For Quick Alerts
ALLOW NOTIFICATIONS  
For Daily Alerts

ಸೌತೆಕಾಯಿಯಲ್ಲಿದೆ ಲೆಕ್ಕವಿಲ್ಲದಷ್ಟು ಸೌಂದರ್ಯದ ಗುಟ್ಟು

By Jaya subramanya
|

ಸೌತೆಕಾಯಿ ಅಂದರೆ ರುಚಿಯಾದ ಕೋಸಂಬರಿ ನೆನಪಾಗುತ್ತದೆ. ಹೌದು ನಮ್ಮ ಎಲ್ಲಾ ಹಬ್ಬದ ಸಂಭ್ರಮಗಳಿಗೆ ಹಾಗೂ ಸಮಾರಂಭಗಳಲ್ಲಿ ಊಟಕ್ಕೆ ಸೌತೆಕಾಯಿಯನ್ನು ಖಂಡಿತವಾಗಿಯೂ ಬಳಸುತ್ತಾರೆ. ಕೋಸಂಬರಿಗೆ ಸೌತೆಕಾಯಿ ಇದ್ದರೇನೆ ಹೆಚ್ಚು ರುಚಿಕರ. ಹೀಗೆ ಅನೇಕ ಊಟದ ವಿಧಾನಗಳಲ್ಲಿ ಸೌತೆಕಾಯಿಯನ್ನು ದಿನನಿತ್ಯ ಬಳಸಲಾಗುತ್ತಿದೆ. ನಿಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಲು ಬಳಸುವ ತರಕಾರಿಗಳಲ್ಲಿ ಸೌತೆಕಾಯಿ ಮುಂಚೂಣಿಯಲ್ಲಿದೆ. ಇದಕ್ಕೆ ಪರ್ಯಾಯವೆಂಬಂತೆ, ಸೇವಿಸುವುದರ ಜೊತೆಗೆ ಮುಖದ ಕಾಂತಿಯನ್ನೂ ಹೆಚ್ಚಿಸಬಹುದೆಂದು ನೀವು ನಂಬುತ್ತೀರಾ? ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಸೌತೆಕಾಯಿ ನಿಮ್ಮ ದೇಹದ ಆರೋಗ್ಯಕ್ಕೆ ಮಾತ್ರ ಉಪಯೋಗಿಯೆಂದು ಹಲವರು ತಿಳಿದಿದ್ದಾರೆ. ಆದರೆ ಅದರಿಂದ ಮುಖದ ತ್ವಚೆಯ ಅಂದವನ್ನು ಹೆಚ್ಚಿಸಲೂ ಸಹ ಬಳಸುತ್ತಾರೆಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ಸೌತೆಕಾಯಿಯನ್ನು ಮುಖದ ಮೇಲೆ ಹಚ್ಚುವುದರಿಂದ ತ್ವಚೆಯು ಕಾಂತಿಯುತವಾಗುವುದಲ್ಲದೇ ನೈಸರ್ಗಿಕವಾಗಿ ಸುಂದರವಾಗಿ ಕಾಣುತ್ತದೆ.

ಇದರಲ್ಲಿ ಪೌಷ್ಠಿಕಾಂಶ ಸತ್ವಗಳು ಹೇರಳವಾಗಿದ್ದು, ಅದರಲ್ಲಿರುವ ಪ್ರತಿಯೊಂದು ವಿಟಮಿನ್, ಚರ್ಮದ ಆರೈಕೆಗೆ ಅತ್ಯಂತ ಪರಿಣಾಮಕಾರಿ. ಇತ್ತೀಚಿನ ದಿನಗಳಲ್ಲಿ ಸೌತೆಕಾಯಿ ಅಗ್ಗದ ದರದಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬನ್ನಿ ಸೌತೆಕಾಯಿಯ ಸೌಂದರ್ಯ ಪ್ರಯೋಜನಗಳನ್ನು ಹಂತ ಹಂತವಾಗಿ ನೀಡುತ್ತಿದ್ದು, ಮನೆಯಲ್ಲಿಯೇ ಇದನ್ನು ಸುಲಭವಾಗಿ ತಯಾರಿಸಭುದಾಗಿದೆ. ವಿವರಗಳಿಗೆ ಮುಂದೆ ಓದಿ..

ಮೈಯನ್ನು ತಂಪಾಗಿಡಲು

ಮೈಯನ್ನು ತಂಪಾಗಿಡಲು

ಒಂದು ವೇಳೆ ನೀವು ಇಡಿಯ ದಿನ ಮನೆಯಿಂದ ಹೊರಗೇ ಇರಬೇಕಾದರೆ ಸೌತೆಯ ರಸದ ಸಿಂಪರಣೆ (ಸ್ಪ್ರೇ) ಉಪಯುಕ್ತವಾಗಿದೆ. ಇದನ್ನು ತಯಾರಿಸಲು ಒಂದು ಚಿಕ್ಕ ಎಳೆಸೌತೆಯನ್ನು ತುರಿದು ತಣಿಸಿದ ಹಸಿರು ಟೀ ಸೇರಿಸಿ. ಇದಕ್ಕೆ ಒಂದು ದೊಡ್ಡ ಚಮಚ ಲೋಳೆಸರದ ರಸ ಮತ್ತು ಕೆಲವು ಹನಿ ಗುಲಾಬಿನೀರನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಕಿ. ಚೆನ್ನಾಗಿ ಸೋಸಿಕೊಂಡು, ಸ್ಪ್ರೇ ಮಾಡಬಲ್ಲ ಬಾಟಲಿಯೊಂದರಲ್ಲಿ ಹಾಕಿ. ಬಿಸಿಲಿಗೆ ಹೋಗುವ ಮೊದಲು ಮೈಗೆ ಸಿಂಪಡಿಸಿಕೊಂಡು ಹೋದರೆ ಬಿಸಿಲಿನ ಝಳಕ್ಕೆ ಚರ್ಮ ಕಪ್ಪಗಾಗದೇ ಇರುವ ಜೊತೆಗೇ ಉರಿಯನ್ನೂ ತಡೆಯಲು ಸಾಧ್ಯವಾಗುತ್ತದೆ.

ಮೊಡವೆಗಳ ಕಲೆ ನಿವಾರಣೆಗೆ

ಮೊಡವೆಗಳ ಕಲೆ ನಿವಾರಣೆಗೆ

ಹದಿಹರೆಯದಲ್ಲಿ ಗೊತ್ತಿಲ್ಲದೇ ಮೊಡವೆಗಳನ್ನು ಚಿವುಟಿದ್ದರ ಪರಿಣಾಮವಾಗಿ ಅಲ್ಲಿ ಚರ್ಮದ ಬಣ್ಣ ಗಾಢವಾಗಿದ್ದು ಕಲೆಯನ್ನು ಮೂಡಿಸಿರುತ್ತದೆ. ಇದನ್ನು ಸೌತೆಯ ಸುಲಭ ಉಪಯೋಗದಿಂದ ನಿವಾರಿಸಿ ಕಲೆಯಿಲ್ಲದ ಮುಖ ಹೊಂದಬಹುದು. ಇದಕ್ಕಾಗಿ ಅರ್ಧ ಎಳೆಸೌತೆ ತುರಿದು ಒಂದು ಮೊಟ್ಟೆ, ಕೆಲವು ರೋಸ್ಮರಿ ಅಗತ್ಯ ತೈಲದ ಹನಿಗಳನ್ನು (rosemary essential oil) ಸೇರಿಸಿ ಅರೆಯಿರಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಸನ್ ಬರ್ನ್‎ಗೆ ಉಪಚಾರ

ಸನ್ ಬರ್ನ್‎ಗೆ ಉಪಚಾರ

ಸನ್ ಬರ್ನ್ ಆದಲ್ಲಿ ಅದನ್ನು ಉಪಚರಿಸಲು ಸೌತೆಕಾಯಿ ಉತ್ತಮ. ತ್ವಚೆಯನ್ನು ಮೃದುಗೊಳಿಸುವುದರ ಜೊತೆಗೆ ಉಪಚಾರವನ್ನೂ ಮಾಡುತ್ತದೆ. ಮುಖದಲ್ಲಿನ ಕೆಂಪುಗುಳ್ಳೆಯನ್ನು ಹೋಗಲಾಡಿಸುವುದರೊಂದಿಗೆ ಕಿರಿಕಿರಿಯನ್ನು ತಪ್ಪಿಸುತ್ತದೆ. ಸನ್ ಬರ್ನ್ ಆಗಿರುವ ಜಾಗದಲ್ಲಿ ಸೌತೆಕಾಯಿ ಹೋಳುಗಳನ್ನಿರಿಸಿ ಮತ್ತು ಸ್ವಲ್ಪ ಸಮಯದ ನಂತರ ತೆಗೆಯಿರಿ.

ಸೆಲ್ಯುಲೈಟ್

ಸೆಲ್ಯುಲೈಟ್

ತೊಡೆಗಳು, ಪೃಷ್ಠ, ತೋಳುಗಳು ಮತ್ತು ಹೊಟ್ಟೆಯಲ್ಲಿ ಸೆಲ್ಯುಲೈಟ್ ಕಂಡುಬರುತ್ತವೆ. ಜೇನಿನೊಂದಿಗೆ ಸೌತೆಕಾಯಿ ರಸವನ್ನು ಮಿಶ್ರಮಾಡಿಕೊಂಡು ಆ ಜಾಗಕ್ಕೆ ಹಚ್ಚಿಕೊಳ್ಳಬೇಕು. ಚರ್ಮವನ್ನು ಬಿಗಿಗೊಳಿಸುವ ಮೂಲಕ ತ್ವಚೆಯ ಕಾಲಜನ್ ಫೈಬರ್ಸ್ ಅನ್ನು ರಚನೆಗೆ ಸಹಾಯ ಮಾಡುತ್ತದೆ.

ತ್ವಚೆಯ ಬಣ್ಣ ವರ್ಧಿಸಲು

ತ್ವಚೆಯ ಬಣ್ಣ ವರ್ಧಿಸಲು

ತ್ವಚೆಯ ಟೋನ್ ಅನ್ನು ತಿಳಿಗೊಳಿಸಿ ತ್ವಚೆಯ ಬಣ್ಣವನ್ನು ವರ್ಧಿಸುತ್ತದೆ. ಲಿಂಬೆ ರಸದೊಂದಿಗೆ ಸೌತೆಕಾಯಿ ರಸವನ್ನು ಮಿಶ್ರಮಾಡಿ. ಇದನ್ನು ತ್ವಚೆಗೆ ಲೇಪಿಸಿ ಮತ್ತು ಸ್ವಲ್ಪ ಹೊತ್ತು ಬಿಟ್ಟು ಅದನ್ನು ತೊಳೆದುಕೊಳ್ಳಿ.

ಕಪ್ಪು ವರ್ತುಲಗಳ ನಿವಾರಣೆಗೆ

ಕಪ್ಪು ವರ್ತುಲಗಳ ನಿವಾರಣೆಗೆ

ಕಣ್ಣಿನ ಕೆಳಭಾಗದಲ್ಲಿ ರಚನೆಗೊಂಡಿರುವ ಕಪ್ಪು ವರ್ತುಲಗಳನ್ನು ಹೋಗಲಾಡಿಸಲು ಸೌತೆಕಾಯಿ ನೆರವುಕಾರಿ. ಇದರಲ್ಲಿರುವ ಉತ್ಕರ್ಷಣ ನಿರೋಧಿ ಮತ್ತು ಸಿಲಿಕಾ ಕಣ್ಣಿನ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಕಣ್ಣಿನ ಮೇಲ್ಭಾಗದಲ್ಲಿ ಸೌತೆಕಾಯಿ ಸ್ಲೈಸ್‎ಗಳನ್ನಿಡಿ. ಸ್ವಲ್ಪ ಕಾಲ ಹಾಗೆಯೇ ಇಟ್ಟು ಅದನ್ನು ತೆಗೆಯಿರಿ. ನೈಸರ್ಗಿಕ ವಿಧಾನದಲ್ಲಿ ಹೆಚ್ಚು ಸರಳವಾಗಿ ಕಪ್ಪು ವರ್ತುಲಗಳನ್ನು ಇದು ನಿವಾರಿಸುತ್ತದೆ.

ದಣಿದ ಕಣ್ಣುಗಳಿಗೆ ಆರಾಮ

ದಣಿದ ಕಣ್ಣುಗಳಿಗೆ ಆರಾಮ

ಸೌತೆಕಾಯಿ ಹೆಚ್ಚು ಪ್ರಮಾಣದ ಆಸ್ಕೋರ್ಬಿಕ್ ಏಸಿಡ್ ಅನ್ನು ಒಳಗೊಂಡಿದ್ದು ದೇಹದಲ್ಲಿರುವ ನೀರಿನ ಧಾರಣ ಶಕ್ತಿಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಣ್ಣುಗಳ ಮೇಲೆ ಎರಡು ಸೌತೆಕಾಯಿ ಹೋಳುಗಳನ್ನು ಇರಿಸಿ. ಕಣ್ಣಿಗೆ ತಂಪು ನೀಡಿ ಆಯಾಸಗೊಂಡಿರುವ ಕಣ್ಣುಗಳನ್ನು ಉಪಚರಿಸಲು ಇದು ಸೂಕ್ತವಾಗಿದೆ.

English summary

Reasons Why Cucumber Is Your Skin's Best Friend

Cucumbers are well known as superfoods due to their myriad health benefits. Cucumbers are equally beneficial for the skin and hair too. They can do wonders for the skin. Cucumber is packed with 90% of water with essential nutrients such as vitamin C and caffeic acid that help to soothe, hydrate and replenish the skin. It in turn reduces irritation and swelling. in this article, we at Boldsky will be listing out some of the reasons why cucumber should be used in your beauty regimen. Read on to know more about it.
X
Desktop Bottom Promotion