ಕ್ಯಾರೆಟ್ ಫೇಸ್ ಮಾಸ್ಕ್ ಮೂಲಕ ಮುದ್ದು ಮುಖ ಪಡೆಯಿರಿ!

ಕ್ಯಾರೆಟ್ ದೇಹದ ಮತ್ತು ತ್ವಚೆ ಆರೋಗ್ಯ ಹೆಚ್ಚಿಸುವ ತರಕಾರಿಯಾಗಿದೆ. ಇದನ್ನು ತಿನ್ನಲು ಮಾತ್ರವಲ್ಲ ಮುಖದ ಕಾಂತಿ ಮತ್ತಷ್ಟು ಹೆಚ್ಚಿಸಲು ಫೇಶಿಯಲ್ ಆಗಿ ಉಪಯೋಗಿಸಬಹುದು.

By: Jaya subramanya
Subscribe to Boldsky

ವಾತಾವರಣದ ಪ್ರದೂಷಿತ ಮತ್ತು ಕಲುಷಿತ ಗಾಳಿ ನಿಮ್ಮ ತ್ವಚೆಯಲ್ಲಿ ಹಲವಾರು ಸಮಸ್ಯೆಗಳನ್ನು ತಂದೊಡ್ಡಬಹುದು. ನೈಸರ್ಗಿಕ ವಿಧಾನದಲ್ಲೇ ತ್ವಚೆಯ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ತ್ವಚೆ ಒಣಗುವುದು, ಬಣ್ಣದಲ್ಲಿ ಏರುಪೇರು ಉಂಟಾಗುವುದು ಹೀಗೆ ನಿಮ್ಮ ಮುಖದ ಸೌಂದರ್ಯ ಬಾಡಿ ಹೋಗಬಹುದು.

Carrot Face Masks
 

ಅದಕ್ಕಾಗಿ ನೀವು ಚಿಂತೆ ಮಾಡಬೇಕಾಗಿಲ್ಲ. ಮನೆಯಲ್ಲೇ ತಯಾರಿಸಬಹುದಾದ ಕ್ಯಾರೆಟ್ ಮಾಸ್ಕ್‎ನಿಂದ ಈ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಕ್ಯಾರೆಟ್‎ನಲ್ಲಿ ಬೀಟಾ-ಕ್ಯಾರಟಿನ್ ಅಂಶವಿದ್ದು ಇದು ಮೃತಕೋಶಗಳನ್ನು (dead skin) ರಿಪೇರಿ ಮಾಡುತ್ತದೆ ತ್ವಚೆಯ ಮಾಯಿಶ್ಚರೈಸ್ ಅನ್ನು ಲಾಕ್ ಮಾಡುತ್ತದೆ ಮತ್ತು ಹೊಸ ಕೋಶಗಳನ್ನು ಉತ್ಪತ್ತಿಮಾಡಲು ಸಹಾಯಕವಾಗಿದೆ.

Carrot Face Masks

ಎ,ಡಿ ಮತ್ತು ಕೆ ಅಂಶಗಳು ಕ್ಯಾರೆಟ್‎ನಲ್ಲಿದ್ದು ಇದು ಶಕ್ತಿಯುತ ಉತ್ಕರ್ಷಣ ನಿರೋಧಿ ಅಂಶವನ್ನು ರಚಿಸಲು ಸಹಕಾರಿಯಾಗಿದೆ. ಹಾಗಿದ್ದರೆ ತ್ವಚೆಗೆ ಕ್ಯಾರೆಟ್ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ...   ಕ್ಯಾರೆಟ್ ಫೇಸ್ ಪ್ಯಾಕ್-ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!  
Carrot Face Masks
 

ರೇಡಿಯನ್ಸ್ ಮಾಸ್ಕ್
*ಕ್ಯಾರೆಟ್ ಅನ್ನು ತುರಿದು ಪೇಸ್ಟ್ ಮಾಡಿಕೊಳ್ಳಿ ಇದಕ್ಕೆ ಒಂದು ಚಮಚದಷ್ಟು ಜೇನು ಸೇರಿಸಿ
*ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ
*ಮುಖವನ್ನು ತೊಳೆದುಕೊಂಡು ತೆಳುವಾಗಿ ಮಾಸ್ಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
*30 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ
*ಮೊದಲ ಸಲವೇ ನಿಮ್ಮ ತ್ವಚೆಯಲ್ಲಿ ನೀವು ವ್ಯತ್ಯಾಸವನ್ನು ಕಂಡುಕೊಳ್ಳುತ್ತೀರಿ    

Carrot Face Masks
 

ನೆರಿಗೆಗಳನ್ನು ನಿವಾರಿಸುವ ಮಾಸ್ಕ್
*ಕ್ಯಾರೆಟ್ ಜ್ಯೂಸ್ ತಯಾರಿಸುವಾಗ, ಮೊದಲೇ ಅದರ ತಿರುಳನ್ನು ಪಾತ್ರೆಯಲ್ಲಿ ಎತ್ತಿಟ್ಟುಕೊಳ್ಳಿ
*ಇದಕ್ಕೆ ಒಂದು ಚಮಚ ಜೇನು ಸೇರಿಸಿ, ವಿಟಮಿನ್ ಇ ಕ್ಯಾಪ್ಸುಲ್ ಜೆಲ್ ಸೇರ್ಪಡೆ ಮಾಡಿಕೊಳ್ಳಿ ನಂತರ ಬೇಕಾದಷ್ಟು ಮಿಲ್ಕ್ ಕ್ರೀಮ್ ಸೇರಿಸಿ ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ
*ಮೃದುವಾದ ಕ್ಲೆನ್ಸರ್ ಬಳಸಿಕೊಂಡು ಮುಖವನ್ನು ತೊಳೆದುಕೊಳ್ಳಿ ಮತ್ತು ಮಾಸ್ಕ್ ಹಚ್ಚಿ

Carrot Face Masks

*ತೆಳುವಾಗಿ ಮಾಸ್ಕ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ
*ಇದು ಒಣಗುವವರೆಗೆ ಹಾಗೆಯೇ ಬಿಡಿ ನಂತರ ಸ್ವಚ್ಛವಾಗಿ ತೊಳೆದುಕೊಳ್ಳಿ ಮುಖಕ್ಕೆ ಇಷ್ಟವಾಗುವ ವಿಟಮಿನ್‎ಗಳನ್ನು ಇದು ಒಳಗೊಂಡಿದ್ದು, ಹರ್ಬಲ್ ಕ್ಯಾರೆಟ್ ಮಾಸ್ಕ್ ತ್ವಚೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ    ಆರೋಗ್ಯಕರವಾದ ತ್ವಚೆಗಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

ಸ್ಕಿನ್ ವೈಟ್ನಿಂಗ್ ಮಾಸ್ಕ್
*2 ಚಮಚ ಮಿಲ್ಕ್ ಪೌಡರ್‎ಗೆ ಒಂದು ಚಮಚ ಕ್ಯಾರೆಟ್ ಜ್ಯೂಸ್ ಸೇರಿಸಿ
*ಫೋರ್ಕ್ ಬಳಸಿ ಅದನ್ನು ತಿರುಗಿಸುತ್ತಾ ಇರಿ, ಮೃದುವಾದ ಪೇಸ್ಟ್ ಸಿದ್ಧಪಡಿಸಿ
*ತೆಳುವಾಗಿ ನಿಮ್ಮ ಮುಖ ಮತ್ತು ಕತ್ತಿಗೆ ಇದನ್ನು ಹಚ್ಚಿಕೊಳ್ಳಿ

Carrot Face Masks

*30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ಸ್ಕ್ರಬ್ ಮಾಡಿ ತೊಳೆದುಕೊಳ್ಳಿ
*ವಾರಕ್ಕೆ ಎರಡು ಬಾರಿ ಈ ಮಾಸ್ಕ್ ಹಚ್ಚಿಕೊಂಡು ಹೊಳೆಯುವ ತ್ವಚೆ ಪಡೆದುಕೊಳ್ಳಿ

ಡ್ರೈ ಸ್ಕಿನ್ ಮಾಸ್ಕ್
*ಒಂದು ಪಾತ್ರೆಯನ್ನು ತೆಗೆದುಕೊಂಡು, ಇದಕ್ಕೆ ಚಮಚದಷ್ಟು ಸೌತೆಕಾಯಿ ರಸ ಸೇರಿಸಿ, ಒಂದು ಚಮಚ ಕ್ಯಾರೆಟ್ ಜ್ಯೂಸ್ ಬೆರೆಸಿ ಮತ್ತು 10 ಹನಿ ಬಾದಾಮಿ ಎಣ್ಣೆಯನ್ನು ಸೇರಿಸಿಕೊಳ್ಳಿ
*ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿ ನಿಮ್ಮ ಮುಖಕ್ಕೆ ವೃತ್ತಾಕಾರವಾಗಿ ಇದನ್ನು ಹಚ್ಚಿಕೊಂಡು ಮಸಾಜ್ ಮಾಡಿ
*5 ನಿಮಿಷಗಳ ಕಾಲ ಹೀಗೆಯೇ ಮಾಡಿ ನಂತರ 15 ನಿಮಿಷ ಬಿಟ್ಟುಬಿಡಿ
*ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ

Carrot Face Masks

*ನಿಮ್ಮ ತ್ವಚೆಯನ್ನು ಈ ಮಾಸ್ಕ್ ಹೈಡ್ರೇಟ್ ಮಾಡುತ್ತದೆ, ಮೃದುವಾಗಿಸುತ್ತದೆ ಜಿಡ್ಡಿನ ತ್ವಚೆಗೆ ಒಂದು ಚಮಚ ಕಡಲೇಹಿಟ್ಟನ್ನು ತೆಗೆದುಕೊಂಡು ಒಂದು ಚಮಚ ಕ್ಯಾರೆಟ್ ಜ್ಯೂಸ್ ಬೆರೆಸಿ ನಂತರ ಕೆಲವು ಹನಿ ಲಿಂಬೆ ರಸ ಸೇರಿಸಿ
*ಮಜ್ಜಿಗೆಯನ್ನು ಬಳಸಿಕೊಂಡು ಮೃದುವಾದ ಪೇಸ್ಟ್ ತಯಾರಿಸಿ ಗಂಟುಗಳು ಬರದಂತೆ ಕಲಸಿ
*ನಿಮ್ಮ ಮುಖ ಮತ್ತು ಕುತ್ತಿಗೆಗೆ ತೆಳುವಾಗಿ ಮಾಸ್ಕ್ ಹಚ್ಚಿಕೊಳ್ಳಿ ಒಣಗಲು ಬಿಡಿ, ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ *ಹೆಚ್ಚಿನ ಎಣ್ಣೆಯನ್ನು ಇದು ನಿವಾರಿಸುತ್ತದೆ, ಮತ್ತು ತ್ವಚೆಯು ಹೊಳೆಯುವಂತೆ ಮಾಡುತ್ತದೆ.    ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ

ಡಿ - ಟ್ಯಾನಿಂಗ್ ಮಾಸ್ಕ್
*ಒಂದು ಪಾತ್ರೆಯನ್ನು ತೆಗೆದುಕೊಂಡು, ಮೊಟ್ಟೆಯಿಂದ ಯೋಕ್ ಅನ್ನು ಬೇರ್ಪಡಿಸಿ
*ಚಮಚದಷ್ಟು ಜೇನು ಸೇರಿಸಿ, ಕ್ಯಾರೆಟ್ ರಸವನ್ನು ಮಿಶ್ರ ಮಾಡಿ ಮತ್ತು ಸಮಪ್ರಮಾಣದಲ್ಲಿ ಮೊಸರು ಹಾಗೂ ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ
*ಫೋರ್ಕ್ ಬಳಸಿಕೊಂಡು, ಇದನ್ನು ಚೆನ್ನಾಗಿ ಕಲಸಿ, ಮೃದುವಾದ ಪೇಸ್ಟ್ ತಯಾರಿಸಿ

Carrot Face Masks

*ನಿಮ್ಮ ಮುಖ ಮತ್ತು ಕುತ್ತಿಗೆಗೆ ಪೇಸ್ಟ್ ಹಚ್ಚಿಕೊಳ್ಳಿ
*ಮುಖದಲ್ಲಿ ಬಿಗಿತ ಬರುವವರೆಗೆ ಹಾಗೆಯೇ ಬಿಡಿ
*ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ
*ನಿಮ್ಮ ತ್ವಚೆಯನ್ನು ರಿಪೇರಿ ಮಾಡಲು ಈ ಕ್ಯಾರೆಟ್ ಮಾಸ್ಕ್ ಸಹಕಾರಿ, ಟ್ಯಾನ್ ಅನ್ನು ಹೋಗಲಾಡಿಸಿ ನಿಮ್ಮ ತ್ವಚೆ ಹೊಳೆಯುವಂತೆ ಮಾಡುತ್ತದೆ.

Story first published: Tuesday, November 15, 2016, 7:05 [IST]
English summary

Homemade Carrot Face Masks For Glowing Skin!

Carrot is a boon to your skin and we are not even exaggerating! Imagine your skin as a parched dry land that is cracking, flaking, muddy and dry. Carrot is that fountain of wholesome goodness, which can breathe life into your skin! And here is how.
Please Wait while comments are loading...
Subscribe Newsletter