For Quick Alerts
ALLOW NOTIFICATIONS  
For Daily Alerts

ಮುಖದ ಸೌಂದರ್ಯಕ್ಕೆ ಮೊಟ್ಟೆ ಸಿಪ್ಪೆಯಿಂದ ಮ್ಯಾಜಿಕ್ ಚಿಕಿತ್ಸೆ!

By manu
|

ಚರ್ಮದ ಆರೈಕೆಯಲ್ಲಿ ಮೊಟ್ಟೆಯ ಬಿಳಿಭಾಗ ಅತ್ಯುತ್ತಮ ಎಂದು ನಮಗೆಲ್ಲಾ ಗೊತ್ತೇ ಇದೆ. ಆದರೆ ಇದರ ಹೊರಕವಚ? ನಾವೆಲ್ಲಾ ಇದನ್ನೊಂದು ಕಸದಂತೆ ಪರಿಗಣಿಸಿ ಕಸದ ಬುಟ್ಟಿಗೆ ಎಸೆಯುತ್ತೇವೆ. ಏಕೆಂದರೆ ಚರ್ಮದ ಆರೈಕೆಗೆ ಮೊಟ್ಟೆಯ ಕವಚ ಅಥವಾ ಸಿಪ್ಪೆಯೂ ಕೂಡ ಉತ್ತಮವಾಗಿದೆ ಎಂದು ನಮಗೆ ತಿಳಿದೇ ಇಲ್ಲ!

ಆದರೆ ಸೌಂದರ್ಯ ತಜ್ಞರು ಕಂಡುಕೊಂಡಿರುವ ಪ್ರಕಾರ ಚರ್ಮದ ಸೋಂಕು ನಿವಾರಿಸಲು ಮೊಟ್ಟೆಯ ಕವಚದಲ್ಲಿರುವ ಲವಣಗಳು ಅತ್ಯುತ್ತಮವಾದ ಪೋಷಣೆ ನೀಡುತ್ತವೆ ಹಾಗೂ ಶೀಘ್ರವಾಗಿ ಹೊಸಜೀವಕೋಶಗಳು ಬೆಳೆಯುವಂತೆ ಮಾಡುತ್ತವೆ. ಅಲ್ಲದೇ ಚರ್ಮದ ಕಾಂತಿಯನ್ನು ಕಸಿದುಕೊಳ್ಳುವ ಕಲೆ ಮತ್ತು ಬಿಸಿಲಿಗೆ ಕಪ್ಪಾದ ವರ್ಣದ್ರವ್ಯದ ಪ್ರಭಾವವನ್ನು ಕಡಿಮೆಗೊಳಿಸಿ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಕೇಳಿ ಅಚ್ಚರಿಯಾಯಿತೇ? ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!

ಆದರೆ ಇದನ್ನು ನೇರವಾಗಿ ಬಳಸುವಂತಿಲ್ಲ. ಮೊಟ್ಟೆಯ ಕವಚ ಸುಲಭವಾಗಿ ಒಡೆಯುವ ಕಾರಣ ಮೊದಲು ಇದನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಒಣಗಿದ ಕವಚದ ಒಳಭಾಗದಲ್ಲಿ ಅಂಟಿಕೊಂಡಿರುವ ತೆಳುವಾದ ಪೊರೆಯನ್ನು ನಿವಾರಿಸಿ ಕೇವಲ ಚಿಪ್ಪನ್ನು ಮಾತ್ರ ಚಿಕ್ಕದಾಗಿ ತುಂಡರಿಸಿಕೊಂಡು ಬಳಿಕ ಕುಟ್ಟಿ ನಯವದ ಪುಡಿ ತಯಾರಿಸಬೇಕು. ಈ ಪುಡಿಯನ್ನು ಚರ್ಮದ ಆರೈಕೆಗೆ ಬಳಸಬಹುದು. ಈ ಪುಡಿಯೊಂದಿಗೆ ಇನ್ನೂ ಕೆಲವು ನೈಸರ್ಗಿಕ ಸಾಮಾಗ್ರಿಗಳನ್ನು ಸೇರಿಸಿಕೊಂಡು ಲೇಪನ ತಯಾರಿಸಿ ಚರ್ಮಕ್ಕೆ ಹಚ್ಚಿಕೊಂಡಾಗ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು.

ಉದಾಹರಣೆಗೆ ಚರ್ಮದ ಕಲೆಗಳನ್ನು ನಿವಾರಿಸಲು ಮೊಟ್ಟೆಯ ಪುಡಿ ಮತ್ತು ಬಿಳಿಯ ಶಿರ್ಕಾಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ನಯವಾದ ಲೇಪನ ತಯಾರಿಸಿ ತೆಳುವಾಗಿ ಹಚ್ಚಿ ನಯವಾಗಿ ಮಸಾಜ್ ಮಾಡಬೇಕು. ಇದರಿಂದ ಚರ್ಮದ ಕಾಂತಿ ಹೆಚ್ಚುವ ಜೊತೆಗೇ ಕಲೆಗಳೂ ಮಾಯವಾಗತೊಡಗುತ್ತವೆ. ಬನ್ನಿ, ಮೊಟ್ಟೆಯ ಕವಚದ ಪುಡಿಯನ್ನು ಚರ್ಮದ ಆರೈಕೆಗೆ ಹೇಗೆ ಬಳಸಬಹುದು ಎಂಬ ಏಳು ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಈಗ ನೋಡೋಣ. ಆದರೆ ಇದಕ್ಕೂ ಮುನ್ನ ವಹಿಸಬೇಕಾದ ಎಚ್ಚರಿಕೆ ಎಂದರೆ ಎಂದಿಗೂ ಒಣಚರ್ಮದ ಮೇಲೆ ಈ ಲೇಪನಗಳನ್ನು ಹಚ್ಚಬೇಡಿ. ಮೊದಲು ಚೆನ್ನಾಗಿ ತೊಳೆದು ತೇವವಾಗಿರುವ ಚರ್ಮದ ಮೇಲೆ ಮಾತ್ರ ಹಚ್ಚಿ. ಈ ವಿಧಾನವನ್ನು ಅನುಸರಿಸುವಾಗ ಮೊಟ್ಟೆಯ ಬಿಳಿ ಅಥವಾ ಹಳದಿ ಭಾಗಗಳನ್ನೂ ಉಪಯೋಗಿಸಬೇಡಿ...

ಚರ್ಮದ ಸೋಂಕು ನಿವಾರಿಸಲು

ಚರ್ಮದ ಸೋಂಕು ನಿವಾರಿಸಲು

ಕೆಲವು ಮೊಟ್ಟೆಯ ಕವಚಗಳನ್ನು ಒಣಗಿಸಿ ಪುಡಿಮಾಡಿ. ಈ ಪುಡಿಗೆ ಸೇಬಿನ ಶಿರ್ಕಾ (apple cider vinegar) ವನ್ನು ಸಮಪ್ರಮಾಣದಲ್ಲಿ ಸೇರಿಸಿ ಕೆಲವು ಘಂಟೆಗಳ ಕಾಲ ಹಾಗೇ ಬಿಡಿ. ಬಳಿಕ ಈ ಮಿಶ್ರಣವನ್ನು ಚೆನ್ನಾಗಿ ಕಲಕಿ ಲೇಪನ ತಯಾರಿಸಿ. ಈ ಲೇಪನವನ್ನು ಚಿಕ್ಕಪುಟ್ಟ ಗಾಯ, ಚರ್ಮದಲ್ಲಿ ಉರಿತ, ತುರಿಕೆ ಇರುವಲ್ಲೆಲ್ಲಾ ತೆಳುವಾಗಿ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಚರ್ಮದ ಸೋಂಕು ನಿವಾರಿಸಲು

ಚರ್ಮದ ಸೋಂಕು ನಿವಾರಿಸಲು

ಕೆಲವೇ ನಿಮಿಷಗಳಲ್ಲಿ ತುರಿಕೆ ಕಡಿಮೆಯಾಗಿರುವುದು ಕಂಡು ಬರುತ್ತದೆ. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಬಳಿಕ ಟವೆಲ್ ನಿಂದ ಒತ್ತಿ ಒರೆಸಿಕೊಳ್ಳಿ. ಮರುದಿನದವರೆಗೂ ಈ ಭಾಗವನ್ನು ಒಣದಾಗಿಯೇ ಇರುವಂತೆ ನೋಡಿಕೊಳ್ಳಿ.

ಚರ್ಮದ ಕಲೆ ನಿವಾರಿಸಲು

ಚರ್ಮದ ಕಲೆ ನಿವಾರಿಸಲು

ಮೂರು ದೊಡ್ಡಚಮಚ ಮೊಟ್ಟೆಕವಚದ ಪುಡಿ ಮತ್ತು ಒಂದು ದೊಡ್ಡಚಮಚ ಜೇನು ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಕಲೆಗಳಿರುವ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಸುಮಾರು ಎರಡರಿಂದ ಮೂರು ಗಂಟೆ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಒಂದೇ ವಾರದಲ್ಲಿ ಕಲೆ ಕಡಿಯಾಗತೊಡಗಿರುವುದನ್ನು ಗಮನಿಸಬಹುದು.

ಚರ್ಮದ ಕಾಂತಿ ಹೆಚ್ಚಿಸಲು

ಚರ್ಮದ ಕಾಂತಿ ಹೆಚ್ಚಿಸಲು

ಒಂದು ಮೊಟ್ಟೆಯ ಬಿಳಿಭಾಗ ಮತ್ತು ಸುಮಾರು ಅಷ್ಟೇ ಪ್ರಮಾಣದ ಮೊಟ್ಟೆಕವಚದ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ತೆಳುವಾಗಿ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಸುಮಾರು ಒಂದು ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೆರಡು ಬಾರಿ ಈ ವಿಧಾನ ಅನುಸರಿಸುವ ಮೂಲಕ ಚರ್ಮದ ಕಾಂತಿ ಹೆಚ್ಚುತ್ತದೆ.

ಮೊಟ್ಟೆಕವಚದ ಮುಖಲೇಪ

ಮೊಟ್ಟೆಕವಚದ ಮುಖಲೇಪ

ಈ ಮುಖಲೇಪ ಅಥವಾ ಮಾಸ್ಕ್ ತಯಾರಿಸಲು ಒಂದು ದೊಡ್ಡಚಮಚ ಸಕ್ಕರೆ ಮತ್ತು ಒಂದು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿ. ಇದಕ್ಕೆ ಒಂದು ದೊಡ್ಡಚಮಚ ಮೊಟ್ಟೆಕವಚದ ಪುಡಿ ಸೇರಿಸಿ ಕಲಕಿ ದಪ್ಪನಾದ ಲೇಪನ ತಯಾರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಟ್ಟೆಕವಚದ ಮುಖಲೇಪ

ಮೊಟ್ಟೆಕವಚದ ಮುಖಲೇಪ

ಇದನ್ನು ಮುಖಕ್ಕೆ ಹಚ್ಚುವ ಮೊದಲು ತಣ್ಣೀರಿನಿಂದ ಚೆನ್ನಾಗಿ ಮುಖ ತೊಳೆದುಕೊಂಡು ಪೂರ್ಣವಾಗಿ ಒಣಗುವವರೆಗೆ ಕಾದು ಬಳಿಕ ಈ ಲೇಪನವನ್ನು ದಪ್ಪನಾಗಿ ಹಚ್ಚಿ. ಸುಮಾರು ಇಪ್ಪತ್ತು ನಿಮಿಷ ಅಥವಾ ಅರ್ಧಘಂಟೆ ಬಿಟ್ಟು ಸಿಪ್ಪೆ ಸುಲಿದಂತೆ ಈ ಲೇಪನವನ್ನು ನಿವಾರಿಸಿ ತಣ್ಣೀರಿನಿಂದ ತೊಳೆದುಕೊಳ್ಳಿ.

ಮುಖದ ನೆರಿಗೆಗಳನ್ನು ನಿವಾರಿಸಲು

ಮುಖದ ನೆರಿಗೆಗಳನ್ನು ನಿವಾರಿಸಲು

ಮುಖದ ನೆರಿಗೆ ನಿವಾರಿಸಿ ನವತಾರುಣ್ಯವನ್ನು ಹಿಂದೆ ಪಡೆಯಲು ಸುಲಭವಾದ ವಿಧಾನ ಹೀಗಿದೆ: ಒಂದು ಚಿಕ್ಕ ಪಾತ್ರೆಯಲ್ಲಿ ಒಂದು ದೊಡ್ಡಚಮಚ ಮೊಟ್ಟೆಯ ಬಿಳಿಭಾಗ, ಒಂದು ಚಿಕ್ಕಚಮಚ ಬೆಲ್ಲ ಮತ್ತು ಒಂದೇ ಮೊಟ್ಟೆಯ ಕವಚದ ಪುಡಿ ಸೇರಿಸಿ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಮುಖ ಮತ್ತು ಇತರ ಭಾಗಗಳಿಗೆ ತೆಳುವಾಗಿ ಹಚ್ಚಿ. ವಿಶೇಷವಾಗಿ ಕಲೆ ಮತ್ತು ನೆರಿಗೆಗಳಿರುವಲ್ಲಿ ಎರಡು ಮೂರು ಬಾರಿ ಹಚ್ಚಿ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಹಲ್ಲುಗಳನ್ನು ಬಿಳುಪುಗೊಳಿಸಲು

ಹಲ್ಲುಗಳನ್ನು ಬಿಳುಪುಗೊಳಿಸಲು

ಮಪ್ರಮಾಣದಲ್ಲಿ ಮಸಿಕೆಂಡ ಅಥವಾ ಇದ್ದಲಿನ ಪುಡಿ ಮತ್ತು ಮೊಟ್ಟೆಯ ಕವಚದ ಪುಡಿಯನ್ನು ಬೆರೆಸಿ ನುಣ್ಣನೆಯ ಪುಡಿಯಾಗುವಂತೆ ಅರೆಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಲ್ಲುಗಳನ್ನು ಬಿಳುಪುಗೊಳಿಸಲು

ಹಲ್ಲುಗಳನ್ನು ಬಿಳುಪುಗೊಳಿಸಲು

ಈ ಪುಡಿಯಿಂದ ವಾರಕ್ಕೆರಡು ಬಾರಿ ಹಲ್ಲುಜ್ಜಿಕೊಳ್ಳುವ ಮೂಲಕ ಹಲ್ಲುಗಳು ಸಹಜವರ್ಣವನ್ನು ಪಡೆಯುವುದು ಮಾತ್ರವಲ್ಲ ಹೊಳಪನ್ನೂ ಪಡೆಯುತ್ತವೆ. ಒಸಡು ಸಹಾ ಯಾವುದೇ ಕಾಯಿಲೆ ಇಲ್ಲದೇ ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ.

ಸತ್ತ ಜೀವಕೋಶಗಳನ್ನು ನಿವಾರಿಸಲು

ಸತ್ತ ಜೀವಕೋಶಗಳನ್ನು ನಿವಾರಿಸಲು

ಚರ್ಮದ ಸತ್ತ ಜೀವಕೋಶಗಳು ತೆಳುವಾದ ಪುಡಿಯ ರೂಪದಲ್ಲಿ ಚರ್ಮಕ್ಕೆ ಅಂಟಿಕೊಂಡಿರುತ್ತದೆ. ಇದನ್ನು ನಿವಾರಿಸಲು ಸಮಪ್ರಮಾಣದಲ್ಲಿ ಲೋಳೆಸರ ಅಥವಾ ಅಲೋವೆರಾ ಸಸ್ಯದ ರಸವನ್ನು ಬೆರೆಸಿ ಈ ಮಿಶ್ರಣದಿಂದ ಚರ್ಮವನ್ನು ನಯವಾದ ಮಸಾಜ್ ಮೂಲಕ ಹಚ್ಚಿಕೊಳ್ಳಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸತ್ತ ಜೀವಕೋಶಗಳನ್ನು ನಿವಾರಿಸಲು

ಸತ್ತ ಜೀವಕೋಶಗಳನ್ನು ನಿವಾರಿಸಲು

ಇದರಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ಸತ್ತ ಜೀವಕೋಶಗಳು ಚರ್ಮಕ್ಕೆ ಅಂಟಿಕೊಂಡಿರುವುದು ಸಡಿಲವಾಗುತ್ತದೆ. ಇದನ್ನು ಸುಲಭವಾಗಿ ನಿವಾರಿಸಬಹುದು. ಪರಿಣಾಮವಾಗಿ ಚರ್ಮಕ್ಕೆ ಹೊಸ ಕಳೆಬರುತ್ತದೆ ಹಾಗೂ ಕಾಂತಿಯುಕ್ತವಾಗುತ್ತದೆ.

X
Desktop Bottom Promotion