For Quick Alerts
ALLOW NOTIFICATIONS  
For Daily Alerts

ಸೌಂದರ್ಯ ದೇವತೆ 'ಅರಿಶಿನಕ್ಕೆ' ಸರಿಸಾಟಿ ಯಾರು..?

By Deepu
|

ನಿಮ್ಮ ತ್ವಚೆಯು ತಕ್ಷಣ ಹೊಳಪಿನಿಂದ ಕಂಗೊಳಿಸಬೇಕು ಮತ್ತು ಅದು ಸುಲಭವಾದ ಮಾರ್ಗದಲ್ಲಿ ಕಂಗೊಳಿಸಬೇಕು ಎಂಬ ಹಂಬಲ ಯಾರಿಗಿಲ್ಲ ಹೇಳಿ? ತ್ವಚೆ ಸುಂದರವಾಗಿ ಕಂಗೊಳಿಸಬೇಕು ಎಂದುಕೊಂಡು ಅದಕ್ಕಾಗಿ ಯಾವುದೋ ಬ್ಯೂಟಿ ಪಾರ್ಲರಿಗೆ ಹೋಗಬೇಕು ಎಂಬ ನಿಯಮವನ್ನು ಯಾರೂ ಮಾಡಿಲ್ಲ. ನಿಮ್ಮ ಮನೆಯಲ್ಲಿ ಇರುವ ಪದಾರ್ಥಗಳಿಂದಲೆ ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಅಂತಹ ಒಂದು ವಸ್ತು ಅರಿಶಿನ. ಅರೆ ಅರಿಶಿನವನ್ನು ಮುಖಕ್ಕೆ ಹಚ್ಚಿಕೊಂಡು ಮುಖ ತೊಳೆಯುವುದನ್ನು ನಾವು ನೋಡಿದ್ದೇವೆ ಬಿಡಿ ಎಂದು ಹೇಳುತ್ತಿರಲ್ಲವೇ? ಅರಿಶಿನವನ್ನು ಔಷಧಿಯಾಗಿ, ಮಸಾಲೆ ಪದಾರ್ಥವಾಗಿ, ಮತ್ತು ಸೌಂದರ್ಯ ಸಾಧನವನ್ನಾಗಿ ಬಳಸುತ್ತೇವೆ.

ಇದು ಭಾರತೀಯ ಅಡುಗೆಯಲ್ಲಿ ಅವಿಭಾಜ್ಯ ಪಾತ್ರವನ್ನು ಹೊಂದಿರುವ ಮಸಾಲೆ ಪದಾರ್ಥವಾಗಿ ಸಹ ಗುರುತಿಸಲ್ಪಟ್ಟಿದೆ. ಇದಕ್ಕೆ ಒಂದು ಬಗೆಯ ವಿಶೇಷ ಸುವಾಸನೆ ಸಹ ಇದೆ, ಇದಕ್ಕೆ ಈ ಸುವಾಸನೆ ಬರಲು ಕಾರಣ - ಕುರ್ಕುಮಿನ್ ಎಂಬ ರಾಸಾಯನಿಕ. ಅರಿಶಿನವು ಒಂದು ಅತ್ಯುತ್ತಮ ಆಂಟಿಸೆಪ್ಟಿಕ್ ಗುಣವಿರುವ ಪದಾರ್ಥವಾಗಿದೆ, ಇದು ಕೇವಲ ಆರೋಗ್ಯಕ್ಕಷ್ಟೇ ಅಲ್ಲದೆ, ತ್ವಚೆಯ ಮೇಲೆ ಸಹ ಉತ್ತಮ ಪರಿಣಾಮವನ್ನು ಬೀರುತ್ತದೆ. ಬನ್ನಿ ಅರಿಶಿನದ ಇಷ್ಟೆಲ್ಲಾ ಗುಣಗಳನ್ನು ನಮ್ಮ ಸೌಂದರ್ಯಕ್ಕೆ ಹೇಗೆ ಬಳಸಿಕೊಳ್ಳಬಹುದು ಮತ್ತು ಅದಕ್ಕಾಗಿ ರೆಸಿಪಿಯನ್ನು ಹೇಗೆ ತಯಾರಿಸಿಕೊಳ್ಳುವುದು ಎಂದು ನೋಡೋಣ.

Magic treatment with Turmeric for a Flawless Skin

ಅರಿಶಿನದ ಮಾಸ್ಕ್ ತಯಾರಿಸುವ ವಿಧಾನ:
*2 ಟೇಬಲ್ ಚಮಚ ಗೋಧಿ ಹಿಟ್ಟು
*1 ಟೀ ಚಮಚ ಅರಿಶಿನ ಪುಡಿ
*2 ಟೇಬಲ್ ಚಮಚ ಹಾಲು
*½ ಟೀ ಚಮಚ ಜೇನುತುಪ್ಪ

*ಗೋಧಿ ಹಿಟ್ಟು ಮತ್ತು ಅರಿಶಿನಪುಡಿಯನ್ನು ಒಂದು ಬಟ್ಟಲಿನಲ್ಲಿ ಬೆರೆಸಿಕೊಳ್ಳಿ. ನಂತರ ಇದಕ್ಕೆ ಹಾಲು ಮತ್ತು ಜೇನು ತುಪ್ಪವನ್ನು ಬೆರೆಸಿ. ತದನಂತರ ಈ ಎಲ್ಲಾ ಮಿಶ್ರಣವನ್ನು ಸೇರಿಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಆನಂತರ ಈ ಪೇಸ್ಟ್ ಅನ್ನು ಮುಖಕ್ಕೆ ಲೇಪಿಸಿ, ಸ್ವಲ್ಪ ಹೊತ್ತು ಒಣಗಲು ಬಿಡಿ. ಅದಕ್ಕೆ 15 ನಿಮಿಷ ತಗುಲುತ್ತದೆ. ಒಣಗಿದ ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ. ಆಗ ನೋಡಿ ನಿಮ್ಮ ತ್ವಚೆ ಮೃದುವಾಗಿ, ಹೊಳಪಿನಿಂದ ಕೂಡಿರುವುದನ್ನು ನೀವು ಗಮನಿಸುವಿರಿ.

*ಈ ಮಿಶ್ರಣವು ನಿಮ್ಮ ತ್ವಚೆಗೆ ವಯಸ್ಸು ನಿರೋಧಕ ಗುಣಗಳನ್ನು ನೀಡುವುದಷ್ಟೇ ಅಲ್ಲದೆ, ನಿಮ್ಮ ತ್ವಚೆಯನ್ನು ಮೃದು ಮಾಡುತ್ತದೆ ಹಾಗು ತ್ವಚೆಯಲ್ಲಿರುವ ರಂಧ್ರಗಳನ್ನು ಮುಚ್ಚುತ್ತದೆ. ಈ ಫೇಸ್ ಮಾಸ್ಕ್ ಎಣ್ಣೆಯಂಶವಿರುವ ತ್ವಚೆಗೆ ಅಥವಾ ರಂಧ್ರಗಳಿರುವ ತ್ವಚೆಗೆ ಹೇಳಿ ಮಾಡಿಸಿದ ಪರಿಹಾರವಾಗಿರುತ್ತದೆ. ಇದು ನಿಮ್ಮ ಮುಖದಲ್ಲಿರುವ ಕೊಳೆಗಳನ್ನು ನಿವಾರಿಸುತ್ತದೆ ಮತ್ತು ತ್ವಚೆಯ ಬಣ್ಣವನ್ನು ಸಹ ವೃದ್ಧಿಸುತ್ತದೆ.

*ಅರಿಶಿನಪುಡಿಯನ್ನು ಕೆನೆಯ ಜೊತೆಗೆ ಸಹ ಬೆರೆಸಿ ಲೇಪಿಸಿಕೊಳ್ಳಬಹುದು. ಇದನ್ನು ನಿಮ್ಮ ಕಣ್ಣಿನ ಸುತ್ತ ಲೇಪಿಸಿಕೊಂಡರೆ, ಕಲೆಗಳು ಮತ್ತು ಸುಕ್ಕುಗಳು ಸಹ ನಿವಾರಣೆಯಾಗುತ್ತದೆ. ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಕಪ್ಪು ವೃತ್ತಗಳನ್ನು ನಿವಾರಿಸಲು ಇದು ರಾಮ ಬಾಣ ಎನ್ನಬಹುದು. ಇದರ ಜೊತೆಗೆ ಅರಿಶಿನ ಪುಡಿಗೆ ತೆಂಗಿನ ಎಣ್ಣೆಯನ್ನು ಬೆರೆಸಿಕೊಂಡು ಸ್ನಾನಕ್ಕೆ ಮೊದಲು ತ್ವಚೆಗೆ ಮಸಾಜ್ ಮಾಡಿ. ಇದು ನಿಮ್ಮ ಮುಖಕಷ್ಟೇ ಅಲ್ಲದೆ ಇಡೀ ದೇಹಕ್ಕೆ ಹೊಳಪನ್ನು ನೀಡುತ್ತದೆ ಮತ್ತು ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಮತ್ತು ಇನ್‌ಫೆಕ್ಷನ್‌ಗಳನ್ನು ನಿವಾರಿಸುತ್ತದೆ!

English summary

Magic treatment with Turmeric for a Flawless Skin

If you’re looking for a quick and easy kitchen remedies and natural skin care tips to keep your skin youthful and vibrant you’ve landed on the right page! As you age, your skin starts to lose its elasticity which causes it to sag and look less supple. For a natural face-lift you need to head straight to your spice rack and find yourself some turmeric powder.
Story first published: Monday, February 1, 2016, 21:14 [IST]
X
Desktop Bottom Promotion