For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆ ಫೇಸ್ ಪ್ಯಾಕ್-ಬರೀ ಒಂದೇ ತಿಂಗಳಲ್ಲಿ ರಿಸಲ್ಟ್!

ಮುಖದ ಕಾಂತಿಯನ್ನು ಮರಳಿ ಪಡೆಯಲು ನೈಸರ್ಗಿಕವಾಗಿರುವ ಯಾವುದೇ ಅಡ್ಡಪರಿಣಾಮ ಬೀರದಿರುವ ಆಲೂಗಡ್ಡೆಯ ಫೇಸ್ ಮಾಸ್ಕ್ ಅನ್ನು ಒಮ್ಮೆ ಪ್ರಯತ್ನನಿಸಿ ನೋಡಿ....

By Hemanth
|

ದಿನನಿತ್ಯದ ಓಡಾಟದಲ್ಲಿ ಸಮಯದ ಅಭಾವದಿಂದ ನಮ್ಮ ದೇಹದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸಿಕೊಂಡು ಮುಖದ ಕಾಂತಿಯನ್ನು ಕೆಡಿಸಿಕೊಳ್ಳುತ್ತೇವೆ.

ಸಾಮಾನ್ಯವಾಗಿ ಸೂರ್ಯನ ಯುವಿ ಕಿರಣಗಳು ಕೂಡ ಮುಖದ ಮೇಲೆ ಬಿದ್ದು ಕಲೆಯನ್ನು ಉಂಟು ಮಾಡಿರುತ್ತದೆ. ಇಂತಹ ಸಮಯದಲ್ಲಿ ಕೇವಲ ಮಾಯಿಶ್ಚರೈಸರ್ ಹಚ್ಚಿದರೆ ಸಾಲದು, ಬದಲಿಗೆ ಕೆಲವೊಂದು ನೈಸರ್ಗಿಕ ಫೇಸ್ ಪ್ಯಾಕ್ ಗಳನ್ನು ಪ್ರಯತ್ನಿಸುವುದೇ ಜಾಣತನ.... ಹಾಗಾಗಿ ಮುಖದ ಕಾಂತಿಯನ್ನು ಮರಳಿ ಪಡೆಯಲು ನೈಸರ್ಗಿಕವಾಗಿರುವ ಯಾವುದೇ ಅಡ್ಡಪರಿಣಾಮ ಬೀರದಿರುವ ಆಲೂಗಡ್ಡೆಯ ಫೇಸ್ ಮಾಸ್ಕ್ ನ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಕೂದಲಿನ ಸಮೃದ್ಧ ಪೋಷಣೆಗೆ ಆಲೂಗಡ್ಡೆ ಜ್ಯೂಸ್

potato face mask

ಸೂಚನೆ: ಆಲೂಗಡ್ಡೆಯಿಂದ ತಯಾರಿಸಿರುವ ಈ ಮಾಸ್ಕ್ ಅನ್ನು ಪ್ರಯೋಗಿಸುವ ಮೊದಲು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುತ್ತದೆಯಾ ಎಂದು ದೇಹದ ಯಾವುದೇ ಭಾಗಕ್ಕೆ ಸ್ವಲ್ಪ ಹಚ್ಚಿಕೊಂಡು ಪರೀಕ್ಷಿಸಬಹುದು. ಇದರಿಂದ ಯಾವುದೇ ಅಲರ್ಜಿ ಆಗುವುದಿದ್ದರೆ ನಿಮಗೆ ತಿಳಿಯುವುದು.

ತ್ವಚೆಯ ಕಾಂತಿ ಹೆಚ್ಚಿಸುವ ಆಲೂಗಡ್ಡೆ ಮಾಸ್ಕ್

*ಒಂದು ಆಲೂಗಡ್ಡೆ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಕೊಂಡು ಅದರ ರಸ ತೆಗೆಯಿರಿ.
*ಈ ರಸವನ್ನು ಪ್ರಿಡ್ಜ್ ನಲ್ಲಿಟ್ಟು ತಂಪಾಗಲು ಬಿಡಿ.
*ಇನ್ನು ಈ ರಸದಿಂದ ಮುಖವನ್ನು ಸ್ವಚ್ಛಗೊಳಿಸಿ.
*ತದನಂತರ ಒಂದು ಹತ್ತಿ ಉಂಡೆಯನ್ನು ಈ ರಸದಲ್ಲಿ ಮುಳುಗಿಸಿ ಅದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
ಚರ್ಮವು ಇದನ್ನು ಸರಿಯಾಗಿ ಹೀರಿಕೊಳ್ಳಲು ಬಿಡಿ ಮತ್ತು ತಂಪಾದ ನೀರಿನಿಂದ ಇದನ್ನು ತೊಳೆಯಿರಿ.
*ವಾರದಲ್ಲಿ 2-3 ಸಲ ಹೀಗೆ ಮಾಡಿದರೆ ಕಾಂತಿಯುತ ತ್ವಚೆಯು ನಿಮ್ಮದಾಗುವುದು.

ಕಲೆ ನಿವಾರಣೆಯ ಮಾಸ್ಕ್

*ಒಂದೇ ಪ್ರಮಾಣದ ಟೊಮೆಟೋ ರಸ ಹಾಗೂ ಆಲೂಗಡ್ಡೆ ರಸವನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಇನ್ನು ಈ ಮಿಶ್ರಣವನ್ನು ತ್ವಚೆಗೆ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
*30 ನಿಮಿಷ ಹಾಗೆ ಬಿಟ್ಟು ಬಳಿಕ ತಂಪಾದ ನೀರಿನಿಂದ ತೊಳೆಯಿರಿ.
ಬೆಟಾ ಕ್ಯಾರೊಟಿನ್ ಹಾಗೂ ಆ್ಯಂಟಿ ಆಕ್ಸಿಡೆಂಟ್ ಅನ್ನು ಒಳಗೊಂಡಿರುವ ಈ ಮಾಸ್ಕ್ ಕಲೆಯನ್ನು ತೆಗೆದು ತ್ವಚೆಗೆ ಕಾಂತಿ ನೀಡುವುದು.

ಆಲೂಗಡ್ಡೆ+ನಿಂಬೆರಸ+ ಚಿಟಿಕೆಯಷ್ಟು ಅರಿಶಿನ

*ಅರ್ಧ ಆಲೂಗಡ್ಡೆಯನ್ನು ತುರಿದುಕೊಂಡು ಅದಕ್ಕೆ ನಿಂಬೆರಸ ಮತ್ತು ಒಂದು ಚಿಟಿಕೆ ಅರಿಶಿನ ಹಾಗೂ ಬೇಕಾದ ಪ್ರಮಾಣದ ರೋಸ್ ವಾಟರ್ ಹಾಕಿಕೊಳ್ಳಿ. ಮುಖವನ್ನು ತೊಳೆದು ಈ ಮಿಶ್ರಣವನ್ನು ಸರಿಯಾಗಿ ಹಚ್ಚಿಕೊಳ್ಳಿ.
*15ರಿಂದ 30 ನಿಮಿಷ ಕಾಲ ಇದನ್ನು ಚರ್ಮವು ಹೀರಿಕೊಳ್ಳಲು ಬಿಡಿ.
*ತದನಂತರ ಸ್ಕ್ರಬ್ ಮಾಡಿ ಅದು ಒಣಗಲು ಬಿಡಿ. ಈ ಮಾಸ್ಕ್ ನಲ್ಲಿ ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಇರುವುದರಿಂದ ಕಾಂತಿ ಹಾಗೂ ಪೋಷಕಾಂಶವನ್ನು ನೀಡುವುದು.

English summary

potato face mask recipes for brighter skin tone in a month

Natural bleaching properties in potato remove skin tan, lighten pigmentation and remove dark spots. Vitamin B complex, on the other hand, improves the skin's elasticity and tightens skin tone.
X
Desktop Bottom Promotion