For Quick Alerts
ALLOW NOTIFICATIONS  
For Daily Alerts

ಚಿನ್ನದ ದೇವತೆ 'ಅರಿಶಿನದ' ಸೌಂದರ್ಯ ಗುಣಗಳು

By Jaya
|

ಅರಿಶಿನವನ್ನು ಮಸಾಲೆಗಳಲ್ಲೇ ರಾಜನೆಂದೂ ಹಾಗೂ ಅರಿಶಿನಕ್ಕೆ ಮನೆಯ ಆಹಾರ ಪದಾರ್ಥಗಳಲ್ಲೇ ಹೆಚ್ಚು ಪ್ರಾತಿನಿಧ್ಯವನ್ನು ನೀಡಲಾಗಿದೆ. ಚರ್ಮ ಸಂಬಂಧಿತ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಮನೆಯಲ್ಲಿಯೇ ಸುಲಭವಾಗಿ ಸಿಗುವ ಔಷಧೀಯ ಪದಾರ್ಥವೆಂದರೆ ಅದು ಖಂಡಿತ ಅರಿಶಿನವೇ ಆಗಿರುತ್ತದೆ.

ಇದನ್ನು ಅಡುಗೆಯ ಹೊರತಾಗಿ ಕೂಡ ಸೌಂದರ್ಯವರ್ಧಕವಾಗಿ ಭಾರತದಲ್ಲಿ ಹಾಗೂ ಚೀನಾದಲ್ಲಿ ಹೆಚ್ಚು ಬಳಸಲಾಗುತ್ತಿದೆ. ಇದರಲ್ಲಿರುವ ನೈಸರ್ಗಿಕ ಸತ್ವಗಳು ಹೇರಳವಾಗಿದ್ದು, ಚರ್ಮ ಸಂಬಂಧಿತ ಸಮಸ್ಯೆಗಳನ್ನು ಶೀಘ್ರವಾಗಿ ತೊಲಗಿಸುತ್ತದೆ. ಅದರಲ್ಲೂ ಭಾರತೀಯ ಸಾಂಬಾರು ಪದಾರ್ಥಗಳಲ್ಲಿ ಅರಶಿನಕ್ಕೆ ಮಹತ್ವದ ಸ್ಥಾನವಿದೆ.

 A Perfect Turmeric Face Pack For Multiple Uses

ನಿಮ್ಮ ಸಂಪೂರ್ಣ ಮತ್ತು ತ್ವಚೆಗೆ ಅನೂಹ್ಯ ಪ್ರಯೋಜನವನ್ನು ಒದಗಿಸುವ ಈ ಸಾಂಬಾರು ಪದಾರ್ಥಗಳ ರಾಜ, ರೋಗ ರುಜಿನಗಳಿಗೆ ರಾಮ ಬಾಣವಿದ್ದಂತೆ. ದೇಹದಲ್ಲಿ ವಿಷ ಜಂತುಗಳು ಕಚ್ಚಿದಾಗ ನಂಜು ಏರದಂತೆ ಅರಿಶಿನವನ್ನು ಲೇಪಿಸುತ್ತಾರೆ ಅಂತೆಯೇ ಅರಿಶಿನ ಬೆರೆಸಿದ ಹಾಲು ದಣಿವು, ಆಯಾಸ, ದೇಹದ ನೋವನ್ನು ತಕ್ಷಣ ಉಪಶಮನ ಮಾಡುವ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ. ಅರಿಶಿನ v/s ಶುಂಠಿ: ಇವೆರಡೂ ಒಂದೇ ನಾಣ್ಯದ ಎರಡು ಮುಖ!

ಅನಾದಿ ಕಾಲದಿಂದಲೂ ಭಾರತದಲ್ಲಿ ಸೌಂದರ್ಯದ ವೃದ್ಧಿಗಾಗಿ ಹೊಳೆಯುವ ತ್ವಚೆಗಾಗಿ ಅರಿಶಿನವನ್ನು ಬಳಸುತ್ತಿದ್ದಾರೆ. ಮುಖದ ಮೊಡವೆ, ಕಪ್ಪು ಕಲೆಗಳನ್ನು ಹೋಗಲಾಡಿಸಲು, ಸೂರ್ಯನ ಶಾಖದ ಹಾನಿಯಿಂದ ತಪ್ಪಿಸಲು, ವಯಸ್ಸಾಗುವಿಕೆಯನ್ನು ತಡೆಯಲು ಹೀಗೆ ಹತ್ತು ಹಲವು ಪ್ರಯೋಜನಗಳ ಸರಮಾಲೆಯನ್ನೇ ಅರಿಶಿನ ನಮಗೆ ಒದಗಿಸುತ್ತದೆ.

ಇಂದಿನ ಲೇಖನದಲ್ಲಿ ಮನೆಯಲ್ಲಿರುವ ವಸ್ತುಗಳನ್ನೇ ಅರಿಶಿನದೊಂದಿಗೆ ಬಳಸಿ ಸಿದ್ಧಪಡಿಸಲಾದ ಫೇಸ್ ಪ್ಯಾಕ್ ನಿಮ್ಮ ಸೌಂದರ್ಯವನ್ನು ಕಂಗೊಳಿಸುವಂತೆ ಮಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ಹಲವಾರು ಬರೆಯ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿರುವ ಅರಿಶಿನದ ಫೇಸ್ ಪ್ಯಾಕ್ ವಿಧಾನವನ್ನು ಇಲ್ಲಿ ತಿಳಿಸುತ್ತಿದ್ದು ನೀವದನ್ನು ತಿಳಿದುಕೊಳ್ಳಿ

ಬೇಕಾಗಿರುವ ಸಾಮಾಗ್ರಿಗಳು
*2 ಚಮಚದಷ್ಟು ಕಡಲೆ ಹಿಟ್ಟು
*ಅರ್ಧ ಚಮಚ ಅರಿಶಿನ
*1 ಚಮಚ ಬಾದಾಮಿ ಎಣ್ಣೆ
*ಹಾಲು

*ಮೊದಲಿಗೆ ಒಂದು ಪಾತ್ರೆಯಲ್ಲಿ, ಎರಡು ಚಮಚ ಕಡಲೆ ಹಿಟ್ಟಿಗೆ ಅರಿಶಿನವನ್ನು ಸೇರಿಸಿಕೊಳ್ಳಿ. ನಂತರ ಬಾದಾಮಿ ಎಣ್ಣೆಯನ್ನು ಇದಕ್ಕೆ ಮಿಶ್ರ ಮಾಡಿ ಸ್ವಲ್ಪ ಹಾಲು ಹಾಕಿ ಪೇಸ್ಟ್ ತಯಾರಿಸಿ
*ಹಾಲನ್ನು ಮಿಶ್ರಣಕ್ಕೆ ಪೇಸ್ಟ್ ತಯಾರಿಯಾಗುವಂತೆ ಬಳಸಿಕೊಂಡರೆ ಸಾಕು. ಹೆಚ್ಚು ಹಾಲನ್ನು ಬಳಸದಿರಿ, ಇದರಿಂದ ಪೇಸ್ಟ್ ನೀರಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಮುಖ, ಕುತ್ತಿಗೆಯ ಭಾಗಕ್ಕೆ ಈ ಮಿಶ್ರಣವನ್ನು ಲೇಪಿಸಿಕೊಳ್ಳಿ. 20 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.


*ಫೇಸ್ ಪ್ಯಾಕ್ ಪೇಸ್ಟ್ ಇನ್ನೂ ಉಳಿದಿದೆ ಎಂದಾದಲ್ಲಿ ಅದನ್ನು ಹಾಗೆಯೇ ವಾರಗಳವರೆಗೆ ಬಳಸಬಹುದಾಗಿದೆ. ಈ ಫೇಸ್ ಪ್ಯಾಕ್ ಅನ್ನು ಬಳಸಿದ ನಂತರ ನಿಮ್ಮು ಮುಖದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ನಿಮಗೆ ಗಮನಿಸಿಕೊಳ್ಳಬಹುದಾಗಿದೆ.
*ಮುಖದಲ್ಲಿ ಅರಿಶಿನದ ಪರಿಣಾಮದಿಂದ ತ್ವಚೆ ಕಳೆಗುಂದಿದಂತೆ ಕಂಡುಬಂದರೂ ಬಣ್ಣ ಮಾಸಿದಂತೆ ತ್ವಚೆ ಹೊಳೆಯುವಿಕೆಯನ್ನು ಪಡೆದುಕೊಳ್ಳುತ್ತದೆ. ನಿಯಮಿತವಾಗಿ ಇದನ್ನು ಬಳಸುವುದರಿಂದ ಕಪ್ಪು ಕಲೆಗಳ ನಿವಾರಣೆಯಾಗಿ, ವಯಸ್ಸಾಗುವಿಕೆಯ ಲಕ್ಷಣಗಳು ಇಳಿಕೆಯಾಗುತ್ತದೆ ಅಂತೆಯೇ ಕಪ್ಪು ವರ್ತುಲಗಳೂ ನಿವಾರಣೆಯಾಗುತ್ತದೆ. ಹಾಗಿದ್ದರೆ ತಡ ಮಾಡದೇ ಈ ಫೇಸ್ ಪ್ಯಾಕ್‎ ಹಚ್ಚಿಕೊಳ್ಳಲು ಆರಂಭಿಸಿ.
English summary

A Perfect Turmeric Face Pack For Multiple Uses

Turmeric is known as the King of Spices in an Indian cuisine. However, it also has innumerable benefits on the skin and overall health. It is even said that drinking turmeric milk every day can cure you of many diseases, which you may be suffering from. Turmeric has been widely used for beauty purposes in India, since centuries. It is even used as a mask for brides to make their skin glow and look radiant. So, the next time you see a cream or lotion claiming to sort out all your skin problems, I'd suggest you ignore them and just go and look in your kitchen instead.
X
Desktop Bottom Promotion