For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಬಳಲದಿರಲಿ, ನಿಮ್ಮ ಚರ್ಮದ ಸೌಂದರ್ಯ!

By Hemanth
|

ಮಳೆಗಾಲ ಬಂತೆಂದರೆ ಸಾಕು. ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ದೇಹದ ಒಳಗಿನ ಆರೋಗ್ಯದಂತೆ ದೇಹದ ಹೊರಗಡೆ ಇರುವ ಚರ್ಮದ ಆರೋಗ್ಯದ ಬಗ್ಗೆ ಮಳೆಗಾಲದಲ್ಲಿ ಗಮನಹರಿಸುವುದು ತುಂಬಾ ಮುಖ್ಯ. ಅದರಲ್ಲೂ ಒಣಚರ್ಮ ಇರುವವರು ತೀವ್ರ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕೆಂದರೆ ಒಣ ಚರ್ಮದವರಲ್ಲಿ ಪದರವು ಕಿತ್ತು ಬಂದು ಬಂದು ತುರಿಕೆ ಉಂಟಾಗಬಹುದು. ಇದರಿಂದಾಗಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗಬಹುದು.

Tips To Take Care Of Dry Skin During Monsoons

ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚಾಗಿ ದೇಹವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿಕೊಳ್ಳಲು ಕಲವರು ಬಯಸುವುದಿಲ್ಲ. ಮುಚ್ಚಿಕೊಂಡರೂ ಪದರಗಳು ಬಟ್ಟೆಯ ಮೇಲೆ ಬೀಳುವುದರಿಂದ, ಕಿರಿಕಿರಿ ಭಾವನೆಯನ್ನು ಮೂಡಿಸಬಹುದು ಇದಕ್ಕೆಲ್ಲಾ ಕಾರಣ, ಒಮೆಗಾ3 ಕೊಬ್ಬಿನ ಆ್ಯಸಿಡ್ ನಮ್ಮ ಆಹಾರದಲ್ಲಿ ಕಡಿಮೆಯಾಗಿರುವುದರಿಂದಲೇ ಒಣ ಹಾಗೂ ಪದರ ಬಿಡುವ ಚರ್ಮವು ಕಾಣಿಸಿಕೊಳ್ಳುವುದು. ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ

ಒಮೆಗಾ3 ಹೆಚ್ಚಾಗಿ ಇರುವಂತಹ ಮೀನು ಮತ್ತು ಬಾದಾಮಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಿ. ನೀರನ್ನು ಹೆಚ್ಚಾಗಿ ಸೇವಿಸಿ ಮತ್ತು ದಿನದಲ್ಲಿ ಒಂದಾದರೂ ಹಣ್ಣನ್ನು ತಿನ್ನಿ. ಕೆಳಗೆ ಕೊಟ್ಟಿರುವಂತಹ ಸಲಹೆಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ನಿಮ್ಮ ಒಣ ಹಾಗೂ ಪದರಬಿಡುವ ಚರ್ಮವು ಮಾಯವಾಗುವುದು. ಮೈ ಕಾಣುವಂತಹ ಬಟ್ಟೆಯನ್ನು ಧರಿಸಲು ನಿಮಗೆ ಯಾವುದೇ ರೀತಿಯ ತೊಂದರೆಯಾಗದು.

ಸ್ಕ್ರಬ್ ಮಾಡಿ
ಸತ್ತ ಚರ್ಮದ ಪದರಗಳು ಬರುವುದನ್ನು ತಡೆಯಲು ಬ್ರೌನ್ ಶುಗರ್ ಮತ್ತು ಆಲಿವ್ ಆಯಿಲ್ ನಿಂದ ಸ್ಕ್ರಬ್ ಮಾಡಿಕೊಳ್ಳಿ. ಆಲಿವ್ ಆಯಿಲ್ ಸಕ್ಕರೆ ಎದುರು ರಕ್ಷಣಾತ್ಮಕ ತೇವಾಂಶವನ್ನು ನೀಡುವುದು.

ಎಣ್ಣೆಯಿಂದ ಮಸಾಜ್ ಮಾಡಿ
ಸ್ನಾನ ಮಾಡುವ ಮೊದಲು ತೆಂಗಿನ ಎಣ್ಣೆ, ಆಲಿವ್ ಆಯಿಲ್ ಅಥವಾ ಮಸಾಜ್ ಅಯಿಲ್ ನಿಂದ ಮಸಾಜ್ ಮಾಡಿಕೊಳ್ಳಿ. ಒಣ ಚರ್ಮದಿಂದ ಉಂಟಾಗುವ ನೋವಿನಿಂದ ಇದು ಪರಿಹಾರ ನೀಡುವುದು.

ಶವರ್ ಜೆಲ್ ಬಳಸಿ
ಹೆಚ್ಚು ಗಡುಸಾಗಿರದ ಶವರ್ ಜೆಲ್‌ನ್ನು ಬಳಸಿ. ಹೊಳೆಯುವ ಅಥವಾ ಕಡುಬಣ್ಣವನ್ನು ಹೊಂದಿರುವ ಜೆಲ್‌ನ್ನು ಬಳಸಬೇಡಿ. ಇದರಿಂದ ನಿಮ್ಮ ಚರ್ಮಕ್ಕೆ ಮತ್ತಷ್ಟು ಹಾನಿಯಾಗಬಹುದು. ಒಳ್ಳೆಯ ಉತ್ಪನ್ನಗಳನ್ನೇ ಬಳಸಿ.

ಮಾಯಿಶ್ಚರೈಸರ್ ಬಳಸಿ
ಸ್ನಾನ ಮಾಡಿದ ತಕ್ಷಣ ನಿಮ್ಮ ಸಂಪೂರ್ಣ ದೇಹಕ್ಕೆ ಮಾಯಿಶ್ಚರೈಸರ್‌ನ್ನು ಹಚ್ಚಿಕೊಳ್ಳಿ. ಒಣ ಚರ್ಮ ಇರುವವರು ಬೆಣ್ಣೆಯನ್ನು ಹಚ್ಚಿಕೊಂಡರೆ ಅದು ದಿನಪೂರ್ತಿ ನಿಮ್ಮ ಚರ್ಮವನ್ನು ತೇವಾಂಶದಿಂದ ಇರುವಂತೆ ಮಾಡುತ್ತದೆ. ಇದನ್ನು ದೇಹದ ಎಲ್ಲಾ ಭಾಗಕ್ಕೆ ಹಚ್ಚಿಕೊಳ್ಳಿ. ಒಣ ತ್ವಚೆಗೆ ಅತ್ಯುತ್ತಮವಾದ ಮಾಯಿಶ್ಚರೈಸರ್

ಅದರಲ್ಲೂ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಪದರ ಏಳುವುದು ಹೆಚ್ಚಾಗಿರುತ್ತದೆ. ಇದನ್ನು ಗಮನಿಸಿ. ನಿಮ್ಮ ಚರ್ಮವು ಒಣಗಬಾರದು ಮತ್ತು ಪದರ ಏಳಬಾರದು ಎಂದಾದರೆ ನೀವು ದಿನಾಲೂ ಇದನ್ನು ಮಾಡುತ್ತಿರಬೇಕು. ಮೃಧು ಮತ್ತು ಸುಂದರ ಚರ್ಮವನ್ನು ಪಡೆಯಲು ಸ್ವಲ್ಪ ಸಮಯ ವಿನಿಯೋಗಿಸಿ.

English summary

Tips To Take Care Of Dry Skin During Monsoons

Dry skin can be itchy and uncomfortable. Further, scratching this type of dry skin can lead to a flaky skin and red sores that can end up being quite painful. But along with the discomfort, there is an aesthetic factor associated with it. By following these easy everyday tips given below, you'll surely get rid of dry and flaky skin all over your body and will no longer be embarrassed to go out wearing clothes that expose your skin
X
Desktop Bottom Promotion