For Quick Alerts
ALLOW NOTIFICATIONS  
For Daily Alerts

ಜಾಹೀರಾತಿನ ಮೋಡಿಗೆ ಮರುಳಾಗಿ ಮೋಸ ಹೋಗದಿರಿ

By Suma
|

ನಿಮ್ಮ ತ್ವಚೆಯನ್ನು ಚಂದವಾಗಿ ಕಾಣಲು ಎಲ್ಲ ಬಗೆಯ ಆರೈಕೆ ವಿಧಾನಗಳನ್ನು ಅನುಸರಿಸಿ ಇರುತ್ತೀರಿ. ಆದರೆ ಕೆಲವರು ತಮ್ಮ ತ್ವಚೆಯ ಅಂದದ ಬಗ್ಗೆ ಉದಾಸೀನ ಹೊಂದಿ ನಂತರ ಪಶ್ಚಾತಾಪ ಪಡುತ್ತಾರೆ. ಇನ್ನೂ ಕೆಲವರು ಇತರರು ಹೇಳಿದ ಮಾತುಗಳನ್ನು ಕೇಳಿ ತಮಗೆ ತಿಳಿಯದ ತಪ್ಪು ವಿಧಾನಗಳನ್ನು ಅನುಸರಿಸಿ ಮೋಸ ಹೋಗುತ್ತಿದ್ದಾರೆ.

ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಸಿಗುವಂತಹ ನೈಸರ್ಗಿಕ ಪದಾರ್ಥಗಳಿಂದ ನಿಮ್ಮ ತ್ವಚೆಯ ಅಂದವನ್ನು ಸುಲಭವಾಗಿ ಹೆಚ್ಚಿಸಬಹುದು ಎಂಬ ಅಂಶವು ಅನೇಕರಿಗೆ ತಿಳಿದಿಲ್ಲ. ಈ ಲೇಖನದಲ್ಲಿ ನಿಮಗೆ ಮನೆಯಲ್ಲಿಯೇ ಸಿಗುವಂತಹ ವಸ್ತುಗಳನ್ನು ಉಪಯೋಗಿಸಿ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಕೆಲ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಅಬ್ಬರದ ಜಾಹೀರಾತುಗಳನ್ನು ಅನುಸರಿಸಿ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಹೋಗಿ ಮೋಸಹೋದವರು ಅನೇಕರಿದ್ದಾರೆ.

ಹಾಗಾದರೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಸಾಧ್ಯವಾಗದೆಂದು ಬೇಸರವೇ? ನಾವು ಹೇಳುವ ಅಗ್ಗದ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ. ಸಾಮಾನ್ಯವಾಗಿ ಮನೆಯಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಇದ್ದೇ ಇರುತ್ತವೆ. ನಿಮ್ಮ ಮುಖದ ಕಪ್ಪು ಕಲೆಗಳು ಮತ್ತು ಜಿಡ್ಡನ್ನು ಹೋಗಲಾಡಿಸಲು ನೆರವಾಗುವ ಆಲೂಗಡ್ಡೆ, ಲಿಂಬೆ ಹಣ್ಣು ಮತ್ತು ಪಪ್ಪಾಯಿ ಹಣ್ಣನ್ನು ಬಳಕೆ ಮಾಡಿ. ಆಲೂಗಡ್ಡೆ ಮತ್ತು ಲಿಂಬೆಹಣ್ಣುಗಳು ಸೌಮ್ಯಗುಣವಿರುವ ಸ್ವಚ್ಛತಾ ಸಾಧನಗಳಾಗಿದ್ದು, ಪಪ್ಪಾಯಿ ಹಣ್ಣಿನಲ್ಲಿ ಚರ್ಮದ ಸತ್ತ ಜೀವಕೋಶಗಳನ್ನು ಹೊರಹಾಕುವ ಗುಣಲಕ್ಷಣವಿದೆ. ವಿವರಗಳಿಗೆ ಮುಂದೆ ಓದಿ....

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ ಸತ್ವಗಳು, ಪೊಟಾಶಿಯಮ್, ಮ್ಯಾಂಗನೀಸ್, ಜಿಂಕ್ ಮತ್ತು ಫಾಸ್ಫರಸ್ ಸತ್ವಗಳು ಹೇರಳವಾಗಿದ್ದು, ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುವ ಗುಣ ಹೊಂದಿವೆ. ಇದರಲ್ಲಿರುವ ವಿಟಮಿನ್ ಬಿ ಕಾಂಪ್ಲೆಕ್ಸ್ ಸತ್ವದಲ್ಲಿರುವ ನಿಯಾಸಿನ್ ಅಮೈಡ್ ಅಂಶವು ನಿಮ್ಮ ಜೀವಕೋಶಗಳಿಗೆ ಪುನರುಜ್ಜೀವನ ನೀಡುತ್ತದೆ.

ಉಪಯೋಗಿಸುವ ಬಗೆ

ಉಪಯೋಗಿಸುವ ಬಗೆ

ಆಲೂಗಡ್ಡೆ ಹೋಳನ್ನು ನಿಮ್ಮ ಮುಖದ ತ್ವಚೆಯ ಭಾಗಕ್ಕೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ತಿಕ್ಕಿಕೊಳ್ಳಿ. ಆಲೂಗಡ್ಡೆ ಹೋಳು ಒಣಗಿದರೆ ಮತ್ತೊಂದು ಹೋಳನ್ನು ಉಪಯೋಗಿಸಿ. ಈ ಪ್ರಕ್ರಿಯೆಯಿಂದ ನಿಮ್ಮ ತ್ವಚೆಯು ಕಾಂತಿಯುಕ್ತವಾಗುತ್ತದೆ.

ಲಿಂಬೆ

ಲಿಂಬೆ

ಇದರಲ್ಲಿರುವ ವಿಟಮಿನ್ ಸಿ ಸತ್ವವು ಉತ್ತಮ ಉತ್ಕರ್ಷಣ ನಿರೋಧಕ ಸತ್ವವಾಗಿದ್ದು, ಚರ್ಮಚಲ್ಲಿ ಮೆಲಾನಿನ್ ಅಂಶವನ್ನು ನಿಯಂತ್ರಿಸಲು ನೆರವಾಗುತ್ತದೆ. ಲಿಂಬೆಯಲ್ಲಿ ಸಿಟ್ರಿಕ್ ಆಸಿಡ್ ಸಹ ಇದ್ದು, ಇದರಿಂದ ನಿಮ್ಮ ತ್ವಚೆಯ ಸತ್ತ ಜೀವಕೋಶಗಳನ್ನು ಹೊರತೆಗೆದು, ಹೆಚ್ಚು ಕಾಂತಿಯುತವಾಗಲು ಸಹಕಾರಿಯಾಗಿದೆ.

ಉಪಯೋಗಿಸುವ ಬಗೆ

ಉಪಯೋಗಿಸುವ ಬಗೆ

ಒಂದು ಚಮಚ ಕಂದು ಸಕ್ಕರೆ ಮತ್ತು ಮೊಟ್ಟೆಯ ಬಿಳಿ ಅಂಶವನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಬೆರಳುಗಳಿಂದ ಮುಖದ ಮೇಲೆ 10 ನಿಮಿಷಗಳ ಕಾಲ ವೃತ್ತಾಕಾರದಲ್ಲಿ ನಯವಾಗಿ ತಿಕ್ಕಿಕೊಳ್ಳಿ. ತದನಂತರ ತಿಳಿ ನೀರಿನಿಂದ ನಿಮ್ಮ ತ್ವಚೆಯನ್ನು ಸ್ವಚ್ಛಗೊಳಿಸಿಕೊಳ್ಳಿ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪಪ್ಪಾಯಿಯಲ್ಲಿ ಪಪಾಯಿನ್ ಎಂಬ ಸತ್ವವಿದ್ದು, ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ಹೊರತೆಗೆದು ಹೊಸ ಜೀವಕೋಶಗಳ ಉತ್ಪತ್ತಿಗೆ ಹೆಚ್ಚು ನೆರವಾಗುತ್ತದೆ.

ಉಪಯೋಗಿಸುವ ಬಗೆ

ಉಪಯೋಗಿಸುವ ಬಗೆ

ಪಪ್ಪಾಯಿ ಹಣ್ಣಿನ ಪಾನೀಯ ತಯಾರಿಸಿಕೊಳ್ಳಿ. ಈ ಪಾನೀಯವನ್ನು ನಿಮ್ಮ ತ್ವಚೆಯ ಜಿಡ್ಡಿನ ಭಾಗಕ್ಕೆ ನಯವಾಗಿ ಹಚ್ಚಿಕೊಳ್ಳಿ. 10 ನಿಮಿಷ ಹಾಗೆಯೇ ಬಿಡಿ. ಈ ಪಾನೀಯವು ಒಣಗಿದ ನಂತರ ತಿಳಿ ನೀರಿನಿಂದ ಸ್ವಚ್ಛಗೊಳಿಸಿ. ಒಂದು ತಿಂಗಳ ಕಾಲ ಈ ಪ್ರಕ್ರಿಯೆಯನ್ನು ಅನುಸರಿಸಿದರೆ ಅದರ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಇದರಿಂದ ಉತ್ತಮ ಫಲಿತಾಂಶ ಹೊಂದಬಹುದು.

English summary

Tips To Remove Skin Pigmentation

Are you tired of using fairness and anti-ageing creams that promise to get rid of pigmentation and dark spots but fail to deliver what they advertise? Then why not use natural remedies that are safe, cheap and effective? Easily available fruits and vegetables like potatoes, lemons and papayas are not only effective in getting rid of dark spots and pigmentation but can also help your skin glow.
Story first published: Monday, February 8, 2016, 17:05 [IST]
X
Desktop Bottom Promotion