For Quick Alerts
ALLOW NOTIFICATIONS  
For Daily Alerts

ಒಡೆದ ಪಾದಗಳ ರಕ್ಷಣೆಗಿರಲಿ ಇಂತಹ ಎಲೆಗಳು

By Su.Ra
|

ಮಹಿಳೆಯರ ಪ್ರಮುಖ ಸಮಸ್ಯೆಗಳಲ್ಲಿ ಒಂದು ಒಡೆದ ಪಾದಗಳು. ಹೆಚ್ಚಿನ ಮಹಿಳೆಯರಿಗೆ ಮದುವೆಯ ನಂತರ ಇಲ್ಲವೇ ಒಂದು ಮಗುವಾದ ನಂತರ ಅದೇನೇ ಸರ್ಕಸ್ ಮಾಡಿದ್ರೂ ಪಾದಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತೆ. ಕಾಲಿನ ಆಕ್ಸಸರೀಸ್ ಧರಿಸುವಾದ ನುಣುಪಾದ ಪಾದಗಳಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ಅಂದುಕೊಂಡು ಬೇಸರಿಸಿಕೊಳ್ಳುವ ಮಂದಿಗೇನು ಕಡಿಮೆ ಇಲ್ಲ.

ಒಡೆದ ಪಾದಗಳಿಗಾಗಿ ಆ ಕ್ರೀಮೂ ಈ ಕ್ರೀಮೂ ಕ್ರ್ಯಾಕ್ ಕ್ರೀಮೂ ಅಂತ ಇಲ್ಲಸಲ್ಲದ ಕ್ರೀಮುಗಳನ್ನು ಹಚ್ಚಿಕೊಳ್ಳುವ ಬದಲು ಕೆಲವು ಸೊಪ್ಪುಗಳು ನಿಮ್ಮ ಪಾದದ ಸಮಸ್ಯೆಗೆ ಪರಿಹಾರ ನೀಡಬಲ್ಲವು. ಅವುಗಳ ಬಗ್ಗೆ ಸಂಪೂರ್ಣ ಡೀಟೈಲ್ಸ್ ನ್ನು ಈ ಸ್ಟೋರಿ ನಿಮಗೆ ನೀಡಲಿದೆ. ಮುಂದೆ ಓದಿ..

ಪುದೀನಾ ಮದ್ದು

Simple Ways to Cure Cracked Heels with natural leaves
ಪುದೀನಾ ಎಲೆಗಳ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಮಿಶ್ರಣ ಮಾಡಿ ಕೆಲವು ಗಂಟೆಗಳ ಕಾಲ ಪಾದಗಳಿಗೆ ಅಪ್ಲೈ ಮಾಡಿ ರಿಲ್ಯಾಕ್ಸ್ ಮಾಡಿ. ಕೆಲವೇ ದಿನಗಳವರೆಗೆ ಹೀಗೆ ಮಾಡಿಕೊಳ್ಳೋದ್ರಿಂದ ಒಡೆದ ಪಾದಗಳಿಂದ ಮುಕ್ತಿ ಪಡೀಬಹುದು.

ತುಳಸಿ ಮದ್ದು
ಎಲ್ಲರಿಗೂ ತಿಳಿದಿರುವಂತೆ ತುಳಸಿ ಅತ್ಯುತ್ತಮವಾದ ಹರ್ಬಲ್ ವಸ್ತು.ಒಂದು ಮುಷ್ಟಿಯಷ್ಟು ತುಳಸಿ ದಳಗಳನ್ನು ತೆಗೆದುಕೊಂಡು ಅದರ ಪೇಸ್ಟ್ ತಯಾರಿಸಿಕೊಳ್ಳಿ. ಆ ಪೇಸ್ಟಿಗೆ ಬಿಸಿ ಮಾಡಿದ ಕೊಬ್ಬರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಬಿಸಿಬಿಸಿಯಾಗಿರುವಾಗಲೇ ನಿಮ್ಮ ಒಡೆದ ಪಾದಗಳಿಗೆ ಅಪ್ಲೈ ಮಾಡಿ.. ಕೆಲವು ತಾಸು ಹಾಗೆಯೇ ಇರಿ. ನಂತ್ರ ಬಿಸಿ ನೀರಿನಲ್ಲಿ ಪಾದಗಳನ್ನು ತೊಳೆದುಕೊಳ್ಳಿ,. ಒಂದು ವಾರ ಹೀಗೆ ಮಾಡಿದ್ರೆ ನಿಮ್ಮ ಪಾದದ ಬಿರುಕು ಖಂಡಿತ ಇರೋದಿಲ್ಲ,. ಒಡೆದ ಹಿಮ್ಮಡಿಗೆ ಸಾಂತ್ವನ ನೀಡುವ ಮನೆಮದ್ದು

ಅಲೋವೆರಾ ಮದ್ದು
ಅಲೋವೆರಾ, ಅರಿಶಿನಪುಡಿ ಎರಡನ್ನೂ ಮಿಕ್ಸ್ ಮಾಡಿ ಒಡೆದ ಪಾದಗಳಿಗೆ ಅಪ್ಲೈ ಮಾಡಿ ಅರ್ಧ ತಾಸು ಹಾಗೆಯೇ ಬಿಡಿ. ಅಲವೀರಾದ ಆಯುರ್ವೇದಿಕ್ ಗುಣ ಮತ್ತು ಅರಿಶಿನ ಪುಡಿಯಲ್ಲಿರುವ ಕರ್ಕ್ಯುಮಿನ್ ಅಂಶ ಜೊತೆಗೆ ಆಂಟಿ ಸೆಪ್ಟಿಕ್ ಗುಣದಿಂದಾಗಿ ನಿಮ್ಮ ಪಾದದ ಬಿರುಕು ಕೆಲವೇ ದಿನಗಳಲ್ಲಿ ಮಾಯವಾಗುತ್ತೆ.

ಮೆಂತೆಸೊಪ್ಪಿನ ಪೇಸ್ಟ್
ಮೆಂತೆಸೊಪ್ಪು ನಿಮ್ಮ ಒಡೆದ ಪಾದಗಳಿಗೆ ಉತ್ತಮ ಮನೆಮದ್ದಾಗಿ ಕೆಲಸ ಮಾಡಲಿದೆ. ಮೊದಲು ಒಂದಷ್ಟು ಮೆಂತ್ಯೆಸೊಪ್ಪನ್ನು ಸ್ವಚ್ಛಗೊಳಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಸ್ವಲ್ಪ ಉಪ್ಪು ಮತ್ತು ಯಾವುದಾದ್ರೂ ಎಣ್ಣೆಯನ್ನು ಸೇರಿಸಿ.


ಕೊಬ್ಬರಿ ಎಣ್ಣೆ, ಆಲಿವ್ ಆಯಿಲ್, ಹರಳೆಣ್ಣೆ ಯಾವುದಾದ್ರೂ ಸರಿ. ನಂತ್ರ ಈ ಮಿಶ್ರಣದಿಂದ ಒಡೆದ ಪಾದಗಳನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಕೆಲವು ನಿಮಿಷ ಅತ್ಯುತ್ತಮವಾದ ಮಸಾಜ್ ಮಾಡ್ಕೊಳ್ಳಿ. ನಂತ್ರ ಕೆಲವು ನಿಮಿಷ ಹಾಗೆಯೇ ಬಿಡಿ. ಅರ್ಧಗಂಟೆಯ ನಂತ್ರ ಬಿಸಿನೀರಿನಲ್ಲಿ ಕಾಲುಗಳನ್ನು ತೊಳೆದುಕೊಳ್ಳಿ. ಬೆಸ್ಟ್ ರಿಸಲ್ಟ್ ಕೆಲವೇ ದಿನಗಳಲ್ಲಿ ಲಭಿಸಲಿದೆ.

ಬೇವಿನ ಎಲೆಗಳಿಂದ ಪರಿಹಾರ
ಕಹಿಬೇವಿನ ಎಲೆಯಿಂದ ನಿಮ್ಮ ಪಾದಗಳು ಸ್ಮೂತ್ ಮತ್ತು ವಾಸನೆಮುಕ್ತವಾಗಲು ಸಾಧ್ಯವಿದೆ.ಅತ್ಯಂತ ಬೆವರುವಿಕೆಯಿಂದ ಮತ್ತು ಅತಿಯಾಗಿ ನೀರಿನಲ್ಲಿ ಕೆಲಸ ಮಾಡುವುದರಿಂದಾಗಿ ಕಾಲುಗಳಲ್ಲಿ ಬಿರುಕು ಕಾಣಿಸಿಕೊಂಡಿರಬಹುದು. ಅದಕ್ಕಾಗಿ ಬೆಸ್ಟ್ ಮೆಡಿಸಿನ್ ಅಂದರೆ ಬೇವಿನ ಎಲೆಗಳು. ಬೇವಿನ ಎಲೆಗಳ ಪೇಸ್ಟ್ ತಯಾರಿಸಿಕೊಂಡು ಹಚ್ಚಿಕೊಳ್ಳಬಹುದು.


ಇಲ್ಲವೇ ಬೇವಿನ ಎಣ್ಣೆಯನ್ನು ಬಿರುಕು ಬಿಟ್ಟ ಪಾದಗಳಿಗೆ ಅಪ್ಲೈ ಮಾಡಿ ಕಾಟನ್ ಸಾಕ್ಸ್ ಹಾಕಿ ರಾತ್ರಿ ಮಲಗಿ. ಬೆಳಿಗ್ಗೆ ಬಿಸಿ ನೀರಿನಿಂದ ಪಾದಗಳನ್ನು ತೊಳೆದುಕೊಳ್ಳಿ. ನಿಮ್ಮ ಪಾದದ ಸಮಸ್ಯೆಗೆ ಖಂಡಿತ ಇದರಿಂದ ಪರಿಹಾರ ಸಿಗಲಿದೆ.
English summary

Simple Ways to Cure Cracked Heels with natural leaves

Cracked heels, or also known as heel fissures is a common problem for many people, especially women. It is a condition in which fine-cut wounds are formed on the heels of your feet. If the cracks are deep and large, they can cause bleeding and annoying pain, so here are the few home remedies for cracked heals, have a look ..
Story first published: Wednesday, January 20, 2016, 13:09 [IST]
X
Desktop Bottom Promotion