For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ತ್ವಚೆಯ ಸಮಸ್ಯೆಗೆ, ಎಳೆ ನೀರಿನ ಆರೈಕೆ!

By Hemanth
|

ಉರಿ ಬಿಸಿಲು, ಅದರ ಮಧ್ಯೆ ಧೂಳು, ಎಲ್ಲವೂ ಸೇರಿ ಮುಖದ ಅಂದವನ್ನೇ ಕೆಡಿಸಿದೆ. ಒಂದು ಐದು ನಿಮಿಷ ಬಿಸಿನಲ್ಲಿ ನಿಂತರೂ ಧಾರಾಕಾರವಾಗಿ ಬೆವರು ಸುರಿಯಲು ಆರಂಭವಾಗುತ್ತದೆ. ಮುಖದಿಂದ ಸುರಿಯುತ್ತಿರುವ ಬೆವರನ್ನು ದೂರ ಮಾಡಲು ನಾವು ದಿನದಲ್ಲಿ ಹಲವಾರು ಬಾರಿ ನೀರಿನಿಂದ ಮುಖ ತೊಳೆದುಕೊಳ್ಳುತ್ತೇವೆ. ನೀರಿನಿಂದ ಮುಖ ತೊಳೆದುಕೊಂಡರೆ ಮೊಡವೆಗಳು ಬರುವುದು ತಪ್ಪುವುದು, ಮಾತ್ರವಲ್ಲದೆ ಮುಖಕ್ಕೆ ಪುನರ್ಜೀವನ ನೀಡಿದಂತಾಗುವುದು.

Why You Should Wash Your Face With Coconut Water In Summer?

ಆದರೆ ಸೌಂದರ್ಯ ತಜ್ಞರ ಪ್ರಕಾರ ಬೇಸಿಗೆಯಲ್ಲಿ ಬೆವರಿನ ತ್ವಚೆ, ಮೊಡವೆ ಹಾಗೂ ಕಲೆಗಳಿಂದ ದೂರ ಉಳಿಯಬೇಕೆಂದರೆ ನಾವು ಎಳೆ ನೀರಿನಿಂದ ಮುಖ ತೊಳೆಯಬೇಕಂತೆ. ಬೇಸಿಗೆಯಲ್ಲಿ ನೀವು ಸಮುದ್ರ ತೀರಕ್ಕೆ ತಿರುಗಾಡಲು ಹೋಗುತ್ತಿದ್ದೀರಿ ಎಂದಾದರೆ ಆಗ ಖಂಡಿತವಾಗಿಯೂ ನೀವು ಎಳೆ ನೀರಿನಿಂದ ಮುಖ ತೊಳೆಯಿರಿ. ಯಾಕೆಂದರೆ ಸೂರ್ಯನ ತಾಪ, ಮರಳಿನ ಬಿಸಿ ಮತ್ತು ಬಿಸಿ ಗಾಳಿ ನಿಮ್ಮ ಮುಖದ ಮೇಲೆ ಕಲೆಗಳನ್ನು ಉಂಟು ಮಾಡಬಹುದು. ಇದನ್ನು ಹೋಗಲಾಡಿಬೇಕಾದರೆ ನೀವು ತೆಂಗಿನಕಾಯಿ ನೀರಿನಿಂದ ಮುಖ ತೊಳೆದು ಆರಾಮವಾಗಿರಿ.

ಕಲೆಗಳನ್ನು ನಿವಾರಿಸುವುದು
ಮುಖದ ಮೇಲೆ ಕಲೆಗಳು ಕಾಣಿಸುತ್ತಿದ್ದರೆ ಆಗ ಎಳೆ ನೀರಿನಿಂದ ಮುಖವನ್ನು ತೊಳೆಯಿರಿ. ಕಲೆಗಳನ್ನು ನಿವಾರಿಸುವ ಗುಣಗಳು ತೆಂಗಿನಕಾಯಿ ನೀರಿನಲ್ಲಿದೆ. ಇದರಲ್ಲಿರುವ ಆ್ಯಸಿಡ್ ಅಂಶಗಳು ಕಲೆಗಳನ್ನು ನಿವಾರಿಸುವುದು ಮತ್ತು ಚರ್ಮವು ಹೊಳಪು ಪಡೆಯಲು ನೆರವಾಗುವುದು.

ಮೊಡವೆಗಳ ನಿವಾರಣೆ

ನಿಮ್ಮ ಮುಖದಲ್ಲಿ ಆಗಾಗ ಮೊಡವೆಗಳು ಕಾಣಿಸಿಕೊಳ್ಳುತ್ತಾ ಇದೆಯಾ? ನೀವು ದಿನದಲ್ಲಿ ಒಂದು ಸಲವಾದರೂ ಎಳೆ ನೀರಿನಿಂದ ಮುಖವನ್ನು ತೊಳೆಯಬೇಕು. ಮೊಡವೆಗಳಿಂದ ಮುಖದ ಮೇಲೆ ಉಂಟಾಗುವಂತಹ ಕಲೆಗಳ ನಿವಾರಣೆ ಮತ್ತು ಸೋಂಕನ್ನು ಇದು ನಿವಾರಿಸುತ್ತದೆ. ಬೇಸಿಗೆಯಲ್ಲಿ ತೆಂಗಿನಕಾಯಿ ನೀರನ್ನು ನಿಯಮಿತವಾಗಿ ಉಪಯೋಗಿಸಿದಾಗ ಬೊಕ್ಕೆಗಳು ಮೂಡುವುದು ನಿಲ್ಲುತ್ತದೆ.

ಕಪ್ಪು ಕಲೆಗಳಿಂದ ಮುಕ್ತಿ
ಕಪ್ಪು ಕಲೆಗಳಿಂದ ನಿಮಗೆ ಮುಖ ತೋರಿಸಲು ಅಸಹ್ಯವಾಗುತ್ತಿದ್ದರೆ ತೆಂಗಿನಕಾಯಿ ನೀರನ್ನು ಬಳಸಿಕೊಂಡು ಕೆಲವು ದಿನದಲ್ಲೇ ಇದರ ಫಲಿತಾಂಶವನ್ನು ನೋಡಿ. ನಿಮ್ಮ ತ್ವಚೆಯು ಅಲರ್ಜಿಯನ್ನು ಹೊಂದಿದ್ದರೆ ತೆಂಗಿನಕಾಯಿ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಮುಖ ತೊಳೆಯಿರಿ.

ನೆರಿಗೆ ಮಾಯ
ಒಂದು ಲೋಟ ಎಳೆ ನೀರಿಗೆ, ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಸರಿಯಾಗಿ ಕಲಸಿಕೊಳ್ಳಿ ಮತ್ತು ಫೇಸ್ ಪ್ಯಾಕ್ ಆಗಿ ಬಳಸಿಕೊಳ್ಳಿ. ಇದರಿಂದ ಮುಖದ ಮೇಲಿನ ನೆರಿಗೆಗಳು ಮಾಯವಾಗುವುದು. ಇದನ್ನು ನಿಯಮಿತವಾಗಿ ಬಳಸಿಕೊಂಡರೆ ನೆರಿಗೆಗಳು ಮುಖದಿಂದ ಮಾಯವಾಗಿ ತ್ವಚೆಯು ಹೊಳಪನ್ನು ಪಡೆಯುವುದು.

ಕಂದುಬಣ್ಣ ನಿವಾರಣೆ
ಬೇಸಿಗೆಯಲ್ಲಿ ಪ್ರತಿಯೊಬ್ಬರು ಎದುರಿಸುವಂತಹ ಸಾಮಾನ್ಯ ಸಮಸ್ಯೆಯೆಂದರೆ ಮುಖದ ಮೇಲೆ ಕಂದುಬಣ್ಣ ಮೂಡುವುದು. ನಿಂಬೆರಸ ಮತ್ತು ತೆಂಗಿನಕಾಯಿ ನೀರನ್ನು ಜತೆಯಾಗಿಸಿ ಬಳಸಿದರೆ ಮುಖದ ಮೇಲಿನ ಕಂದುಕಲೆಗಳು ಮಾಯವಾಗುವುದು. ಈ ಎರಡು ಸಾಮಗ್ರಿಗಳಲ್ಲಿ ಬ್ಲೀಚಿಂಗ್ ಸಾಮರ್ಥ್ಯವಿದೆ. ಇದು ಕಂದು ಕಲೆಗಳನ್ನು ನಿವಾರಿಸುವುದು.

English summary

Why You Should Wash Your Face With Coconut Water In Summer?

Do you want to get glowing skin in less than 24 hours this summer? Well, then wash your face with coconut water twice in the day. It will work ...
Story first published: Friday, April 29, 2016, 19:53 [IST]
X
Desktop Bottom Promotion