For Quick Alerts
ALLOW NOTIFICATIONS  
For Daily Alerts

ಇನ್ನು ಮುಖ ತೊಳೆಯುವಾಗ ಸೋಪನ್ನು ಮಾತ್ರ ಬಳಸಬೇಡಿ!

By Arshad
|

ನಮ್ಮ ದೇಹದಲ್ಲಿ ಮುಖದ ಚರ್ಮ ಇತರ ಭಾಗದ ಚರ್ಮಕ್ಕಿಂತಲೂ ಹೆಚ್ಚು ಸೂಕ್ಷ್ಮ ಹಾಗೂ ಹೆಚ್ಚು ಸಂವೇದಿಯಾಗಿದೆ. ಅಲ್ಲದೇ ಬಿಸಿಲು, ಧೂಳು ಇತ್ಯಾದಿಗಳಿಗೂ ಮುಖದ ಚರ್ಮ ಇತರ ಭಾಗಗಳಿಗಿಂತ ಹೆಚ್ಚು ಒಡ್ಡುವ ಮೂಲದ ಹಾನಿಗೊಳ್ಳುವ ಸಂಭವವೂ ಹೆಚ್ಚು. ಆದ್ದರಿಂದ ಆಗಾಗ ಮುಖ ತೊಳೆದುಕೊಳ್ಳುತ್ತಾ ಇರುವುದರಿಂದ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೇ ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ತೀರಾ ಇತ್ತೀಚಿನವರೆಗೂ ಮುಖ ತೊಳೆಯಲು ನಾವೆಲ್ಲರೂ ಬಳಸುತ್ತಿದ್ದುದು ಮೈಗೆ ಹಚ್ಚಿಕೊಳ್ಳುವ ಸೋಪೇ ಹೊರತು ಬೇರೆ ಸೋಪನ್ನು ಬಳಸುತ್ತಿರಲಿಲ್ಲ. ಅದರಲ್ಲೂ ಕ್ಲೀನ್ಸರ್ ಮೊದಲಾದ ದ್ರಾವಣಗಳನ್ನು ದುಬಾರಿ ಎಂದು ಹೆಚ್ಚಿನವರು ಕೊಳ್ಳುತ್ತಲೇ ಇರಲಿಲ್ಲ. ಸೋಪು ಕೊಳ್ಳುವ ಮುನ್ನ, ಇಂತಹ ಸಂಗತಿಗಳು ನೆನಪಿರಲಿ

ವಾಸ್ತವವಾಗಿ ಮೈಸೋಪು ಸಹಾ ಮುಖದ ಚರ್ಮಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಪ್ರಬಲವಾಗಿರುವ ಕಾರಣ ಬಳಕೆಗೆ ಸೂಕ್ತವಲ್ಲ. ಇದರಲ್ಲಿರುವ ಪ್ರಬಲ ರಾಸಾಯನಿಕಗಳು ಮುಖದ ಚರ್ಮದ ಕೊಳೆಯ ಜೊತೆಗೇ ಚರ್ಮದಡಿಯಲ್ಲಿ ನುಸುಳಿ ಅಗತ್ಯವಾದ ತೈಲವನ್ನೂ ಸೆಳೆದು ನಿವಾರಿಸಿಬಿಡುತ್ತದೆ. ಪರಿಣಾಮವಾಗಿ ಚರ್ಮ ತೀರಾ ಒಣದಾಗಿ ನೆರಿಗೆಗಳು ಬೇಗನೇ ಮೂಡುತ್ತವೆ. ಇದಕ್ಕೆ ಸೂಕ್ತ ಪರಿಹಾರವೆಂದರೆ ಮುಖವನ್ನು ತೊಳೆದುಕೊಳ್ಳಲೆಂದೇ ಇರುವ ಕ್ಲೀನ್ಸರ್ ಅಥವಾ ಫೇಸ್ ವಾಶ್ ಲೋಷನ್ ಅಥವಾ ಫೇಸ್ ವಾಶ್ ಸೋಪನ್ನು ಉಪಯೋಗಿಸುವುದು. ಆದರೆ ಇವು ವಿಪರೀತ ದುಬಾರಿಯಾಗಿರುವ ಕಾರಣ ಜನಸಾಮಾನ್ಯರು ಕೊಳ್ಳಲು ಕೊಂಚ ಹಿಂದೇಟು ಹಾಕುತ್ತಾರೆ. ತ್ವಚೆಗೆ ಸೋಪ್ ಬಳಸುವ ಮುನ್ನ ಸ್ವಲ್ಪ ಇತ್ತ ಗಮನಿಸಿ!

ವಾಸ್ತವವಾಗಿ ಇದೇ ಅಥವಾ ಇದಕ್ಕಿಂತ ಉತ್ತಮ ಪರಿಣಾಮವನ್ನು ನಮ್ಮ ಅಡುಗೆ ಮನೆಯಲ್ಲಿರುವ ನೈಸರ್ಗಿಕ ಸಾಮಾಗ್ರಿಗಳೇ ನೀಡುತ್ತವೆ. ಇವು ಚರ್ಮಕ್ಕೆ ಸುರಕ್ಷಿತವೂ ಆಗಿರುವ ಕಾರಣ ಚರ್ಮ ಕೋಮಲ ಹಾಗೂ ಕಾಂತಿಯುಕ್ತವಾಗಿರಿಸಲು ನೆರವಾಗುತ್ತವೆ. ಅಲ್ಲದೇ ನೈಸರ್ಗಿಕವಾಗಿ ಚರ್ಮದ ತೊಂದರೆಗಳನ್ನೂ ನಿವಾರಿಸುತ್ತವೆ. ಇಂತಹ ಹಲವು ನೈಸರ್ಗಿಕ ಮುಖಮಾರ್ಜಕಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ನಿಮ್ಮೊಂದಿಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹಂಚಿಕೊಳ್ಳಲು ಹರ್ಷಿಸುತ್ತದೆ...

ಹಸಿ ಹಾಲು

ಹಸಿ ಹಾಲು

ಮುಖದ ಚರ್ಮದ ಮೇಲ್ಪದರದಲ್ಲಿ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸಲು ಹಸಿ ಹಾಲು ಅತ್ಯಂತ ಸೂಕ್ತವಾದ ಪ್ರಸಾದನವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಕೇವಲ ಕೊಳೆಯನ್ನು ಸೆಳೆದು ಚರ್ಮದ ತೈಲವನ್ನು ಹಾಗೇ ಬಿಡುತ್ತವೆ. ಏಕೆಂದರೆ ಹಾಲಿನ ಕಣಗಳು ಚರ್ಮದ ಸೂಕ್ಷ್ಮರಂಧ್ರಗಳಿಗಿಂತ ದೊಡ್ಡದಾಗಿರುವ ಕಾರಣ ತೈಲವನ್ನು ಸೆಳೆಯಲಾರವು. ಅಲ್ಲದೇ ಉರಿತ, ಚಿಕ್ಕಪುಟ್ಟ ಗಾಯ, ಮೊಡವೆಗಳನ್ನೂ ನಿವಾರಿಸಲು ಹಾಲು ಉತ್ತಮ ಪರಿಹಾರವಾಗಿದೆ. ಹಸಿ ಹಾಲಿನಲ್ಲಿ ಹತ್ತಿಯುಂಡೆಯೊಂದನ್ನು ಮುಳುಗಿಸಿ ಮುಖವನ್ನೆಲ್ಲಾ ಕೊಂಚವೇ ಒತ್ತಡದಿಂದ ಒತ್ತಿ ಒರೆಸಿಕೊಳ್ಳುವ ಮೂಲಕ ಸ್ವಚ್ಛತೆ ಪಡೆಯಬಹುದು. ವಿಶೇಷವಾಗಿ ಕಣ್ಣುಗಳ ಕೆಳಗಿನ ಕಪ್ಪಗಾಗಿರುವ ಭಾಗವೂ ನಿಧಾನವಾಗಿ ತಿಳಿಯಾಗುತ್ತಾ ಹೋಗುತ್ತದೆ.

ಸಕ್ಕರೆ

ಸಕ್ಕರೆ

ಸತ್ತ ಜೀವಕೋಶಗಳನ್ನು ನಿವಾರಿಸಲು ಸಕ್ಕರೆ ಸಹಾ ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಸಕ್ಕರೆಯನ್ನು ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಪುಡಿಮಾಡಿ ಈ ಪುಡಿಯಿಂದ ಚರ್ಮವನ್ನು ಕೊಂಚವೇ ನೀರು ಸೇರಿಸಿ ಹಚ್ಚಿಕೊಂಡು ಬಳಿಕ ಒರೆಸಿಕೊಳ್ಳುವ ಮೂಲಕ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಇನ್ನೂ ಉತ್ತಮ ಪರಿಣಾಮಕ್ಕಾಗಿ ಕೊಂಚ ಲೋಳಸರ ಅಥವಾ ಆಲೋವೆರಾವನ್ನು ಅರೆದು ಸಕ್ಕರೆಪುಡಿಯನ್ನು ಮಿಶ್ರಣಮಾಡಿ ಲೇಪನದಂತೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತೊಳೆದುಕೊಳ್ಳಿ.

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿ ಹಣ್ಣಿನಲ್ಲಿ ಅಧಿಕ ಪೋಷಕಾಂಶಗಳೂ, ವಿಟಮಿನ್ನುಗಳೂ ಇದ್ದು ಚರ್ಮದ ಆರೋಗ್ಯ ವೃದ್ಧಿಸುತ್ತವೆ. ವಿಶೇಷವಾಗಿ ಕ್ಯಾರೋಟಿನಾಯ್ಡ್ ಎಂಬ ಪೋಷಕಾಂಶ ಚರ್ಮದ ಕೊಳೆ ನಿವಾರಿಸಲು ಸಮರ್ಥವಾಗಿದ್ದು ಚರ್ಮದ ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ. ಇದಕ್ಕಾಗಿ ಒಂದೆರಡು ತುಂಡು ಚೆನ್ನಾಗಿ ಕಳಿತ ಪಪ್ಪಾಯಿ ಹಣ್ಣಿನ ತಿರುಳು ಮತ್ತು ಕೊಂಚವೇ ಜೇನುತುಪ್ಪ ಸೇರಿಸಿ ಕಿವುಚಿ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ದಪ್ಪನಾಗಿ ಇಡಿಯ ಮುಖಕ್ಕೆ ಹಚ್ಚಿ ಕೊಂಚ ಹೊತ್ತು ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪಿನಲ್ಲಿ ತೊಳೆದುದಕ್ಕಿಂತಲೂ ಉತ್ತಮವಾಗಿ ಪಪ್ಪಾಯಿ ಸ್ವಚ್ಛತೆ ಮತ್ತು ಕಾಂತಿ ನೀಡುತ್ತದೆ.

ಓಟ್ಸ್

ಓಟ್ಸ್

ಓಟ್ಸ್ ನಲ್ಲಿ ಸಾಪೋಯಿನ್ ಎಂಬ ಪೋಷಕಾಂಶವಿದ್ದು ಇದು ಸಹಾ ಒಂದು ಉತ್ತಮವಾದ ಮಾರ್ಜಕವಾಗಿದೆ. ಅಲ್ಲದೇ ಸೋಪಿನಂತೆ ಓಟ್ಸ್ ನಲ್ಲಿಯೂ ಕೊಂಚ ನೊರೆಬರುವ ಕಾರಣ ಇದು ಚರ್ಮದ ಸೂಕ್ಷರಂಧ್ರಗಳನ್ನು ಅದರಲ್ಲಿರುವ ತೈಲವನ್ನು ಹೀರದೇ ಕೊಳೆಯನ್ನು ಮಾತ್ರ ನಿವಾರಿಸಲು ಸಮರ್ಥವಾಗಿದೆ. ಇದಕ್ಕಾಗಿ ಕೊಂಚ ಓಟ್ಮೀಲ್ ಅಥವಾ ಓಟ್ಸ್ ನ ರವೆಯನ್ನು ಸ್ವಲ್ಪ ನೀರು ಮತ್ತು ಕೆಲವು ಹನಿ ಅವಶ್ಯಕತೈಲ ಬಳಸಿ ಮಿಶ್ರಣ ಮಾಡಿ ಈ ಮಿಶ್ರಣದಿಂದ ಮುಖವನ್ನೆಲ್ಲಾ ಆವರಿಸುವಂತೆ ಹಚ್ಚಿ ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಜೇನು

ಜೇನು

ಅಪ್ಪಟ ಜೇನು ಸಹಾ ಚರ್ಮದ ಆರೈಕೆ ಮತ್ತು ಸ್ವಚ್ಛತೆಗೆ ಉತ್ತಮವಾದ ಆಯ್ಕೆಯಾಗಿದೆ. ವಿಶೇಷವಾಗಿ ಬಿಸಿಲಿನ ಝಳ, ಧೂಳು, ಹೊಗೆ ಮತ್ತಿತರ ಕಾರಣಗಳಿಂದ ಚರ್ಮ ಉರಿಯುತ್ತಿದ್ದರೆ ಈ ವಿಧಾನವನ್ನು ಅನುಸರಿಸುವುದು ಸೂಕ್ತವಾಗಿದೆ. ಚರ್ಮದ ಉರಿತ, ಚರ್ಮ ಕೆಂಪಗಾಗುವುದು, ತುರಿಸುವುದು ಮೊದಲಾದವುಗಳಿಗೆ ಜೇನು ಆರಾಮ ಮತ್ತು ತಂಪು ನೀಡುವ ಜೊತೆಗೇ ಈ ತೊಂದರೆಗಳಿಂದ ಶೀಘ್ರ ಶಮನವನ್ನೂ ನೀಡುತ್ತದೆ. ಇದಕ್ಕಾಗಿ ಮನೆಗೆ ಬಂದ ಬಳಿಕ ಮೊದಲು ಮುಖವನ್ನು ತಣ್ಣೀರಿನಿಂದ ತೊಳೆದು ಕೊಂಚ ಜೇನಿನಿಂದ ಕೆಲವು ನಿಮಿಷಗಳ ಕಾಲ ಬೆರಳುಗಳ ತುದಿಯಿಂದ ಮಸಾಜ್ ಮಾಡಬೇಕು. ಕೊಂಚ ಹೊತ್ತು ಒಣಗಲು ಬಿಟ್ಟು ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡು ಟವೆಲ್ ಒತ್ತಿಕೊಂಡು ಒರೆಸಿಕೊಳ್ಳಬೇಕು.

English summary

Ways To Clean Face Without Using Soap

We normally use soap or a face wash to clean our face and get rid of the impurities present on the skin. However, sadly all soaps and face washes contain harmful chemicals that eventually dry up the skin and pave a way for ageing with their regular and constant use. in this article, we at Boldsky will be listing out some of the best ingredients that can be used instead of a soap. Read on to know more about it.
X
Desktop Bottom Promotion