ಚಳಿಗಾಲದಲ್ಲಿ ತ್ವಚೆಯ ಸಮಸ್ಯೆಗೆ ಒಂದಿಷ್ಟು ಸರಳ ಸೂತ್ರ....

ಚಳಿಗಾಲದಲ್ಲಿ ನೆಲದ ನೀರು ಆವಿಯಾಗದೇ ಗಾಳಿಯಲ್ಲಿ ನೀರಿನ ಪಸೆಯೇ ಇರುವುದಿಲ್ಲ. ಇದನ್ನೇ ಒಣಹವೆ ಎನ್ನುತ್ತೇವೆ. ಈ ಗಾಳಿಯಲ್ಲಿ ಇರದ ಆರ್ದ್ರತೆಯ ಕಾರಣ ಚರ್ಮವೂ ಆರ್ದ್ರತೆಯ ಕೊರತೆಯನ್ನು ಎದುರಿಸುತ್ತದೆ.

By: Arshad
Subscribe to Boldsky

ಚಳಿಗಾಲದಲ್ಲಿ ಚರ್ಮದ ರಕ್ಷಣೆಯ ಹೊಣೆಗಾರಿಕೆ ಹೆಚ್ಚುತ್ತದೆ. ಏಕೆಂದರೆ ಈ ಸಮಯದಲ್ಲಿ ಚರ್ಮ ಒಣದಾಗಿ ಒಡೆಯುವ ಸಂಭವವಿದೆ. ಹೆಚ್ಚಿನವರಿಗೆ ಚಳಿಗಾಲದಲ್ಲಿ ಚರ್ಮ ಒಡೆಯುವುದೇಕೆ ಎಂದು ಅರ್ಥವಾಗುವುದಿಲ್ಲ. ನಮ್ಮ ಚರ್ಮದಲ್ಲಿ ಅತಿ ಸೂಕ್ಷ್ಮ ರಂಧ್ರಗಳಿದ್ದು ಇದರಿಂದ ಗಾಳಿಯಲ್ಲಿರುವ ಆರ್ದ್ರತೆ ಒಳಬರುವ ಮೂಲಕ ಚರ್ಮವೂ ಆರ್ದ್ರತೆ ಪಡೆಯುತ್ತದೆ. ಇದರಿಂದ ಚರ್ಮಕ್ಕೆ ಆರೋಗ್ಯವಾಗಿರುತ್ತದೆ.      ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ?

ಆದರೆ ಚಳಿಗಾಲದಲ್ಲಿ ನೆಲದ ನೀರು ಆವಿಯಾಗದೇ ಗಾಳಿಯಲ್ಲಿ ನೀರಿನ ಪಸೆಯೇ ಇರುವುದಿಲ್ಲ. ಇದನ್ನೇ ಒಣಹವೆ ಎನ್ನುತ್ತೇವೆ. ಈ ಗಾಳಿಯಲ್ಲಿ ಇರದ ಆರ್ದ್ರತೆಯ ಕಾರಣ ಚರ್ಮವೂ ಆರ್ದ್ರತೆಯ ಕೊರತೆಯನ್ನು ಎದುರಿಸುತ್ತದೆ. ಪರಿಣಾಮವಾಗಿ ಚರ್ಮದ ಹೊರಪದರ ಒಳಗಿ ಸಂಕುಚಿಸುತ್ತದೆ. ಆಗ ಸೂಕ್ಷ್ಮಗೆರೆಗಳು ಮೂಡುತ್ತವೆ. ಬನ್ನಿ, ಈ ಸ್ಥಿತಿಗೆ ಒಳಗಾಗದಿರಲು ತಜ್ಞರು ನೀಡಿರುವ ಸಲಹೆಗಳು ಯಾವುವು ಎಂಬುದನ್ನು ನೋಡೋಣ....

glowing skin
 

ತೇವಕಾರಕ(ಮಾಯಿಶ್ಚರೈಸರ್)
ಚರ್ಮಕ್ಕೆ ತೇವಾಂಶ ಅಥವಾ ಆರ್ದ್ರತೆ ನಿಸರ್ಗದ ಮೂಲಕ ಸಿಗದ ಕಾರಣ ಇದನ್ನು ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಇಂದು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ತೇವಕಾರಕ ಅಥವಾ ಮಾಯಿಶ್ಚರೈಸರ್ ಗಳಿವೆ. ಇವುಗಳಲ್ಲಿ ಸೂಕ್ತವಾದುದನ್ನು ಬಳಸಬೇಕು.  ಆದರೆ ಇದರ ಪ್ರಮಾಣ ಅತ್ಯಂತ ತೆಳುವಾಗಿರಬೇಕು ಅಂದರೆ ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಬಾರದು. ಜೆಲ್ ಅಥವಾ ಕ್ರೀಂ ರೂಪದ ತೇವಕಾರಕ ಎಲ್ಲರಿಗೂ ಸೂಕ್ತವಾಗಿದ್ದು ಇದನ್ನು ತೆಳ್ಳಗೆ ಹಚ್ಚಿಕೊಳ್ಳುವ ಮೂಲಕ ಚರ್ಮ ಆರ್ದ್ರತೆಯ ಕೊರತೆಯನ್ನು ಎದುರಿಸಬಹುದು.

face oil
 

ಮುಖದ ಎಣ್ಣೆ
ನಮ್ಮ ದೇಹದಲ್ಲಿ ಮುಖದ ಚರ್ಮದ ಹೆಚ್ಚು ಸೂಕ್ಷ್ಮವಾಗಿದ್ದು ಕಣ್ಣುಗಳ ಕೆಳಭಾಗ ಮತ್ತು ಮೂಗಿನ ಮೇಲೆ ಅತಿ ಹೆಚ್ಚಿನ ತೈಲಗ್ರಂಥಿಗಳಿವೆ. ಆದರೆ ಚಳಿಗಾಲದಲ್ಲಿ ಈ ಗ್ರಂಥಿಗಳೂ ರಜೆ ತೆಗೆದುಕೊಂಡು ಬಿಡುತ್ತವೆ. ಪರಿಣಾಮವಾಗಿ ಚರ್ಮ ತೀರಾ ಒಣಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಈ ಕೊರತೆಯನ್ನು ನೀಗುವ ಮುಖದ ಎಣ್ಣೆ (Face oil) ಲಭ್ಯವಿದ್ದು ಇದು ಒಂದು ರೀತಿ ಔಷಧಿಯಂತೆಯೂ ಕೆಲಸ ಮಾಡುತ್ತದೆ. ಚರ್ಮಕ್ಕೆ ಪೋಷಣೆ ನೀಡುವ ಜೊತೆಗೇ ನೆರಿಗೆಗಳನ್ನು ಉಂಟುಮಾಡದೇ ಇರುವಂತೆ ನೋಡಿಕೊಳ್ಳುವ ಮೂಲಕ ವೃದ್ದಾಪ್ಯವನ್ನೂ ದೂರ ಮಾಡುತ್ತದೆ. ಇದರಿಂದ ಚಳಿಗಾದಲ್ಲಿಯೂ ಚರ್ಮ ಕಾಂತಿಯುಕ್ತವಾಗಿ ಆರೋಗ್ಯಕರವಾಗಿರುತ್ತದೆ. ಚಳಿಗಾಲದಲ್ಲಿ ತ್ವಚೆ ರಕ್ಷಣೆಗೆ ಕಿತ್ತಳೆಯ 5 ಫೇಸ್ ಮಾಸ್ಕ್

ಉಗುರುಬೆಚ್ಚನೆಯ ನೀರು
ಚಳಿಗಾಲದಲ್ಲಿ ಬಿಸಿನೀರು ಬಳಸುವುದು ಎಲ್ಲರಿಗೂ ಇಷ್ಟ. ಆದರೆ ದೇಹದ ಚರ್ಮಕ್ಕೆ, ಅದರಲ್ಲೂ ಮುಖದ ಚರ್ಮಕ್ಕೆ ಅತಿ ಬಿಸಿಯಾದ ನೀರನ್ನು ಬಳಸುವ ಮೂಲಕ ಚರ್ಮದ ಸೂಕ್ಷ್ಮ ರಂಧ್ರಗಳ ಮೂಲಕ ಚರ್ಮದ ಕೆಳಪದರಲ್ಲಿರುವ ನೈಸರ್ಗಿಕ ತೈಲಗಳೂ ಬಿಸಿಯ ಕಾರಣ ಹೊರಸೂಸಿ ನಷ್ಟವಾಗುತ್ತವೆ. ಇದು ಚರ್ಮವನ್ನು ಆಪಾರವಾಗಿ ಘಾಸಿಗೊಳಿಸುತ್ತದೆ. ಇದನ್ನು ತಡೆಯಲು ಉಗುರುಬೆಚ್ಚನೆಯ ನೀರಿನಿಂದ ಸ್ನಾನ ಮಾಡುವುದೇ ಉತ್ತಮ.

fsce packs
 

ಹೆಚ್ಚಾಗಿ ಸತ್ತ ಜೀವಕೋಶಗಳನ್ನು ನಿವಾರಿಸುವುದು (over Exfoliation)
ನಮ್ಮ ಚರ್ಮದ ಸತ್ತ ಜೀವಕೋಶಗಳು ಹೊರಚರ್ಮಕ್ಕೆ ಅಂಟಿಕೊಂಡಿರುತ್ತವೆ. ಇದನ್ನು ಆಗಾಗ ಕೆರೆದು ಸ್ವಚ್ಛಗೊಳಿಸುತ್ತಿರಬೇಕು. ಆದರೆ ಚಳಿಗಾಲದಲ್ಲಿ ಇದರ ಪ್ರಮಾಣ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಇತರ ಸಮಯದಷ್ಟೇ ಒತ್ತಡದಿಂದ ಚರ್ಮವನ್ನು ಉಜ್ಜಿಕೊಂಡಾಗ ಚರ್ಮದ ಹೊರಪದರದ ಜೀವಂತ ಜೀವಕೋಶಗಳೇ ಕಿತ್ತು ಬರಬಹುದು. ಪರಿಣಾಮವಾಗಿ ಚರ್ಮ ವಿಪರೀತವಾಗಿ ಕೆಂಪಗಾಗಿ ಉರಿ ತರಿಸಬಹುದು. ಬದಲಿಗೆ ಸೌಮ್ಯವಾದ ಎಕ್ಸ್ ಫೋಲಿಯೇಟರ್ಗ ಳಾದ ಓಟ್ಸ್, ಕಾಫಿ ಪುಡಿ ಮೊದಲಾದವುಗಳನ್ನು ನಿಮ್ಮ ನಿತ್ಯದ ಮಾಯಿಶ್ಚರೈಸರ್ ಅಥವಾ ಕ್ರೀಂ ನೊಂದಿಗೆ ಬಳಸಿ.

Applying face cream
 

ಒಮೆಗಾ 3 ಕೊಬ್ಬಿನ ಆಮ್ಲ
ಚರ್ಮದ ಆರೈಕೆಗೆ ನಾವು ಸೇವಿಸುವ ಆಹಾರವೂ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆಹಾರದಲ್ಲಿ ಒಮೆಗಾ 3 ಕೊಬ್ಬಿನ ಆಮ್ಲದ ಪ್ರಮಾಣ ಹೆಚ್ಚಿರುವ ಆಹಾರವನ್ನು ಸೇವಿಸುವುದು ಉತ್ತಮ ಕ್ರಮವಾಗಿದೆ. ಚಳಿಗಾಲದಲ್ಲಿ ಲಭ್ಯವಿರುವ ಹಸಿರು ತರಕಾರಿಗಳು, ಮೀನು, ಮೊಟ್ಟೆಗಳನ್ನು ಸೇವಿಸಬೇಕು. ಅಲ್ಲದೇ ಈ ಸಮಯದಲ್ಲಿ ಆದಷ್ಟು ಕಡಿಮೆ ಸಕ್ಕರೆ ಸೇವಿಸಬೇಕು. ಏಕೆಂದರೆ ಸಕ್ಕರೆ ಚರ್ಮದ ಅಡಿಯಲ್ಲಿ ಸೋಂಕು ಉಂಟುಮಾಡಲು ಸಹಕರಿಸಿ ಮೊಡವೆಗೆ ಕಾರಣವಾಗುತ್ತದೆ. ಅಂತೆಯೇ ಎಣ್ಣೆಯ ಸೇವನೆಯನ್ನೂ ಕಡಿಮೆ ಮಾಡಬೇಕು.

English summary

Top skin care tips for a glowing skin this winter!

Winter is that time of the year when you have to be extra careful about your skin as the cold might make your skin dry and devoid of natural moisture and glow. Here is a few tips you must follow this winter for a glowing and healthy skin...
Please Wait while comments are loading...
Subscribe Newsletter