For Quick Alerts
ALLOW NOTIFICATIONS  
For Daily Alerts

ಕಳೆಗುಂದಿದ ಚರ್ಮದ ಆರೈಕೆಗೆ ದಾಲ್ಚಿನ್ನಿ ಪೌಡರ್!

By Hemanth
|

ಚರ್ಮವು ದೇಹದ ಆರೋಗ್ಯವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಅದೇ ಚರ್ಮವನ್ನು ಆರೈಕೆ ಮಾಡುವುದು ತುಂಬಾ ಕಷ್ಟ. ಎಲ್ಲರ ಚರ್ಮವು ಒಂದೇ ರೀತಿಯಾಗಿರುವುದಿಲ್ಲ. ಕೆಲವರ ಚರ್ಮವು ಒಣ, ಇನ್ನು ಕೆಲವರದ್ದು ಜಿಡ್ಡಿನಿಂದ ಕೂಡಿರುತ್ತದೆ ಮತ್ತೆ ಕೆಲವರದ್ದು ತುಂಬಾ ಸೂಕ್ಷ್ಮ ಚರ್ಮವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ಎಲ್ಲಾ ಚರ್ಮಗಳಿಗೂ ಒಂದೇ ರೀತಿಯ ಉತ್ಪನ್ನಗಳನ್ನು ಬಳಸಲು ಸಾಧ್ಯವಾಗುವುದಿಲ್ಲ.

Ways To Use Cinnamon Powder For Skin Care

ಆದರೆ ಕೆಲವೊಂದು ಮನೆಮದ್ದುಗಳು ಎಲ್ಲಾ ರೀತಿಯ ಚರ್ಮಗಳಿಗೂ ಹೊಂದಿಕೊಳ್ಳುವ ಸಾಧ್ಯಯಿರುತ್ತದೆ. ಇದಕ್ಕಾಗಿಯೇ ಮನೆಮದ್ದನ್ನು ಬಳಸಿದರೆ ಉತ್ತಮ. ಅಡುಗೆಗೆ ಬಳಸುವಂತಹ ದಾಲ್ಚಿನ್ನಿ ಹುಡಿಯನ್ನು ಜಿಡ್ಡಿನಾಂಶವುಳ್ಳ ಚರ್ಮದವರು ಬಳಸಬಹುದು. ಚರ್ಮದ ಆರೈಕೆಗೆ ಹಣ ವ್ಯಯಿಸುವ ಬದಲು ಇಲ್ಲಿ ಕೊಟ್ಟಿರುವ ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ಚರ್ಮವು ಕಾಂತಿಯನ್ನು ಪಡೆಯುವುದು.

ಮುಖದ ಮೇಲೆ ಬಿದ್ದಿರುವ ಗೆರೆಗಳು
ಎರಡು ಚಮಚ ಆಲಿವ್ ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ ಜತೆಗೆ ದಾಲ್ಚಿನ್ನಿ ಹುಡಿಯನ್ನು ಸೇರಿಸಿ ಚರ್ಮಕ್ಕೆ ಹಚ್ಚಿಕೊಂಡರೆ, ಮುಖದ ಮೇಲೆ ಬಿದ್ದಿರುವ ಗೆರೆಗಳು ಮಾಯವಾಗುತ್ತದೆ. ದಾಲ್ಚಿನ್ನಿಯು ಚರ್ಮವು ದಷ್ಟಪುಷ್ಟವಾಗಿ ಕಾಣುವಂತೆ ಮಾಡುವುದು.

ತಲೆಬುರುಡೆಯ ಪೋಷಕಾಂಶಕ್ಕಾಗಿ
ಒಂದು ಚಮಚ ದಾಲ್ಚಿನ್ನಿ ಹುಡಿ, ¼ ಚಮಚ ಬಿಸಿ ಆಲಿವ್ ಎಣ್ಣೆ ಮತ್ತು ಒಂದು ಚಮಚ ಜೇನನ್ನು ಮಿಶ್ರಣ ಮಾಡಿಕೊಂಡು ತಲೆಗೆ ಚೆನ್ನಾಗಿ ಮಸಾಜ್ ಮಾಡಿದ ಬಳಿಕ ಶಾಂಪೂವಿನಿಂದ ತೊಳೆಯಿರಿ. ದಾಲ್ಚಿನ್ನಿ ಬುರುಡೆ ಮತ್ತು ಕೂದಲಿಗೆ ಪೋಷಕಾಂಶವನ್ನು ನೀಡುವುದು.

ಚರ್ಮದ ಕಿರಿಕಿರಿಗೆ
ಮುಖವನ್ನು ಹೊರತುಪಡಿಸಿ ನಿಮ್ಮ ಚರ್ಮದಲ್ಲಿ ಉರಿಯೂತ ಅಥವಾ ಕೆರೆತವಿದ್ದರೆ ಅದಕ್ಕೆ ದಾಲ್ಚಿನ್ನಿ ಹುಡಿ ಒಳ್ಳೆಯ ಔಷಧಿ. ಚರ್ಮದ ವೈದ್ಯರಿಂದ ಹಸಿರು ನಿಶಾನೆ ಸಿಕ್ಕಿದರೆ ಆಗ ಒಂದು ಚಮಚ ದಾಲ್ಚಿನ್ನಿ ಹುಡಿ ಮತ್ತು ಜೇನು ಬೆರೆಸಿ ಕಿರಿಕಿರಿಯಾಗುವ ಜಾಗಕ್ಕೆ ಹಚ್ಚಿಕೊಳ್ಳಿ.

ಚರ್ಮದ ಕಾಂತಿಗೆ
ಚರ್ಮದ ಕಾಂತಿಯನ್ನು ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಮತ್ತು ಅಡ್ಡಪರಿಣಾಮ ಉಂಟುಮಾಡಬಲ್ಲ ಕ್ರೀಮ್‌ಗಳನ್ನು ತ್ಯಜಿಸಿ ಮತ್ತು ದಾಲ್ಚಿನ್ನಿ ಹುಡಿಯನ್ನು ಬಳಸಿ. ಬಾಳೆಹಣ್ಣಿನ ಜ್ಯೂಸ್, ಮೊಸರು, ದಾಲ್ಚಿನ್ನಿ ಹುಡಿ ಮತ್ತು ಲಿಂಬೆರಸವನ್ನು ಮಿಶ್ರಣ ಮಾಡಿಕೊಂಡು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ಅದನ್ನು ಒಣಗಲು ಬಿಡಿ. ಬಳಿಕ ಚರ್ಮವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಸ್ಕ್ರಬ್ ಮಾಡಲು
ಒಂದು ಚಮಚ ದಾಲ್ಚಿನ್ನಿ ಹುಡಿ, ಎರಡು ಲೋಟ ಕಾಫಿ ಹುಡಿ, ½ ಕಪ್ ಸಮುದ್ರ ಉಪ್ಪು, 2-3 ಚಮಚ ಬಾದಾಮಿ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಸ್ಕ್ರಬ್ ಮಾಡಿದರೆ ದೇಹವು ಚೈತನ್ಯವನ್ನು ಪಡೆಯುವುದು.

English summary

Ways To Use Cinnamon Powder For Skin Care

We have some good news for people, especially with oily or combination skin types. If you have such skin types, then you should use cinnamon powder without wasting even a single moment, as it helps tighten the skin pores and also makes your face appear clear and smooth. So, save money on your monthly beauty-parlour visits, and instead try these below-mentioned ways to use cinnamon powder for skin care, take a look:
Story first published: Saturday, July 23, 2016, 19:26 [IST]
X
Desktop Bottom Promotion