For Quick Alerts
ALLOW NOTIFICATIONS  
For Daily Alerts

ತುಟಿಯ ಅಂದ ತೊಂಡೆ ಹಣ್ಣಿನಂತಿರಬೇಕು..! ಏನಂತೀರಿ?

By Cm Prasad
|

ನಿಮ್ಮ ದೇಹಕ್ಕೆ ಮುಖವು ಎಷ್ಟು ಭೂಷಣವೋ ಹಾಗೆಯೇ ಮುಖಕ್ಕೆ ತುಟಿಯೇ ಭೂಷಣ. ತುಟಿಗಳು ಎಷ್ಟು ಅಂದವಾಗಿರುತ್ತದೋ ನಿಮ್ಮ ಮುಖವು ಅಷ್ಟೇ ಲಕ್ಷಣವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ ನಮ್ಮ ಸುತ್ತಮುತ್ತಲಿನ ವಾತಾವರಣ, ನಾವು ಮಾಡುವ ಕೆಲಸ ಇತ್ಯಾದಿ ಕಾರಣಗಳಿಂದ ತುಟಿಗಳು ಕಪ್ಪಾಗುವ ಸಂಭವವಿರುತ್ತದೆ. ಇದು ನಿಮಗೆ ತಕ್ಷಣಕ್ಕೆ ಕಾಣದಿದ್ದರೂ ತಡವಾಗಿಯಾದರೂ ನಿಮ್ಮ ಗಮನಕ್ಕೆ ಬರದೆ ಇರದು. ಕೆಲವೊಂದು ಬಾರಿ ನೀವು ಕಟ್ಟುನಿಟ್ಟಿನ ಆಹಾರ ಪದ್ಧತಿ ಅನುಸರಿಸುತ್ತಿದ್ದರೂ, ಕ್ರಮವಾದ ವ್ಯಾಯಾಮ ಮಾಡುತ್ತಿದ್ದರೂ ಜೊತೆಗೆ ದುಬಾರಿ ಬೆಲೆಯ ತುಟಿಗೆ ಹಚ್ಚುವ ಲಿಪ್ ಬಾಮ್ ಬಳಸಿದರೂ ನಿಮ್ಮ ತುಟಿಯ ಅಂದ ಹೆಚ್ಚುವುದಿಲ್ಲ. ಈ ಸಮಸ್ಯೆಗೆ ನಿರಾಶರಾಗದಿರಿ. ಈ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಪರಿಹಾರ.

ನಿಮ್ಮ ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ನಿಮ್ಮ ತುಟಿಗಳ ಅಂದವನ್ನು ಸುಲಭವಾಗಿ ಹೆಚ್ಚಿಸಬಹುದು. ಈ ಲೇಖನದಲ್ಲಿ ನಿಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಉಪಯೋಗಿಸಿ ನಿಮ್ಮ ತುಟಿಗಳಿಗೆ ತೇವಾಂಶ ಮತ್ತು ತುಟಿಯ ಕಳೆಹಚ್ಚಿಸುವ ರಂಗನ್ನು ನೀಡಲು ಸಹಕಾರಿಯಾಗುವ ಕೆಲ ವಿಶೇಷ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಇವುಗಳನ್ನು ಉಪಯೋಗಿಸಿ ನಿಮ್ಮ ತುಟಿಗಳ ಅಂದವನ್ನು ಹೆಚ್ಚಿಸಿಕೊಳ್ಳಿ. ಗುಲಾಬಿ ಬಣ್ಣದ ತುಟಿಯ ಸೌಂದರ್ಯಕ್ಕಾಗಿ ಟಿಪ್ಸ್

Home remedies to cure dark lips

ಕ್ರಮವಾದ ವಾರಕ್ಕೊಮ್ಮೆ ಸ್ಕ್ರಬ್
ನಿಮ್ಮ ತುಟಿಗಳಲ್ಲಿರುವ ಸತ್ತ ಜೀವಕೋಶಗಳನ್ನು ನಾಶಮಾಡಲು ನೈಸರ್ಗಿಕ ವಿಧಾನದ ಸ್ಕ್ರಬ್ ಅನ್ನು ವಾರಕ್ಕೊಮ್ಮೆ ಕ್ರಮವಾಗಿ ಉಪಯೋಗಿಸಿ. ಇದಕ್ಕೆ ಸುಲಭ ಉಪಾಯವೆಂದರೆ ಕೆಲವು ಹನಿಗಳ ಆಲಿವ್ ತೈಲ ಮತ್ತು 1 ಚಮಚ ಸಕ್ಕರೆಯನ್ನು ಮಿಶ್ರಣ ಮಾಡಿ ನಿಮ್ಮ ತುಟಿಗಳಿಗೆ ಸ್ಕ್ರಬ್ ರೀತಿಯಲ್ಲಿ ಬಳಸಿ. ನಂತರ ತುಟಿಗಳನ್ನು ಸ್ವಚ್ಛಗೊಳಿಸಿ. ತದನಂತರ ತುಟಿಗಳಿಗೆ ಬೆಣ್ಣೆ ಹಚ್ಚಿಕೊಳ್ಳಿ. ಇದರಿಂದ ತುಟಿಗಳು ಮೃದುಗೊಳ್ಳಲಿವೆ.

ಲಿಂಬೆ
ಲಿಂಬೆಯ ಉಪಯೋಗ ನಿಜಕ್ಕೂ ಹೆಚ್ಚು ಪರಿಣಾಮಕಾರಿ. ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸಿ ಚರ್ಮದ ಕಲೆಗಳನ್ನು ದೂರಮಾಡುತ್ತದೆ. ಅಲ್ಲದೇ ನಿಮ್ಮ ತುಟಿಗಳಿಗೆ ನೈಸರ್ಗಿಕವಾಗಿ ಕಾಂತಿಯನ್ನು ಹೆಚ್ಚಿಸುತ್ತದೆ. ಲಿಂಬೆಯನ್ನು ಹಿಂಡಿ ಅದರ ರಸವನ್ನು ಮಲಗುವ ಮುನ್ನ ತುಟಿಗಳಿಗೆ ಹಚ್ಚಿಕೊಳ್ಳಿ. ಈ ವಿಧಾನವನ್ನು ಕೆಲವು ತಿಂಗಳುಗಳ ಕಾಲ ಕ್ರಮವಾಗಿ ಅನುಸರಿಸಿ. ಇಲ್ಲವಾದಲ್ಲಿ ಲಿಂಬೆಯ ಹೋಳಿನ ಮೇಲೆ ಸಕ್ಕರೆಯನ್ನು ಬೆರೆಸಿ ನಿಮ್ಮ ತುಟಿಗಳಿಗೆ ಸ್ಕ್ರಬ್ ರೀತಿಯಲ್ಲಿ ತಿಕ್ಕಿಕೊಳ್ಳಿ. ಇದರಿಂದ ನಿಮ್ಮ ತುಟಿಗಳ ಮೇಲಿರುವ ಸತ್ತ ಜೀವಕೋಶಗಳು ನಾಶವಾಗುತ್ತವೆ ಅಲ್ಲದೇ ಹೊಸ ಜೀವಕೋಶಗಳು ಉತ್ಪತ್ತಿಯಾಗಲು ನೆರವಾಗುತ್ತದೆ.

ಬೀಟ್ರೂಟ್ ತುಟಿಯ ಸೌಂದರ್ಯಕ್ಕೆ ಬೀಟ್‌ರೂಟ್ ಲಿಪ್ ಬಾಮ್
ನಿಮ್ಮ ತುಟಿಗಳಿಗೆ ಗುಲಾಬಿ ವರ್ಣ ತರಿಸುವ ಮತ್ತೊಂದು ವಿಧಾನವೆಂದರೆ ಬೀಟ್ರೂಟ್‌ನ ಬಳಕೆ. ಇದರಲ್ಲಿರುವ ವಿಶಿಷ್ಟ ಗುಣದಿಂದ ನಿಮ್ಮ ತುಟಿಗಳ ವರ್ಣ ಹೆಚ್ಚಾಗುತ್ತದೆ. ಮಲಗುವ ಮುನ್ನ ತಾಜಾ ಬೀಟ್ರೂಟ್ ನ ರಸವನ್ನು ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. ಬೆಳಗ್ಗೆ ಎದ್ದ ಕೂಡಲೇ ತುಟಿಗಳನ್ನು ಸ್ವಚ್ಛಗೊಳಿಸಿರಿ. ಇದರಲ್ಲಿರುವ ಬಣ್ಣದಿಂದ ನಿಮ್ಮ ತುಟಿಗಳಿಗೆ ನೈಸರ್ಗಿಕವಾಗಿ ಅಂದ ನೀಡಲು ನೆರವಾಗುತ್ತದೆ. ಈ ವಿಧಾನವನ್ನು ಪ್ರತಿದಿನ ಮಲಗುವ ಮುನ್ನ ಅನುಸರಿಸಿ.


ಮತ್ತೊಂದು ವಿಧಾನವೆಂದರೆ, ಬೀಟ್ರೂಟ್ ರಸ ಮತ್ತು ಕ್ಯಾರೆಟ್ ರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ನಿಮ್ಮ ತುಟಿಗಳಿಗೆ ಹಚ್ಚಿಕೊಳ್ಳಿ. ಇದನ್ನು 10 ನಿಮಿಷಗಳ ಕಾಲ ನಯವಾಗಿ ತಿಕ್ಕಿಕೊಳ್ಳಿ. ನಂತರ ಬೆಚ್ಚನೆಯ ನೀರಿನಿಂದ ಸ್ವಚ್ಛಗೊಳಿಸಿರಿ. ಈ ಪ್ರಕ್ರಿಯೆಯನ್ನು ಒಂದು ಅಥವಾ ಎರಡು ವಾರ ಪ್ರತಿದಿನ ಅನುಸರಿಸಿ. ಇದರಿಂದ ಉತ್ತಮ ಫಲಿತಾಂಶ ದೊರೆಯಲಿದೆ. ಕಪ್ಪು ತುಟಿಯ ಬದಲು ಕೆಂಪು ತುಟಿ ನಿಮ್ಮದಾಗಬೇಕೆ?

ಜ್ಯೂಸ್ ಲಿಪ್ ಮಾಸ್ಕ್ ಪ್ರಯತ್ನಿಸಿ

ನೀವು ಎಂದಾದರು ಒಡೆದ ತುಟಿಗೆ ಜ್ಯೂಸ್ ಮಾಸ್ಕ್ ಪ್ರಯತ್ನಿಸಿ ನೋಡಿದ್ದೀರಾ. ನಿಮಗೆ ಇಷ್ಟವಾದ ಹಣ್ಣ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ತುಟಿ ಯಾವಾಗ ಒಣಗುತ್ತದೋ, ಆಗ ಅದರ ಮೇಲೆ ಲೇಪಿಸಿ. ಹಣ್ಣಿನಲ್ಲಿರುವ ವಿಟಮಿನ್‌ಗಳು ನಿಮ್ಮ ತುಟಿಗಳನ್ನು ಮೃದುಗೊಳಿಸಲು ಸಹಾಯ ಮಾಡುತ್ತವೆ.
English summary

Home remedies to cure dark lips

So lately you have been seeing that your lips have been turning black and losing its shine and luster. Although you may be taking healthy food, going for regular exercises and stocking up on expensive lip balms, but none of it is helping you. So how about going the home-remedy way. So, here are few simple and easy home remedies which will help you to bring back the moisture and pinkness of your lips back.
X
Desktop Bottom Promotion