For Quick Alerts
ALLOW NOTIFICATIONS  
For Daily Alerts

ನಳನಳಿಸುವ ತ್ವಚೆಗೆ, ಒಂದಿಷ್ಟು ನೈಸರ್ಗಿಕ ಟಚ್...

By Suma
|

ಇತ್ತೀಚಿನ ಯುವ ಜನತೆಯರು, ಹೆಚ್ಚು ಪ್ರಚಾರ ಹೊಂದುತ್ತಿರುವ ಮತ್ತು ಕಳಪೆ ಉತ್ಪನ್ನಗಳ ಪ್ರಚಾರಿತ ಜಾಹೀರಾತುಗಳನ್ನು ಗಮನಿಸಿ ತಮ್ಮ ಸಮಯ, ಹಣ ಮತ್ತು ನಿಜ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವರಿಗಂತೂ ಮತ್ತೊಬ್ಬರ ತ್ವಚೆಯ ಮೇಲೇ ಕಣ್ಣಿರುತ್ತದೆ. ಅವರು ಬಳಸುವ ಉತ್ಪನ್ನಗಳನ್ನೇ ತಾನೂ ಬಳಸಬೇಕು. ತಾನೂ ಸಹ ಅವರಂತೆ ಅಂದವಾಗಿರಬೇಕು ಎಂದು ಕಳಪೆ ಗುಣಮಟ್ಟದ ರಾಸಾಯನಿಕ ಉತ್ಪನ್ನಗಳತ್ತ ಮೊರೆಹೋಗುತ್ತಿದ್ದಾರೆ. ಸೌಂದರ್ಯವನ್ನು ಅಪೇಕ್ಷಿಸುವುದು ತಪ್ಪಲ್ಲ. ಅದು ಮಾನವನ ಸಹಜ ಗುಣ. ಆದರೆ ಸೌಂದರ್ಯವನ್ನು ಹೊಂದುವ ದಾರಿಯ ಕಡೆ ಸ್ವಲ್ಪ ಸರಿಯಾಗಿ ಆಲೋಚಿಸುವುದು ಸೂಕ್ತ.

ತಪ್ಪು ಗ್ರಹಿಕೆಯಿಂದ ಬಳಸಿದ ರಾಸಾಯನಿಕ ಉತ್ಪನ್ನಗಳು ನಿಮಗೆ ದೀರ್ಘಾವಧಿಯಲ್ಲಿ ಚರ್ಮದ ಕಾಂತಿಯನ್ನು ಕುಂದಿಸಿ ಅಡ್ಡಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ಕೆಲವರು ರಾಸಾಯನಿಕ ವಿಧಾನ ಬಳಸಿದರೆ ಮತ್ತೆ ಕೆಲವರು ಪ್ರಾಕೃತಿಕ ವಿಧಾನಗಳನ್ನು ಅನುಸರಿಸುತ್ತಾರೆ. ಆದರೆ ರಾಸಾಯನಿಕ ಕಾಸ್ಮೆಟಿಕ್ಸ್‌ಗಳು ಕ್ಷಣಿಕವಾಗಿ ನಿಮಗೆ ಅಂದವನ್ನು ನೀಡಬಹುದೇ ಹೊರತು ದೀರ್ಘಕಾಲಕ್ಕೆ ಅದು ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಹೆಚ್ಚು ಸೂಕ್ತವಾಗಿದ್ದು, ಮನೆಯಲ್ಲಿಯೇ ಸುಲಭವಾಗಿ ಸಿಗುವ ಪದಾರ್ಥಗಳಿಂದ ತ್ವಚೆಯ ಅಂದವನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು. ಇದು ಸುರಕ್ಷಿತವೂ ಹೌದು. ಅಲ್ಲದೇ, ತ್ವಚೆಯ ಅಂದವನ್ನು ಹೆಚ್ಚಿಸಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳಿತು.

Overnight Face Masks For A Glowing Skin

ಅದರಲ್ಲಿಯೂ ಸರಿಯಾಗಿ ನಿದ್ರಿಸುವ ವಿಧಾನ, ಕ್ರಮವಾದ ಆಹಾರ ಪದ್ಧತಿ, ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಿಸುವುದು, ನಿಮಗೆ ಹೊಂದುವ ಸರಿಯಾದ ಆಹಾರವನ್ನು ಸೇವಿಸುವುದು, ಕ್ರಮವಾದ ವ್ಯಾಯಾಮ, ಇತ್ಯಾದಿ ಕ್ರಿಯೆಗಳಿಂದ ನಿಮ್ಮ ಚರ್ಮದ ಅಂದವನ್ನು ದಿನೇದಿನೇ ಹೆಚ್ಚಿಸಬಹುದು. ಆದ್ದರಿಂದ, ಈ ಬೊಲ್ಡ್ ಸ್ಕೈ ತಾಣದಲ್ಲಿ ನಿಮಗಾಗಿ ಕೆಲವು ಪರಿಣಾಮಕಾರಿಯಾದ ಫೇಸ್ ಮಾಸ್ಕ್ ಅನ್ನು ಬಳಸುವ ಕೆಲ ವಿಶಿಷ್ಟ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಈ ನೈಸರ್ಗಿಕ ವಿಧಾನಗಳನ್ನು ಒಮ್ಮೆ ಪ್ರಯತ್ನಿಸಿ ವ್ಯತ್ಯಾಸ ತಿಳಿಯಿರಿ.

ಬಾದಾಮಿ ಮತ್ತು ಜೊಜೊಬಾ ತೈಲದ ಫೇಸ್ ಮಾಸ್ಕ್
ಪರಿಣಾಮಕಾರಿ ಫೇಸ್ ಮಾಸ್ಕ್ ವಿಧಗಳಲ್ಲಿ ಬಾದಾಮಿ ಮತ್ತು ಜೊಜೊಬಾ ತೈಲದ ಫೇಸ್ ಮಾಸ್ಕ್ ಸಹ ಒಂದು. 2 ಚಮಚ ಬಾದಾಮಿ ತೈಲಕ್ಕೆ 2 ರಿಂದ 3 ಚಮಚ ಜೊಜೊಬಾ ತೈಲವನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ವೃತ್ತಾಕಾರದಲ್ಲಿ ನಿಮ್ಮ ತ್ವಚೆಯ ಚರ್ಮಕ್ಕೆ ನಯವಾಗಿ ತಿಕ್ಕಿ. ಇದು ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ತ್ವಚೆಗೆ ಉತ್ತಮ ಕಾಂತಿಯನ್ನು ನೀಡುತ್ತದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಇ ಸತ್ವವು ನಿಮ್ಮ ಚರ್ಮಕ್ಕೆ ಹೆಚ್ಚಿನ ಆರೈಕೆ ನೀಡುತ್ತದೆ.

ಲಿಂಬೆ ಮತ್ತು ಹಾಲಿನ ಕ್ರೀಮ್
ತ್ವಚೆಯ ಕಾಂತಿಯನ್ನು ಹೆಚ್ಚಿಸಲು ರಾತ್ರಿ ಮಲಗುವಾಗ ಲಿಂಬೆ ಮತ್ತು ಹಾಲಿನ ಕ್ರೀಮ್ ಅನ್ನು ನಿಮ್ಮ ತ್ವಚೆಗೆ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದಾಗ ತ್ವಚೆಯಲ್ಲಿನ ವ್ಯತ್ಯಾಸ ನಿಮಗೇ ತಿಳಿಯುತ್ತದೆ. 1 ಚಮಚ ಲಿಂಬೆ ರಸಕ್ಕೆ 1/4 ಚಮಚ ಹಾಲಿನ ಕ್ರೀಂ ಅನ್ನು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ರಾತ್ರಿ ಮಲಗುವಾಗ ಹಚ್ಚಿಕೊಂಡು ಬೆಳಗ್ಗೆ ಎದ್ದ ಕೂಡಲೇ ಸ್ವಚ್ಛಗೊಳಿಸಿ.

ಟೊಮೇಟೊ ಮತ್ತು ಜೇನು
ಟೊಮೇಟೊ ಚರ್ಮವನ್ನು ಬಿಗಿಗೊಳಿಸಿ ಸದೃಢಗೊಳಿಸುತ್ತದೆ. ಇದನ್ನು ಎಲ್ಲಾ ರೀತಿಯ ಚರ್ಮ ಹೊಂದಿದವರು ಬಳಸಬಹುದು. ಇದನ್ನು ಜೇನಿನೊಂದಿಗೆ ಬೆರೆಸಿಕೊಂಡರೆ ನಿಮ್ಮ ಚರ್ಮದ ಕಾಂತಿಯು ಹೆಚ್ಚಾಗುತ್ತದೆ. ಜೇನು ಮತ್ತು ಟೊಮೇಟೊ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ತ್ವಚೆಗೆ ನಯವಾಗಿ ಹಚ್ಚಿಕೊಳ್ಳಿ. ಒಂದು ರಾತ್ರಿ ಹಾಗೆಯೇ ಬಿಟ್ಟು, ಬೆಳಗ್ಗೆ ಎದ್ದ ಕೂಡಲೇ ನೀರಿನಿಂದ ಸ್ವಚ್ಛಗೊಳಿಸಿ.

ಅರಿಶಿನ-ಚಂದನದ ಮುಖಲೇಪನದ ಪೇಸ್ಟ್
ಅರಿಶಿನ-ಚಂದನದ ಮುಖಲೇಪನದ ಪೇಸ್ಟ್ ಒಂದು ವೇಳೆ ನಿಮ್ಮ ತ್ವಚೆಯ ಚರ್ಮದಲ್ಲಿ ಎಣ್ಣೆಯಂಶ ಕೊಂಚ ಹೆಚ್ಚಾಗಿದ್ದರೆ ಅರಿಶಿನದೊಂದಿಗೆ ಚಂದನದ ಪುಡಿ ಅಥವಾ ತೇದಿದ ದ್ರವವನ್ನು ಸೇರಿಸುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಇದಕ್ಕಾಗಿ ಅರಿಶಿನದ ಒಣ ಕೊಂಬು, ಚಂದನದ ಕೊರಡನ್ನು ಕಲ್ಲಿನ ಮೇಲೆ ತೇದಿ ಸಮಪ್ರಮಾಣದಲ್ಲಿ ಲೇಪನವನ್ನು ತಯಾರಿಸಿ. ಇದಕ್ಕೆ ದ್ರವವಾಗಿ ಹಸಿಹಾಲನ್ನು ಬಳಸಿ. ಈ ಲೇಪನ ಸಾಕಷ್ಟು ದಟ್ಟನೆ ಇರಬೇಕು, ಅಂದರೆ ಮುಖದ ಮೇಲೆ ಹಚ್ಚಿಕೊಂಡಾಗ ದ್ರವವಾಗಿ ನೀರಿನಂತೆ ಇಳಿಯಬಾರದು, ಅಷ್ಟು ಘನವಾಗಿರಲಿ.

ರಾತ್ರಿ ಮಲಗುವ ಮುನ್ನ ಈಗ ತಾನೇ ತೊಳೆದುಕೊಂಡ ಮುಖಕ್ಕೆ, ತುಟಿಗಳನ್ನು ಬಿಟ್ಟು ಇಡಿಯ ಮುಖ ಆವರಿಸುವಂತೆ ತೆಳುವಾಗಿ ಕೆಳಗಿನಿಂದ ಮೇಲಕ್ಕೆ ಸುಮಾರು ಮೂರು ನಿಮಿಷಗಳ ಕಾಲ ಮಸಾಜ್ಮಾ ಡುತ್ತಾ ಹಚ್ಚಿ. ಸ್ವತಃ ಹಚ್ಚುವುದಕ್ಕಿಂತ ಇನ್ನೊಬ್ಬರ ಸಹಾಯ ಪಡೆಯುವುದು ಲೇಸು. ಇದು ಕೊಂಚ ಉರಿ ತರಿಸಬಹುದು. ಬರೆಯ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಎಣ್ಣೆಚರ್ಮದವರಿಗೂ ಸೂಕ್ತವಾದ ವಿಧಾನವಾಗಿದ್ದು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅನುಸರಿಸಬಹುದಾಗಿದೆ. ಈ ಲೇಪದಿಂದ ಮುಖದ ಕಾಂತಿ ಹೆಚ್ಚುವುದು ಮತ್ತು ಎಣ್ಣೆಯಂಶವೂ ಕಡಿಮೆಯಾಗುವುದು

ನುಗ್ಗೆ ಎಲೆ-ಲಿಂಬೆ ರಸ

ಸುಮಾರು ಒಂದು ಮುಷ್ಠಿಯಷ್ಟು ನುಗ್ಗೆ ಎಲೆಗಳಿಗೆ ನಾಲ್ಕಾರು ಹನಿ ಲಿಂಬೆರಸ, ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗಂಧದ ಒಣ ಪುಡಿ (ಅಥವಾ ಹೊಟ್ಟು) ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. (ಕಲ್ಲಿನ ಮೇಲೆ ಅರೆದರೆ ಉತ್ತಮ, ಮಿಕ್ಸಿಯಲ್ಲಿ ಅರೆದರೆ ಬಿಸಿಯಾಗುವ ಮೂಲಕ ಎಲೆಗಳು ಗುಣಗಳನ್ನು ಕಳೆದುಕೊಳ್ಳಬಹುದು). ಈ ಲೇಪವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಬಳಸದಿರಿ. ಸಂಜೆ ಈ ಲೇಪನವನ್ನು ಹಚ್ಚಿ ಮರುದಿನ ಸ್ನಾನ ಮಾಡಿದರೆ ಉತ್ತಮ ಪರಿಣಾಮ ದೊರಕುತ್ತದೆ.
English summary

Overnight Face Masks For A Glowing Skin

Everyone wants a fair and glowing skin. To attain this using tons of cosmetics is not the only solution. Though cosmetics may give you instant results, they may damage the texture of your skin in the longer run. Therefore, it is advisable to use natural ways to get a glowing and radiant skin. In this article, we at Boldsky will be listing out some of the effective face masks that help you to get a glowing skin overnight.
Story first published: Saturday, January 30, 2016, 20:15 [IST]
X
Desktop Bottom Promotion