For Quick Alerts
ALLOW NOTIFICATIONS  
For Daily Alerts

ಸುಕೋಮಲ ತ್ವಚೆಗಾಗಿ ಮನೆಯಲ್ಲೇ ಮಾಡಿ, ಜೇನಿನ ಫೇಸ್‌ ಪ್ಯಾಕ್!

By Jaya
|

ಮುಖದ ಸೌಂದರ್ಯವೆಂಬುದು ಎಲ್ಲರಿಗೂ ವರವಾಗಿರುವುದಿಲ್ಲ ಆದರೆ ಕೆಲವೊಂದು ಫಲಪ್ರದ ಮನೆಮದ್ದುಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದಾಗಿದೆ. ಸುಂದರ ಸುಕೋಮಲ ತ್ವಚೆ ಎಂದರೆ ಮೊಡವೆ ಮತ್ತು ಕಲೆ ರಹಿತ ಮುಖಾರವಿಂದವಾಗಿದೆ. ಇಂತಹ ಮನೆಮದ್ದಿನ ಪಟ್ಟಿಯಲ್ಲಿರುವ ಸಾಮಾಗ್ರಿಯಾಗಿದೆ ಜೇನು. ನಿಮ್ಮ ತ್ವಚೆಯನ್ನು ಆರೋಗ್ಯಯುತ ಮತ್ತು ಮೃದುವಾಗಿಸುವ ಗುಣವನ್ನು ಹೊಂದಿದೆ.

ಉತ್ಕರ್ಷಣ ನಿರೋಧಿ ಅಂಶಗಳು, ಬ್ಯಾಕ್ಟೀರಿಯಾ ವಿರೋಧಿಯಾಗಿರುವ ಜೇನು ಆದಷ್ಟು ಉತ್ತಮವಾದ ರೀತಿಯಲ್ಲೇ ತ್ವಚೆಯನ್ನು ಮೃದುಗೊಳಿಸುತ್ತದೆ. ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವುದು ಜೇನು ಮತ್ತು ಇತರ ಸಾಮಾಗ್ರಿಯನ್ನು ಬಳಸಿಕೊಂಡು ತಯಾರಿಸಿರುವ ಫೇಸ್ ಪ್ಯಾಕ್ ಕುರಿತಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಫೇಸ್‌ವಾಶ್‌ಗಳು ರಾಸಾಯನಿಕಯುಕತವಾಗಿರುವುದು ನಾವು ಸಾಕಷ್ಟು ಬಾರಿ ನಮ್ಮ ತಾಣದಲ್ಲಿ ತಿಳಿಸಿದ್ದೇವೆ. ಹಾಗಾಗಿ ಇವೆಲ್ಲದರ ಸಹವಾಸ ತೊರೆದು, ಮನೆಯಲ್ಲಿಯೇ ಜೇನು ಮತ್ತು ಇತರ ಸಾಮಾಗ್ರಿಗಳನ್ನು ಬೆರೆಸಿ ತಯಾರಿಸುವ ಫೇಸ್ ಪ್ಯಾಕ್ ಬಗ್ಗೆ ಈ ಲೇಖನದಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ...

Homemade Honey Face Wash For Smooth Skin

ತೆಂಗಿನೆಣ್ಣೆ ಮತ್ತು ಕ್ಯಾಸ್ಟೈಲ್ ಸೋಪನ್ನು ಜೇನಿನ ಜೊತೆಗೆ ಬಳಸಿ ಈ ಫೇಸ್‌ಪ್ಯಾಕ್ ಅನ್ನು ತಯಾರಿಸಲಾಗುತ್ತಿದ್ದು, ಇವು ಮೂರರ ಅಂಶಗಳು ನಿಮ್ಮ ತ್ವಚೆಯನ್ನು ಸುಕೋಮಲ ಮತ್ತು ಹೊಳೆಯುವಂತೆ ಮಾಡುವಲ್ಲಿ ನೆರವಾಗಿದೆ. ತೆಂಗಿನೆಣ್ಣೆ ನೈಸರ್ಗಿಕ ಮಾಯಿಶ್ಚರೈಸರ್ ಎಂದೆನಿಸಿದ್ದು ತ್ವಚೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಕ್ಯಾಸ್ಟೈಲ್ ಸೋಪಿನಲ್ಲಿ ವೆಜಿಟೇಬಲ್ ಎಣ್ಣೆ ಇದ್ದು ಮೊಡವೆ, ಕಲೆಗಳು ಮತ್ತು ತ್ವಚೆಯ ಇತರ ಸಮಸ್ಯೆಗಳನ್ನು ನಿವಾರಿಸುವಲ್ಲಿ ನೆರವನ್ನು ನೀಡುತ್ತದೆ.

ಹಾಗಿದ್ದರೆ ಈ ಫೇಸ್‌ಪ್ಯಾಕ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದನ್ನು ನೀವು ಪ್ರಯತ್ನಿಸಿ ಹೊಳೆಯುವ ಸುಕೋಮಲ ತ್ವಚೆಯನ್ನು ತ್ವರಿತವಾಗಿ ಪಡೆದುಕೊಳ್ಳಬಹುದಾಗಿದೆ

ಬೇಕಾಗುವ ಸಾಮಾಗ್ರಿಗಳು
*3 ಚಮಚಗಳಷ್ಟು ಜೇನು
*1 ಚಮಚ ತೆಂಗಿನೆಣ್ಣೆ
*1 ಚಮಚ ದ್ರವರೂಪದ ಗಟ್ಟಿ ಸೋಪು
*5-10 ಹನಿಗಳಷ್ಟು ನಿಮ್ಮ ಇಷ್ಟದ ಎಣ್ಣೆ

ಬಳಸುವ ವಿಧಾನ
*ಬೌಲ್‌ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಬೆರೆಸಿ ಹ್ಯಾಂಡ್ ಬ್ಲೆಂಡರ್ ಉಪಯೋಗಿಸಿ ಇದನ್ನು ಮಿಶ್ರ ಮಾಡಿಕೊಳ್ಳಿ
*ಪೇಸ್ಟ್ ಮಾಡಿಕೊಳ್ಳಲು ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ
*ಈ ಪೇಸ್ಟ್ ಬಳಸಿ ನಿಮ್ಮ ಮುಖವನ್ನು ತೊಳೆದುಕೊಳ್ಳಿ, ಸಾಮಾನ್ಯ ಫೇಸ್ ಕ್ಲೀನರ್ ಬಳಸಿ ನೀವು ಮಾಡುವಂತೆಯೇ ಇದನ್ನು ಮಾಡಿ
*ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಿ. ಅಂಟುವಿಕೆ ನಿವಾರಣೆಯಾಗಲಿ, ತದನಂತರ ಮೃದುವಾದ ನೈಸರ್ಗಿಕ ಮಾಯಿಶ್ಚರೈಸರ್ ಬಳಸಿ
ದಿನಕ್ಕೆರಡು ಬಾರಿ ಈ ನೈಸರ್ಗಿಕ ಫೇಸ್‌ವಾಶ್ ಅನ್ನು ಬಳಸಿ ನಿಮ್ಮ ಮುಖವನ್ನು ತೊಳೆದುಕೊಳ್ಳಬಹುದಾಗಿದೆ.

English summary

Homemade Honey Face Wash For Smooth Skin

Using honey as a face wash is a centuries-old method, which has been used by people all over the world to get a smooth and supple skin. From zapping zits to providing moisture to the skin, honey is jam-packed with unique properties that make it an ideal natural ingredient for getting a healthier and smoother skin.
Story first published: Wednesday, May 25, 2016, 20:25 [IST]
X
Desktop Bottom Promotion