ರಾತ್ರಿ ಬೆಳಗಾಗುವುದರಲ್ಲಿ ಮುಖದ ಸೌಂದರ್ಯವೇ ಬದಲಾಗಬಹುದು!

By: Jaya subramanya
Subscribe to Boldsky

ರಾತ್ರಿ ಬೆಳಗಾಗುವುದರಲ್ಲಿ ನೀವು ಸುಂದರಿಯಾಗುತ್ತೀರಿ ಎಂಬುದಾಗಿ ಹೇಳಿದಲ್ಲಿ ಯಾರ ಮುಖ ತಾನೇ ಅರಳುವುದಿಲ್ಲ. ನಿಮ್ಮೆಲ್ಲಾ ಸೌಂದರ್ಯ ಸಮಸ್ಯೆಗಳನ್ನು ಒಂದು ದಿನದಲ್ಲೇ ನೀವು ನಿವಾರಿಸಿಕೊಳ್ಳಬಹುದು ಎಂಬ ಮಾತು ಎಲ್ಲಾ ಯುವತಿಯರನ್ನು ಸಂತಸದಿಂದ ಕುಣಿದಾಡುವಂತೆ ಮಾಡಿಬಿಡುತ್ತದೆ.   ಕೈಗೆಟಕುವ ಬೆಲೆಯ ಫೇಸ್ ಪ್ಯಾಕ್-ಮಿಸ್ ಮಾಡದಿರಿ!

ಇಂದಿನ ಲೇಖನದಲ್ಲಿ ಹೊಳಪಿನ ಚಿನ್ನದ ಕಾಂತಿಯ ಮುಖಾರವಿಂದನ್ನು ಪಡೆದುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ. ಅದು ಕೂಡ ಮನೆಯಲ್ಲೇ ದೊರೆಯುವ ನೈಸರ್ಗಿಕ ಸಾಮಾಗ್ರಿಗಳನ್ನು ಬಳಸಿಕೊಂಡು ಮುಖದಲ್ಲಿ ಕಾಂತಿಯನ್ನು ಪಡೆದುಕೊಳ್ಳುವ ಸಲಹೆ ಇದಾಗಿದೆ. 

Skin care tips
 

ವಿಟಮಿನ್ ಇ, ಗ್ಲಿಸರಿನ್, ರೋಸ್ ವಾಟರ್‌ನಂತಹ ಅತ್ಯದ್ಭುತ ಸಾಮಾಗ್ರಿಗಳು ನಿಮ್ಮ ಸೌಂದರ್ಯವನ್ನು ರಾತ್ರಿ ಬೆಳಗಾಗುವುದರಲ್ಲಿ ನಳನಳಿಸುವಂತೆ ಮಾಡುತ್ತದೆ. ಹಾಗಿದ್ದರೆ ನೈಸರ್ಗಿಕವಾಗಿ ಚಿನ್ನದ ಕಾಂತಿಯ ಹೊಳಪನ್ನು ನಿಮ್ಮ ಮುಖದಲ್ಲಿ ಪಡೆದುಕೊಳ್ಳುವ ಸಲಹೆಗಳನ್ನು ಇಲ್ಲಿ ನೀಡುತ್ತಿದ್ದು ಅದು ಹೇಗೆ ಎಂಬುದನ್ನು ಕಂಡುಕೊಳ್ಳಿ. 

step 1
 

ಹಂತ 1
ಮುಖವನ್ನು ನೀರಿನಿಂದ ಚೆನ್ನಾಗಿ ತೊಳೆದುಕೊಂಡು ಸ್ವಚ್ಛಗೊಳಿಸಿ. ಮೈಕ್ರೋಫೈಬರ್ ಟವೆಲ್ ಅನ್ನು ತೆಗೆದುಕೊಂಡು, ಮುಖವನ್ನು ಬಿರುಸಿನಿಂದ ಉಜ್ಜಿಕೊಳ್ಳದೆ, ಮೃದುವಾಗಿ ನೀರನ್ನು ತೆಗೆಯಿರಿ. 

step 2
 

ಹಂತ 2
ಒಂದು ಪಾತ್ರೆಯಲ್ಲಿ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ತೆಗೆದುಕೊಳ್ಳಿ. ಸೂಜಿ ಬಳಸಿ ಮಾತ್ರೆಯಿಂದ ಜೆಲ್ ಅನ್ನು ಹೊರತೆಗೆಯಿರಿ.

step 3
 

ಹಂತ 3
ಪಾತ್ರೆಗೆ ಗ್ಲಿಸರಿನ್ ಅನ್ನು ಹಾಕಿ ನಂತರ ಮಾತ್ರೆಯ ಜೆಲ್ ಅನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

step 4
 

ಹಂತ 4
ಈ ದ್ರಾವಣಕ್ಕೆ ಕೆಲವು ಹನಿಗಳಷ್ಟು ರೋಸ್ ವಾಟರ್ ಸೇರಿಸಿ. ನಿಮ್ಮ ಮುಖಕ್ಕೆ ಎಷ್ಟು ಬೇಕೋ ಅಷ್ಟೇ ಮಿಶ್ರಣವನ್ನು ಸಿದ್ಧಪಡಿಸಿ.

step 5
 

ಹಂತ 5
ನಿಮ್ಮ ಮುಖ ಮತ್ತು ಕುತ್ತಿಗೆಗೆ ಮಾಸ್ಕ್ ಅನ್ನು ಹಚ್ಚಿಕೊಳ್ಳಿ ನಂತರ ಮಸಾಜ್ ಮಾಡಿ. ಮೇಲಿನಿಂದ ಕೆಳಕ್ಕೆ ಈ ಮಾದರಿಯಲ್ಲಿ ಮಸಾಜ್ ಮಾಡಿ. ಇದರಿಂದ ರಕ್ತಸಂಚಾರವುಂಟಾಗುತ್ತದೆ. ಮುಖಕ್ಕೆ ದ್ರಾವಣ ಚೆನ್ನಾಗಿ ಹೀರಿಕೊಳ್ಳುವವರೆಗೆ ಹೀಗೆ ಮಾಡಿ.

step 6
 

ಹಂತ 6
ರಾತ್ರಿ ಪೂರ್ತಿ ಈ ಮಾಸ್ಕ್ ಹಾಗೆಯೇ ಇರಲು ಬಿಡಿ. ಮರುದಿನ ಬೆಳಗ್ಗೆ ನಿಮ್ಮ ತ್ವಚೆಯಲ್ಲಿ ನೀವು ಜಾದೂವನ್ನೇ ಕಾಣಬಹುದಾಗಿದೆ. ತ್ವಚೆಯು ಮೃದುವಾಗಿ, ಹೊಳೆಯುತ್ತಿರುತ್ತದೆ. ನಿಮ್ಮ ಮುಖ ಹೆಚ್ಚು ಡ್ರೈಯಾಗಿದೆ ಎಂದಾದಲ್ಲಿ ಈ ಮಾಸ್ಕ್ ಅನ್ನು ಪ್ರತೀ ರಾತ್ರಿ ಹಚ್ಚಿಕೊಳ್ಳಿ. ನಿಮ್ಮದು ಎಣ್ಣೆ ತ್ವಚೆ ಎಂದಾದಲ್ಲಿ, ವಾರದಲ್ಲಿ ಎರಡು ಬಾರಿ ಮಾಡಿ. ಚಿನ್ನದ ಕಾಂತಿಯನ್ನು ಮುಖಕ್ಕೆ ಒದಗಿಸುವ ಫೇಸ್ ಪ್ಯಾಕ್ ಅನ್ನು ನೀವು ಟ್ರೈ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.  ತ್ವಚೆಯ ಸೌಂದರ್ಯಕ್ಕೆ ದುಬಾರಿ ಬೆಲೆಯ ಫೇಸ್‌ಪ್ಯಾಕ್‍ಗಳೇಕೆ?

English summary

This 1 Mask Can Give Your Skin Golden Glow Overnight, Try It!

Big pores, ugly spots, poppy pimples, and fine lines, our skin is never really without problems. You see, the thumb rule is not to hide it - but treat it - make them disappear, poof! And there are always silver bullets, you know selected ingredients, which take care of them all. Like this glowing face mask recipe we are about to discuss.
Please Wait while comments are loading...
Subscribe Newsletter