For Quick Alerts
ALLOW NOTIFICATIONS  
For Daily Alerts

ಬರೀ ಎರಡೇ ವಾರದಲ್ಲಿ ಮುಖದ ಕಲೆ ಮಂಗಮಾಯ...

By Arshad
|

ಚರ್ಮದಲ್ಲಿ ಯಾವುದಾದರೂ ಗಾಯ, ಮೊಡವೆ, ಕೀವುತುಂಬಿದ ಗುಳ್ಳೆ, ಬೆಂಕಿ ಮೊದಲಾದ ತೊಂದರೆಗಳು ಎದುರಾಗಿ ವಾಸಿಯಾದ ಬಳಿಕ ಆ ಸ್ಥಳದಲ್ಲಿ ಶಾಶ್ವತವಾದ ಕಲೆ ಅಥವಾ ಗುರುತು ಉಳಿದುಕೊಳ್ಳುತ್ತದೆ. ಇದು ಅಕ್ಕಪಕ್ಕದ ಚರ್ಮದ ಬಣ್ಣಕ್ಕಿಂತ ಗಾಢವಾಗಿರುವ ಕಾರಣ ಇದು ಎದ್ದು ಕಾಣುತ್ತದೆ. ಕಾಲಕ್ರಮೇಣ ಈ ಬಣ್ಣ ಕೊಂಚ ಗಾಢತೆಯನ್ನು ಕಳೆದುಕೊಂಡರೂ ಬಹುತೇಕ ಬಣ್ಣ ಹಾಗೇ ಉಳಿಯುತ್ತದೆ. ಒಂದು ವೇಳೆ ಈ ಕಲೆಗಳು ಮುಖದ ಮೇಲೆ ಅಥವಾ ಕುತ್ತಿಗೆ, ಕೈ, ಭುಜ ಮೊದಲಾದ ಭಾಗಗಳ ಮೇಲಿದ್ದರೆ ಕೊಂಚ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ನಯಾ ಪೈಸೆ ಖರ್ಚಿಲ್ಲದೆ ತ್ವಚೆಯ ಕಾಂತಿ ಹೆಚ್ಚಿಸಿಕೊಳ್ಳಿ!

ಶುಭಸುದ್ದಿ ಎಂದರೆ ಈ ಕಲೆಗಳನ್ನು ಸ್ವಾಭಾವಿಕ ವಿಧಾನಗಳಿಂದ ಸಾಕಷ್ಟು ಮಟ್ಟಿಗೆ, ಬಹುತೇಕ ಸಂಪೂರ್ಣವಾಗಿ ಸಹಜವರ್ಣಕ್ಕೆ ತರಲು ಸಾಧ್ಯವಿದೆ. ಕಲೆಯನ್ನು ನಿವಾರಿಸಲು ಇದಕ್ಕೂ ಮೊದಲು ಹತ್ತು ಹಲವಾರು ವಿಧಾನಗಳನ್ನು ಅನುಸರಿಸಿದ್ದರೂ ಪರಿಣಾಮ ಮಾತ್ರ ಸೊನ್ನೆಯಾಗಿತ್ತು. ಬದಲಿಗೆ ಕಲೆಗಳು ಇನ್ನಷ್ಟು ವಿಸ್ತರಿಸಿ ಮುಜುಗವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿತ್ತು. ಸುಂದರವಾಗಿ ಕಾಣಲು ಯದ್ವಾ-ತದ್ವಾ ಕ್ರೀಮ್‌‌ ಬಳಸಬೇಡಿ!

ಆದರೆ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ವಿಧಾನಗಳು ಸುರಕ್ಷಿತವೂ, ಪರಿಣಾಮಕಾರಿಯೂ, ಅಗ್ಗವೂ ಮತ್ತು ಸುಲಭವಾದಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದವೂ ಆಗಿವೆ. ಇವು ಕಲೆಯನ್ನು ನಿವಾರಿಸುವ ಜೊತೆಗೇ ಚರ್ಮದ ವರ್ಣವನ್ನು ಸಹಜವರ್ಣಕ್ಕೆ ಬರಲು ಸಹಕರಿಸುತ್ತದೆ. ಸಹಜಕಾಂತಿಯನ್ನು ಹೆಚ್ಚಿಸುವ ಮೂಲಕ ಸಹಜ ಸೌಂದರ್ಯ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೆ ಈ ಕ್ರೀಮುಗಳ ಬಳಕೆಯಿಂದ ಎರಡೇ ವಾರದಲ್ಲಿ ಗಮನಾರ್ಹ ಬದಲಾವಣೆಯನ್ನು ಪಡೆಯಬಹುದು.

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 1

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 1

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಸಿಯಾ ಬೆಣ್ಣೆ (shea butter) ಅರ್ಧ ಕಪ್, ವಿಟಮಿನ್ ಇ ಮಾತ್ರೆಗಳು - ಮೂರು, ಈಗತಾನೇ ಹಿಂಡಿದ ಲಿಂಬೆಯ ರಸ ಎರಡು ದೊಡ್ಡ ಚಮಚ. ಮೊದಲು ಬೆಣ್ಣೆಯನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಬಿಸಿಮಾಡಿ ಕರಗಿಸಿ ಕೊಂಚ ಬಿಸಿ ಇದ್ದಂತೆಯೇ ಒಲೆಯಿಂದ ಕೆಳಗಿಳಿಸಿ. (ಉಗುರು ಬೆಚ್ಚಗಾದರೆ ಸಾಕು) ಬಳಿಕ ವಿಟಮಿನ್ ಇ ಕ್ಯಾಪ್ಯೂಲುಗಳನ್ನು ತೆರೆದು ಅದರೊಳಗಿನ ಎಣ್ಣೆಯನ್ನು ಸುರುವಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಇದಕ್ಕೆ ಲಿಂಬೆಹಣ್ಣಿನ ರಸ ಸೇರಿಸಿ ಕಲಕಿ. ಬಳಿಕ ಗಾಳಿಯಾಡದ ಬಾಟಲಿ ಅಥವಾ ಚಿಕ್ಕ ಜಾಡಿಯಲ್ಲಿ ಸಂಗ್ರಹಿಸಿ. ಈ ಲೇಪನವನ್ನು ದಿನಕ್ಕೆ ಎರಡು ಬಾರಿ ಕಲೆಗಳ ಮೇಲೆ ವೃತ್ತಾಕಾರದ ಮಸಾಜ್ ಮೂಲಕ ಹಚ್ಚಿ.

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 2

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 2

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಒಂದು ದೊಡ್ಡ ಚಮಚ ಜೇನು, ಒಂದು ದೊಡ್ಡಚಮಚ ಆಲಿವ್ ಎಣ್ಣೆ, ನಾಲ್ಕು ಹನಿ ಲ್ಯಾವೆಂಡರ್ ಎಣ್ಣೆ ಮತ್ತು ಕಾಲು ಕಪ್ ಕೋಕೋ ಬೆಣ್ಣೆ (cocoa butter).

ಒಂದು ಚಿಕ್ಕ ಪಾತ್ರೆಯಲ್ಲಿ ಕೋಕೋ ಬೆಣ್ಣೆಯನ್ನು ಕರಗಿಸಿ ಉಗುರುಬೆಚ್ಚಗೆ ಬಿಸಿ ಆದ ಬಳಿಕ ಆಲಿವ್ ಎಣ್ಣೆ ಹಾಕಿ, ಇದು ಕರಗಿದ ಬಳಿಕ ಜೇನು ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಹಾಕಿ ಕಲಕಿ ಕೊಂಚ ಕಾಲ ಹಾಗೇ ಬಿಡಿ. ತಣಿದ ಬಳಿಕ ಗಾಳಿಯಾಡದ ಜಾಡಿ ಅಥವಾ ಬಾಟಲಿಯೊಂದರಲ್ಲಿ ಸಂಗ್ರಹಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಈ ಲೇಪನವನ್ನು ಕಲೆಗಳ ಮೇಲೆ ವೃತ್ತಾಕಾರದಲ್ಲಿ ಮಸಾಜ್ ಮೂಲಕ ಹಚ್ಚಿ.

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 3

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 3

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ನಾಲ್ಕು ಚಿಕ್ಕಚಮಚ ಲಿಂಬೆರಸ, ಒಂದು ಮೊಟ್ಟೆಯ ಬಿಳಿಭಾಗ, ಮತ್ತು ನಾಲ್ಕು ಚಿಕ್ಕಚಮಚ ಜೇನು. ಇವೆಲ್ಲವನ್ನೂ ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಹಾಕಿ ಮಿಶ್ರಣ ಮಾಡಿ ಗಾಳಿಯಾಡದ ಭರಣಿ ಅಥವಾ ಬಾಟಲಿಯಲ್ಲಿ ಸಂಗ್ರಹಿಸಿ. ಈ ಲೇಪನವನ್ನು ದಿನಕ್ಕೆ ಎರಡು ಬಾರಿ ಕಲೆಗಳಿರುವಲ್ಲಿ ನಯವಾದ ಮಸಾಜ್ ಮೂಲಕ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 4

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 4

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಮೂರು ದೊಡ್ಡಚಮಚ ಸೌತೆಕಾಯಿಯ ರಸ, ಹತ್ತು ತೊಟ್ಟು ಲ್ಯಾವೆಂಡರ್ ಎಣ್ಣೆ, ನಾಲ್ಕು ದೊಡ್ಡ ಚಮಚ ಕೊಬ್ಬರಿ ಎಣ್ಣೆ ಮತ್ತು ಎರಡು ದೊಡ್ಡಚಮಚ ಜೇನು ಮೇಣ. ಮೊದಲು ಚಿಕ್ಕ ಪಾತ್ರೆಯಲ್ಲಿ ಜೇನುಮೇಣವನ್ನು ಕರಗಿಸಿ ಉಗುರುಬೆಚ್ಚಗಾಗುವಷ್ಟು ಮಾತ್ರ ಬಿಸಿಮಾಡಿ. ಇದಕ್ಕೆ ಸೌತೆ ರಸ, ಲ್ಯಾವೆಂಡರ್ ಎಣ್ಣೆ, ಕೊಬ್ಬರಿ ಎಣ್ಣೆಗಳನ್ನು ಒಂದಾದ ಬಳಿಕ ಒಂದರಂತೆ ಸೇರಿಸಿ ಕಲಕಿ. ಬಳಿಕ ಗಾಳಿಯಾಡದ ಭರಣಿ ಅಥವಾ ಬಾಟಲಿಯಲ್ಲಿ ಸಂಗ್ರಹಿಸಿ. ಪ್ರತಿದಿನ ಬೆಳಿಗ್ಗೆ ಮತ್ತು ಮಲಗುವ ಮುನ್ನ ನಯವಾದ ಮಸಾಜ್ ಮೂಲಕ ಕಲೆಗಳಿರುವಲ್ಲಿ ಹಚ್ಚಿಕೊಳ್ಳಿ.

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 5

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 5

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಒಂದು ದೊಡ್ಡ ಚಮಚ ಸೇಬಿನ ಶಿರ್ಕಾ, ಒಂದು ದೊಡ್ಡ ಚಮಚ ಕೋಕೋ ಬೆಣ್ಣೆ, ಎರಡು ದೊಡ್ಡ ಚಮಚ ಅಡುಗೆ ಸೋಡಾ, ಎರಡು ದೊಡ್ಡ ಚಮಚ ಮೀನಿನೆಣ್ಣೆ (cod liver oil) ಮತ್ತು ಎರಡು ದೊಡ್ಡಚಮಚ ಬೆಳ್ಳುಳ್ಳಿ ಎಣ್ಣೆ. ಮೊದಲು ಚಿಕ್ಕ ಪಾತ್ರೆಯಲ್ಲಿ ಕೋಕೋ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿ ಕರಗಿಸಿ. ಉಗುರುಬೆಚ್ಚನೆಯಷ್ಟು ಬಿಸಿಯಾದ ಬಳಿಕ ಉಳಿದೆಲ್ಲಾ ಸಾಮಾಗ್ರಿಗಳನ್ನು ಸೇರಿಸಿ ಮಿಶ್ರಣ ಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಲೇಪನವನ್ನು ದಿನಕ್ಕೆ ಎರಡು ಬಾರಿ ನಯವಾದ ಮಸಾಜ್ ಮೂಲಕ ಹಚ್ಚಿ.

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 6

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 6

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ 2 ಆಸ್ಪಿರಿನ್ ಮಾತ್ರೆಗಳು (ನಯವಾಗಿ ಪುಡಿಯಾಗಿಸಿದ್ದು), ಎರಡು ವಿಟಮಿನ್ ಕ್ಯಾಪ್ಯೂಲುಗಳಿಂದ ಸಂಗ್ರಹಿಸಿದ ವಿಟಮಿನ್ ಇ ಎಣ್ಣೆ, ಒಂದು ದೊಡ್ಡಚಮಚ ಕೋಕೋ ಬೆಣ್ಣೆ ಮತ್ತು ಎರಡು ಚಮಚ ಆಲಿವ್ ಎಣ್ಣೆ. ಮೊದಲು ಚಿಕ್ಕ ಪಾತ್ರೆಯಲ್ಲಿ ಕೋಕೋ ಬೆಣ್ಣೆ ಕರಗಿಸಿ ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ. ಬಳಿಕ ಇತರ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಶ್ರಣ ಮಾಡಿ ಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಲೇಪನವನ್ನು ದಿನಕ್ಕೆ ಎರಡು ಬಾರಿ ಕಲೆಗಳಿರುವಲ್ಲಿ ನಯವಾದ ಮಸಾಜ್ ಮೂಲಕ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 7

ಮನೆಯಲ್ಲಿಯೇ ತಯಾರಿಸಿದ ಕ್ರೀಮ್ - 7

ಇದಕ್ಕೆ ಬೇಕಾಗುವ ಸಾಮಾಗ್ರಿಗಳೆಂದರೆ ಒಂದು ದೊಡ್ಡ ಚಮಚ ಕ್ಯಾಮೋಮೈಲ್ ಟೀ, ಒಂದು ದೊಡ್ಡಚಮಚ ಮೊಸರು, ಎರಡು ಚಮಚ ಜೇನುಮೇಣ, ಒಂದು ದೊಡ್ಡ ಚಮಚ ಟೀ ಮರದ ಎಣ್ಣೆ (tea tree oil) ಮತ್ತು ಒಂದು ದೊಡ್ಡ ಚಮಚ ಆಲಿವ್ ಎಣ್ಣೆ. ಮೊದಲು ಜೇನುಮೇಣವನ್ನು ಚಿಕ್ಕಪಾತ್ರೆಯಲ್ಲಿ ಕರಗಿಸಿ ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ. ಬಳಿಕ ಉಳಿದೆಲ್ಲಾ ಸಾಮಾಗ್ರಿಗಳನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ದಿನಕ್ಕೆ ಎರಡು ಬಾರಿ ನಯವಾದ ಮಸಾಜ್ ಮೂಲಕ ಹಚ್ಚಿ.

English summary

Home-made Creams To Remove Face Marks In Just 2 Weeks

The scars or marks on the skin, especially on the skin of the face, spoil the beauty no matter how healthy your skin is. These home-made creams also moisturise, nourish and make your skin get a radiant glow. Read on the article to know the best home-made creams for scars and marks on the face that can be treated in less than 2 weeks.
X
Desktop Bottom Promotion