For Quick Alerts
ALLOW NOTIFICATIONS  
For Daily Alerts

ನೈಜ ಸೌಂದರ್ಯ ಆಯುರ್ವೇದ ಚಿಕಿತ್ಸೆಯಿಂದ ಮಾತ್ರ ಸಾಧ್ಯ!

By Arshad
|

ಎಷ್ಟೇ ಬಣ್ಣ ಹಚ್ಚಿಕೊಂಡು ಸುಂದರಾಗಿ ಕಾಣಿಸುವ ಪ್ರತಿಯೊಬ್ಬರಿಗೂ ಸಹಜ ಸೌಂದರ್ಯವೇ ನಿಜವಾದ ಸೌಂದರ್ಯ ಎಂಬ ನಿಜ ಗೊತ್ತಿದೆ. ನಿಜವಾದ ಸೌಂದರ್ಯವನ್ನು ನಿಸರ್ಗ ಮಾತ್ರ ನೀಡಬಲ್ಲದು. ಯಾವುದೇ ಕೃತಕ ಪ್ರಸಾಧನ ಆ ಹೊತ್ತಿಗೆ ಪ್ರಖರ ಸೌಂದರ್ಯ ನೀಡಬಲ್ಲದಾದರೂ ಕ್ರಮೇಣ ಇದರ ಪರಿಣಾಮ ವ್ಯತಿರಿಕ್ತವಾಗಬಹುದು. ಆಯುರ್ವೇದ ಸೌಂದರ್ಯವೃದ್ಧಿಗಾಗಿ ಹಲವು ನೈಸರ್ಗಿಕ ವಿಧಾನಗಳನ್ನು ಪರಿಚಯಿಸಿದೆ.

Simple Ayurvedic Beauty Tips for Fair Skin

ಇದರ ಪರಿಣಾಮ ಕೊಂಚ ನಿಧಾನ ಎಂಬ ಒಂದೇ ಕೊರತೆಯನ್ನು ಬಿಟ್ಟರೆ ಈ ವಿಧಾನಗಳೆಲ್ಲವೂ ಅತ್ಯಂತ ಸುರಕ್ಷಿತ ಮತ್ತು ಫಲಪ್ರದವಾದವುಗಳಾಗಿವೆ. ಅಷ್ಟೇ ಅಲ್ಲ, ನೂರಾರು ವರ್ಷಗಳಿಂದ ಈ ವಿಧಾನಗಳನ್ನು ಭಾರತದಾದ್ಯಂತ ಬಳಸಲ್ಪಡುತ್ತಾ ಬಂದಿದ್ದು ಇದರ ಪರಿಣಾಮಗಳನ್ನು ಪ್ರತ್ಯಕ್ಷ ಕಂಡ ವಿದೇಶೀಯರು ತಮ್ಮ ದೇಶದಲ್ಲಿಯೂ ಪರಿಚಯಿಸಿದ ಕಾರಣ ಇಂದು ಆಯುರ್ವೇದ ವಿಶ್ವವ್ಯಾಪಿಯಾಗಿದೆ.

ಬನ್ನಿ, ಆಯುರ್ವೇದ ಸೌಂದರ್ಯ ರಕ್ಷಣೆ ಮತ್ತು ವೃದ್ಧಿಗಾಗಿ ಯಾವ ಸಲಹೆಗಳನ್ನು ನೀಡುತ್ತಿದೆ ಎಂಬುದನ್ನು ಅವಲೋಕಿಸೋಣ: ಇದರಲ್ಲಿ ಯಾವ ವಿಧಾನ ನಿಮಗೆ ಅತಿ ಸೂಕ್ತ ಎನಿಸುತ್ತದೆಯೋ ಅದನ್ನು ಅನುಸರಿಸಿ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ.

* ನೆರಿಗೆರಹಿತ ಚರ್ಮಕ್ಕಾಗಿ
ಕೊಂಚ ಹರಳೆಣ್ಣೆಯನ್ನು ನಯವಾಗಿ ಚರ್ಮದ ಮೇಲೆ ಕೊಂಚ ಮಸಾಜ್ ಮೂಲಕ ಹಚ್ಚಿಕೊಳ್ಳುತ್ತಾ ಇರಿ. ಹಳ್ಳಿಗಾಡಿನ ಮನೆಮದ್ದು- ಹರಳೆಣ್ಣೆಯ ಔಷಧೀಯ ಗುಣಗಳು

* ಚರ್ಮದ ಸೂಕ್ಷ್ಮರಂಧ್ರಗಳನ್ನು ಸ್ವಚ್ಛಗೊಳಿಸಲು
ಒಂದು ಹತ್ತಿಯುಂಡೆಯಲ್ಲಿ ಕೊಂಚ ಹಸಿ ಹಾಲು (ಪಾಶ್ಚರೀಕರಿಸದ ಹಾಲು) ಮುಳುಗಿಸಿ ಕೊಂಚವೇ ಒತ್ತಡದಿಂದ ಚರ್ಮವನ್ನು ಒರೆಸಿಕೊಳ್ಳಿ. ತ್ವಚೆಯ ಲವಲವಿಕೆಗೆ, ಹಾಲು-ಜೇನಿನ ಫೇಸ್ ಪ್ಯಾಕ್

* ನೈಸರ್ಗಿಕ ರೂಪದ ತೇವಕಾರಕ
ಒಂದು ವೇಳೆ ನಿಮ್ಮ ಚರ್ಮ ಸಾಮಾನ್ಯವಾಗಿದ್ದರೆ ನಿಮಗೆ ಸೂಕ್ತವಾದ ತೇವಕಾರಕ ಅಥವಾ ಮಾಯಿಶ್ಚರೈಸರ್ ಅನ್ನು ನೀವೇ ತಯಾರಿಸಿಕೊಳ್ಳಬಹುದು. ಎಂಟು ಔನ್ಸ್ (ಸುಮಾರು 240 ಮಿಲೀ) ಮೊಸರಿಗೆ ಒಂದು ದೊಡ್ಡಚಮಚ ತಾಜಾ ಲಿಂಬೆರಸ ಬೆರೆಸಿ ಈಗತಾನೇ ತೊಳೆದುಕೊಂಡ ಮುಖಕ್ಕೆ ದಪ್ಪನಾಗಿ ಹಚ್ಚಿ. ಸುಮಾರು ಹದಿನೈದು ನಿಮಿಷದ ಬಳಿಕ ದಪ್ಪನೆಯ ಟವೆಲ್ಲಿನಿಂದ ಒರೆಸಿ ತೆಗೆಯಿರಿ.

* ಚರ್ಮದ ಕಂಡೀಶನಿಂಗ್‌ಗಾಗಿ
ಎರಡು ದೊಡ್ಡಚಮಚ ಹಾಲಿನ ಕೆನೆಯನ್ನು ಒಂದು ದೊಡ್ಡಚಮಚ ಜೇನಿನೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತೆಳುವಾಗಿ ಹಚ್ಚಿ ಸುಮಾರು ಐದು ನಿಮಿಷ ಹಾಗೇ ಬಿಡಿ. ಬಳಿಕ ಒದ್ದೆಯಾದ ಮುಖವೊರೆಸುವ ಬಟ್ಟೆಯಿಂದ ಒರೆಸಿಕೊಳ್ಳಿ. ಆಲೂಗಡ್ಡೆ ಜ್ಯೂಸ್ ಬಳಸಿ ಮುಖದ ಸುಕ್ಕು ನಿವಾರಿಸಿ...

*ಚರ್ಮದ ಬಣ್ಣ ತಿಳಿಯಾಗಲು
ಒಂದು ಹಸಿ ಆಲುಗಡ್ಡೆಯ ಒಂದು ಬದಿಯ ಸಿಪ್ಪೆಯನ್ನು ಸುಲಿದು ಹಸಿಯಾದ ಭಾಗದಿಂದ ಕಲೆಯಿರುವ ಚರ್ಮದ ಮೇಲೆ ಆಗಾಗ ಉಜ್ಜಿಕೊಳ್ಳುತ್ತಾ ಇರಿ. ಇದರಿಂದ ಕಲೆಗಳು ನಿಧಾನವಾಗಿ ಮಾಯವಾಗುತ್ತದೆ ಹಾಗೂ ಬಿಸಿಲಿಗೆ ಕಪ್ಪಗಾಗಿದ್ದ ಚರ್ಮ ಸಹಜವರ್ಣದತ್ತ ತಿರುಗುತ್ತದೆ.

*ಚರ್ಮದ ಕಾಂತಿ ಹೆಚ್ಚಿಸಲು
ಸಮಪ್ರಮಾಣದಲ್ಲಿ ಅರಿಶಿನ (ಕೊಂಬು ತೇದಿ ತೆಗೆದ), ಹಸಿ ಹಾಲು ಮತ್ತು ಚಂದನ (ಕೊರಡು ತೇದಿ ತೆಗೆದ) ಗಳನ್ನು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಕೆಲವು ನಿಮಿಷಗಳ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಚರ್ಮದ ಕಾಂತಿ ತಕ್ಷಣವೇ ಹೆಚ್ಚುವುದನ್ನು ಗಮನಿಸಿ.

*ಚರ್ಮ ಕೋಮಲಗೊಳ್ಳಲು
ಈಗತಾನೇ ಹಿಂಡಿ ತೆಗೆದ ಕಿತ್ತಳೆ ಹಣ್ಣಿನ ರಸವನ್ನು ಮುಖದ ಮೇಲೆ ತೆಳುವಾಗಿ ಪ್ರೋಕ್ಷಿಸಿಕೊಂಡು ಕೆಲ ಹೊತ್ತಿನ ಬಳಿಕ ತೊಳೆದುಕೊಳ್ಳಿ.

*ಮುಖದ ಕೂದಲನ್ನು ನಿವಾರಿಸಲು
ಮುಖದ ಕೂದಲನ್ನು ಯಾವುದೇ ಅಪಾಯವಿಲ್ಲದೇ ನಿವಾರಿಸಲು ಎಳ್ಳೆಣ್ಣೆ, ಅರಿಶಿನ ಪುಡಿ ಮತ್ತು ಗೋಧಿ ಹಿಟ್ಟುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಕೂದಲ ಮೇಲೆ ಹಚ್ಚಿಕೊಳ್ಳಿ. ಕೊಂಚ ಹೊತ್ತಿನ ಬಳಿಕ ಕೊಂಚವೇ ಒತ್ತಡದಿಂದ ಜಾರಿಸಿದಾಗ ಕೂದಲನ್ನು ಬುಡಸಹಿತ ಕಿತ್ತು ತರುತ್ತದೆ. ಮುಖದಲ್ಲಿನ ಕೂದಲ ನಿವಾರಣೆಗೆ ಹಣ್ಣಿನ ಫೇಸ್ ಪ್ಯಾಕ್

English summary

Simple Ayurvedic Beauty Tips for Fair Skin

Simple Ayurvedic Remedies for Glowing, Beautiful Skin! There are thousands of products in the market aimed at skin care. Most of them claim to work wonders ...
X
Desktop Bottom Promotion