For Quick Alerts
ALLOW NOTIFICATIONS  
For Daily Alerts

ಸೌಂದರ್ಯದ ಸಕಲ ಸಮಸ್ಯೆಗಳಿಗೂ-ಬೆಣ್ಣೆ ಹಣ್ಣಿನ ಚಿಕಿತ್ಸೆ

By Deepak M
|

ಆವಕಾಡೊ ಅಥವಾ ಬೆಣ್ಣೆ ಹಣ್ಣುಗಳನ್ನು ತಿನ್ನಲು ಮಾತ್ರ ಬಳಸುತ್ತಾರೆ ಎಂದು ಊಹಿಸಿರುವವರಿಗಾಗಿ ಇಲ್ಲಿ ಒಂದು ಶುಭಸುದ್ದಿ ಇದೆ. ಹೌದು ಈ ಬೆಣ್ಣೆ ಹಣ್ಣುಗಳು ಬಹುತೇಕ ಎಲ್ಲಾ ಬಗೆಯ ತ್ವಚೆಯ ಸಮಸ್ಯೆಗಳಿಗೆ ರಾಮಬಾಣವೆಂದು ದೃಢಪಟ್ಟಿದೆ. ಅದರಲ್ಲಿಯೂ ಹಣ್ಣಾಗಿರುವ ಆವಕಾಡೊವು ಈ ನಿಟ್ಟಿನಲ್ಲಿ ನಿಮ್ಮ ತ್ವಚೆಗೆ ಉತ್ತಮ ಪರಿಹಾರವನ್ನುಂಟು ನೀಡಬಲ್ಲದು ಎಂದು ತಿಳಿದು ಬಂದಿದೆ. ಇದರಲ್ಲಿ ಹಲವಾರು ವಿಟಮಿನ್‌ಗಳು ಮತ್ತು ಖನಿಜಾಂಶಗಳು ಇದ್ದು, ಇವು ನಿಮ್ಮ ಸೌಂದರ್ಯದ ಸಮಸ್ಯೆಗಳನ್ನು ನಿವಾರಿಸಿ, ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ. ಮೃದು ಮತ್ತು ಹೊಳಪಿನ ತ್ವಚೆಗೆ ಬೆಣ್ಣೆ ಹಣ್ಣಿನ ಪೋಷಣೆ

ಆವಕಾಡೊವು ನಿಮ್ಮ ಕೈ ಮತ್ತು ಕಾಲುಗಳನ್ನು ಸಹ ಮೃದುಗೊಳಿಸಬಲ್ಲದು. ಕೇವಲ ಒಂದು ತಿಂಗಳ ಬಳಕೆಯಿಂದಲೆ ಆವಕಾಡೊಗಳು ತಮ್ಮ ಫಲಿತಾಂಶವನ್ನು ತೋರಿಸಲು ಆರಂಭಿಸುತ್ತವೆ. ಇವು ನಿಮ್ಮ ಮುಖದಲ್ಲಿರುವ ಗೆರೆಗಳು ಮತ್ತು ಸುಕ್ಕುಗಳನ್ನು ನಿವಾರಿಸಿ, ನೀವು ಮತ್ತಷ್ಟು ಯೌವನಭರಿತರಾಗಿ ಕಾಣುವಂತೆ ಮಾಡುತ್ತವೆ. ಈ ಹಣ್ಣುಗಳ ಜೊತೆಗೆ ನೀವು ಇನ್ನು ಕೆಲವೊಂದು ಪದಾರ್ಥಗಳನ್ನು ಸೇರಿಸಿ, ನಿಮ್ಮ ಆಂಟಿ-ಏಜಿಂಗ್ ಕ್ರೀಮ್ ಆಗಿ ಸಹ ಬಳಸಬಹುದು. ಅಲ್ಲದೆ ಬೆಣ್ಣೆ ಹಣ್ಣುಗಳನ್ನು ಬಳಸಿಕೊಂಡು ನೀವು ಹಲವಾರು ಸೌಂದರ್ಯವರ್ಧಕ ಟ್ರಿಕ್‌ಗಳನ್ನು ಮಾಡಬಹುದು. ಇಲ್ಲವೇ ಸುಮ್ಮನೆ ಬೆಣ್ಣೆಹಣ್ಣುಗಳನ್ನು ನಿಮ್ಮ ಮುಖದ ಮೇಲೆ ಸಹ ಉಜ್ಜಿಕೊಳ್ಳಬಹುದು. ಈ ಚಮತ್ಕಾರಿ ಹಣ್ಣುಗಳ ಕುರಿತಾಗಿ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ನಿಮಗಿದೆಯೇ? ಬನ್ನಿ ಮುಂದೆ ಓದಿ....

ಮೇಕಪ್ ರಿಮೂವರ್

ಮೇಕಪ್ ರಿಮೂವರ್

ಹಣ್ಣಾದ ಆವಕಾಡೊವನ್ನು ತೆಗೆದುಕೊಂಡು ಎರಡು ಹೋಳಾಗಿ ಮಾಡಿಕೊಳ್ಳಿ, ಆವಕಾಡೊನಲ್ಲಿರುವ ಎಣ್ಣೆಯಂಶವನ್ನು ಹತ್ತಿಯ ಉಂಡೆಯಿಂದ ಒರೆಸಿ. ಈ ಎಣ್ಣೆಯನ್ನು ನಿಮ್ಮ ಮುಖ ಹಾಗು ಕಣ್ಣಿನಲ್ಲಿರುವ ಮೇಕಪ್ ಅನ್ನು ತೆಗೆಯಲು ಬಳಸಿಕೊಳ್ಳಬಹುದು. ಇದು ನಿಮ್ಮ ಮುಖದಲ್ಲಿರುವ ಮೇಕಪ್ ಅನ್ನು ತೆಗೆಯಲು ಇರುವ ಸ್ವಾಭಾವಿಕ ವಿಧಾನವಾಗಿದೆ. ಈ ವಿಧಾನದಲ್ಲಿ ನಿಮ್ಮ ಮುಖದಲ್ಲಿರುವ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಛ ಮಾಡಿಕೊಳ್ಳಬಹುದು.

ಐ ಸೆರಮ್

ಐ ಸೆರಮ್

ನಾವು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೊರೆಯುವ ಐ ಸೆರಮ್ ಅನ್ನು ಕೊಂಡುಕೊಂಡು ನಮ್ಮ ಕಣ್ಣುಗಳ ಸುತ್ತ ಇರುವ ಸುಕ್ಕುಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದರ ಬದಲಾಗಿ ನೀವು ಮಲಗುವ ಮುನ್ನ ಈ ಹಣ್ಣಿನ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳ ಸುತ್ತ ಮಸಾಜ್ ಮಾಡಿ. ಇದರಲ್ಲಿ ವಿಟಮಿನ್ ಇ ಇರುತ್ತದೆ ಮತ್ತು ಆರೋಗ್ಯಕರವಾದ ಕೊಬ್ಬುಗಳು ಸಹ ಇರುತ್ತದೆ. ಇವುಗಳು ಕಣ್ಣಿನ ಕೆಳಗೆ ಇರುವ ಸುಕ್ಕುಗಳ ನಿವಾರಣೆಯಾಗುತ್ತವೆ.

ಹೇರ್ ಮಾಸ್ಕ್

ಹೇರ್ ಮಾಸ್ಕ್

ಆವಕಾಡೊಗಳಲ್ಲಿ ಬಯೋಟಿನ್ ಅಥವಾ ವಿಟಮಿನ್ ಎಚ್ ಸಮೃದ್ಧವಾಗಿರುತ್ತದೆ. ಈ ವಿಟಮಿನ್ ಕೂದಲ ಬೆಳವಣಿಗೆಗೆ ತೀರಾ ಅಗತ್ಯವಾಗಿರುತ್ತದೆ. ಇದಕ್ಕಾಗಿ ಒಂದು ಹಣ್ಣಾದ ಆವಕಾಡೊವನ್ನು ತೆಗೆದುಕೊಂಡು ಅದನ್ನು ಆಲೀವ್ ಎಣ್ಣೆಯ ಜೊತೆಗೆ ಬೆರೆಸಿಕೊಂಡು ಒಂದು ಉತ್ತಮವಾದ ಹೇರ್ ಮಾಸ್ಕ್ ಮಾಡಿಕೊಳ್ಳಿ. ಈ ಮಾಸ್ಕ್ ಅನ್ನು ನಿಮ್ಮ ತಲೆಗೆ ಲೇಪಿಸಿಕೊಂಡು ಒಂದು ಶವರ್ ಕ್ಯಾಪ್ ಅನ್ನು ತಲೆಗೆ ಹಾಕಿಕೊಳ್ಳಿ. ಇದನ್ನು ಒಂದು ಗಂಟೆ ಹಾಗೆ ನೆನೆಯಲು ಬಿಡಿ, ನಂತರ ಮೆದು ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ.

ಮೆನಿಕ್ಯೂರ್

ಮೆನಿಕ್ಯೂರ್

ಆವಕಾಡೊವನ್ನು ನಿಮ್ಮ ಕೈಗಳನ್ನು ಮೃದು ಮತ್ತು ಸುಂದರ ಮಾಡಲು ಸಹ ಬಳಸಬಹುದು. ಇದಕ್ಕಾಗಿ ಒಂದು ಹಣ್ಣಾದ ಆವಕಾಡೊವನ್ನು ತೆಗೆದುಕೊಂಡು ಅರ್ಧ ಹಣ್ಣಾದ ಬಾಳೆಹಣ್ಣಿನ ಜೊತೆಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನಿಮ್ಮ ಕೈಗಳಿಗೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಇದನ್ನು ಮಾಡಿದ ನಂತರ ನಿಮ್ಮ ಕೈಗಳಿಗೆ ಕೈಗವಸುಗಳನ್ನು ಧರಿಸಿಕೊಂಡು 20 ನಿಮಿಷ ಬಿಡಿ. ನಂತರ ಗ್ಲಿಸರಿನ್ ಅನ್ನು ಲೇಪಿಸಿಕೊಂಡು ನಿಮ್ಮ ಕೈಗಳನ್ನು ತೊಳೆದುಕೊಳ್ಳಿ, ಇದರಿಂದ ನಿಮ್ಮ ಕೈಗಳಿಗೆ ಮೃದುತ್ವ ಬರುತ್ತದೆ.

 ನಿಮ್ಮ ತುಟಿಗಳಿಗೆ ಮೃದುತ್ವ ಬರುತ್ತದೆ

ನಿಮ್ಮ ತುಟಿಗಳಿಗೆ ಮೃದುತ್ವ ಬರುತ್ತದೆ

ಒಂದು ಹಣ್ಣಾದ ಆವಕಾಡೊವನ್ನು ತೆಗೆದುಕೊಂಡು ಅದಕ್ಕೆ ಕೆಲವು ಹನಿ ಪುದಿನಾ ಎಣ್ಣೆಯನ್ನು ಮತ್ತು ಉಪ್ಪನ್ನು ಬೆರೆಸಿಕೊಳ್ಳಿ. ನಂತರ ಈ ಮಿಶ್ರಣದಿಂದ ನಿಮ್ಮ ತುಟಿಯನ್ನು ಮೃದುವಾಗಿ 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಇದು ನಿಮ್ಮ ತುಟಿ ಪ್ರದೇಶಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ತುಟಿಗಳಲ್ಲಿರುವ ನಿರ್ಜೀವ ಕೋಶಗಳನ್ನು ನಿವಾರಿಸುತ್ತದೆ.

English summary

How Avocado Can Solve Beauty Issues

Avocados can be used for almost all skin issues. Ripe avocado serves to be the best for your skin, as the avocado oil is rich in many vitamins and minerals and nourishes your skin from the inside. You just have to know how to use it to resolve your beauty issues and enhance your facial beauty.Here are some of the best tricks that you can do with this beauty ingredient, avocado.
Story first published: Thursday, February 11, 2016, 17:37 [IST]
X
Desktop Bottom Promotion