For Quick Alerts
ALLOW NOTIFICATIONS  
For Daily Alerts

ಒಂದೇ ವಾರದಲ್ಲಿ ಮುಖದಲ್ಲಿನ ಮೊಡವೆಗಳು ಮಂಗಮಾಯ!

By Manu
|

ಮೊಡವೆಗಳು ಹದಿಹರೆಯದಲ್ಲಿ ಹೆಚ್ಚು ಕಾಡಿದರೂ ಇತರರನ್ನೂ ಬಿಡದೇ ಕಾಡುತ್ತದೆ. ಇದಕ್ಕೆ ಎಷ್ಟು ಆರೈಕೆ ಮಾಡಿದರೂ ಸಾಲದು. ಆದರೆ ಈ ಮೊಡವೆಗಳನ್ನು ಹೊತ್ತು ಮುಖ ತೋರಿಸಲೂ ಅಳುಕು. ಇದರಿಂದ ಪಾರಾಗಲು ಹೆಚ್ಚಿನವರು ಮೊರೆ ಹೋಗುವುದು ದಪ್ಪನೆಯ ಮೇಕಪ್ ಅಥವಾ ಮುಖ ಮರೆಮಾಚುವ ಲೇಪನಗಳಿಗೆ. ಇವು ಸಾಮಾನ್ಯವಾಗಿ ದುಬಾರಿಯಾಗಿರುತ್ತವೆ.

ಆದರೆ ಇದು ತಪ್ಪಾದ ಕ್ರಮ. ಇದರಿಂದ ಮೊಡವೆಗಳನ್ನು ಮರೆಮಾಚಿದಂತಾದರೂ ನಿವಾರಿಸಿದಂತಾಗಲಿಲ್ಲ. ಅಲ್ಲದೇ ತಾತ್ಕಾಲಿಕವಾಗಿ ಸುಂದರವಾಗಿ ಕಂಡಿದ್ದ ವದನ ಮೇಕಪ್ ಕಳಚಿದ ಬಳಿಕ ಇನ್ನಷ್ಟು ಅಂದಗೆಟ್ಟಿರುತ್ತದೆ. ಒಂದು ವೇಳೆ ಮೇಕಪ್ ಹಚ್ಚಿಕೊಂಡಿದ್ದ ಸಮಯದಲ್ಲಿ ಬೆವರಿಳಿದರೆ ಇದು ಮೇಕಪ್ ಅನ್ನು ಕರಗಿಸುವುದರಿಂದ ಅತೀವ ಮುಜುಗರವೂ ಎದುರಾಗುತ್ತದೆ.

Kitchen Ingredients Can Reduce Acne In A Week!

ಅಲ್ಲದೇ ಮೇಕಪ್ ನಲ್ಲಿರುವ ರಾಸಾಯನಿಕಗಳು ಮೊಡವೆಗಳನ್ನು ಇನ್ನಷ್ಟು ಉಲ್ಬಣಿಸಬಹುದು. ಮೊಡವೆಗಳು ಕೇವಲ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ, ಕೆಲವು ಸೋಂಕುಗಳಿಗೂ ಕಾರಣವಾಗಬಹುದು. ಕೆಲವರಿಗೆ ಇವು ಅತೀವ ನೋವಿನಿಂದ ಕೂಡಿದ್ದು ತುರಿಕೆ, ಕೆಂಪಗಾಗುವುದು, ರಕ್ತ ಒಸರುವುದು ಮೊದಲಾದ ತೊಂದರೆಗಳಿಗೂ ಕಾರಣವಾಗಬಹುದು. ಮೊಡವೆ ಕಲೆಗಳ ರಾದ್ಧಾಂತಕ್ಕೆ, ಪವರ್ ಫುಲ್ ಮನೆಮದ್ದು

ಮೊಡವೆಗಳಿಗಾಗಿ ಮಾರುಕಟ್ಟೆಯಲ್ಲಿ ನೂರಾರು ಪ್ರಸಾಧನಗಳಿವೆ. ಆದರೆ ಇವೆಲ್ಲವೂ ಮೊಡವೆಗಳನ್ನು ನಿಗ್ರಹಿಸಲು ಸಮರ್ಥ ಎಂದು ಹೇಳಲು ಸಾಧ್ಯವಿಲ್ಲ. ಇವುಗಳಲ್ಲಿರುವ ಪ್ರಬಲ ರಾಸಾಯನಿಕಗಳು ತತ್ಕಾಲಕ್ಕೆ ಶಮನ ನೀಡುವಂತೆ ಕಂಡುಬಂದರೂ ಕಾಲಕ್ರಮೇಣ ಇದರ ಪ್ರಭಾವ ಚರ್ಮದ ಮೇಲೆ ಮಾಡುತ್ತಿರುವ ಪರಿಣಾಮವನ್ನು ಅರಿಯಬಹುದು.

ಆದರೆ ಅಷ್ಟು ಹೊತ್ತಿಗೆ ತಡವಾಗಿರುತ್ತದೆ. ಆದ್ದರಿಂದ ಯಾವುದೇ ಅಡ್ಡಪರಿಣಾಮವಿಲ್ಲದ ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದೇ ಸೂಕ್ತ. ಕೊಂಚ ನಿಧಾನವಾಗಿ ಪ್ರಭಾವ ಬೀರುತ್ತದೆ ಎಂದು ಹೆಚ್ಚಿನವರು ಒಲವು ತೋರುತ್ತಿಲ್ಲ. ಆದರೆ ನಾವು ಇಲ್ಲಿ ನೀಡಲಾಗಿರುವ ಈ ವಿಧಾನ ಒಂದೇ ವಾರದಲ್ಲಿ ಪ್ರಭಾವ ತೋರುತ್ತದೆ. ಇದಕ್ಕೆ ಬೇಕಾಗಿರುವುದು ಕೇವಲ ಕಿತ್ತಳೆ ಸಿಪ್ಪೆ, ಅರಿಶಿನ ಮೊಸರು ಮಾತ್ರ. ಇವೆಲ್ಲವೂ ನಿಮ್ಮ ಮೊಡವೆಗಳನ್ನು ಬುಡದಿಂದ ನಿವಾರಿಸಿ ಕಲೆಯಿಲ್ಲದ ಚರ್ಮ ಪಡೆಯಲು ನೆರವಾಗುತ್ತವೆ.

ಅಗತ್ಯವಿರುವ ಸಾಮಾಗ್ರಿಗಳು:
*ಕಿತ್ತಳೆ ಸಿಪ್ಪೆಯ ಪುಡಿ: ಒಂದು ಚಿಕ್ಕ ಚಮಚ (ಕಿತ್ತಳೆ ಸಿಪ್ಪೆಯನ್ನು ಕೆಲವು ದಿನ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಬಳಿಕ ಬ್ಲೆಂಡರಿನಲ್ಲಿ ಹಾಕಿ ಒಣದಾಗಿ ಪುಡಿ ಮಾಡಿಟ್ಟುಕೊಳ್ಳಿ)
*ಮೊಸರು: ಎರಡು ಚಿಕ್ಕಚಮಚ
*ಅರಿಶಿನ ಪುಡಿ: ಒಂದು ಚಿಕ್ಕಚಮಚ
ಈ ಮೂರೂ ಪುಡುಗಳ ಮಿಶ್ರಣ ಮೊಡವೆಗಳ ನಿಗ್ರಹಕ್ಕೆ ಒಂದು ಪ್ರಬಲವಾದ ಲೇಪನವಾಗಿದ್ದು ಕೆಲವೇ ದಿನಗಳಲ್ಲಿ ಇದರ ಪರಿಣಾಮವನ್ನು ಕಂಡುಕೊಳ್ಳಬಹುದು. ಮೊಡವೆ ನಿವಾರಣೆಗೆ ಇಲ್ಲಿದೆ ಸರಳ ಉಪಾಯ

ಕಿತ್ತಳೆ ಸಿಪ್ಪೆಯಲ್ಲಿಯೂ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದರ ಆಮ್ಲೀಯ ಗುಣ ಮೊಡವೆಗಳ ಬುಡದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಪರಿಣಾಮವಾಗಿ ಮೊಡವೆಗಳು ಬುಡದಿಂದಲೇ ನಿವಾರಣೆಯಾಗಿ ಕಲೆಯಿಲ್ಲದೇ ಮಾಯವಾಗುತ್ತವೆ.

ಮೊಸರಿನ ಸೂಕ್ಷ್ಮಜೀವಿ ನಿವಾರಕ ಗುಣ ಚರ್ಮದ ಸೂಕ್ಷ್ಮರಂಧ್ರದಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಇದರ ಬಿಳಿಚಿಸುವ ಗುಣ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ.

ಅರಿಶಿನ ಪುಡಿಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು ಚರ್ಮದ ಉರಿಯೂತ ತಡೆಯುವ ಕ್ಷಮತೆ ಹೊಂದಿದೆ. ಅಲ್ಲದೇ ಚರ್ಮದ ಜೀವಕೋಶಗಳನ್ನು ವೃದ್ಧಿಗೊಳಿಸಲು ಮತ್ತು ಸತ್ತ ಜೀವಕೋಶಗಳನ್ನು ನಿವಾರಿಸಲೂ ಸಮರ್ಥವಾಗಿದೆ.

ಈ ಲೇಪನವನ್ನು ತಯಾರಿಸುವ ವಿಧಾನ
*ಎಲ್ಲಾ ಪರಿಕರಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಲೇಪನವನ್ನು ಈಗತಾನೇ ತೊಳೆದುಕೊಂಡ ಚರ್ಮದ ಮೇಲೆ ದಪ್ಪನಾಗಿ ಹಚ್ಚಿ.
* ಇನ್ನು ಮೊಡವೆಗಳಿರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ. ಬಳಿಕ ಇಪ್ಪತ್ತು ನಿಮಿಷ ಹಾಗೇ ಬಿಡಿ. ನಂತರ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಸೌಮ್ಯ ಫೇಸ್ ವಾಶ್ ಮಾತ್ರ ಬಳಸಿ. ಉತ್ತಮ ಪರಿಣಾಮಕ್ಕಾಗಿ ದಿನಕ್ಕೊಂದು ಬಾರಿ ಪುನರಾವರ್ತಿಸಿ.

English summary

Kitchen Ingredients Can Reduce Acne In A Week!

Trying hundreds of different skin care products that claim to cure acne may sometimes not work and these chemical-based face washes and creams can damage your skin to a great extent. So, if you are looking for a natural way to get rid of acne, then try this orange peel, curd and turmeric face pack, which can be made at home with ease.
X
Desktop Bottom Promotion