For Quick Alerts
ALLOW NOTIFICATIONS  
For Daily Alerts

ತ್ವಚೆಯ ಕಾಂತಿಗೆ ಜೇನುತುಪ್ಪದ ಮ್ಯಾಜಿಕ್ ಫೇಸ್ ಪ್ಯಾಕ್

By Manjula balaraj
|

ಅತಿ ಹಿಂದಿನ ಕಾಲದಿಂದಲೂ ಜೇನನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿದೆ. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ದುಬಾರಿ ಪ್ರಸಾದನದಲ್ಲಿ ಸ್ವಲ್ಪವಾದರೂ ಜೇನು ಇದ್ದೇ ಇರುತ್ತದೆ. ಆದರೆ ಬೆಲೆಯನ್ನು ಹೆಚ್ಚಿಸಲು ಜೇನು ಎಂದು ನೇರವಾಗಿ ಹೇಳದೇ ಅರ್ಥವಾಗದ ಯಾವುದೋ ರಾಸಾಯನಿಕದ ಹೆಸರನ್ನು ಹೇಳುವ ಮೂಲಕ ಈ ಮಾಹಿತಿಯನ್ನು ಹೆಚ್ಚಿನ ಸಂಸ್ಥೆಗಳು ಮರೆಮಾಚುತ್ತವೆ. ಏಕೆಂದರೆ ತ್ವಚೆಗೆ ಸಂಪೂರ್ಣವಾದ ಆರೈಕೆ ನೀಡಲು ಜೇನು ಸಮರ್ಥವಾಗಿದೆ.

ಜೇನುತುಪ್ಪವನ್ನು ಹಳೇಕಾಲದಿಂದಲೂ ನಾವು ಚರ್ಮವರ್ಧಕವಾಗಿ ಉಪಯೋಗಿಸುತ್ತಿದ್ದೇವೆ ಮತ್ತು ಸಾಮಾನ್ಯವಾಗಿ ಈವಾಗಿನ ಎಲ್ಲಾ ಪ್ರಸಾದನ ಸಾಮಗ್ರಿಗಳಲ್ಲಿ ಜೇನು ಬಳಸುವುದು ಸರ್ವೇ ಸಾಮಾನ್ಯವಾಗಿದೆ. ಚರ್ಮಕ್ಕೆ ಬಳಸುವ ಪ್ರಸಾದನ ಸಾಮಗ್ರಿಗಳಲ್ಲಿ ಜೇನು ಏಕೆ ಬಳಸುತ್ತಾರೆಂದು ನೀವು ಯೋಚಿಸಿದ್ದೀರಾ? ಏಕೆಂದರೆ ಜೇನಿನಲ್ಲಿ ಚರ್ಮಕ್ಕೆ ಬೇಕಾದಂತಹ ಎಲ್ಲಾ ಆರೋಗ್ಯದಾಯಕ ಅಂಶಗಳಿರುವುದು. ಜೇನುತುಪ್ಪ ಬಳಸುವುದರಿಂದ ಚರ್ಮದಲ್ಲಿನ ಸುಕ್ಕುಗಳು, ವಯಸ್ಸಿಗೆ ಸಹಜವಾದ ಮುಖದಲ್ಲಿನ ಗೆರೆಗಳು ಮತ್ತು ಕಲೆಗಳನ್ನು ಹೋಗಲಾಡಿಸಿ ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇದು ನಿಮ್ಮ ತ್ವಚೆಯನ್ನು ಸುಂದರಗೊಳಿಸುವುದು ಮಾತ್ರವಲ್ಲದೇ, ನಿಮ್ಮ ಚರ್ಮದ ಕಾಂತಿಯನ್ನು ಇನ್ನಷ್ಟು ಹೊಳಪು ಬರುವಂತೆ ಮಾಡುತ್ತದೆ.

ಅಷ್ಟೇ ಅಲ್ಲದೆ ಜೇನಿನಲ್ಲಿರುವ ರೋಗನಿರೋಧಕ ಗುಣವು ತ್ವಚೆಯ ಮೇಲೆ ಮೂಡುವ ಮೊಡವೆ ಮತ್ತು ಗುಳ್ಳೆಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಜೇನನ್ನು ಕೆಲವು ನೈಸರ್ಗಿಕ ಉತ್ಪನ್ನಗಳು ಜೊತೆಗೆ ಬಳಸಿದಾಗ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹೀಗೆ ಉಪಯೋಗಿಸುವುದರಿಂದ ಚರ್ಮಕ್ಕೆ ಪೂರಕ ಪರಿಣಾಮ ಬೀರುತ್ತದೆ. ನೀವು ಜೇನು ಬಳಸಿ ಮುಖದ ಮಸಾಜ್ , ಫೇಶಿಯಲ್ ಮಾಸ್ಕ್, ಸ್ಕ್ರಬ್ ಇತ್ಯಾದಿಗಳನ್ನು ಮಾಡಬಹುದು. ಜೇನುತುಪ್ಪ ಬಳಸಿ ಮನೆಯಲ್ಲಿಯೇ ಚರ್ಮವನ್ನು ಸುಂದರವಾದ ಹೊಳಪುಳ್ಳ ತ್ವಚೆಯಕ್ತವನ್ನಾಗಿ ಮಾಡಬಹುದು. ಬನ್ನಿ ಜೀನಿನ ಇನ್ನಷ್ಟು ಉಪಯೋಗಗಳನ್ನು ಮುಂದೆ ಓದಿ....

ಜೇನುತುಪ್ಪ ಮತ್ತು ನಿಂಬೆ ಹಣ್ಣಿನ ಮಸಾಜ್

ಜೇನುತುಪ್ಪ ಮತ್ತು ನಿಂಬೆ ಹಣ್ಣಿನ ಮಸಾಜ್

ಒಂದು ಟೇಬಲ್ ಚಮಚ ಜೇನುತುಪ್ಪ, ಒಂದು ಟೇಬಲ್ ಚಮಚ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಇಪ್ಪತ್ತು ನಿಮಿಷಗಳ ಕಾಲ ಮುಖಕ್ಕೆ ಮಸಾಜ್ ಮಾಡಬೇಕು. ಬಳಿಕ ಇಪ್ಪತ್ತು ನಿಮಿಷ ಅದನ್ನು ಹಾಗೆಯೇ ಬಿಡಬೇಕು. ತದನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಇದರಿಂದ ನಿಮ್ಮ ತ್ವಚೆ ಕಾಂತಿಯುತವಾಗಿ ಕಾಣುತ್ತದೆ.

ಜೇನುತುಪ್ಪ ಮತ್ತು ಮೊಸರಿನ ಮಸಾಜ್ ಜಿಡ್ಡಿನ ತ್ವಚೆಗೆ

ಜೇನುತುಪ್ಪ ಮತ್ತು ಮೊಸರಿನ ಮಸಾಜ್ ಜಿಡ್ಡಿನ ತ್ವಚೆಗೆ

ಒಂದು ಟೇಬಲ್ ಚಮಚ ಜೇನುತುಪ್ಪ ಮತ್ತು ಒಂದು ಟೇಬಲ್ ಚಮಚ ಮೊಸರಿನೊಂದಿಗೆ ಬೆರೆಸಿ ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಇಪ್ಪತ್ತು ನಿಮಿಷ ಹಾಗೆಯೇ ಬಿಟ್ಟು, ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಇದರಿಂದ ಮುಖದಲ್ಲಿರುವ ಮೊಡವೆ ಮತ್ತು ಗುಳ್ಳೆಗಳು ಹೋಗುವಲ್ಲಿ ಮತ್ತು ಜಿಡ್ಡು ತ್ವಚೆ ಇರುವವರಿಗೊ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜೇನಿನ ಮತ್ತು ಪಪಾಯ ಫೇಸ್ ಮಾಸ್ಕ್ ಒಣ ಚರ್ಮ ಮತ್ತು ಕಪ್ಪು ಕಲೆಯುಳ್ಳ ತ್ವಚೆಗೆ ಹಣ್ಣಾಗಿರುವ ಪಪ್ಪಾಯಿ ಹಣ್ಣಿನ ಹೋಳುಗಳನ್ನು ಚೆನ್ನಾಗಿ ಕಿವುಚಿ ಒಂದು ಟೇಬಲ್ ಚಮಚದಷ್ಟು ತೆಗೆದುಕೊಂಡು ಅದನ್ನು ಎರಡು ಟೇಬಲ್ ಚಮಚ ಜೇನಿನೊಂದಿಗೆ ಬೆರೆಸಿ ಗಟ್ಟಿಯಾಗಿ ಮುಖಲೇಪನ ಮಾಡಿಕೊಂಡು, ಇದನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ತದನಂತರ ಹದಿನೈದು ನಿಮಿಷ ಹಾಗೆಯೇ ಬಿಟ್ಟು ನಂತರ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ.

ಜೇನಿನ ಸ್ಕ್ರಬ್ ಬ್ಲಾಕ್ ಹೆಡ್ ನಿವಾರಣೆಗೆ

ಜೇನಿನ ಸ್ಕ್ರಬ್ ಬ್ಲಾಕ್ ಹೆಡ್ ನಿವಾರಣೆಗೆ

ಒಂದು ಟೇಬಲ್ ಚಮಚ ಜೇನುತುಪ್ಪದೊಂದಿಗೆ ಒಂದು ಟೇಬಲ್ ಚಮಚ ಕಲ್ಲು ಉಪ್ಪು ಬೆರೆಸಿ ಸ್ಕ್ರಬ್ ಮಾಡಿಕೊಳ್ಳಬೇಕು. ನಂತರ ಇದನ್ನು ಮುಖಕ್ಕೆ ಹಚ್ಚಿ ದುಂಡಗೆ ಮುಖದ ಮೇಲೆ ಮಸಾಜ್ ಮಾಡಿಕೊಳ್ಳಿ. ನಂತರ ಹತ್ತು ನಿಮಿಷ ಹಾಗೆಯೇ ಬಿಟ್ಟು ತ್ವಚೆಗೆ ಮಾಯಿಶ್ಚುರೈಸರ್ ಅನ್ನು ಹಚ್ಚಿಕೊಳ್ಳಿ. ಈ ಸ್ಕ್ರಬ್ ನಿಮ್ಮ ಮುಖದಲ್ಲಿರುವ ಬ್ಲಾಕ್ ಹೆಡ್ ಮತ್ತು ವ್ಯೆಟ್ ಹೆಡ್ ಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

 ಜೇನು ಮತ್ತು ಹಾಲಿನ ಕ್ರೀಂ ಮಸಾಜ್ ತಾರುಣ್ಯ ಭರಿತ ತ್ವಚೆಗಾಗಿ

ಜೇನು ಮತ್ತು ಹಾಲಿನ ಕ್ರೀಂ ಮಸಾಜ್ ತಾರುಣ್ಯ ಭರಿತ ತ್ವಚೆಗಾಗಿ

ಒಂದು ಟೇಬಲ್ ಚಮಚ ಜೇನು ಮತ್ತು ಒಂದು ಟೀ ಚಮಚ ಶುದ್ಧವಾದ ಹಾಲಿನ ಕ್ರೀಮ್ ನ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ನಿಮ್ಮ ಮುಖಕ್ಕೆ ದುಂಡಗೆ ಹದಿನೈದು ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಮುಖದಲ್ಲಿನ ಸುಕ್ಕುಗಳನ್ನು ತೆಗೆದು ಹಾಕಿ ತಾರುಣ್ಯಭರಿತ ತ್ವಚೆಯನ್ನು ಪಡೆಯುವಿರಿ.

ಹೊಳಪಿನ ಚರ್ಮಕ್ಕಾಗಿ ಜೇನು ಮತ್ತು ಬಾಳೆಹಣ್ಣಿನ ಮಸಾಜ್

ಹೊಳಪಿನ ಚರ್ಮಕ್ಕಾಗಿ ಜೇನು ಮತ್ತು ಬಾಳೆಹಣ್ಣಿನ ಮಸಾಜ್

ಒಂದು ಟೇಬಲ್ ಚಮಚ ಜೇನು ಮತ್ತು ಹಣ್ಣಾದ ಬಾಳೆ ಹಣ್ಣಿನ ಕಾಲು ಭಾಗವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ತಿರುವಿಕೊಳ್ಳಬೇಕು. ಇನ್ನು ಇವೆರಡನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಇದನ್ನು ಮುಖಕ್ಕೆ ನಿಧಾನವಾಗಿ ಇಪ್ಪತ್ತು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು. ಬಳಿಕ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಬೇಕು. ಇದರಿಂದ ನಿಮ್ಮ ಚರ್ಮ ಹೊಳಪಿನಿಂದ ಹಾಗು ಕಾಂತಿಯುತವಾಗಿ ಕಾಣುತ್ತದೆ.

ಜೇನು, ಗುಲಾಬಿ ನೀರು ಮತ್ತು ಅರಿಶಿನ

ಜೇನು, ಗುಲಾಬಿ ನೀರು ಮತ್ತು ಅರಿಶಿನ

ಕೊನೆಯದಾಗಿ ಈ ಮೂರರಿಂದ ಮಾಡಲ್ಪಟ್ಟ ಮಾಸ್ಕ್ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿಯಾಗುತ್ತದೆ. ಅಷ್ಟೇ ಅಲ್ಲದೆ ನಳ ನಳಿಸುವ ಸುಂದರವಾದ ಚರ್ಮವನ್ನು ಹೊಂದಬಹುದಾಗಿದೆ. ಇದಕ್ಕಾಗಿ ಮಾಡಬೇಕಾದುದು ಏನೆಂದರೆ ಒಂದು ಟೇಬಲ್ ಚಮಚ ಜೇನು, ಸ್ವಲ್ಪ ಗುಲಾಬಿ ನೀರು ಮತ್ತು ಎರಡು ಚಿಟಿಕೆ ಅರಿಶಿನ ಇವೆಲ್ಲವನ್ನೂ ಸೇರಿಸಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಲೇಪಿಸಿಕೊಂಡು ಹದಿನೈದು ನಿಮಿಷದ ನಂತರ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

English summary

Incredible Honey and Lemon Masks for Clear, Glowing Skin!

Honey has been used for skin care since ages and nowadays almost all the cosmetic products claim to contain honey in them. Have you ever thought why all the skin care products claim of having honey? This is because honey is a complete food for your skin. Honey can make your skin look young by removing all the wrinkles, fine lines and age spots that hamper the look of your skin. 
X
Desktop Bottom Promotion