For Quick Alerts
ALLOW NOTIFICATIONS  
For Daily Alerts

ಗ್ರೀನ್ ಟೀ ಬ್ಯಾಗ್‌ನಲ್ಲಿ, ಅಡಗಿದೆ ಸಿಂಪಲ್ ಬ್ಯೂಟಿ ಸೀಕ್ರೆಟ್

By Jaya Subramanya
|

ಟೀ ಕುಡಿಯುವುದು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲದ ಮಾತು ಹೇಳಿ? ಕೆಲಸದ ಒತ್ತಡ ಇಲ್ಲವೇ ಕೊಂಚ ನಿರಾಳತೆಗಾಗಿ ಟೀ ಹೀರುವುದು ಇಂದಿನ ಜನಾಂಗದಲ್ಲಿ ಸರ್ವೇ ಸಾಮಾನ್ಯವಾಗಿದೆ. ಅಷ್ಟೇ ಏಕೆ ಬಿಡಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕೂಡ 'ಚಾಯ್ ಪರ್ ಚರ್ಚಾ' ಎಂಬ ವಿಚಾರ ಸಂಕೀರ್ಣವನ್ನೇ ಹಮ್ಮಿಕೊಂಡು ದೇಶದ ಸಮಸ್ಯೆಗಳನ್ನು ಚರ್ಚಿಸಲು, ಪರಿಹಾರಗಳನ್ನು ಕಂಡುಕೊಳ್ಳಲು ಚಹಾವನ್ನು ವೇದಿಕೆಯನ್ನಾಗಿ ರೂಪಿಸಿಕೊಂಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ.

Old Tea Bag Uses In Your Beauty Regimen

ಇದು ಸಾಮಾನ್ಯ ಚಹಾದ ಮಾತಾಗಿದ್ದರೆ ಗ್ರೀನ್ ಟೀ ಎಂಬ ಅದ್ಭುತ ಚಹಾವು ನಿಮ್ಮ ತ್ವಚೆಗೆ ಮಾಡಲಿರುವ ಸೌಂದರ್ಯ ಮತ್ತು ಆರೋಗ್ಯ ಪ್ರಯೋಜನಗಳ ಗುಟ್ಟನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ. ದೇಹದ ತೂಕ ನಿವಾರಣೆಗೆ ಮತ್ತು ನಿಮ್ಮನ್ನು ಉಲ್ಲಾಸವಾಗಿರಿಸಲು ಗ್ರೀನ್ ಟೀ ಹೇಗೆ ಸಹಕಾರಿಯೋ ಅಂತೆಯೇ ಬಳಸಿದ ಗ್ರೀನ್ ಟೀ ಯಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಹೆಚ್ಚಾಗಿ ಕಚೇರಿ ಮತ್ತು ಮನೆಗಳಲ್ಲಿ ಗ್ರೀನ್ ಟೀ ಬ್ಯಾಗ್‌ಗಳನ್ನು ಬಳಸಿ ನಂತರ ಅದನ್ನು ಕಸದ ಡಬ್ಬಿಗೆ ಹಾಕುತ್ತೀರಿ ತಾನೇ. ಆದರೆ ಇದನ್ನು ಹಾಗೆ ಮಾಡದೇ ನಿಮ್ಮ ಸೌಂದರ್ಯ ಚಿಕಿತ್ಸಕವಾಗಿ ಹೇಗೆ ಬಳಸಿಕೊಳ್ಳುವುದು ಎಂಬುದರ ಸುಳಿವು ಇಂದಿಲ್ಲಿ ನೀಡುತ್ತಿದ್ದೇವೆ. ಗ್ರೀನ್ ಟೀ ಬರಿಯ ಸೇವನೆಗೆ ಮಾತ್ರವಲ್ಲದೆ ಇದರಿಂದ ಇನ್ನಷ್ಟು ಅಂಶಗಳನ್ನು ಪ್ರಯೋಜನಗಳನ್ನು ಕಂಡುಕೊಳ್ಳಬಹುದಾಗಿದೆ. ಬನ್ನಿ ಆ ಪರಿಹಾರಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಹೊಳೆಯುವ ತ್ವಚೆಗಾಗಿ
ನಿಮ್ಮ ತ್ವಚೆಯನ್ನು ತ್ವರಿತವಾಗಿ ಹೊಳೆಯಿಸಿಕೊಳ್ಳಬೇಕು ಎಂದಾದಲ್ಲಿ, ಇಲ್ಲಿದೆ ನೋಡಿ ಆ ಚಮತ್ಕಾರವನ್ನು ಕಂಡುಕೊಳ್ಳುವ ವಿಧಾನ. ಗ್ರೀನ್ ಟೀ ಬ್ಯಾಗ್ ಅನ್ನು ಬಳಸಿಕೊಂಡು ಎರಡನೇ ಬಾರಿ ಚಹಾವನ್ನು ಸಿದ್ಧಪಿಡಿಸಿಕೊಂಡು ತಣ್ಣಗಾಗಲು ಬಿಡಿ, ಒಮ್ಮೆ ಇದು ತಣ್ಣಗಾದ ನಂತರ, ಇದರಲ್ಲಿಯೇ ಮುಖವನ್ನು ತೊಳೆದುಕೊಳ್ಳಿರಿ, ಹಾಗೂ ಸುಮಾರು 10 ನಿಮಿಷದ ನಂತರ ಸ್ವಚ್ಛವಾದ ತಣ್ಣೀರಿನಿಂದ ಇನ್ನೊಮ್ಮೆ ಮುಖವನ್ನು ತೊಳೆದುಕೊಳ್ಳಿ. ಹೀಗೆ ವಾರದಲ್ಲಿ ಎರಡು- ಮೂರು ಬಾರಿ ಮಾಡುವುದರಿಂದ, ನೀವು ಶುಭ್ರವಾದ ಮುಖಾರವಿಂದವನ್ನು ಪಡೆದುಕೊಳ್ಳುವಿರಿ.

ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್
ಗ್ರೀನ್ ಟೀಯಲ್ಲಿರುವ ಆಸ್ಟ್ರಿಇಂಜೆಂಟ್ ಮೃತಕೋಶಗಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ತ್ವಚೆಯನ್ನು ಬಿಗಿಗೊಳಿಸುತ್ತದೆ. ಬಳಸಿದ ಟಿ ಬ್ಯಾಗ್ ಅನ್ನು ಕಟ್ ಮಾಡಿ, ಇದರಲ್ಲಿರುವ ಚಹಾ ಪುಡಿಯನ್ನು ಪಾತ್ರೆಗೆ ಹಾಕಿಕೊಳ್ಳಿ ಇದಕ್ಕೆ ಒಂದು ಚಮಚದಷ್ಟು ಕೋರ್ಸ್ ಬ್ರೌನ್ ಶುಗರ್ ಹಾಗೂ ಸ್ವಲ್ಪ ನೀರನ್ನು ಬೆರೆಸಿ, ಪೇಸ್ಟ್ ನಂತೆ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ ಅಂತೆಯೇ ವೃತ್ತಾಕಾರದಲ್ಲಿ ಮುಖಕ್ಕೆ ಮಸಾಜ್ ಮಾಡಿ. ತದನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಕೂದಲಿನ ಹೊಳಪಿಗೆ
ಗ್ರೀನ್‌ಟೀಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಕೂದಲು ಉದುರುವುದನ್ನು ತಪ್ಪಿಸುತ್ತದೆ, ಡ್ಯಾಂಡ್ರಫ್ ಅಥವಾ ತಲೆಹೊಟ್ಟನ್ನು ನಿವಾರಿಸುತ್ತದೆ, ಅಂತೆಯೇ ಕೂದಲಿಗೆ ನೈಸರ್ಗಿಕ ಹೊಳಪನ್ನು ಉಂಟುಮಾಡುತ್ತದೆ. ಇದಕ್ಕಾಗಿ ಗ್ರೀನ್ ಟೀ ಬ್ಯಾಗ್ ಅನ್ನು ಸ್ಪಲ್ಪ ಕಾಲ ನೀರಿನಲ್ಲಿ ಮುಳುಗಿಸಿಡಿ. ಶಾಂಪೂ ಮಾಡಿಕೊಂಡ ನಂತರ ಈ ನೀರಿನಿಂದ ಕೂದಲನ್ನು ತೊಳೆದುಕೊಳ್ಳಿ. ಗ್ರೀನ್ ಟೀ ಕುಡಿಯಿರಿ, ಕೂದಲು ಫಳಫಳಾ ಅನ್ನತ್ತೆ

ಟೋನರ್
ಮುಖದ ನೆರಿಗೆಯನ್ನು ಹೋಗಲಾಡಿಸಲು ಶತಪ್ರಯತ್ನ ಪಡುತ್ತಿದ್ದೀರಾ? ಚಿಂತಿಸದಿರಿ, ಒಂದು ಪಾತ್ರೆಯಲ್ಲಿ ರೋಸ್ ವಾಟರ್ ಅನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ಕುದಿಸಿ ನಂತರ ನೀವು ಈಗಾಗಲೇ ಬಳಸಿ ಬಿಟ್ಟ, ಗ್ರೀನ್ ಟೀ ಬ್ಯಾಗ್ ಅನ್ನು ತೆರದು, ಅದರಲ್ಲಿರುವ ಪೌಡರ್ ಅನ್ನು ಇದಕ್ಕೆ ಬೆರೆಸಿಕೊಂಡು, ಚೆನ್ನಾಗಿ 2 ನಿಮಿಷ ಕುದಿಸಿಕೊಳ್ಳಿ, ತದನಂತರ 3 ರಿಂದ 5 ನಿಮಿಷಗಳ ಕಾಲ ತಣಿಯಲು ಬಿಡಿ. ದ್ರಾವಣ ತಣಿದ ನಂತರ ಇದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ಫ್ರೀಜರ್‌ನಲ್ಲಿ ಇಡಿ. ರಾತ್ರಿ ವೇಳೆ ಟೋನರ್‌ನಂತೆ ಇದನ್ನು ಬಳಸಿಕೊಳ್ಳಿ. ನಿಮ್ಮ ತ್ವಚೆಯನ್ನು ಇದು ಬಿಗಿಗೊಳಿಸಿ ವಯಸ್ಸಾಗುವಿಕೆಯನ್ನು ನಿಧಾನವಾಗಿಸುತ್ತದೆ.

ಫೇಶಿಯಲ್ ಮಾಸ್ಕ್
ಒಂದು ಗ್ರೀನ್ ಟೀ ಬ್ಯಾಗ್ ಅನ್ನು ತೆರೆದು, ಅದರಲ್ಲಿರುವ ಪುಡಿಯನ್ನು ಬೌಲ್‌ಗೆ ಹಾಕಿ. ಇನ್ನು ಸ್ವಲ್ಪ ಗ್ರೀನ್ ಟೀ ಎಲೆಗಳಿಗೆ ಅಷ್ಟೇ ಪ್ರಮಾಣದ ಬೇಕಿಂಗ್ ಸೋಡಾವನ್ನು ಬೆರೆಸಿ ಮತ್ತು ಕೆಲವು ಹನಿಗಳಷ್ಟು ಜೇನು ಸೇರಿಸಿ. ಇದನ್ನು ಚೆನ್ನಾಗಿ ಬೆರೆಸಿಕೊಂಡು ಮಿಶ್ರಣವನ್ನು ಸಿದ್ಧಪಡಿಸಿಕೊಳ್ಳಿ, ಇನ್ನು ಇದಕ್ಕೆ ಬೇಕಾದಲ್ಲಿ ನಿಮ್ಮ ಇಷ್ಟದ ಎಣ್ಣೆಯನ್ನು ಕೂಡ ಸೇರಿಸಬಹುದಾಗಿದೆ. ಮುಖಕ್ಕೆ ಈ ಪ್ಯಾಕ್ ಅನ್ನು ಹಾಕಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಗ್ರೀನ್ ಟೀಯಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶಗಳು ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ, ಅಂತೆಯೇ ಜೇನು ತ್ವಚೆಗೆ ಮಾಯಿಶ್ಚರೈಸ್ ಮಾಡುತ್ತದೆ. ಹೀಗೆ ಒಮ್ಮೆ ಬಳಸಿ ಬಿಟ್ಟ, ಟೀ ಬ್ಯಾಗ್‌ನ ಹಲವಾರು ಪ್ರಯೋಜನಗಳನ್ನು ನೀವಿಲ್ಲಿ ಅರಿತಿದ್ದೀರಿ, ಆದರೆ ಅವುಗಳನ್ನು ಬಿಸಾಕಿ ತಪ್ಪು ಮಾಡದಿರಿ. ಗ್ರೀನ್ ಟೀಯನ್ನು ಇನ್ನಷ್ಟು ಪರಿಣಾಮಕಾರಿ ವಿಧಾನದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಸಲಹೆಗಳು ನಿಮಗೆ ತಿಳಿದಿದ್ದಲ್ಲಿ ನಮಗೂ ತಿಳಿಸಿ.

English summary

Old Tea Bag Uses In Your Beauty Regimen

The last place your used tea bags should end up is in the trash. Did you know that this dripping, soggy muslin bag with a mushy substance at the bottom is actually a chunk of a potent antioxidant? It is actually an answer to your most persistent of beauty woes. Here are the answers to your queries. Here is a list on how best to use old tea bags in your beauty ritual to derive maximum benefit out of it!
Story first published: Wednesday, July 27, 2016, 20:26 [IST]
X
Desktop Bottom Promotion