು ಕಾಪಾಡಿಕೊಂಡು ಸ್ನಾನದ ವೇಳೆ ಚರ್ಮದ ತೇವಾಂಶವು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ.

shower
 

ಉಗುರುಬೆಚ್ಚಗಿನ ನೀರು
ಚಳಿಗಾಲದಲ್ಲಿ ಚಳಿ ಇರುವುದರಿಂದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದು. ಯಾಕೆಂದರೆ ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಲು ತುಂಬಾ ಕಷ್ಟವಾಗುತ್ತದೆ.

moisturizer
 

ನಿಯಮಿತ ಮಾಯಿಶ್ಚರೈಸರ್ ಬೇಡ
ಸ್ನಾನ ಮಾಡಿದ ಬಳಿಕ ನೀವು ಯಾವಾಗಲೂ ಬಳಸುವಂತಹ ಸಾಮಾನ್ಯವಾದ ಮಾಯಿಶ್ಚರೈಸರ್ ಅನ್ನು ಬಳಸಬೇಡಿ. ಚಳಿಗಾಲಕ್ಕಾಗಿಯೇ ವಿಶೇಷವಾಗಿರುವ ಮೊಶ್ಚಿರೈಸರ್ ಬಳಸಿ. ಇದು ಮಾಯಿಶ್ಚರೈಸರ್ ಅನ್ನು ಕಾಪಾಡಿಕೊಂಡು ಚರ್ಮವು ಒಣಗುವುದನ್ನು ತಡೆಯುತ್ತದೆ. ಇದು ನೀವು ಪಾಲಿಸಲೇಬೇಕಾದ ಸಲಹೆಗಳು.

Drinking water
 

ನೀರು ಕುಡಿಯಿರಿ
ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆಯಿರುತ್ತದೆ. ಆದರೂ ನೀವು ನೀರು ಕುಡಿಯುತ್ತಲೇ ಇರಬೇಕು. ಬೇಸಿಗೆಯಂತೆ ಚಳಿಗಾಲದಲ್ಲೂ ನೀರು ಕುಡಿಯುತ್ತಾ ಇರುವುದು ತುಂಬಾ ಒಳ್ಳೆಯದು.

massage
 

ಮಸಾಜ್ ತೈಲ
ವಾರದಲ್ಲಿ ಒಂದು ಸಲ ಮಲಗುವ ಮೊದಲು ಮಸಾಜ್ ತೈಲದಿಂದ ದೇಹವನ್ನು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ವಾರದಲ್ಲಿ ಒಂದು ಸಲಕ್ಕಿಂತ ಹೆಚ್ಚು ಮಾಡಿದರೆ ಅದರಿಂದ ತುಂಬಾ ಒಳ್ಳೆಯದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ ಚರ್ಮದಲ್ಲಿ ತೇವಾಂಶವು ಉಳಿದುಕೊಳ್ಳುವಂತೆ ಮಾಡುತ್ತದೆ.

shea butter
 

ಶಿಯಾ ತುಪ್ಪ
ಒಣ ಚರ್ಮವನ್ನು ಹೊಂದಿರುವವರ ಸ್ಥಿತಿ ಚಳಿಗಾಲದಲ್ಲಿ ಹೇಳಿ ಪ್ರಯೋಜನವಿಲ್ಲ. ಇದಕ್ಕೆ ಒಳ್ಳೆಯ ಉಪಾಯವೆಂದರೆ ಶಿಯಾ ತುಪ್ಪವನ್ನು ಬಳಸುವುದು. ಅತ್ಯಂತ ಒಣಚರ್ಮವನ್ನು ಹೊಂದಿರುವವರು ಕೂಡ ಇದನ್ನು ಬಳಸಿಕೊಳ್ಳಬಹುದು.

brown nail
 

ಕೈಗೆ ಕ್ರೀಮ್ ಹಚ್ಚಿ
ನಮ್ಮ ದೇಹದಲ್ಲಿ ಹೆಚ್ಚು ಕೆಲಸ ಮಾಡುವ ಭಾಗವೆಂದರೆ ಅದು ಕೈಗಳು. ಆದರೆ ಕೈಗಳನ್ನು ನಾವು ಹೆಚ್ಚಾಗಿ ಕಡೆಗಣಿಸುತ್ತಲೇ ಇರುತ್ತೇವೆ. ಇಂತಹ ಕೈಗಳಿಗಾಗಿ ಕ್ರೀಮ್ ಗಳನ್ನು ಬಳಸಿ ಆರೈಕೆ ಮಾಡಿಕೊಳ್ಳಿ. ಇದರಿಂದ ಕೈಗಳಿಗೆ ತೇವಾಂಶವು ಸಿಗುವುದು.

English summary

Winter Body Care Tips For Cracked, Painful Skin

Winters can spell havoc for the skin, especially if you have dry skin. The face tends to produce more oil naturally than the body does, so it is usually the body skin which cracks and hurts. However, with these winter body care tips that we've listed below, you'd be sorted.
Please Wait while comments are loading...
Subscribe Newsletter