ಪಪ್ಪಾಯಿ ಹಣ್ಣಿನ ಫೇಸ್ ಪ್ಯಾಕ್-ಸ್ಟೆಪ್ ಬೈ ಸ್ಟೆಪ್ ಟಿಪ್ಸ್

By: manu
Subscribe to Boldsky

ವಿವಿಧ ಹಣ್ಣುಗಳನ್ನು ತ್ವಚೆಯ ಕಾಂತಿಯ ಕ್ರೀಮ್ ಹಾಗೂ ಮಾಸ್ಕ್‌ಗಳಲ್ಲಿ ಬಳಸುವುದನ್ನು ನಾವು ತಿಳಿದುಕೊಂಡಿದ್ದೇವೆ. ಅದೇ ರೀತಿ ಪಪ್ಪಾಯಿಯನ್ನು (ಪರಂಗಿ ಹಣ್ಣು) ಕೂಡ ತ್ವಚೆಯ ಆರೈಕೆಗಾಗಿ ಬಳಸಬಹುದು. ಇದು ತ್ವಚೆಗೆ ಕಾಂತಿ ನೀಡುವುದು ಮಾತ್ರವಲ್ಲದೆ ಚರ್ಮವನ್ನು ಸ್ವಚ್ಛಗೊಳಿಸುತ್ತದೆ.

ಇದರಲ್ಲಿರುವ ಪಪೈನ್ ಎನ್ನುವ ಅಂಶವು ಚರ್ಮವನ್ನು ಪುನಶ್ಚೇತನಗೊಳಿಸುತ್ತದೆ. ಪಪೈನ್ ಸತ್ತ ಚರ್ಮವನ್ನು ಕಿತ್ತು ಹಾಕಿ ಹೊಸ ಕೋಶಗಳನ್ನು ಉಂಟುಮಾಡುವುದು. ಪಪ್ಪಾಯಿಯ ಸೋಪ್ ಹಾಗೂ ಮೊಶ್ಚಿರೈಸರ್ ಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

Papaya face pack

ಪಪ್ಪಾಯಿಯನ್ನು ಸ್ಕ್ರಬ್ ಅಥವಾ ಮಾಸ್ಕ್ ಆಗಿ ಬಳಕೆ ಮಾಡುವುದರಿಂದ ಮುಖದಲ್ಲಿನ ಕಲೆಗಳು, ಮೊಡವೆಗಳು ಹಾಗೂ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಬಹುದು. ಪಪ್ಪಾಯದಿಂದ ಚರ್ಮಕ್ಕೆ ಆಗುವಂತಹ ಲಾಭಗಳು ಯಾವುದು ಎಂದು ತಿಳಿದುಕೊಳ್ಳುವ.   ಸೌಂದರ್ಯದ ಮಾಂತ್ರಿಕ ಶಕ್ತಿ ಪರಂಗಿಯಲ್ಲಿದೆ

*ಚೆನ್ನಾಗಿ ಹಣ್ಣಾಗಿರುವ ಪಪ್ಪಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗೆಯಿರಿ. ಈಗ ಪಪ್ಪಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷ ಹಾಗೆ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಿ. ಚರ್ಮಕ್ಕೆ ಮೊಶ್ಚಿರೈಸ್ ನೀಡಲು ಇದು ಸುಲಭ ವಿಧಾನ. ಪಪ್ಪಾಯಿ ಹಣ್ಣಿನ 'ಹೇರ್ ಪ್ಯಾಕ್' ಪಕ್ಕಾ ನೈಸರ್ಗಿಕ ಚಿಕಿತ್ಸೆ...   

Papaya face pack

*ಚೆನ್ನಾಗಿ ಬಲಿತಿರುವ ಪಪ್ಪಾಯಿಯನ್ನು ಹಿಚುಕಿಕೊಳ್ಳಿ. ಇದಕ್ಕೆ ಜೇನುತುಪ್ಪ ಮತ್ತು ಅಕ್ಕಿಹಿಟ್ಟು ಹಾಕಿಕೊಳ್ಳಿ. ಈ ಮಾಸ್ಕ್ ನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷ ಕಾಲ ಹಾಗೆ ಬಿಡಿ. ವಾರದಲ್ಲಿ ಮೂರು ದಿನ ಹಚ್ಚಿಕೊಂಡರೆ ಒಳ್ಳೆಯ ಚರ್ಮವನ್ನು ಪಡೆಯಬಹುದು.

* ಪಪ್ಪಾಯಿಯ ತಿರುಳಿಗೆ ಮೊಸರು, ನಿಂಬೆರಸ, ಜೇನುತುಪ್ಪ ಮತ್ತು ಮೊಟ್ಟೆಯ ಬಿಳಿ ಲೋಳೆಯನ್ನು ಹಾಕಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ. ಮುಖದ ಮೇಲೆ ಹಚ್ಚಿಕೊಂಡು 15 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ ಕಲೆಗಳನ್ನು ನಿವಾರಿಸುವುದು.

papaya peace
 

* ಪಪ್ಪಾಯದಿಂದ ದೇಹವನ್ನು ಸ್ಕ್ರಬ್ ಮಾಡಿಕೊಳ್ಳಬೇಕಾದರೆ ಪಪ್ಪಾಯಿ ತಿರುಳಿಗೆ ಉಪ್ಪು, ಜೇನುತುಪ್ಪ ಮತ್ತು ಆಲಿವ್ಎ ಣ್ಣೆಯನ್ನು ಹಾಕಿಕೊಳ್ಳಿ. ಈಗ ಸ್ಕ್ರಬ್ ಮಾಡಿಕೊಳ್ಳಿ. ಚರ್ಮದ ರಂಧ್ರಗಳು ತೆರೆದುಕೊಂಡಿದ್ದಲ್ಲಿ ಹಸಿ ಪಪ್ಪಾಯಿಯಿಂದ ಸ್ಕ್ರಬ್ ಮಾಡಿಕೊಳ್ಳಿ.  ಪಪ್ಪಾಯ ನಿಜವಾಗಿಯೂ ಮುಟ್ಟಾಗುವಂತೆ ಮಾಡುತ್ತದೆಯಾ?    

papaya face pack

ಪಪ್ಪಾಯಿಯಿಂದ ಚರ್ಮಕ್ಕೆ ಆಗುವಂತಹ ಲಾಭಗಳು ಅಪಾರ. ಪಪ್ಪಾಯಿಯನ್ನು ಬಳಸಿಕೊಂಡು ಪೇಶಿಯಲ್ ಮಾಡಿ ಕೆಲವೇ ವಾರಗಳಲ್ಲಿ ಮುಖದ ಕಾಂತಿ ಬದಲಾವಣೆ ಆಗುವುದನ್ನು ನೋಡಿ. ಪಪ್ಪಾಯಿಯನ್ನು ಬಳಸಿದ ತಕ್ಷಣ ನಿಮಗೆ ಫಲಿತಾಂಶ ಕಂಡುಬರಲು ಸಾಧ್ಯವಿಲ್ಲ. ಇದನ್ನು ನಿಯಮಿತ ಹಾಗೂ ಸರಿಯಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಫಲಿತಾಂಶ ಸಿಗಬಹುದು.

Story first published: Thursday, November 24, 2016, 15:00 [IST]
English summary

Papaya beauty tips For A Glowing Skin

Papaya benefits the skin and it is an effective fruit facial. Papaya not only cleanses the skin but it is also known for glowing the skin as it contains papain which promotes skin renewal and cell turnover. Papain in papaya benefits skin by exfoliating it to reveal new cells and soften at the same time.
Please Wait while comments are loading...
Subscribe Newsletter