ಮದುಮಗಳಿಗೆ ಬ್ಯೂಟಿ ಟಿಪ್ಸ್: ತ್ವಚೆಯ ಕಾಳಜಿ ಹೀಗಿರಲಿ....

By: manu
Subscribe to Boldsky

ಮದುವೆಯಂದು ಪ್ರತಿಯೊಬ್ಬ ಹುಡುಗಿಯು ತಾನು ದೇವಲೋಕದಿಂದ ಇಳಿದುಬಂದ ಅಪ್ಸರೆಯಂತೆ ಕಾಣಿಸಬೇಕೆಂದು ಬಯಸುತ್ತಾಳೆ. ಇದಕ್ಕಾಗಿ ಆಕೆಯನ್ನು ಇನ್ನಿಲ್ಲದಂತೆ ಮೇಕಪ್ ಮಾಡಿಸಲಾಗುತ್ತದೆ. ಜೀವನದಲ್ಲಿ ಮದುವೆಯೆನ್ನುವುದು ಒಂದೇ ಸಲ ಬರುವ ಕಾರಣದಿಂದಾಗಿ ಮದುಮಗಳು ಸುಂದರವಾಗಿ ಕಾಣಿಸಿಕೊಳ್ಳಲು ಬಯಸುತ್ತಾಳೆ.

bride
 

ಇದಕ್ಕಾಗಿ ಕೆಲವು ದಿನಕ್ಕೆ ಮೊದಲೇ ಹಲವಾರು ರೀತಿಯ ಚರ್ಮದ ಚಿಕಿತ್ಸೆ ಮತ್ತು ಮೇಕಪ್‌ಗಳನ್ನು ಮಾಡಲಾಗುತ್ತದೆ. ಆದರೆ ಇಂತಹ ಕೆಲವೊಂದು ಪ್ರಯತ್ನಗಳು ಮದುವೆಯಂದು ನಿಮಗೆ ಸಮಸ್ಯೆಯನ್ನು ಉಂಟು ಮಾಡಬಹುದು. ಇದಕ್ಕಾಗಿ ನಾವು ಕೆಲವೊಂದು ಸಲಹೆಗಳನ್ನು ಈ ಲೇಖನದ ಮೂಲಕ ನೀಡುತ್ತಾ ಇದ್ದೇವೆ. ಮದುವೆಗೆ ಮೊದಲು ಮದುಮಗಳು ಕಡೆಗಣಿಸಬೇಕಾದ ಕೆಲವೊಂದು ತಪ್ಪುಗಳನ್ನು ಇಲ್ಲಿ ವಿವರಿಸಲಾಗಿದೆ. ಇದನ್ನು ತಿಳಿದುಕೊಳ್ಳಿ.   ವಧುವಿನ ಕೂದಲ ಆರೈಕೆಗೆ ಕೆಲ ಟಿಪ್ಸ್   

facail
 

ಹೊಸ ರೀತಿಯ ಫೇಶಿಯಲ್
ಮದುಮಗಳು ಸುಂದರವಾಗಿ ಕಾಣಿಸಿಕೊಳ್ಳುವ ಸಲುವಾಗಿ ನೇರವಾಗಿ ಬ್ಯೂಟಿ ಪಾರ್ಲರ್ ಗೆ ಹೋಗುತ್ತಾರೆ. ಅಲ್ಲಿ ಯಾವುದಾದರೂ ಹೊಸ ರೀತಿಯ ಫೇಶಿಯಲ್ ಅಥವಾ ಚರ್ಮದ ಪದರ ಕಿತ್ತುಹಾಕುವಂತಹ ರಾಸಾಯನಿಕ ಬಳಸುತ್ತಾರೆ. ಈ ಮೊದಲು ಇದನ್ನು ಬಳಸದೆ ಇದ್ದರೆ ಖಂಡಿತವಾಗಿಯೂ ಇದನ್ನು ಮಾಡಬೇಡಿ.
ಇದು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳದೆ ಇದ್ದರೆ ಸಮಸ್ಯೆಯಾಗಬಹುದು. ಮದುವೆಗೆ ಮೊದಲು ಯಾವುದೇ ಹೊಸ ಪ್ರಯೋಗಕ್ಕೆ ಕೈ ಹಾಕಬೇಡಿ. ಹಿಂದೆ ನೀವು ಬಳಸುತ್ತಿದ್ದ ಫೇಶಿಯಲ್ ಅನ್ನೇ ಬಳಸಿ.

face massage
 

ಮಾಯಾಶ್ಚರೈಸರ್ ಬಳಸದೆ ಇರುವುದು
ಮದುವೆ ದಿನ ನಿಮ್ಮ ಚರ್ಮವು ಆರೋಗ್ಯಕರವಾಗಿ ಕಾಣಿಸಿಕೊಳ್ಳಬೇಕೆಂದರೆ ಚರ್ಮಕ್ಕೆ ದಿನಾಲೂ ಮಾಯಾಶ್ಚರೈಸರ್ ಮಾಡಿಕೊಳ್ಳಿ. ಹಿಂದೆ ನೀವು ಇದನ್ನು ಮಾಡುತ್ತಿಲ್ಲವೆಂದಾದರೆ ನೀರಿನ ಮಾಯಾಶ್ಚರೈಸರ್ ಅನ್ನು ಬಳಸಿಕೊಳ್ಳಿ.

ಬಳಸದೇ ಇರುವ ಮದ್ದನ್ನು ಪ್ರಯತ್ನಿಸುವುದು ಸರಿಯಲ್ಲ
ಮದುವೆಗೆ ಮೊದಲು ಯಾವುದೋ ಮನೆಮದ್ದನ್ನು ಚರ್ಮದ ಆರೈಕೆಗೆ ಪ್ರಯತ್ನಿಸುವುದು ಸರಿಯಲ್ಲ. ಮೊದಲು ನೀವು ಬಳಸದೆ ಇರುವ ಯಾವುದೇ ಮನೆಮದ್ದನ್ನು ಬಳಸಬೇಡಿ. 

Bride
 

ಕೆಲವೊಂದು ಮನೆಮದ್ದು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳದಿರಬಹುದು ಮತ್ತು ಅದರಿಂದ ಚರ್ಮವು ಸುಟ್ಟುಗಟ್ಟಿದಂತೆ ಕಾಣಬಹುದು. ಮನೆಮದ್ದನ್ನು ಪ್ರಯತ್ನಿಸುವ ಮೊದಲು ದೇಹದ ಬೇರೆ ಭಾಗಕ್ಕೆ ಅದನ್ನು ಹಚ್ಚಿಕೊಂಡು ನೋಡಿ. ಹಿಂದೆ ನೀವು ತಯಾರಿಸಿ ಬಳಸಿದಂತಹ ಮನೆಮದ್ದು ಒಳ್ಳೆಯದು.

ಆಮ್ಲೀಯ ಆಹಾರ ಸೇವನೆ
ನೀವು ಸೇವಿಸುವಂತಹ ಆಹಾರದ ಕಡೆ ಕೂಡ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ಆಹಾರದಲ್ಲಿನ ಪಿಎಚ್ ಮಟ್ಟವು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪಿಎಚ್ ಮಟ್ಟದಲ್ಲಿ ಅಸಮತೋಲನವು ಮೊಡವೆಗಳಿಗೆ ಕಾರಣವಾಗಬಹುದು.

English summary

Skincare mistakes every bride-to-be should avoid

Every woman dreams of being that glowing bride. Often brides-to-be resort to a lot of beauty treatments and makeup products. However, it is important to remember that sometimes these treatments and remedies can lead to many side effects and bring about undesirable results. If you are getting married anytime soon, avoid these skincare mistakes says beauty expert
Please Wait while comments are loading...
Subscribe Newsletter