For Quick Alerts
ALLOW NOTIFICATIONS  
For Daily Alerts

ಆಹಾ ಜೇನು ತುಪ್ಪವೇ, ಏನು ನಿನ್ನ ಹನಿಗಳ ಲೀಲೆ..

By Super
|

ಜೇನುತುಪ್ಪ ಸೇವಿಸಲು ಎಷ್ಟು ರುಚಿವುದುದೋ ಹಾಗೆಯೇ ಆರೋಗ್ಯಕ್ಕೂ ಅಷ್ಟೇ ಹಿತ. ಜೇನಿಗೆ ಜೇನೇ ಸಾಟಿ ಎಂಬ ಮಾತಿದೆ. ಇದರಿಂದ ಅನೇಕ ರೀತಿಯ ಆರೋಗ್ಯಕ ಲಾಭಗಳುಂಟು. ಇದು ನಮಗೆ ಸುಲಭವಾಗಿ ಸಿಗುವಂತಿದ್ದು, ಒಂದು ರೀತಿಯಲ್ಲಿ ಮಾನವರಿಗೆ ಸಂಜೀವಿನಿಯೇ ಸರಿ. ಇದರಿಂದ ನಮ್ಮ ಚರ್ಮದ ಸಮಸ್ಯೆಗಳನ್ನೂ ಸಹ ಪರಿಣಾಮಕಾರಿಯಾಗಿ ನಿವಾರಿಸಬಹುದು ಎಂಬ ಅಂಶವು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು ಇದು ಚರ್ಮಕ್ಕೆ ಉತ್ತಮ ಸೌಂದರ್ಯ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಇದರಲ್ಲಿರುವ ಕೆಲವು ವಿಶಿಷ್ಟ ಗುಣಲಕ್ಷಣದಿಂದ ನಿಮಗೆ ಹೆಚ್ಚು ಉಪಯುಕ್ತವಾಗುತ್ತದೆ. ಚರ್ಮದ ಸಮಸ್ಯೆಯನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ನಿವಾರಿಸುವ ಜೇನಿನ ಫೇಸ್‌ ಪ್ಯಾಕ್ ನಿಜಕ್ಕೂ ಅದ್ಭುತ ಫಲಿತಾಂಶವನ್ನು ನೀಡುತ್ತದೆ. ಈ ಲೇಖನದಲ್ಲಿ ನಿಮಗೆ ಜೇನಿನ ಫೇಸ್ ಪ್ಯಾಕ್‌ಗಳ ಬಳಕೆಯ ಬಗ್ಗೆ ಕೆಲವು ಸಂಗತಿಗಳನ್ನು ನೀಡಲಾಗಿದೆ, ಮುಂದೆ ಓದಿ...

ಪನ್ನೀರಿನೊಂದಿಗೆ ಬೆರೆಸಿ

ಪನ್ನೀರಿನೊಂದಿಗೆ ಬೆರೆಸಿ

ಇದು ಬಹಳ ಸುಲಭ. ಒಂದು ಚಮಚ ಜೇನಿಗೆ ಒಂದು ಚಮಚ ರೋಸ್ ವಾಟರ್ ಅಥವಾ ಪನ್ನೀರನ್ನು ಬೆರೆಸಿ ನಿಮ್ಮ ಮುಖದ ಮೇಲೆ ನಯವಾಗಿ ಹಚ್ಚಿ 10 ನಿಮಿಷ ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಜೇನಿಗೆ ಚರ್ಮದ ಒಳಗಿಂದಲೇ ತೇವಾಂಶ ನೀಡುವ ವಿಶಿಷ್ಟ ಗುಣವಿದ್ದು, ಪನ್ನೀರಿನಲ್ಲಿ ಚರ್ಮವನ್ನು ಕಾಂತಿಯುಕ್ತಗೊಳಿಸುವ ಗುಣವಿದೆ. ಈ ಫೇಸ್ ಪ್ಯಾಕ್ ಅನ್ನು ಒಣ ಮತ್ತು ಒರಟಾದ ಚರ್ಮದವರು ಬಳಸಿದರೆ ಒಳ್ಳೆಯ ಫಲಿತಾಂಶ ನೀಡುತ್ತದೆ.

ಗ್ರೀನ್ ಟೀ + ಜೇನು

ಗ್ರೀನ್ ಟೀ + ಜೇನು

ಬಿಸಿನೀರಿನಲ್ಲಿ ಎರಡು ಅಥವಾ ಮೂರು ಹಸಿರು ಚಹಾ ಇರುವ ಚೀಲಗಳನ್ನು ಕೊಂಚಕಾಲ ಮುಳುಗಿಸಿ. ಬಳಿಕ ಈ ಚೀಲಗಳನ್ನು ಕತ್ತರಿಸಿ ಒಳಗಿನ ಟೀಪುಡಿಯನ್ನು ಒಂದು ಬೋಗುಣಿಯಲ್ಲಿ ಹಾಕಿ ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇನ್ನು ಈ ಲೇಪವನ್ನು ಮುಖ ಮತ್ತು ಗಂಟಲಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ನಯವಾಗಿ ಮಸಾಜ್ ಮಾಡಿ. ಬಳಿಕ ಉಗುರುಬೆಚ್ಚನಿಯ ನೀರಿನಿಂದ ತೊಳೆದುಕೊಳ್ಳಿ. ನಂತರ ಸೋಪು ಉಪಯೋಗಿಸಬೇಡಿ. ಇದರಿಂದ ಮುಖದ ಚರ್ಮ ಕಾಂತಿಯುತವಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.

ಚಕ್ಕೆ ಮತ್ತು ಜೇನು ತುಪ್ಪ

ಚಕ್ಕೆ ಮತ್ತು ಜೇನು ತುಪ್ಪ

ಮುಖದ ಮೇಲೆ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ ಅಥವಾ ಕಪ್ಪು ಕಲೆಗಳನ್ನು ನಿವಾರಿಸಲು ಚಕ್ಕೆ ಮತ್ತು ಜೇನು ತುಪ್ಪದ ಮಾಸ್ಕ್ ತಯಾರಿಸಿಕೊಳ್ಳಬಹುದು. ಈ ಎರಡರ ಸಮ್ಮಿಶ್ರಣವು ಕಪ್ಪು ತಲೆಗಳನ್ನು ನಿವಾರಿಸುವುದರ ಜೊತೆಗೆ ಮುಖದಲ್ಲಿನ ಬ್ಯಾಕ್ಟೀರಿಯಾಗಳನ್ನು ಹೊರದಬ್ಬಿ, ತ್ವಚೆಯ ರಕ್ಷಣೆಯನ್ನು ಸಹ ಮಾಡುತ್ತವೆ.

ಜೇನು+ಸಕ್ಕರೆ

ಜೇನು+ಸಕ್ಕರೆ

ಒಂದು ದೊಡ್ಡಚಮಚ ಜೇನು ಮತ್ತು ಒಂದು ದೊಡ್ಡಚಮಚ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ ಹದಿನೈದು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಮೇಲಿದ್ದ ನಿರ್ಜೀವ ಜೀವಕೋಶಗಳು ತೊಳೆದು ಹೋಗಿ ಚರ್ಮ ಕಾಂತಿಯುತವಾಗುತ್ತದೆ ಹಾಗೂ ಗೌರವರ್ಣ ಪಡೆಯುತ್ತದೆ.

ಮೊಸರಿನೊಂದಿಗೆ ಬೆರೆಸಿ

ಮೊಸರಿನೊಂದಿಗೆ ಬೆರೆಸಿ

2 ಚಮಚ ಜೇನು ಮತ್ತು 1 ಬಾಳೆಹಣ್ಣನ್ನು ತೆಗೆದುಕೊಳ್ಳಿ. ಬಾಳೆಹಣ್ಣಿನಲ್ಲಿ ಅತಿಯಾಗಿರುವ ಬೀಜಗಳನ್ನು ಹೊರತೆಗೆದು ಕಿವುಚಿ ಇಟ್ಟುಕೊಳ್ಳಿ. ಇದನ್ನು ಜೇನಿನೊಂದಿಗೆ ಬೆರೆಸಿ ಪೇಸ್ಟ್ ರೂಪ ಬರುವವರೆಗೆ ಮಿಶ್ರಣ ಮಾಡಿಕೊಳ್ಳಿ. ನಂತರ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಹಾಗೆಯೇ ಬಿಡಿ. ಒಣಗಿದ ನಂತರ ತಂಪಾದ ನೀರಿನಿಂದ ಸ್ವಚ್ಛಗೊಳಿಸಿ. ಈ ಫೇಸ್ ಪ್ಯಾಕ್ ಅನ್ನು ಪ್ರತಿದಿನ ಉಪಯೋಗಿಸಿದರೆ ಯಾವುದೇ ಮಾಯಿಶ್ಚರೈಸರ್‌ನ ಅವಶ್ಯಕತೆ ಇಲ್ಲ. ಇದರ ಉಪಯೋಗದಿಂದ ಚರ್ಮವು ಮೃದುಗೊಂಡು ಕಾಂತಿಯುಕ್ತವಾಗುತ್ತದೆ.

English summary

Honey-based facepacks for better skin

Honey- is one of most simple elements available in abundance, but not many know about its skin benefits. Used in several beauty products, honey makes some of the best face packs that can make you skin look rejuvenated, without any effort.
Story first published: Thursday, February 4, 2016, 13:31 [IST]
X
Desktop Bottom Promotion