ಕಪ್ಪುವರ್ಣಕ್ಕೆ ಗುಡ್ ಬೈ - ಗೌರವ ವರ್ಣಕ್ಕೆ ಹಾಯ್, ಹಾಯ್....

Subscribe to Boldsky

ಬೆಳ್ಳಗಾಗಬೇಕು ಎಂಬುದು ಗೋಧಿಬಣ್ಣದವರೆಲ್ಲರ ಇಚ್ಛೆ. ಒಂದು ವೇಳೆ ನಿಮ್ಮ ಚರ್ಮವೂ ಬಿಸಿಲು ಅಥವಾ ಇನ್ನಾವುದೋ ಕಾರಣದಿಂದ ಸಹಜವರ್ಣ ಕಳೆದುಕೊಂಡು ಗಾಢವಾಗಿದ್ದರೆ ಇದನ್ನು ಸರಿಪಡಿಸಲು ಬಹಳ ಹಳೆಯ ವಿಧಾನವೊಂದಿದೆ. ಎಷ್ಟೋ ವರ್ಷಗಳಿಂದ ಈ ವಿಧಾನವನ್ನು ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದಾರೆ, ಆದರೆ ಹೆಚ್ಚಿನವರಿಗೆ ಇದು ಗೊತ್ತಿಲ್ಲ!

ಗೌರವರ್ಣದ ಜನರು ಸ್ವಾಭಾವಿಕವಾಗಿಯೇ ಇತರರ ಗಮನ ಸೆಳೆಯುತ್ತಾರೆ. ಕೃತಕ ಬಣ್ಣಗಳನ್ನು ಹಚ್ಚಿ ಗೌರವರ್ಣ ಪಡೆದರೂ ಇದು ಕೃತಕ ಎಂದು ಗೊತ್ತಿರುವ ಕಾರಣ ಆತ್ಮವಿಶ್ವಾಸದಿಂದ ಮುಂದೆ ಬರಲು ಸಾಧ್ಯವಿಲ್ಲ.  ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!    

Glowing Skin
 

ಬದಲಿಗೆ ನಿಜವಾದ ಬಣ್ಣ, ಸ್ವಾಭಾವಿಕವಾದ ಮತ್ತು ಕಾಂತಿಯುಕ್ತ ತ್ವಚೆ ನೀಡುವ ಆತ್ಮವಿಶ್ವಾಸ ಯಾವುದೇ ದುಬಾರಿ ಶೃಂಗಾರಕ್ಕಿಂತ ಅಮೂಲ್ಯ. ಬನ್ನಿ, ನಿಮ್ಮ ತ್ವಚೆ ನೈಸರ್ಗಿಕ ಕಾಂತಿ ಪಡೆಯಲು ಈ ಹಳೆಯ ವಿಧಾನವನ್ನು ಬಳಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. 

ಈ ವಿಧಾನ ಅನುಸರಿಸಲು ಎಲ್ಲಿಯೂ ಹೋಗಬೇಕಾಗಿಲ್ಲ, ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಅಲಭ್ಯವೂ ಅಲ್ಲ. ಬನ್ನಿ, ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ, ಇದುವರೆಗೆ ಕೆಲವೇ ಜನರ ಗೌರವರ್ಣದ ಗುಟ್ಟಾಗಿದ್ದ ಈ ವಿಧಾನವನ್ನು ಈಗ ನೋಡೋಣ:

Amla
 

ಅಗತ್ಯವಿರುವ ಸಾಮಾಗ್ರಿಗಳು:
*ನೆಲ್ಲಿಕಾಯಿ: ಎರಡು.
*ಪಪ್ಪಾಯಿ ಹಣ್ಣು: ನಾಲ್ಕೈದು ತೊಳೆಗಳು. ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!

ತಯಾರಿಸುವ ವಿಧಾನ:
* ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಚೆನ್ನಾಗಿ ಗೊಟಾಯಿಸಿ.
* ಈ ಲೇಪನವನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ

papaya

* ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ತೆಳುವಾಗಿ ಹಚ್ಚಿ
* ಹಚ್ಚುವ ಸಮಯದಲ್ಲಿ ನಯವಾಗಿ ಮಸಾಜ್ ಮಾಡಿ.
* ಕೆಲವು ನಿಮಿಷ ಮಸಾಜ್ ಮಾಡಿದ ಬಳಿಕ ಲೇಪವನ್ನು ಒಣಗಲು ಬಿಡಿ.
* ಸುಮಾರು ಹದಿನೈದು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ.

English summary

This Ancient Home Remedy Can Make Your Skin Fairer In 2 Weeks!

In order to attain a fairer skin tone naturally, without going in for beaching treatments, etc, you can use this ancient home remedy made using natural ingredients. Here is how you prepare the homemade face pack, have a look.
Please Wait while comments are loading...
Subscribe Newsletter