For Quick Alerts
ALLOW NOTIFICATIONS  
For Daily Alerts

ಬ್ಯೂಟಿ ಟಿಪ್ಸ್: ಮುಖದ ಸೌಂದರ್ಯಕ್ಕೆ ಹಾಲಿನ ಫೇಸ್ ಪ್ಯಾಕ್

By Arshad
|

ಹಾಲು ಒಂದು ಉತ್ತಮ ಆಹಾರದ ಜೊತೆಗೇ ಉತ್ತಮ ಸೌಂದರ್ಯವರ್ಧಕವೂ ಆಗಿದೆ. ಹಾಲಿನಲ್ಲಿರುವ ಪ್ರೋಟೀನುಗಳು, ಕ್ಯಾಲ್ಸಿಯಂ, ಲ್ಯಾಕ್ಟೋಸ್, ಕೊಬ್ಬು, ವಿಟಮಿನ್A, B12, D ಮತ್ತು ಸತು ದೇಹಕ್ಕೆ ಹಲವು ರೀತಿಯ ಪೋಷಣೆ ನೀಡುತ್ತವೆ.

ವಿಶೇಷವಾಗಿ ಚರ್ಮಕ್ಕೆ ಒಳಗಿನಿಂದ ಪೋಷಣೆ ನೀಡುವ ಜೊತೆಗೇ ಹೊರಗಿನಿಂದಲೂ ನೆರವಾಗುತ್ತದೆ. ಅದರಲ್ಲೂ ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಸೆಳೆತವನ್ನು ಹೆಚ್ಚಿಸುತ್ತದೆ ಹಾಗೂ ಚರ್ಮ ಸೋಂಕಿಗೆ ಒಳಗಾಗಿ ಕೆಂಪಗಾಗುವುದರಿಂದ ರಕ್ಷಿಸುತ್ತದೆ. ಇನ್ನು ಹಸಿ ಹಾಲನ್ನು ಚರ್ಮದ ಮೇಲೆ ಹಚ್ಚಿಕೊಳ್ಳುವ ಮೂಲಕ ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು, ಮುಂದೆ ಓದಿ..... ಚರ್ಮದ ತಾಜಾತನಕ್ಕೆ ಇರಲಿ ತೆಂಗಿನ ಹಾಲು

Milk Skin Care Benefits For A Glowing Skin!

ಹೊಸ ಚರ್ಮ ಬೆಳೆಯಲು
ಚರ್ಮದ ಹೊರಪದರದ ಜೀವಕೋಶಗಳು ಸದಾ ಸತ್ತು ಹೊಸದಾಗಿ ಹುಟ್ಟುತ್ತಲೇ ಇರುತ್ತವೆ. ಹೊಸ ಜೀವಕೋಶಗಳು ಹೆಚ್ಚು ಆರೋಗ್ಯಕರವಾಗಿದ್ದರೆ ಚರ್ಮದ ಕಾಂತಿ ಹೆಚ್ಚುತ್ತದೆ. ಇದಕ್ಕಾಗಿ ಎರಡು ದೊಡ್ಡಚಮಚ ಹಾಲು, ಒಂದು ದೊಡ್ಡಚಮಚ ಅರಿಶಿನ ಪುಡಿ ಮತ್ತು ಒಂದು ದೊಡ್ಡಚಮಚ ಲಿಂಬೆರಸ ಸೇರಿಸಿ ಲೇಪನ ತಯಾರಿಸಿ.

ಈ ಲೇಪನವನ್ನು ಮುಖ, ಕುತ್ತಿಗೆ ಮತ್ತು ಕೈಗಳ ಮೇಲೆ ತೆಳುವಾಗಿ ಹೆಚ್ಚಿ ಹದಿನೈದು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನೊಂದಿಗೆ ತೊಳೆದುಕೊಳ್ಳಿ. ಇದರಿಂದ ಸತ್ತ ಜೀವಕೋಶಗಳು ಸಡಿಲವಾಗಿ ನಿವಾರಣೆ ಸುಲಭವಾಗುತ್ತದೆ ಹಾಗೂ ಹೊಸ ಜೀವಕೋಶಗಳು ಆರೋಗ್ಯಕರವಾಗಿರಲು ನೆರವಾಗುತ್ತದೆ.

ತಕ್ಷಣದ ಕಾಂತಿ ಪಡೆಯಲು
ಕೆಲವು ಕಾರ್ಯಕ್ರಮಕ್ಕೆ ತಕ್ಷಣ ಸಿದ್ದರಾಗಲು ಹಾಲು ನೆರವಾಗುತ್ತದೆ. ಇದಕ್ಕಾಗಿ ಕೆಲವು ಬಾದಾಮಿ ಒಣಫಲಗಳನ್ನು ಹಾಲಿನೊಂದಿಗೆ ತೇದಿ. ಇದಕ್ಕೆ ಕೆಲವು ಹನಿ ಲವಂಗದ ಎಣ್ಣೆ ಬೆರೆಸಿ. ಇದಕ್ಕೆ ಕೊಂಚ ಒಣಗಿದ ಕಿತ್ತಳೆಯ ಸಿಪ್ಪೆಯ ಪುಡಿಯನ್ನು ಬೆರೆಸಿ. ಈ ಮಿಶ್ರಣವನ್ನು ಮುಖ, ಕುತ್ತಿಗೆ, ಕೈಗಳಿಗೆ ಹಚ್ಚಿ ಸುಮಾರು ಹದಿನೈದು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಬಾದಾಮಿ-ಹಾಲಿನ ಫೇಸ್ ಪ್ಯಾಕ್, ಕಡಿಮೆ ಖರ್ಚು ಅಧಿಕ ಲಾಭ!

ಇನ್ನು ಒಂದು ಐಸ್ ತುಂಡನ್ನು ಬಳಸಿ ನಯವಾಗಿ ಒರೆಸಿಕೊಂಡು ಒಣಗಲು ಬಿಡಿ. ಇದರಿಂದ ಚರ್ಮದ ಸತ್ತ ಜೀವಕೋಶಗಳು ನಿವಾರಣೆಯಾಗುತ್ತದೆ ಹಾಗೂ ತಕ್ಷಣವೇ ಕಾಂತಿ ದೊರಕುತ್ತದೆ. ಆದರೆ ಈ ವಿಧಾನ ಬಳಸಿದ ಬಳಿಕ ಮುಂದಿನ ಒಂದು ವಾರದವರೆಗೆ ಬಳಸಬಾರದು.

ಮುಖದ ಕಾಂತಿ ಹೆಚ್ಚಿಸಲು
ಕೊಂಚ ಕುದಿಸಿದ ಹಾಲನ್ನು ಹತ್ತಿಯುಂಡೆಯಲ್ಲಿ ಮುಳುಗಿಸಿ ಸಾಧ್ಯವಾದಷ್ಟು ಬಿಸಿ ಇದ್ದಂತೆಯೇ ಮುಖದ ಮೇಲೆ ಹೆಚ್ಚಿನ ಒತ್ತಡವಿಲ್ಲದೇ ಒರೆಸಿಕೊಳ್ಳಿ. ಇದರಿಂದ ಚರ್ಮದ ಸೂಕ್ಷ್ಮರಂಧ್ರಗಳು ತೆಗೆದು ಕಲ್ಮಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ನಿತ್ಯವೂ ಈ ವಿಧಾನವನ್ನು ಅನುಸರಿಸುವ ಮೂಲಕ ಬಿಸಿಲಿಗೆ ಕಪ್ಪಗಾಗಿದ್ದ ಚರ್ಮ ಶೀಘ್ರವೇ ಸಹಜವರ್ಣಕ್ಕೆ ತಿರುಗುತ್ತದೆ. ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!

ಮುಖದಲ್ಲಿ ನೆರಿಗೆ ಮೂಡುವುದನ್ನು ತಡವಾಗಿಸಲು
ಸಮಪ್ರಮಾಣದಲ್ಲಿ ಹಾಲು ಮತ್ತು ಜೇನು ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಹದಿನೈದು ನಿಮಿಷ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರನ್ನು ಬಳಸಿ ತೊಳೆದುಕೊಳ್ಳಿ. ಈ ವಿಧಾನವನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಅನುಸರಿಸುತ್ತಾ ಬಂದರೆ ಚರ್ಮದಲ್ಲಿ ನೆರಿಗೆ ಮೂಡುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಕಾಂತಿಯುಕ್ತವಾಗುತ್ತದೆ.

English summary

Milk Skin Care Benefits For A Glowing Skin!

Milk health benefits is known to all but do you know the skin benefits of milk? Milk has proteins, calcium, lactose, fat, vitamin A, B12, D and zinc. Milk soothes and nourishes the skin and the natural ingredients from this dairy product helps hydrate, alleviate redness, and prevents irritated skin.
X
Desktop Bottom Promotion