For Quick Alerts
ALLOW NOTIFICATIONS  
For Daily Alerts

ಮೊಡವೆ ಕಾಟಕ್ಕೆ, ಟೊಮೆಟೊ ಹಣ್ಣಿನ ಫೇಸ್ ಪ್ಯಾಕ್

By Super
|

ಟೀವಿ ಧಾರಾವಾಹಿಗಳ ನಡುವೆ ಅನವರತವಾಗಿ ಬರುವ ಜಾಹೀರಾತುಗಳಲ್ಲಿ ಸೌಂದರ್ಯ ಪ್ರಸಾಧನಗಳದ್ದೇ ಸಿಂಹಪಾಲು. ಏಕೆಂದರೆ ಈ ಜಾಹೀರಾತಿನಲ್ಲಿ ಹೇಳುವ ಪೊಳ್ಳು ಮಾತುಗಳನ್ನು ನಂಬಿ ಭಾರೀ ಪ್ರಮಾಣದಲ್ಲಿ ದುಬಾರಿ ಬೆಲೆ ತೆತ್ತು ಖರೀದಿಸುವ ಗ್ರಾಹಕರಿದ್ದಾರೆ. ಆದರೆ ಜಾಹೀರಾತಿನಲ್ಲಿ ಹೇಳಿದ ಒಂದಂಶವಾದರೂ ನಿಜವಾಗಿದ್ದಿದ್ದರೆ ಚೆನ್ನಿತ್ತು.

ವಾಸ್ತವವಾಗಿ ಇವು ಪ್ರಾರಂಭಕ್ಕೆ ಮೊಡವೆಗಳಿಗೆ ಶಮನ ನೀಡುತ್ತವೆ ಎಂದು ಕಂಡುಬಂದರೂ ಇವುಗಳ ಅಡ್ಡಪರಿಣಾಮ ಮತ್ತು ದೀರ್ಘಪರಿಣಾಮಗಳೂ ಬಹಳ ಕಟುವಾಗಿರುತ್ತವೆ. ಇದನ್ನು ಅನುಭವಿಸಿದ ಗ್ರಾಹಕರೀಗ ಹಳೆಯ ಕಾಲದ ಮತ್ತು ಫಲಪ್ರದವಾದ ವಿಧಾನಗಳತ್ತ ಒಲವು ತೋರುತ್ತಿದ್ದಾರೆ. ಮೊಡವೆಗಳನ್ನು ನಿವಾರಿಸಲು ಇದರಲ್ಲೊಂದು ವಿಧಾನವೆಂದರೆ ಟೊಮೆಟೊ ಹಣ್ಣಿನ ಮುಖಲೇಪ.

Tomato Face Packs To Treat Acne

ಸಸ್ಯಶಾಸ್ತ್ರದ ಪ್ರಕಾರ ಟೊಮೆಟೊ ಒಂದು ಹಣ್ಣು. ಆದರೆ ನಾವಿದನ್ನು ತರಕಾರಿಯಂತೆ ಬಳಸುತ್ತಿದ್ದೇವೆ. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಮತ್ತು ಹಲವು ಆಂಟಿ ಆಕ್ಸಿಡೆಂಟುಗಳಿವೆ. ಇದರ ಕೆಂಪುಬಣ್ಣಕ್ಕೆ ಕಾರಣವಾದ ಲೈಕೋಪೀನ್ ಎಂಬ ಪೋಷಕಾಂಶ ಉತ್ತಮ ರೋಗ ನಿರೋಧಕವಾಗಿದೆ.

ಮೊಡವೆಗಳನ್ನು ಕಲೆಯಿಲ್ಲದಂತೆ ನಿವಾರಿಸಲು ಟೊಮೆಟೊ ಹಣ್ಣಿನ ಪೋಷಕಾಂಶಗಳು ಸಮರ್ಥವಾಗಿವೆ. ಅಷ್ಟೇ ಅಲ್ಲ, ಇದರ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿದು ಹೆಚ್ಚುವರಿ ಎಣ್ಣೆಯ ಪಸೆಯನ್ನು ನಿವಾರಿಸುತ್ತದೆ. ವಿಟಮಿನ್ ಎ ಮತ್ತು ಸಿ ಗಳು ಚರ್ಮಕ್ಕೆ ಪೋಷಣೆ ನೀಡುತ್ತವೆ. ನೀರಿನ ಅಂಶ ಆರ್ದ್ರತೆ ನೀಡುತ್ತದೆ ಹಾಗೂ ಚರ್ಮದ ಸೆಳೆತವನ್ನೂ ಹೆಚ್ಚಿಸಿ ಕಾಂತಿ ಹೆಚ್ಚಿಸುವಂತೆ ಮಾಡುತ್ತದೆ.

ಆದರೆ ಯಾವುದೇ ಸೌಂದರ್ಯ ಪ್ರಸಾಧನವನ್ನು ಬಳಸುವಂತೆ ಟೊಮೆಟೊವನ್ನು ಸುಖಾಸುಮ್ಮನೆ ಅರೆದು ಹಚ್ಚುವಂತಿಲ್ಲ. ಇದರ ಮುಖಲೇಪವನ್ನು ತಯಾರಿಸಿ ಮುಖದ ಚರ್ಮಕ್ಕೆ ಹಚ್ಚಿಕೊಂಡರೆ ಮಾತ್ರ ಇದರ ಪೂರ್ಣ ಪ್ರಮಾಣದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಬನ್ನಿ, ಮೊಡವೆಗಳನ್ನು ನಿವಾರಿಸಲು ಟೊಮಾಟೋ ಮುಖಲೇಪ ತಯಾರಿಸುವ ಬಗೆಯನ್ನು ತಿಳಿಯೋಣ:

ಸಾಮಾನ್ಯ ಟೊಮೆಟೊ ಮುಖಲೇಪ
ಮೊದಲು ಟೊಮೆಟೊ ಹಣ್ಣಿನ ಬೀಜಗಳನ್ನೆಲ್ಲಾ ನಿವಾರಿಸಿ ಸಿಪ್ಪೆ ಬಿಟ್ಟು ಕೇವಲ ತಿರುಳನ್ನು ಸಂಗ್ರಹಿಸಿ. ಈ ತಿರುಳನ್ನು ನೇರವಾಗಿ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ. ಸುಮಾರು ಒಂದು ಗಂಟೆಯ ಬಳಿಕ ಕೊಂಚ ಬಿಸಿನೀರು ಬಳಸಿ ತೊಳೆದುಕೊಳ್ಳಿ. ಬಳಿಕ ದಪ್ಪ ಟವೆಲ್ಲಿನಿಂದ ಒತ್ತಿಕೊಂಡು ಒರೆಸಿಕೊಳ್ಳಿ. ಬಳಿಕ ನಿಮ್ಮ ನೆಚ್ಚಿನ ತೇವಕಾರಕ ಕ್ರೀಂ ಹಚ್ಚಿ. ಈ ವಿಧಾನ ಚಿಕ್ಕ ಚಿಕ್ಕ ಮೊಡವೆಗಳಿಗೆ ಸೂಕ್ತವಾಗಿದೆ.

ಟೊಮೆಟೊ ಮತ್ತು ಬೆಣ್ಣೆಹಣ್ಣಿನ ಮುಖಲೇಪ
ಬೆಣ್ಣೆಹಣ್ಣಿನಲ್ಲಿ ಪ್ರತಿಜೀವಕ ಮತ್ತು ತೇವಕಾರಕ ಗುಣಗಳಿವೆ. ಇದನ್ನು ಟೊಮೆಟೊದೊಂದಿಗೆ ಬೆರೆಸಿದಾದ ಇದೊಂದು ಅದ್ಭುತವಾದ ಮೊಡವೆ ನಿವಾರಕ ಲೇಪವಾಗಿ ಮಾರ್ಪಡುತ್ತದೆ. ಸಮಪ್ರಮಾಣದಲ್ಲಿ ಟೊಮೆಟೊ ಹಣ್ಣಿನ ತಿರುಳು ಮತ್ತು ಬೆಣ್ಣೆಹಣ್ಣಿನ ತಿರುಳನ್ನು ಚೆನ್ನಾಗಿ ಬೆರೆಸಿ ದಪ್ಪನಾಗಿ ಈಗತಾನೇ ತಣ್ಣೀರಿನಲ್ಲಿ ತೊಳೆದುಕೊಂಡ ಮುಖಕ್ಕೆ ಹಚ್ಚಿ. ಮೊಡವೆಗಳಿರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ. ಇಪ್ಪತ್ತು ನಿಮಿಷದ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆರಡು ಬಾರಿ ಅನುಸರಿಸಿ. ಇದು ಮಧ್ಯಮ ಗಾತ್ರದ ಮತ್ತು ಒಡೆದಿಲ್ಲದ ಮೊಡವೆಗಳಿಗೆ ಸೂಕ್ತ.

ಟೊಮೆಟೊ ಮತ್ತು ಮೊಸರಿನ ಮುಖಲೇಪ
ಸಮಪ್ರಮಾಣದಲ್ಲಿ ಟೊಮೆಟೊ ಹಣ್ಣಿನ ತಿರುಳು ಮತ್ತು ಮೊಸರನ್ನು ಬೆರೆಸಿ. ಮಿಶ್ರಣ ತೆಳುವಾಯಿತು ಅನ್ನಿಸಿದರೆ ಮೊಸರಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ಈ ಮಿಶ್ರಣವನ್ನು ದಪ್ಪನಾಗಿ ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಹಚ್ಚಿ. ಒಂದು ಗಂಟೆಯ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನ ಅನುಸರಿಸಿ. ಈ ವಿಧಾನವು ಒಡೆದ ಮೊಡವೆಗಳು, ಇನ್ನೇನು ಒಡೆಯಲಿರುವ ಅಥವಾ ಕೀವು ತುಂಬಿ ನೋವು ಇರುವ ಮೊಡವೆಗಳಿಗೆ ಸೂಕ್ತವಾಗಿದೆ. ಬರೆಯ ಮೊಡವೆ ಮಾತ್ರವಲ್ಲ, ಬಿಸಿಲಿಗೆ ಬಾಡಿದ ಮತ್ತು ಬಣ್ಣಗೆಟ್ಟಿದ್ದ ಚರ್ಮಕ್ಕೂ ಸೂಕ್ತ ಆರೈಕೆ ದೊರಕುತ್ತದೆ.

English summary

Tomato Face Packs To Treat Acne

The humble tomato is one of the healthy vegetables which besides being very nutritious with a number of vitamins and minerals in it, has a high concentration of the vital anti-oxidant lycopene. Lycopene is a naturally occurring chemical that gives fruits and vegetables a red color Have a look Tomato Face Packs To Treat Acne
Story first published: Monday, June 13, 2016, 19:53 [IST]
X
Desktop Bottom Promotion