For Quick Alerts
ALLOW NOTIFICATIONS  
For Daily Alerts

ಒಂದೇ ವಾರದಲ್ಲಿ ನೀವು ಬೆಳ್ಳಗೆ ಕಾಣುವಿರಿ! ಚಾಲೆಂಜ್‌ಗೆ ರೆಡಿನಾ?

By Super Admin
|

ಒಂದು ವಿಷಯವಂತೂ ಸತ್ಯ, ಏನೆಂದರೆ ನಮ್ಮ ಸಹಜವರ್ಣ ಹೇಗಿದ್ದರೂ ಇದಕ್ಕಿಂತಲೂ ಕೊಂಚ ಬೆಳ್ಳಗಿದ್ದರೆ ಎಂಬ ಬಯಕೆ ನಮ್ಮೆಲ್ಲರಲ್ಲಿಯೂ ಇದೆ. ಸೌಂದರ್ಯದ ಕುರುಹು ಎಂದರೆ ಬೆಳ್ಳಗಿನ ಮೈಕಾಂತಿ ಎಂಬ ವಿಷಯ ಹೇಗೋ ನಾವು, ಭಾರತೀಯರೆಲ್ಲಾ ಒಪ್ಪಿಕೊಂಡುಬಿಟ್ಟಿದ್ದೇವೆ. ಚಿಕ್ಕಂದಿನಿಂದಲೂ ಮೈಚರ್ಮದ ಬಣ್ಣವನ್ನು ಬೆಳ್ಳಗಾಗಿಸಲು ನಾವೆಲ್ಲಾ ಒಂದಲ್ಲಾ ಒಂದು ಪ್ರಯತ್ನವನ್ನು ಮಾಡುತ್ತಲೇ ಇದ್ದೇವೆ. ಸೌಂದರ್ಯ ಟಿಪ್ಸ್: ನೀವೂ ಒಮ್ಮೆ ಪ್ರಯತ್ನಿಸಿ ನೋಡಿ

ಈ ಬಯಕೆಯನ್ನು ಕಂಡುಕೊಂಡ ಎಷ್ಟೋ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಕ್ರೀಮುಗಳನ್ನು ಹಚ್ಚಿ ಹಚ್ಚಿ ಆ ಸಂಸ್ಥೆಗಳನ್ನು ಶ್ರೀಮಂತವಾಗಿಸಿದ್ದೇವೆ. ಆದರೆ ಪರಿಣಾಮ ಮಾತ್ರ ಶೂನ್ಯ. ಏಕೆಂದರೆ ವಾಸ್ತವವಾಗಿ ನಾವು ನಮ್ಮ ಚರ್ಮವನ್ನು ನಮ್ಮ ಸಹಜವರ್ಣದತ್ತ ತರಲು ಸಾಧ್ಯವೇ ಹೊರತು ಬಿಳಿಚಿಸದ ವಿನಃ ಚರ್ಮದ ಬಣ್ಣವನ್ನು ಬದಲಿಸಲು ಸಾಧ್ಯವಿಲ್ಲ. ಆದರೆ ಬಿಳಿಚಿಸುವುದು ಚರ್ಮದ ಜೀವಕೋಶಗಳ ಕಳೆಯನ್ನೇ ನಾಶಗೊಳಿಸುವ ಮೂಲಕವಾದುದರಿಂದ ಇದು ಅಪಾಯಕಾರಿ ಕ್ರಮವೂ ಹೌದು.

Try This Easy Home Remedy To Get Fairer Skin In A Month!

ಹಾಗಿದ್ದ ಮೇಲೆ ನಮಗಿನ್ನೂ ಬಿಳಿಚರ್ಮದ ಮೇಲೆ ಅಷ್ಟೊಂದು ವ್ಯಾಮೋಹವೇಕೆ? ಇದಕ್ಕೆ ನಮ್ಮ ಸಮಾಜದಲ್ಲಿ ಗೌರವರ್ಣಕ್ಕೆ ಸಿಗುವ ಗೌರವವೇ ಕಾರಣ. ನಮಗೆ ಹುಟ್ಟಿನಿಂದ ಬಂದ ಸಹಜವರ್ಣ ಸರಿಸುಮಾರು ಗೌರವರ್ಣವೇ ಆಗಿದ್ದರೂ ಬಿಸಿಲು, ಪ್ರದೂಷಣೆ, ಅಪೌಷ್ಟಿಕ ಆಹಾರ, ಹಾರ್ಮೋನುಗಳ ಏರುಪೇರು, ಯಾವುದೋ ರಾಸಾಯನಿಕದ ಅಲರ್ಜಿ ಮೊದಲಾದ ಹಲವಾರು ಕಾರಣಗಳಿಂದ ನಮ್ಮ ಚರ್ಮ ಸಹಜವರ್ಣಕ್ಕಿಂತ ಹೆಚ್ಚು ಗಾಢವಾಗುತ್ತದೆ. ನಿಮ್ಮ ಸೌಂದರ್ಯ ಹೆಚ್ಚಿಸಲು ಹಾಲಿನ ಚಮತ್ಕಾರ

ಇದಕ್ಕೆ ಚರ್ಮದಲ್ಲಿರುವ ಮೆಲನಿನ್ ಎಂಬ ವರ್ಣದ್ರವ್ಯ ದಟ್ಟವಾಗುವುದೇ ಕಾರಣ. ಒಂದು ವೇಳೆ ಬಿಸಿಲಿಗೆ ಚರ್ಮ ಕಪ್ಪಗಾಗಿದ್ದರೆ ಇದು ಬಿಸಿಲು ಬೀಳದ ಚರ್ಮದ ಭಾಗದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಒಂದು ವೇಳೆ ಈ ಕಾರಣಗಳಂದ ಚರ್ಮ ಕಪ್ಪಗಾಗಿದ್ದರೆ ಇದನ್ನು ಮತ್ತೆ ಸಹಜವರ್ಣದತ್ತ ತರಲು ಸಾಧ್ಯ. ಇದಕ್ಕಾಗಿ ದುಬಾರಿ ಮತ್ತು ಅಪಾಯಕಾರಿ ಪ್ರಸಾಧನಗಳ ಮೊರೆ ಹೋಗಬೇಕಾಗಿಲ್ಲ, ಬರೆ ಅಡುಗೆಮನೆಯತ್ತ ನಡೆದರೆ ಸಾಕು. ಬನ್ನಿ, ಈ ಸರಳ ಸುಲಭ ಮತ್ತು ಪರಿಣಾಮಕಾರಿಯಾದ ಮುಖಲೇಪವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ:

ಅಗತ್ಯವಿರುವ ಸಾಮಾಗ್ರಿಗಳು:
*ಅಕ್ಕಿಹಿಟ್ಟು: ಒಂದು ದೊಡ್ಡ ಚಮಚ
*ಟೊಮೇಟೊ ರಸ: ಎರಡು ದೊಡ್ಡ ಚಮಚ
*ಹಸಿ ಹಾಲು: ಒಂದು ದೊಡ್ಡಚಮಚ ಟೊಮೆಟೊದಿಂದ ಕಾಂತಿಯುತ ತ್ವಚೆಗಾಗಿ 6 ವಿಧಾನ

ಕೆಲವೇ ದಿನಗಳಲ್ಲಿ ಗೌರವರ್ಣ ಪಡೆಯುವಲ್ಲಿ ಈ ಮೂರೂ ಸಾಮಾಗ್ರಿಗಳು ಸಮರ್ಥವಾಗಿವೆ. ಇದರಲ್ಲಿರುವ ಪೋಷಕಾಂಶಗಳು ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಚರ್ಮದ ಆಳಕ್ಕೆ ಇಳಿದು ಅಲ್ಲಿರುವ ಕೊಳೆ ಮತ್ತು ವಿಷಕಾರಿ ಕಲ್ಮಶಗಳನ್ನು ಹೊರಹಾಕುವ ಮೂಲಕ ಗೌರವರ್ಣದ ಜೊತೆಗೇ ಚರ್ಮದ ಆರೈಕೆಯನ್ನೂ ಮಾಡುತ್ತವೆ.

ಚರ್ಮಕ್ಕೆ ಗೌರವರ್ಣ ಪಡೆಯಲು ಮುಖಲೇಪದ ಬಳಕೆಯ ಜೊತೆಗೇ ಉತ್ತಮ ಸ್ವಾಸ್ಥ್ಯ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸುವುದೂ ಅಗತ್ಯವಾಗಿದೆ.

ಹಾಲಿನಲ್ಲಿರುವ ಕೊಬ್ಬು ಮತ್ತು ಟೊಮೆಟೊ ರಸದಲ್ಲಿರುವ ವಿಟಮಿನ್ನುಗಳು ಜೊತೆಯಾಗಿ ಚರ್ಮದಲ್ಲಿ ಗಾಢವರ್ಣ ಪಡೆದಿದ್ದ ಮೆಲನಿನ್ ವರ್ಣದ್ರವ್ಯವನ್ನು ಮತ್ತೆ ಸಹಜವರ್ಣದತ್ತ ಬದಲಿಸುವ ಕಾರಣ ಕೆಲವೇ ದಿನಗಳಲ್ಲಿ ಚರ್ಮ ಗೌರವರ್ಣದತ್ತ ತಿರುಗುವುದನ್ನು ಗಮನಿಸಬಹುದು.

ಅಕ್ಕಿಹಿಟ್ಟಿನಲ್ಲಿರುವ ಪೋಷಕಾಂಶಗಳು ಚರ್ಮದ ಹೊರಪದರದಲ್ಲಿರುವ ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸಲು ನೆರವಾಗುತ್ತದೆ. ಇದರಿಂದ ಹೊರಚರ್ಮದ ಪದರದ ಕಾರಣ ಗಾಢವಾಗಿದ್ದ ಚರ್ಮ ಸ್ವಚ್ಛ ಮತ್ತು ಕಾಂತಿಯುಕ್ತವಾಗುತ್ತದೆ.

ಈ ಮುಖಲೇಪವನ್ನು ಬಳಸುವ ವಿಧಾನ
*ಟೊಮೆಟೊ ರಸವನ್ನು ಪಡೆಯಲು ಒಂದು ಟೊಮೆಟೊ ಹಣ್ಣಿನ ಬೀಜ ಮತ್ತು ಸಿಪ್ಪೆ ನಿವಾರಿಸಿ ಕೇವಲ ತಿರುಳನ್ನು ಅರೆದು ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸ ಸಂಗ್ರಹಿಸಬೇಕು.
*ಮೇಲೆ ತಿಳಿಸಿದ ಪ್ರಮಾಣದಲ್ಲಿ ಮೂರೂ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಮಿಶ್ರಣ ಮಾಡಿ ದಪ್ಪನೆಯ ಲೇಪನ ತಯಾರಿಸಿ.


*ಈಗತಾನೇ ತೊಳೆದ ಮುಖ, ಕುತ್ತಿಗೆ ಹಾಗೂ ಬಿಸಿಲಿಗೆ ಒಡ್ಡುವ ಚರ್ಮದ ಭಾಗದ ಮೇಲೆ ತೆಳುವಾಗಿ ಸವರಿ.
*ಕೆಲವು ನಿಮಿಷಗಳವರೆಗೆ ಬೆರಳುಗಳಿಂದ ನಯವಾಗಿ ಮಸಾಜ್ ಮಾಡಿ. ಬಳಿಕ ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ.
*ನಂತರ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಅಗತ್ಯವಿದ್ದರೆ ಮಾತ್ರ ಸೌಮ್ಯ ಫೇಸ್ ವಾಶ್ ಬಳಸಿ.
*ಈ ವಿಧಾನವನ್ನು ಪ್ರತಿದಿನ ಸಂಜೆ ಅನುಸರಿಸಿ ಇಡಿಯ ರಾತ್ರಿ ಬೇರೇನನ್ನೂ ಹಚ್ಚಬೇಡಿ. ಒಂದೇ ತಿಂಗಳಲ್ಲಿ ಉತ್ತಮ ಫಲವನ್ನು ಕಾಣುವಿರಿ. ಸೌಂದರ್ಯ ರಹಸ್ಯ, ಅದೂ ಬರೀ ಒಂದೇ ನಿಮಿಷದಲ್ಲಿ!
English summary

Try This Easy Home Remedy To Get Fairer Skin In A Month!

Let's admit it, most of us yearn for a fair, radiant complexion that can turn heads! Fair skin has been considered as a sign of true beauty, especially in societies like India. Right from a young age, we are told that having a fair complexion is synonymous to being good looking. While it may not be entirely true, it is a fact that having a lighter skin tone can make one feel a lot more confident.
X
Desktop Bottom Promotion