For Quick Alerts
ALLOW NOTIFICATIONS  
For Daily Alerts

ತ್ವಚೆಯ ಅಂದ ಹೆಚ್ಚಿಸಲು ಹೆಚ್ಚು ಸಮಯ ಬೇಕಾಗಿಲ್ಲ

By Manu
|

ತ್ವಚೆಯ ಸೌಂದರ್ಯವೇ ಮಹಾ ಭಾಗ್ಯವೆಂದು ಕೆಲವರು ನಂಬಿರುತ್ತಾರೆ. ಸೌಂದರ್ಯದ ಮುಂದೆ ಎಲ್ಲವೂ ಸೊನ್ನೆ ಎಂದುಕೊಂಡಿರುತ್ತಾರೆ. ಆದರೆ ಈ ನಿಷ್ಠೆಯು ಅವರು ಬಳಸುವ ಪದಾರ್ಥಗಳ ಮೇಲೆ ಇರುವುದಿಲ್ಲ. ಸಿಕ್ಕ ಸಿಕ್ಕ ಉತ್ಪನ್ನಗಳನ್ನು ಬಳಸಿ ಸೌಂದರ್ಯವನ್ನು ಇನ್ನೂ ಹೆಚ್ಚು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹೆಚ್ಚು ಸಮಯ ಮತ್ತು ಹಣವನ್ನು ವ್ಯರ್ಥಮಾಡುತ್ತಿದ್ದಾರೆ. ಇದರಿಂದ ಮಾನಸಿಕ ಸ್ಥೈರ್ಯವೂ ದುರ್ಬಲಗೊಂಡು ಖಿನ್ನತೆಗೆ ಒಳಗಾಗುತ್ತಿದ್ದಾರೆ.

ನಿಮ್ಮ ತ್ವಚೆಯನ್ನು ಕಾಂತಿಯುತವಾಗಿರಿಸಲು ಮತ್ತು ಸೌಂದರ್ಯವನ್ನು ಕಾಪಾಡಲು ಹೆಚ್ಚು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ಇದಕ್ಕೆ ಉತ್ತಮ ಉಪಾಯವೆಂದರೆ ಒಮ್ಮೆ ನಿಮ್ಮ ಅಡುಗೆ ಮನೆಯನ್ನು ಅವಲೋಕಿಸಿ. ಅಲ್ಲಿ ನಿಮ್ಮ ತ್ವಚೆಯನ್ನು ಕಾಂತಿಯುಕ್ತಗೊಳಿಸಲು ನೆರವಾಗುವ ಪದಾರ್ಥಗಳು ನಿಮಗೆ ಕಾಣಸಿಗುತ್ತವೆ. ಇವುಗಳು ನಿಮ್ಮ ತ್ವಚೆಯನ್ನು ಮೃದುಗೊಳಿಸಿ, ಒಳಗಿನಿಂದಲೇ ತೇವಾಂಶ ನೀಡಿ, ಹೆಚ್ಚು ಕಾಂತಿಯುಕ್ತಗೊಳಿಸುತ್ತದೆ ಅಲ್ಲದೇ ಹೆಚ್ಚಿನ ಆರೈಕೆ ನೀಡುತ್ತದೆ.

ಮನೆಯಲ್ಲಿಯೇ ಸುಲಭವಾಗಿ ಸಿಗುವ ಪದಾರ್ಥಗಳಿಂದಲೇ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಸೌಂದರ್ಯತಜ್ಞರು ಸಲಹೆ ನೀಡಿರುವ ಕೆಲವು ಉಪಯುಕ್ತ ವಿಧಾನಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಇವುಗಳ ಉಪಯೋಗದಿಂದ ನಿಮ್ಮ ಚರ್ಮದ ಸತ್ತ ಜೀವಕೋಶಗಳು ಹೊರಹೋಗುವುದಲ್ಲದೇ ನಿಮ್ಮ ತ್ವಚೆಯು ಹೆಚ್ಚು ಕಾಂತಿಯುಕ್ತವಾಗುತ್ತದೆ.

ಸಬ್ಬಕ್ಕಿ ಹಿಟ್ಟು ಅಥವಾ ಸಾಬುದಾನಾ

ಸಬ್ಬಕ್ಕಿ ಹಿಟ್ಟು ಅಥವಾ ಸಾಬುದಾನಾ

ಸತ್ತ ಜೀವಕೋಶಗಳನ್ನು ಹೊರತೆಗೆಯಲು ಸಬ್ಬಕ್ಕಿ ಹಿಟ್ಟು ಹೆಚ್ಚು ಉಪಯುಕ್ತ. ಸೌಂದರ್ಯ ತಜ್ಞರು ಹೇಳುವ ಪ್ರಕಾರ ಸಬ್ಬಕ್ಕಿ ಹಿಟ್ಟನ್ನು ದಪ್ಪನೆಯ ಪೇಸ್ಟ್ ರೀತಿಯಲ್ಲಿ ಮಾಸ್ಕ್ ರೂಪದಲ್ಲಿ ನಿಮ್ಮ ಚರ್ಮಕ್ಕೆ ಲೇಪಿಸಿ. ಇದರಿಂದ ನಿಮ್ಮ ತ್ವಚೆಯು ಹೆಚ್ಚು ಮೃದುಗೊಂಡು ನಳನಳಿಸುತ್ತದೆ. ಮಾಸ್ಕ್ ತಯಾರಿಸುವುದು ಸುಲಭ. ಒಂದು ಚಮಚ ನೆನೆಸಿದ ಸಬುದಾನಾ ಅನ್ನು ಮೂರು ಚಮಚ ಲಿಂಬೆ ರಸಕ್ಕೆ ಬೆರೆಸಿಕೊಂಡು ಬೇಯಿಸಿ. ಇದು ತಣ್ಣಗಾದ ಮೇಲೆ ಒಂದು ಚಮಚ ಮುಲ್ತಾನಿ ಮಿಟ್ಟಿ ಮತ್ತು ಒಂದು ಚಮಚ ಕಂದು ಸಕ್ಕರೆಯನ್ನು ಬೆರೆಸಿ, ಈ ಮಿಶ್ರಣವನ್ನು ದಪ್ಪನೆಯ ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದನ್ನು ನಿಮ್ಮ ಚರ್ಮದ ಮೇಲೆ ನಯವಾಗಿ ಹಚ್ಚಿಕೊಳ್ಳಿ. ಇದು ಫೇಸ್ ಪ್ಯಾಕ್ ರೀತಿಯಲ್ಲಿಯೂ ಸಹ ನೆರವು ನೀಡಬಲ್ಲದು.

ಉದ್ದಿನ ಬೇಳೆ

ಉದ್ದಿನ ಬೇಳೆ

ಹೆಚ್ಚು ಖನಿಜ ಸತ್ವವನ್ನು ಒಳಗೊಂಡಿರುವ ಉದ್ದಿನ ಬೇಳೆಯು ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ಹೊರತೆಗೆಯಲು ಉತ್ತಮವಾದ ಸಾಧನವಾಗಿದೆ. ಅರ್ಧ ಕಪ್ ನೆನೆಸಿದ ಉದ್ದಿನ ಬೇಳೆಯ ಪುಡಿ ಮತ್ತು ಎರಡು ಚಮಚ ತುಪ್ಪ ಮತ್ತು ಎರಡು ಚಮಚ ಹಾಲನ್ನು ಪೇಸ್ಟ್ ರೂಪದಲ್ಲಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಸ್ಕ್ರಬ್ ರೀತಿಯಲ್ಲಿ ವಾರಕ್ಕೆ ಮೂರು ಮಾರಿ ನಿಮ್ಮ ಚರ್ಮದ ಮೇಲೆ ಉಪಯೋಗಿಸಿ. ಇದರಿಂದ ನಿಮ್ಮ ಚರ್ಮದ ಹೊಳಪು ಹೆಚ್ಚಾಗಿ, ಸತ್ತ ಜೀವಕೋಶಗಳು ನಾಶವಾಗುತ್ತವೆ. ಉದ್ದಿನ ಬೇಳೆಯಲ್ಲಿರುವ ಅದ್ಭುತ ಗುಣಗಳು!

ಹೆಸರು ಕಾಳು

ಹೆಸರು ಕಾಳು

ಹೆಸರು ಕಾಳುಗಳಲ್ಲಿ ವಿಟಮಿನ್ ಎ ಮತ್ತು ಸಿ ಸತ್ವಗಳು ಹೇರಳವಾಗಿದ್ದು, ನಿಮ್ಮ ಚರ್ಮದ ಆರೈಕೆಗೆ ನೆರವಾಗುತ್ತದೆ. ಅಲ್ಲದೇ ಸತ್ತಜೀವಕೋಶಗಳನ್ನು ನಾಶಮಾಡುತ್ತದೆ. ಜೇನು ಮತ್ತು ಬಾದಾಮಿ ತೈಲವನ್ನು ಬೆರೆಸಿ ಹೆಸರು ಕಾಳಿನ ಪೇಸ್ಟ್ ತಯಾರಿಸಿಕೊಂಡು ಸ್ಕ್ರಬ್ ರೂಪದಲ್ಲಿ ಉಪಯೋಗಿಸಿ. ಇದರಿಂದ ನಿಮ್ಮ ತ್ವಚೆಯು ಹೆಚ್ಚು ಕಾಂತಿಯುಕ್ತವಾಗುತ್ತದೆ. ಹೆಸರುಕಾಳಿನಿಂದ ಹೆಚ್ಚಾಗುತ್ತೆ ಕೂದಲು ಮತ್ತು ಚರ್ಮದ ಆರೋಗ್ಯ

ಅಕ್ಕಿ

ಅಕ್ಕಿ

ಅಕ್ಕಿಯಲ್ಲಿ ವಿಟಮಿನ್ ಇ, ಕೆ ಮತ್ತು ಬಿ6 ಸತ್ವಗಳು ಯಥೇಚ್ಛವಾಗಿದ್ದು, ಇದು ನಿಮ್ಮ ಆಯಾಸದ ತ್ವಚೆಗೆ ಆರೈಕೆ ನೀಡಿ ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು ನಾಶಮಾಡುತ್ತದೆ. ಅಕ್ಕಿ ಹಿಟ್ಟು ಮತ್ತು ಜೇನನ್ನು ಬೆರೆಸಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಸ್ಕ್ರಬ್ ರೀತಿಯಲ್ಲಿ ನಿಮ್ಮ ತ್ವಚೆಗೆ ಬಳಸಿ. ಅಕ್ಕಿಯು ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ನಾಶಗೊಳಿಸಿ, ಚರ್ಮದ ಮೇಲಿರುವ ಧೂಳನ್ನು ಸ್ವಚ್ಛಗೊಳಿಸಿ ನಳನಳಿಸುವಂತೆ ಮಾಡುತ್ತದೆ. ಅಕ್ಕಿ ತೊಳೆದ ನೀರಿನ ಆಶ್ಚರ್ಯಕರ ಸಂಗತಿ

ಟೊಮೇಟೊ ಹಣ್ಣಿನ ರಸ

ಟೊಮೇಟೊ ಹಣ್ಣಿನ ರಸ

ಟೊಮೇಟೊ ಹಣ್ಣಿನ ರಸವನ್ನು ಜೇನುತುಪ್ಪದೊಂದಿಗೆ ಸಮಪ್ರಮಾಣದಲ್ಲಿ ಬೆರೆಸಿ ದಟ್ಟನಾದ ದ್ರಾವಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಕಾಲಕ್ರಮೇಣ ನಯವಾದ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

English summary

Simple ingredients that are excellent exfoliants

Maintaining healthy and glowing skin does not need a lot of time. Take a look in your kitchen and you’ll find several ingredients that can be a part of your beauty regimen, whether it is toning, moisturising, nourishing or exfoliating. Skin expert shares a list of everyday ingredients that can double up as exfoliants.
X
Desktop Bottom Promotion