For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯಕ್ಕಾಗಿ 'ರೋಸ್ ವಾಟರ್'!

By Hemanth
|

ಮುಖ ಸೌಂದರ್ಯ ವರ್ಧಿಸಲು ಹಾಗೂ ತ್ವಚೆಯ ಆರೈಕೆಯ ಹಲವಾರು ಬಗೆಯ ಸೌಂದರ್ಯ ವರ್ಧಕಗಳಲ್ಲಿ ರೋಸ್ ವಾಟರ್ ಯಾನೆ ಗುಲಾಬಿ ನೀರನ್ನು ಬಳಸುತ್ತಾರೆ. ಕೆಲವೊಂದು ಥೆರಪಿ ಹಾಗೂ ಸ್ಪಾಗಳಲ್ಲಿ ಇದನ್ನು ಬಳಸುತ್ತಾರೆ. ಇದು ತುಂಬಾ ಅಗ್ಗದ ದರ ಹಾಗೂ ಸುಲಭವಾಗಿ ಸಿಕ್ಕಿದರೂ ಇದರ ಗುಣಗಳನ್ನು ಕಡೆಗಣಿಸಲಾಗಿದೆ. ಇದನ್ನು ಕೇವಲ ಸೌಂದರ್ಯ ವರ್ಧಕಗಳಲ್ಲಿ ಮಾತ್ರವಲ್ಲದೆ, ಇಂದು ಅಡುಗೆ ಮನೆಯಲ್ಲೂ ಇದನ್ನು ಬಳಸಲಾಗುತ್ತಿದೆ. ರೋಸ್ ವಾಟರ್ ನ ಸುವಾಸನೆ ನಮ್ಮ ಮನಸ್ಸನ್ನು ಖುಷಿಪಡಿಸುತ್ತದೆ.

Rose Water for Skin Care

ಭಾರತದಲ್ಲಿ ಹಿಂದಿನ ಕಾಲದಿಂದಲೂ ರೋಸ್ ವಾಟರ್ ಬಳಕೆಯಲ್ಲಿದೆ. ಮದುವೆಯಂತಹ ಕಾರ್ಯಕ್ರಮಗಳು ಬಂದಾಗ ಮುಖವನ್ನು ಸ್ವಚ್ಛಗೊಳಿಸಲು ಮತ್ತು ಸುವಾಸನೆಗಾಗಿ ಸಿಂಪಡನೆ ಮಾಡಲಾಗುತ್ತದೆ. ಶುಭಸಂದರ್ಭಗಳಲ್ಲಿ ವೀಲ್ಯದೆಲೆ ಹಾಗೂ ಇತರ ಕೆಲವೊಂದು ಪಾನ್ ಗಳಲ್ಲಿ ಇದನ್ನು ಬಳಕೆ ಮಾಡುವ ಕಾರಣದಿಂದ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುವುದು. ಜೀರ್ಣಶಕ್ತಿ ಹೆಚ್ಚಿಸುವ ಗುಣವನ್ನು ಹೊಂದಿರುವ ರೋಸ್ ವಾಟರ್ ನ್ನು ಲೆಮನೋಡ್ ಜತೆ ಸೇರಿಸಿದಾಗ ಅದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಓಡಿಸುತ್ತದೆ. ಮನೆಯಲ್ಲಿಯೆ ತಯಾರಿಸಬಹುದು ರೋಸ್ ವಾಟರ್

ಉರಿಯೂತ ಶಮನಕಾರಿ ಹಾಗೂ ವರ್ಧಕ ಗುಣವನ್ನು ಹೊಂದಿರುವಂತಹ ರೋಸ್ ವಾಟರ್ ನ್ನು ಸುಟ್ಟಗಾಯ ಮತ್ತು ಅಲರ್ಜಿಯಾಗಿರುವ ಚರ್ಮದ ಚಿಕಿತ್ಸೆಗೆ ಬಳಸಲಾಗುತ್ತದೆ. ಸ್ನಾನ ಮಾಡುವಾಗ ರೋಸ್ ವಾಟರ್ ನ ಕೆಲವು ಹನಿಯನ್ನು ಹಾಕಿಕೊಂಡು ಸ್ನಾನ ಮಾಡಿದರೆ ಆಗ ಒಳ್ಳೆಯ ಸುವಾಸನೆಯೊಂದಿಗೆ ನಿಮ್ಮ ಮನಸ್ಸು ಉಲ್ಲಾಸಿತಗೊಳ್ಳುತ್ತದೆ.

ಮುಖದ ಮೇಲಿನ ಕಲೆಗಳನ್ನು ನಿವಾರಿಸಲು ಹಾಗೂ ಮೊಡವೆಗಳನ್ನು ದೂರ ಓಡಿಸಲು ಫೇಸ್ ಪ್ಯಾಕ್‌ನ ಪೌಡರ್ ಜತೆಗೆ ರೋಸ್ ವಾಟರ್ ನ್ನು ಸೇರಿಸಿ ಹಚ್ಚಬೇಕು. ಅದರಲ್ಲೂ ಮಳೆಗಾಲದಲ್ಲಿ ಫೇಸ್ ಪ್ಯಾಕ್ ನೊಂದಿಗೆ ಇದನ್ನು ಬಳಕೆ ಮಾಡಿದಾಗ ಇದು ತುಂಬಾ ನೆರವಾಗುತ್ತದೆ. ಜಿಡ್ಡಿನಾಂಶವುಳ್ಳ ಚರ್ಮ ಮತ್ತು ಒಣ ಚರ್ಮಕ್ಕಾಗಿ ಇಲ್ಲಿ ಎರಡು ರೀತಿಯ ಫೇಸ್ ಪ್ಯಾಕ್ ಗಳನ್ನು ಮಾಡಲಾಗಿದೆ. ಅದು ಯಾವ ರೀತಿ ಕೆಲಸ ಮಾಡಲಿದೆ ಎಂದು ತಿಳಿದುಕೊಳ್ಳಿ. ಗುಲಾಬಿಯಂತಹ ಮೃದು ತ್ವಚೆಗೆ ರೋಸ್ ವಾಟರ್

ಜಿಡ್ಡಿನಾಂಶ ಮತ್ತು ಮೊಡವೆಗಳಿರುವ ಚರ್ಮಕ್ಕಾಗಿ
ರೋಸ್ ವಾಟರ್ ಅನ್ನು ಫುಲ್ಲರ್ ಅರ್ಥ್ ಮತ್ತು ಕೆಲವು ಹನಿ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿಕೊಂಡು ಮೊಡವೆಗಳಿರುವ ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಒಣಗುವ ತನಕ ಹಾಗೆ ಬಿಡಿ ಮತ್ತು ಬಳಿಕ ಅದನ್ನು ತೊಳೆಯಿರಿ.

ಒಣಚರ್ಮಕ್ಕಾಗಿ
ಓಟ್ ಮೀಲ್, ಜೇನುತುಪ್ಪ, ಹಾಲಿನೊಂದಿಗೆ ರೋಸ್ ವಾಟರ್ ನ್ನು ಬೆರೆಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಒಣಗಿದ ಬಳಿಕ ತೆಗೆಯಿರಿ. ಇದು ನಿಮ್ಮ ಚರ್ಮಕ್ಕೆ ತೇವಾಂಶವನ್ನು ನೀಡುವುದು ಮಾತ್ರವಲ್ಲದೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.

English summary

Rose Water for Skin Care

Despite its easy availability and cost effectiveness, the merits of rose water are often underplayed. Rose water holds an important place in aromatherapy and spa treatment. However, it could have additional uses if given a spot in the kitchen. The smell of rose water stimulates our senses and relaxes the mind.
Story first published: Saturday, June 25, 2016, 20:07 [IST]
X
Desktop Bottom Promotion