For Quick Alerts
ALLOW NOTIFICATIONS  
For Daily Alerts

ವಯಸ್ಸಾದರೇನಂತೆ, ಮುಖದ ಸೌಂದರ್ಯ ಬಾಡದಿರಲಿ....

By
|

ಆತ್ಮೀಯರೊಂದಿಗೆ ಸಮಯ ಕಳೆಯಬೇಕಾದ ಸಂದರ್ಭದಲ್ಲಿ, ಉದಾಹರಣೆಗೆ ಪಾರ್ಟಿ, ಹುಟ್ಟುಹಬ್ಬ ಅಥವಾ ಪ್ರಮುಖ ಕಾರ್ಯದಲ್ಲಿ ಭಾಗಿಯಾಗಬೇಕಾಗಿ ಬಂದಾಗ ಅಲ್ಲಿ ಆಗಮಿಸಿದ್ದ ನಿಮ್ಮದೇ ವಯೋಮಾನದವರು ನಿಮಗಿಂತಲೂ ಚಿಕ್ಕವರಾಗಿ ಕಾಣಿಸಿಕೊಂಡು ನಿಮಗಿಂತಲೂ ಚಟುವಟಿಕೆಯಿಂದಿದ್ದರೆ ಆಗ ನಿಮಗೆ ಏನೋ ಕಳೆದುಕೊಂಡಿದ್ದೇವೆ ಎನಿಸುತ್ತದೆ ಅಲ್ಲವೇ? ಹೌದು, ವಯೋಸಹಜವಾಗಿ ನಾವೆಲ್ಲರೂ ನಮ್ಮ ಸೌಂದರ್ಯದ ಕೆಲಭಾಗವನ್ನು ಕಳೆದುಕೊಳ್ಳುತ್ತಾ ಬರುತ್ತೇವೆ.

ಆದರೆ ಕೆಲವರಲ್ಲಿ ಇದು ಬಹಳ ನಿಧಾನವಾಗಿರುತ್ತದೆ. ಚರ್ಮದಲ್ಲಿ ಮೂಡುವ ನೆರಿಗೆಗಳು, ಸಡಿಲವಾಗುವ ಕೈ, ಮೊಣಕೈಗಳ ಚರ್ಮ, ಕಣ್ಣ ಕೆಳಗೆ ಚೀಲದಂತೆ ಕೊಂಚ ತುಂಬಿಕೊಂಡಂತಿರುವುದು, ಚರ್ಮದ ಮೇಲೆ ಕಲೆಗಳು ಮೂಡುವುದು, ಕೂದಲು ನೆರೆಯುವುದು, ಗಲ್ಲದಲ್ಲಿ ಗುಳಿ ಬೀಳುವುದು ಮೊದಲಾದವು ವೃದ್ಧಾಪ್ಯದ ಸಾಮೀಪ್ಯವನ್ನು ತೋರುತ್ತವೆ. ಹತ್ತು ವರ್ಷದ ಹಿಂದಿನ ಸೌಂದರ್ಯ, ಬರೀ ಒಂದೇ ತಿಂಗಳಿನಲ್ಲಿ!

 Try This Home Remedy To Look 10 Years Younger, In A Month!

ನಮ್ಮ ದೇಹದ ಜೀವಕೋಶಗಳೆಲ್ಲಾ ಸತತವಾಗಿ ಸತ್ತು ಹೊಸದಾಗಿ ಹುಟ್ಟುತ್ತಿರುತ್ತವೆ. ವಯಸ್ಸಾದಂತೆ ಹೊಸದಾಗಿ ಹುಟ್ಟುವ ಜೀವಕೋಶಗಳ ಸಂಖ್ಯೆ ಮತ್ತು ಗುಣಮಟ್ಟ ಕೊಂಚ ಕಡಿಮೆಯಾಗುತ್ತಾ ಹೋಗುವುದೇ ವೃದ್ಧಾಪ್ಯಕ್ಕೆ ನೇರವಾದ ಕಾರಣ.

ವಿಶೇಷವಾಗಿ ಚರ್ಮದ ಜೀವಕೋಶಗಳು ಸಡಿಲವಾಗುತ್ತಾ ಹೋಗಿ ಸೆಳೆತ ಕಳೆದುಕೊಂಡು ನೆರಿಗೆ ಮೂಡಲು ಕಾರಣವಾಗುತ್ತವೆ. ಇದು ನಿಸರ್ಗನಿಯಮವಾಗಿದ್ದು ಇದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇದನ್ನು ನಿಧಾನಗೊಳಿಸಲು ಸಾಧ್ಯವಿದೆ. ಕೆಲವರಲ್ಲಿ ನಿಸರ್ಗವೇ ನಿಧಾನವಾಗಿಸಿದರೆ ಉಳಿದವರು ತಮ್ಮ ದೇಹವನ್ನು ನಿಯಮಿತವಾದ ಆರೈಕೆ ಮತ್ತು ಆಹಾರಗಳ ಮೂಲಕ ಇದನ್ನು ತಡವಾಗಿಸುತ್ತಾರೆ. ಈ ಕಾರ್ಯಕ್ಕೆ ಹಲವಾರು ದುಬಾರಿ ಚಿಕಿತ್ಸೆಗಳೂ ಲಭ್ಯವಿವೆ.

ಬೋಟಾಕ್ಸ್, ಪ್ಲಾಸ್ಟಿಕ್ ಸರ್ಜರಿ ಮೊದಲಾದವುಗಳಿಂದ ಚರ್ಮವನ್ನು ಸೆಳೆದು ನೆರಿಗೆಯನ್ನು ಇಲ್ಲವಾಗಿಸುವ ಮೂಲಕ ವೃದ್ಧಾಪ್ಯವನ್ನು ದೂರಾಗಿಸುವ ವಿಧಾನವೂ ಇದೆ. ಆದರೆ ಇವುಗಳೆಲ್ಲಾ ಅಡ್ಡಪರಿಣಾಮಗಳಿಂದ ಹೊರತಾಗಿಲ್ಲ. ಬದಲಿಗೆ ಕೊಂಚ ನಿಧಾನವಾಗಿಯಾದರೂ ಸರಿ, ನಿಸರ್ಗದ ಮೊರೆ ಹೋಗುವುದೇ ಉತ್ತಮ.

ಈ ನಿಟ್ಟಿನಲ್ಲಿ ಸುಲಭವಾದ ಮನೆಮದ್ದೊಂದು ಲಭ್ಯವಿದ್ದು ನಿತ್ಯವೂ ಸಮರ್ಪಕವಾಗಿ ಉಪಯೋಗಿಸಿದರೆ ಇದರ ಪರಿಣಾಮವನ್ನು ಒಂದೇ ತಿಂಗಳ ಒಳಗಾಗಿ ಕಾಣಬಹುದು, ಸರಿಸುಮಾರು ನಿಮ್ಮ ವಯಸ್ಸನ್ನು ಹತ್ತು ವರ್ಷಕ್ಕೆ ಹಿಂದೆ ಕೊಂಡೊಯ್ಯಲೂ ಸಾಧ್ಯವಿದೆ. ಬನ್ನಿ, ಈ ವಿಧಾನದಲ್ಲಿ ಬಳಸಲಾಗುವ ಮುಖಲೇಪವನ್ನು ತಯಾರಿಸಿವುದು ಹೇಗೆ ಎಂಬುದನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು:
*ಚೆನ್ನಾಗಿ ಬೆಂದ ಅಕ್ಕಿ-ಎರಡು ದೊಡ್ಡ ಚಮಚ (ಸಾವಯವ ಅಕ್ಕಿ ಅಥವಾ ಪಾಲಿಶ್ ಮಾಡದ ಅಕ್ಕಿ ಅತ್ಯುತ್ತಮ)
*ಜೇನು-ಒಂದು ದೊಡ್ಡ ಚಮಚ
*ಹಾಲು-ಎರಡುದೊಡ್ಡ ಚಮಚ (ಹಸಿ ಹಾಲು ಉತ್ತಮ)

*ಅಕ್ಕಿ, ಜೇನು ಮತ್ತು ಹಾಲು ಈ ಮೂರರಲ್ಲಿಯೂ ಚರ್ಮದ ಸೆಳೆತ ಹೆಚ್ಚಿಸಲು, ಪೋಷಣೆ ನೀಡಲು ಮತ್ತು ಚರ್ಮದಲ್ಲಿ ಕೊಲ್ಯಾಜೆನ್ ಪ್ರಮಾಣವನ್ನು ಹೆಚ್ಚಿಸಿ ಚರ್ಮ ಒಳಗಿನಿಂದ ತುಂಬಿಕೊಳ್ಳುವಂತೆ ಮಾಡಿ ತಾರುಣ್ಯವನ್ನು ಮತ್ತೆ ಬರುವಂತೆ ಮಾಡಲು ಉತ್ತಮವಾದ ಪೋಷಕಾಂಶಗಳಿವೆ.
*ಈ ಮುಖಲೇಪದ ನಿಯಮಿತವಾದ ಬಳಕೆಯಿಂದ ಸತ್ತು ಹೋದ ಜೀವಕೋಶಗಳ ಬದಲಿಗೆ ಆರೋಗ್ಯವಂತ ಹೊಸ ಜೀವಕೋಶಗಳು ಹುಟ್ಟಿಬರಲು ನೆರವಾಗುತ್ತದೆ. ಇದರಿಂದ ವಿಶೇಷವಾಗಿ ಮುಖದ ಚರ್ಮದ ಸೆಳೆತ ಹೆಚ್ಚುತ್ತದೆ ತನ್ಮೂಲಕ ನೆರಿಗೆಗಳು ಕನಿಷ್ಠ ಪ್ರಮಾಣಕ್ಕಿಳಿಯುತ್ತವೆ. ಚರ್ಮದ ಕಲೆಗಳೂ ನಿಧಾನವಾಗಿ ಮರೆಯಾಗುತ್ತಾ ಆಯಸ್ಸನ್ನು ಹತ್ತು ವರ್ಷ ಹಿಂದಕ್ಕೆ ಕೊಂಡೊಯ್ಯಲು ನೆರವಾಗುತ್ತದೆ.

ತಯಾರಿಕಾ ಮತ್ತು ಬಳಕೆಯ ವಿಧಾನ:
* ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರ್‍‌ನಲ್ಲಿ ಹಾಕಿ ನುಣ್ಣಗೆ ಕಡೆಯಿರಿ.
* ಈ ಮಿಶ್ರಣವನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ
* ಪ್ರತಿದಿನ ಒಂದು ನಿಗದಿತ ಹೊತ್ತಿನಲ್ಲಿ, ಸಂಜೆಯಾದರೆ ಉತ್ತಮ, ತಣ್ಣೀರಿನಲ್ಲಿ ಮುಖ ತೊಳೆದುಕೊಂಡು ಈ ಲೇಪವನ್ನು ದಪ್ಪನಾಗಿ ಹಚ್ಚಿ.


* ತುಟಿ, ಕಣ್ಣುಗಳ ಮೇಲ್ರೆಪ್ಪೆಯ ಮೇಲೂ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ.
* ಬಳಿಕ ತಣ್ಣೀರು ಮತ್ತು ಕೊಂಚವೇ ಪ್ರಮಾಣದ ಸೌಮ್ಯ ಸೋಪು ಅಥವಾ ಫೇಸ್ ವಾಶ್ ಬಳಸಿ ತೊಳೆದುಕೊಳ್ಳಿ.
* ನಂತರ ಟವೆಲ್‌ನಿಂದ ಒತ್ತಿಕೊಂಡು ಒಣಗಿಸಿ. ಒರೆಸಲು ಹೋಗಬೇಡಿ.
English summary

Try This Home Remedy To Look 10 Years Younger, In A Month!

You go to a party with your friends and you see a group of young college kids looking great and having fun, it immediately makes you fear that you may soon be losing your youthful looks! Well, if you do feel that way each time you look at someone younger, then it could mean that you are getting pretty insecure about your age and looks!
X
Desktop Bottom Promotion