For Quick Alerts
ALLOW NOTIFICATIONS  
For Daily Alerts

ಮುಖದ ಅಂದ-ಚೆಂದ ಹೆಚ್ಚಿಸುವ ಮೊಸರಿನ ಫೇಸ್ ಪ್ಯಾಕ್!

By Hemanth
|

ಹಾಲು ಹಾಗೂ ಹಾಲಿನ ಉತ್ಪನ್ನಗಳಲ್ಲಿರುವ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಲಾಭವನ್ನು ಉಂಟು ಮಾಡುತ್ತದೆ. ಅದರಲ್ಲೂ ಮೊಸರು ಹಾಗೂ ಮಜ್ಜಿಗೆ ದೇಹಕ್ಕೆ ತುಂಬಾ ಒಳ್ಳೆಯದು. ಬ್ಯಾಕ್ಟೀರಿಯಾ ಹುದುಗುವಿಕೆಯಿಂದ ಮೊಸರನ್ನು ತಯಾರಿಸಲಾಗುತ್ತದೆ. ಮೊಸರಿನಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳಿವೆ. ಮೊಸರನ್ನು ಉಪಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ವೇಳೆ ಸೇವಿಸಬಹುದು. ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

The 3 Best Yogurt Packs For All Skin Types

ಇಷ್ಟು ಮಾತ್ರವಲ್ಲದೆ ಮೊಸರಿನಿಂದ ಚರ್ಮಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಚರ್ಮದ ಆರೈಕೆಗೆ ಮೊಸರಿನ ಪ್ಯಾಕ್ ಮಾಡಿಕೊಳ್ಳಬಹುದು. ಮೊಸರನ್ನು ಇತರ ಕೆಲವೊಂದು ಸಾಮಗ್ರಿಗಳೊಂದಿಗೆ ಸೇರಿಸಿಕೊಂಡು ಫೇಸ್ ಪ್ಯಾಕ್ ಮಾಡಿದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ.

ಇದು ಒಣ ಚರ್ಮ ಹಾಗೂ ಕಳೆ ಬಿದ್ದಿರುವ ಚರ್ಮದ ಚಿಕಿತ್ಸೆಗೆ ನೆರವಾಗಲಿದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವಲ್ಲಿ ಮೊಸರಿನಲ್ಲಿರುವ ಲ್ಯಾಕ್ಟಿಕ್ ಎನ್ನುವ ಆಮ್ಲವು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೀವು ಚರ್ಮದ ಆರೈಕೆಗೆ ಬಳಸಬಹುದಾದ ಮೊಸರಿನ ಕೆಲವೊಂದು ಪ್ಯಾಕ್‌ಗಳು ಇಲ್ಲಿವೆ.

ವಯಸ್ಸಾಗುತ್ತಿರುವ ಚರ್ಮಕ್ಕೆ
ಮೊಸರು ಹಾಗೂ ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸಿ ಪ್ಯಾಕ್ ಮಾಡಿಕೊಂಡು ವಾರದಲ್ಲಿ ಎರಡು ಸಲ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಹಾಗೆ ಬಿಟ್ಟು ಬಳಿಕ ತೊಳೆಯಿರಿ. ಇದರಿಂದ ಮುಖದಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸುವುದಿಲ್ಲ. ಆದರೆ ಇದರಿಂದ ನಿಮಗೆ ಯೌವನ ಮರಳಿ ಬರುತ್ತದೆ ಎಂದಲ್ಲ. ಪ್ರತಿಯೊಬ್ಬರಿಗೂ ವಯಸ್ಸಾಗಲೇ ಬೇಕು. ಇದನ್ನು ತಪ್ಪಿಸುವಂತಿಲ್ಲ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ಸತ್ತ ಕೋಶಗಳನ್ನು ತೆಗೆದುಹಾಕಿ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ. ಕೂದಲಿನ ಸಹಜಕಾಂತಿಗೆ-ಮಾವು ಮೊಸರಿನ ಹೇರ್ ಪ್ಯಾಕ್

ಒಣಚರ್ಮಕ್ಕೆ ಮೊಸರು
ನೀರನ್ನು ಸೋಸಿ ತೆಗೆದ ಮೊಸರನ್ನು ಇದಕ್ಕೆ ಬಳಸಬೇಕು. ಮೊಸರು ದಪ್ಪಗೆ ಇದ್ದಷ್ಟು ಒಳ್ಳೆಯದು. ಮುಖ ತೊಳೆದ ಬಳಿಕ ಮೊಸರನ್ನು ಹಚ್ಚಿಕೊಳ್ಳಿ. 10-15 ನಿಮಿಷ ಇದನ್ನು ಹಾಗೆ ಬಿಡಿ. ಬಳಿಕ ಮುಖವನ್ನು ತೊಳೆಯಿರಿ. ವಾರದಲ್ಲಿ ಎರಡರಿಂದ ಮೂರು ಸಲ ಹೀಗೆ ಮಾಡಿದರೆ ಚರ್ಮವು ಮೃಧುವಾಗಿ ಕಾಂತಿಯನ್ನು ಪಡೆದು ತೇವಾಂಶದಿಂದ ಕೂಡಿರುತ್ತದೆ. ಸೌಂದರ್ಯ ವೃದ್ಧಿಗೆ, ಮೊಸರಿನ ಫೇಸ್ ಪ್ಯಾಕ್

ಬಿಳಿಯ ಚರ್ಮಕ್ಕೆ ಮೊಸರು
ಮೊಸರಿನಲ್ಲಿ ಲಘು ಬ್ಲೀಚಿಂಗ್ ಗುಣಗಳು ಇವೆ. ಇದನ್ನು ನಿಯಮಿತವಾಗಿ ಬಳಸಿದರೆ ಇದು ಚರ್ಮದ ಬಣ್ಣವನ್ನು ವೃದ್ಧಿಸುವುದು. ಕಳೆ ಹಾಗೂ ವಯಸ್ಸಿನಿಂದ ಬೀಳುವ ನೆರಿಗೆಯನ್ನು ತಪ್ಪಿಸುತ್ತದೆ. ಮೊಸರಿನಿಂದ ಹೆಚ್ಚಿನ ಲಾಭ ಪಡೆಯಬೇಕೆಂದರೆ ಅದಕ್ಕೆ ಸ್ವಲ್ಪ ನಿಂಬೆರಸ ಹಾಕಿಕೊಳ್ಳಿ. ರೇಷ್ಮೆಯಂತಹ ಕೂದಲಿಗೆ ಮೆಂತೆ- ಮೊಸರಿನ ಹೇರ್ ಪ್ಯಾಕ್

ನಿಂಬೆರಸದಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳಿವೆ. ಈ ಎರಡನ್ನು ಸೇರಿಸಿಕೊಂಡಾಗ ಚರ್ಮದ ಬಣ್ಣ ಹೊಳೆಯುವುದರಲ್ಲಿ ಸಂಶಯವೇ ಇಲ್ಲ. ಮೊಸರನ್ನು ತ್ವಚೆಯ ಆರೈಕೆಗೆ ಬಳಸುವ ವಿಧಾನಗಳನ್ನು ತಿಳಿಸಲಾಗಿದೆ. ಮೊಸರನ್ನು ಬಳಸಿಕೊಂಡು ನೀವು ಚರ್ಮದ ಆರೈಕೆಯನ್ನು ಮಾಡಿ, ನಿಮ್ಮ ಚರ್ಮವು ಯಾವ ರೀತಿಯ ಲಾಭ ಪಡೆದುಕೊಂಡಿದೆ ಎಂದು ನಮಗೆ ತಿಳಿಸಲು ಮರೆಯಬೇಡಿ.

English summary

The 3 Best Yogurt Packs For All Skin Types

Yogurt is produced by bacterial fermentation of milk. Yogurt is a really healthy part of any meal. It can be had during breakfast, lunch and dinner. It is said to help with digestion. Yogurt has multiple skin care benefits. There are certain best yogurt packs that you can use that suit all skin types.
Story first published: Sunday, September 4, 2016, 14:05 [IST]
X
Desktop Bottom Promotion