ಬ್ಯೂಟಿ ಟಿಪ್ಸ್: ಮುಖದ ಅಂದಕ್ಕೆ ಗ್ರೀನ್ ಟೀ ಫೇಸ್ ಪ್ಯಾಕ್

ವಿವಿಧ ಬಗೆಯ ಚರ್ಮಕ್ಕಾಗಿ ವಿವಿಧ ಬಗೆಯ ಹಸಿರು ಟೀ ಬಳಸಿದ ಮುಖದ ಲೇಪನ (face pack) ತಯಾರಿಸಿಕೊಳ್ಳುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

By: Jaya subramanya
Subscribe to Boldsky

ಇಂದು ಸುಮಾರು ನೂರು ಬಗೆಯ ಟೀಪುಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲೂ ಟೀ ಆಯ್ಕೆಯಲ್ಲಿ ಪೈಪೋಟಿ ನೀಡುವ ಹಸಿರು ಟೀ ಅಥವಾ ಗ್ರೀನ್ ಟೀ ಶೀಘ್ರ ಸಮಯದಲ್ಲಿಯೇ ಮನೆಮಾತಾಗಿದೆ. ಕೇವಲ ಕುಡಿಯಲು ಮಾತ್ರವಲ್ಲ, ಸೌಂದರ್ಯ ವೃದ್ಧಿಗೂ ಹಸಿರು ಟೀ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಏಕಾಗಿ ಈ ಹಸಿರು ಟೀ (ಗ್ರೀನ್ ಟೀ) ಇಷ್ಟೊಂದು ಜನಪ್ರಿಯತೆ ಪಡೆದುಕೊಳ್ಳಲು ಸಾಧ್ಯವಾಯಿತು?

Green Tea
 

ಇದಕ್ಕೆ ಉತ್ತರ ಹಸಿರು ಟೀಯಲ್ಲಿನ ಪೋಷಕಾಂಶಗಳಲ್ಲಿ ಅಡಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸ್ವತಂತ್ರವಾಗಿ ಓಡಾಡುತ್ತಾ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಯಂತ್ರಿಸಿ ಕ್ಯಾನ್ಸರ್‌ನಿಂದ ದೇಹವನ್ನು ಮುಕ್ತಿಗೊಳಿಸುತ್ತದೆ. ಜೊತೆಗೇ ಮುಪ್ಪಿಗೆ ಕಾರಣವಾಗುವ ಸಡಿಲವಾದ ಚರ್ಮ, ನೆರಿಗೆ ಮೊದಲಾದವುಗಳು ಮೂಡುವುದನ್ನು ನಿಧಾನಗೊಳಿಸಿ ಮುಪ್ಪನ್ನು ಮುಂದೂಡುತ್ತದೆ.  ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ಹಸಿರು ಟೀ ಯಿಂದ ಅರೋಗ್ಯದ ಜೊತೆಗೇ ಸೌಂದರ್ಯವೂ ವೃದ್ಧಿಗೊಳ್ಳುತ್ತದೆ. ಹಸಿರು ಟೀ ಉಪಯೋಗಿಸಿದ ಹಲವು ಸೌಂದರ್ಯ ಪ್ರಸಾಧನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಬಲುದುಬಾರಿಯಾದ ಈ ಪ್ರಸಾಧನಗಳಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದಂತೆ ಮನೆಯಲ್ಲಿಯೂ ಇವನ್ನು ತಯಾರಿಸಿಕೊಳ್ಳಬಹುದು. ವಿವಿಧ ಬಗೆಯ ಚರ್ಮಕ್ಕಾಗಿ ವಿವಿಧ ಬಗೆಯ ಹಸಿರು ಟೀ ಬಳಸಿದ ಮುಖದ ಲೇಪನ (face pack) ತಯಾರಿಸಿಕೊಳ್ಳುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

Green Tea
 

ಹಸಿರು ಚಹಾ, ಜೇನು ಮತ್ತು ಸಕ್ಕರೆಯ ಮುಖಲೇಪ
ಒಂದು ದೊಡ್ಡಚಮಚ ಹಸಿರು ಚಹಾ, ಒಂದು ದೊಡ್ಡಚಮಚ ಜೇನು ಮತ್ತು ಒಂದು ದೊಡ್ಡಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಮೇಲಿದ್ದ ನಿರ್ಜೀವ ಜೀವಕೋಶಗಳು ತೊಳೆದು ಹೋಗಿ ಚರ್ಮ ಕಾಂತಿಯುತವಾಗುತ್ತದೆ ಹಾಗೂ ಗೌರವರ್ಣ ಪಡೆಯುತ್ತದೆ. 

Green Tea
 

ಕಾಂತಿ ವರ್ಧಿಸುವ ಮಾಸ್ಕ್
ಎರಡು ಬಳಸಿದ ಟಿ ಬ್ಯಾಗ್ ಗಳನ್ನು ಒಂದು ಪಾತ್ರೆಗೆ ಹಾಕಿ ಇದಕ್ಕೆ ಚಮಚದಷ್ಟು ಜೇನನ್ನು ಸೇರಿಸಿ ಮತ್ತು ಕೆಲವು ಹನಿಗಳಷ್ಟು ಲಿಂಬೆ ರಸವನ್ನು ಸೇರಿಸಿಕೊಳ್ಳಿ. ಇದನ್ನು ದಪ್ಪನೆಯ ಮಿಶ್ರಣದಂತೆ ಸಿದ್ಧಪಡಿಸಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಈ ಮಾಸ್ಕ್ಅನ್ನು ಹಚ್ಚಿಕೊಳ್ಳಿ. ಇದನ್ನು 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ಸ್ಕ್ರಬ್ ಮಾಡಿ ಮತ್ತು ತಣ್ಣೀರಿನಲ್ಲಿ ತೊಳೆದುಕೊಳ್ಳಿ. ನಿಮ್ಮ ದಣಿದ ತ್ವಚೆಗೆ ಈ ಮಾಸ್ಕ್ ಹೆಚ್ಚಿನ ಆರಾಮವನ್ನು ನೀಡುತ್ತದೆ.

Green Tea
 

ಮೊಡವೆ ನಿವಾರಕ
ತಾಜಾ ಗ್ರೀನ್ ಟಿಯನ್ನು ಕುದಿಸಿಕೊಳ್ಳಿ. ಇದು ತಣ್ಣಗಾಗಲು ಬಿಡಿ. ಇದಕ್ಕೆ ನೀರನ್ನು ಬೆರೆಸಿಕೊಂಡು ದ್ರಾವಣವನ್ನು ತಯಾರಿಸಿ. ದ್ರಾವಣಕ್ಕೆ ಹತ್ತಿಯ ಉಂಡೆಯನ್ನು ಮುಳುಗಿಸಿ. ಮೊಡವೆ ಇರುವ ಜಾಗದಲ್ಲಿ ಅದನ್ನು ಅದ್ದಿ. ತ್ವಚೆಯ ಆಳಕ್ಕೆ ಈ ಮಿಶ್ರಣ ಹೋಗುವಂತೆ ನೋಡಿಕೊಳ್ಳಿ. ಗ್ರೀನ್ ಟಿಯಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶಗಳು ಮೊಡವೆಯನ್ನು ಒಣಗಿಸುತ್ತದೆ.  ಆರೋಗ್ಯ ಟಿಪ್ಸ್: ಗ್ರೀನ್ ಟೀ ಕುಡಿಯುವ ಮುನ್ನ....

ಕಣ್ಣಿನ ಜೆಲ್ ಮಾಸ್ಕ್
ಒಂದು ಚಮಚದಷ್ಟು ಗ್ರೀನ್ ಟಿ ಪೌಡರ್ ಅನ್ನು ತೆಗೆದುಕೊಳ್ಳಿ, ಇದಕ್ಕೆ ಅಗರ್ ಅಗರ್ ಅನ್ನು ಸೇರಿಸಿ, ಒಂದು ಚಮಚ ಲಿಂಬೆ ರಸ ಬೆರೆಸಿ, ತದನಂತರ 5 ಹನಿಗಳಷ್ಟು ಬಾದಾಮಿ ಎಣ್ಣೆಯನ್ನು ಮಿಶ್ರ ಮಾಡಿ ಇದಕ್ಕೆ ಅರ್ಧ ಕಪ್‎ನಷ್ಟು ಕುದಿವ ನೀರನ್ನು ಹಾಕಿ ಎಲ್ಲಾ ಮಿಶ್ರಣವನ್ನು ಕಲಸಿಕೊಳ್ಳಿ, ಕರಗಿಸುತ್ತಲೇ ಇರಿ. ಗಂಟುಗಳು ಉಂಟಾಗದಂತೆ ನೋಡಿಕೊಳ್ಳಿ.

Green Tea

ಈ ಮಿಶ್ರಣವನ್ನು ಮೌಲ್ಡ್‎ಗೆ ಹಾಕಿ, ನೀವು ಐಸ್ ಟ್ರೇಯನ್ನು ಬಳಸಿಕೊಳ್ಳಬಹುದಾಗಿದೆ ನಂತರ ಅದನ್ನು ಫ್ರಿಡ್ಜ್‎ನಲ್ಲಿರಿಸಿ. ಒಮ್ಮೆ ಇದು ತಯಾರಾದ ನಂತರ ಚಮಚವನ್ನು ಬಳಸಿಕೊಂಡು ಜೆಲ್ ಅನ್ನು ನಿಮ್ಮ ಕಣ್ಣುಗಳ ಮೇಲಿರಿಸಿ, ಇದರ ತಂಪು ಹೋಗುವವರೆಗೂ ಹೀಗೆಯೇ ಮಾಡಿ. ಆಯಾಸಗೊಂಡ ಕಣ್ಣುಗಳನ್ನು ಶಾಂತಪಡಿಸಲು ಅಂತೆಯೇ ಕಣ್ಣುಗಳ ಸುತ್ತಲಿನ ವರ್ತುಲವನ್ನು ತೊಡೆದುಹಾಕಲು ಇದು ಸಹಕಾರಿಯಾಗಿದೆ.    ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ವಯಸ್ಸಾಗುವಿಕೆಯನ್ನು ತಡೆಯುವ ಮಾಸ್ಕ್
ಗ್ರೀನ್ ಟಿ ಎಲೆಗಳನ್ನು ನುಣ್ಣಗೆ ಅರೆದುಕೊಳ್ಳಿ. ಇದಕ್ಕೆ ಒಂದು ಚಮಚದಷ್ಟು ಮಿಲ್ಕ್ ಕ್ರೀಮ್ ಅನ್ನು ಬೆರೆಸಿ, ಚಿಟಿಕೆಯಷ್ಟು ಅರಿಶಿನ ಹುಡಿ ಮತ್ತು ಕೆಲವು ಹನಿಗಳಷ್ಟು ಲಿಂಬೆ ರಸವನ್ನು ಸೇರಿಸಿ. ಮೃದುವಾದ ಮಿಶ್ರಣ ದೊರೆಯುವವರೆಗೆ ಕಲಸಿಕೊಳ್ಳಿ. ನಿಮ್ಮ ಮುಖ ಮತ್ತು ಕುತ್ತಿಗೆಗೆ ಪೇಸ್ಟ್ ಅನ್ನು ಹಚ್ಚಿ. ಇದು ಸಂಪೂರ್ಣ ಒಣಗುವವರೆಗೆ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ

Green Tea
 

ಫೇಸ್ ಮಿಸ್ಟ್
ಒಂದು ಕಪ್‎ನಷ್ಟು ನೀರನ್ನು ಕುದಿಸಿ, ಇದಕ್ಕೆ ಗ್ರೀನ್ ಟಿ ಬ್ಯಾಗ್ ಅನ್ನು ಡಿಪ್ ಮಾಡಿ 15 ನಿಮಿಷಗಳ ಕಾಲ ಕುದಿಸಿ ನಂತರ ತಣಿಸಿ. ಇದಕ್ಕೆ 5 ಹನಿಗಳಷ್ಟು ಲಿಂಬೆ ರಸ ಸೇರಿಸಿ, 5 ಹನಿಗಳಷ್ಟು ಲ್ಯಾವೆಂಡರ್ ಆಯಿಲ್ ಮತ್ತು 1 ವಿಟಮಿನ್ ಇ ಕ್ಯಾಪ್ಸುಲ್ ಜೆಲ್ ಅನ್ನು ಬೆರೆಸಿ. ಸ್ಪ್ರೇ ಬಾಟಲಿಗೆ ದ್ರಾವಣವನ್ನು ವರ್ಗಾಯಿಸಿ. ಫ್ರಿಡ್ಜ್‎ನಲ್ಲಿ ಇದನ್ನು ಇರಿಸಿ ತಂಪಾಗಿಸಿ. ನಿಮ್ಮ ದಣಿದ ಮುಖಕ್ಕೆ ಈ ದ್ರಾವಣವನ್ನು ಸಿಂಪಡಿಸಿ ಮತ್ತು ನೈಸರ್ಗಿಕವಾಗಿ ಒದ್ದೆಯಾಗಲು ಬಿಡಿ. ನಿಮ್ಮ ಮುಖ ತ್ವರಿತವಾಗಿ ತಾಜಾಗೊಳ್ಳುತ್ತದೆ ಮತ್ತು ಮೃದುವಾಗುತ್ತದೆ.

ಗ್ರೀನ್ ಟಿ ಬಾಡಿ ಸ್ಕ್ರಬ್

Green tea

ಒಂದು ಕಪ್‎ನಷ್ಟು ಬ್ರೌನ್ ಶುಗರ್ ಅನ್ನು ತೆಗೆದುಕೊಳ್ಳಿ, ಇದಕ್ಕೆ ಒಂದು ಚಮಚ ಒಣಗಿದ ಗ್ರೀನ್ ಟಿ ಎಲೆಗಳನ್ನು ಬೆರೆಸಿ, 2 ಚಮಚಗಳಷ್ಟು ಹಸಿ ಜೇನನ್ನು ಸೇರಿಸಿಕೊಳ್ಳಿ, 1/2 ಕಪ್ ಆಲೀವ್ ಆಯಿಲ್ ಮಿಶ್ರ ಮಾಡಿ ಮತ್ತು 10 ಡ್ರಾಪ್‎ನಷ್ಟು ಲ್ಯಾವೆಂಡರ್ ಆಯಿಲ್ ಸೇರ್ಪಡೆ ಮಾಡಿ. ಬೌಲ್ ತೆಗೆದುಕೊಂಡು ಎಲ್ಲಾ ಸಾಮಾಗ್ರಿಗಳನ್ನು ಮಿಶ್ರಮಾಡಿ, ದಪ್ಪನೆಯ ಮಿಶ್ರಣ ಸಿದ್ಧಪಡಿಸಿಕೊಳ್ಳಿ. ಗಾಳಿಯಾಡದ ಡಬ್ಬದಲ್ಲಿ ಮಿಶ್ರಣವನ್ನು ತೆಗೆದಿರಿಸಿ ಮತ್ತು ದೈನಂದಿನ ಬಾಡಿ ಸ್ಕ್ರಬ್‎ನಂತೆ ಬಳಸಿ

English summary

Incredible Beauty Uses Of Green Tea You Will Thank Us For!

From removing puffy eyes, perking up tired skin to sloughing off the dead skin cells, learn some handy beauty uses of green tea. Piping hot flavorsome green tea can do more than just perk up your mood instantly, it is a treasure trove of beauty. Don't believe us? Give these easy beauty uses of green tea a try and see for yourself!
Please Wait while comments are loading...
Subscribe Newsletter