ಪುದೀನಾ ಎಣ್ಣೆ ಮಾಡಲಿದೆ ತ್ವಚೆ + ಕೂದಲಿಗೆ ಕಮಾಲಿನ ಮ್ಯಾಜಿಕ್

ಪ್ರತಿಯೊಬ್ಬರೂ ಕೂಡ ತಮ್ಮ ಕೂದಲಿನ ಹಾಗೂ ಸೌಂದರ್ಯದ ಬಗ್ಗೆ ಎಕ್ಸ್ಟ್ರಾ ಕೇರ್ ತೆಗೆದುಕೊಳ್ಳಲೇಬೇಕು. ಅದಕ್ಕಾಗಿ ನೀವು ಬಳಸಬಹುದಾದ ಅತ್ಯಮೂಲ್ಯ ವಸ್ತುವೆಂದರೆ ಪುದೀನಾ.. ಬನ್ನಿ ಇದರ ಮ್ಯಾಜಿಕ್ ಏನೆಂಬುದನ್ನು ಮುಂದೆ ಓದಿ...

By: Jaya subramanya
Subscribe to Boldsky

ಮಹಿಳೆಯರು ತಮ್ಮ ಸೌಂದರ್ಯಕ್ಕೆ ವಿಷಯಕ್ಕೆ ಬಂದಾಗ ತುಂಬಾ ಜಾಗರೂಕರಾಗಿರುತ್ತಾರೆ. ಅದರಲ್ಲೂ ತಮ್ಮ ಕೂದಲು ಮತ್ತು ತ್ವಚೆಯ ಅಂದಕ್ಕಾಗಿ ತುಂಬಾ ಮುತುವರ್ಜಿಯನ್ನೇ ವಹಿಸುತ್ತಾರೆ. ಒಳ್ಳೆಯ ಸೌಂದರ್ಯ ಉತ್ಪನ್ನಗಳನ್ನೇ ಖರೀದಿಸುತ್ತಾರೆ. ಆದರೆ ನೀವು ಎಷ್ಟೇ ದುಬಾರಿ ಉತ್ಪನ್ನಗಳನ್ನು ಬಳಸಿದರೂ ನೈಸರ್ಗಿಕ ವಿಧಾನಗಳು ನೀಡುವ ಫಲವನ್ನು ಅವುಗಳ ಬಳಕೆಯನ್ನು ಮಾಡಿಯೇ ಅರಿಯಬೇಕು.

ಇಂದು ನಿಮ್ಮ ತ್ವಚೆ ಮತ್ತು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುವ ಪುದೀನಾ ಎಣ್ಣೆ ಮಾಡುವ ಜಾದೂವನ್ನೇ ಇಂದಿಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಪುದೀನಾವನ್ನು ಎಣ್ಣೆಯ ರೂಪದಲ್ಲಿ ಬಳಸಬಹುದಾಗಿದೆ. ಸುವಾಸನೆಯುಕ್ತ ಎಣ್ಣೆ ಇದಾಗಿದ್ದು ಇದನ್ನು ಹಲವಾರು ವಿಧಾನಗಳಲ್ಲಿ ಬಳಕೆ ಮಾಡಬಹುದಾಗಿದೆ. ಇದನ್ನು ಸಂಪೂರ್ಣ ಸುರಕ್ಷಿತವಾಗಿ ತ್ವಚೆಗೆ ಬಳಸಬಹುದಾಗಿದೆ ಹಾಗಿದ್ದರೆ ಬನ್ನಿ ಆ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ...

skincare with pudina
 

1. ತ್ವಚೆಗೆ ಹೊಳಪನ್ನು ಉಂಟುಮಾಡಲು
ಈ ಎಣ್ಣೆಯಲ್ಲಿರುವ ತಂಪಿನ ಅಂಶಗಳು ಆಯಾಸಗೊಂಡ ಮತ್ತು ದಣಿದ ತ್ವಚೆಯನ್ನು ಆರಾಮಗೊಳಿಸುತ್ತದೆ. ಪ್ರತಿದಿನದ ಲೋಶನ್‎ಗೆ ಸ್ವಲ್ಪ ಹನಿಗಳನ್ನು ಹಾಕಿ ಮತ್ತು ಜಾದೂವನ್ನು ನೀವೇ ಕಂಡುಕೊಳ್ಳಿ

skincare with pudina
 

2.ಕೂದಲಿನ ಬೆಳವಣಿಗೆ
ಕೂದಲಿನ ಬುಡಕ್ಕೆ ರಕ್ತಸಂಚಾರವನ್ನು ಸರಾಗಗೊಳಿಸಿ ಕೂದಲು ಬೆಳೆಯುವಂತೆ ಮಾಡುತ್ತದೆ. ನಿಮ್ಮ ನಿತ್ಯದ ಎಣ್ಣೆಗೆ ಪುದೀನಾ ಎಣ್ಣೆಯ ಕೆಲವು ಹನಿಗಳನ್ನು ಹಾಕಿ ಮತ್ತು ಮಸಾಜ್ ಮಾಡಿ.

skincare with pudina
 

3.ಮೊಡವೆ
ಮುಖದ ತ್ವಚೆಯು ಹೆಚ್ಚು ಜಿಡ್ಡುಯುಕ್ತಗೊಳ್ಳುವುದರಿಂದ ಇದು ತಡೆಯುತ್ತದೆ, ತ್ವಚೆಯನ್ನು ನಿರಾಳಗೊಳಿಸಿ ಮತ್ತು ಹೆಚ್ಚಿನ ಹಾನಿಯನ್ನು ತಡೆಗಟ್ಟುತ್ತದೆ. ಮೊಡವೆಗಳನ್ನು ಹೋಗಲಾಡಿಸುತ್ತದೆ.

skincare with pudina
 

4.ಫೇಸ್ ಸ್ಕ್ರಬ್
ಬ್ರೌನ್ ಶುಗರ್ ಮತ್ತು ಆಲೀವ್ ಆಯಿಲ್‎ಗೆ ಕೆಲವು ಹನಿಗಳನ್ನು ಹಾಕಿ ಮತ್ತು ಸ್ಕ್ರಬ್‎ನಂತೆ ಬಳಸಿ. ನಿಮ್ಮ ತ್ವಚೆಯನ್ನು ಹೊಳಪಾಗಿಸಲು ಈ ಸ್ಕ್ರಬ್ ಸಹಕಾರಿ. ತುಟಿಗೂ ಈ ಸ್ಕ್ರಬ್ ಅನ್ನು ಹಚ್ಚಿಕೊಳ್ಳಬಹುದಾಗಿದೆ.

skincare with pudina
 

5.ಟೋನರ್
ಆಪಲ್ ಸೀಡರ್ ವಿನೇಗರ್‎ಗೆ ಕೆಲವು ಹನಿಗಳಷ್ಟು ಪುದೀನಾ ಎಣ್ಣೆಯನ್ನು ಸೇರಿಸಿ. ಮುಖದ ಪಿಎಚ್ ಮಟ್ಟವನ್ನು ನಿರ್ವಹಿಸಲು ಟೋನರ್ ಸಹಕಾರಿಯಾಗಲಿದ್ದು ಜಿಡ್ಡನ್ನು ನಿವಾರಿಸಲಿದೆ.

skincare with pudina
 

6.ಫೇಸ್ ಪ್ಯಾಕ್
ತ್ವರಿತ ಕೂಲಿಂಗ್ ಅನುಭವವನ್ನು ಪಡೆದುಕೊಳ್ಳಲು ಯಾವುದೇ ಫೇಸ್ ಪ್ಯಾಕ್‎ಗೆ ಎಣ್ಣೆಯನ್ನು ಬಳಸಿಕೊಳ್ಳಿ. ನೀವು ಮುಖವನ್ನು ತೊಳೆದುಕೊಂಡ ನಂತರ ಇನ್ನಷ್ಟು ಪ್ರಖರತೆಯನ್ನು ನೀವು ಮುಖದಲ್ಲಿ ಕಾಣುವಿರಿ.

skincare with pudina
 

7.ಒಣ ಕೂದಲು
ಆಲೀವ್ ಆಯಿಲ್ ಅಥವಾ ತೆಂಗಿನೆಣ್ಣೆಯೊಂದಿಗೆ ಪುದೀನಾ ಎಣ್ಣೆಯನ್ನು ಸೇರಿಸಿ ನಿಮ್ಮ ಕೂದಲಿನ ಬುಡ ಮತ್ತು ತುದಿಗೆ ಹಚ್ಚಿಕೊಳ್ಳಿ ಕೂದಲು ಹೊಳೆಯುವುದನ್ನು ನೀವೇ ಗಮನಿಸಿ.

English summary

How To Use Peppermint For Your Skin

Peppermint is best used in its oil form. It is an aromatic oil and can be used for multiple things. It is rich in vitamins and minerals. It is even rich in omega fatty acids, which as we all know, is a godsend for skin and hair.There are many ways you can use it to get overall better skin and hair. You'd be surprised at the amazing ways it can help your skin.
Please Wait while comments are loading...
Subscribe Newsletter