For Quick Alerts
ALLOW NOTIFICATIONS  
For Daily Alerts

ಹಣೆ ಗಲ್ಲ ಮೂಗಿನ ಬಳಿ ಕಾಡುವ ಮೊಡವೆಗೆ ಕಾರಣವೇನು?

By Manasa K M
|

ಮೊಡವೆ ಎಂದೊಡನೆ ಖಿನ್ನರಾಗುವ ಮಹಿಳೆಯರೆಷ್ಟೋ ಜನ. ಮೊಡವೆ ನಮ್ಮ ಅಂದವನ್ನು ಹಾಳು ಮಾಡುವುದರಲ್ಲಿ ಅತಿ ದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ ಮೊಡವೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು ಮುಖ್ಯ. ಮನೆಮದ್ದಿನ ಮಾಯಾ ಜಾದೂಗೆ ಮೊಡವೆ ಮಂಗಮಾಯ!

ಪ್ರತಿಯೊಬ್ಬರ ಮುಖ, ಚರ್ಮ, ದೈಹಿಕ ಸ್ವಭಾವ ಬೇರೆಯೇ ಇರುತ್ತದೆ. ಕೆಲವರಿಗೆ ಕೆನ್ನೆಯ ಮೇಲೆ ಮೊಡವೆಗಳು ಜಾಸ್ತಿ ಎದ್ದರೆ, ಇನ್ನೂ ಕೆಲವರಿಗೆ ಹಣೆಯ ಮೇಲೆ. ಕೆಲವರಿಗೆ ತಿಂಗಳ ಮುಟ್ಟಿನ ಸಮಯದಲ್ಲಿ ಮಾತ್ರ ಮೊಡವೆಗಳು ಆದರೆ, ಇನ್ನೂ ಕೆಲವರಿಗೆ ಸಮಯ ಸಂದರ್ಭವೇ ಇರುವುದಿಲ್ಲ!

Here’s why you frequently get acne on the chin and T-zone

ಇಂದು ನಾವು ನಮ್ಮ ಟಿ ಜ಼ೋನ್‌ನ ಬಗ್ಗೆ ತಿಳಿದುಕೊಳ್ಳೋಣ. ಟಿ ಜ಼ೋನ್ ಎಂದರೆ ನಮ್ಮ ಹುಬ್ಬಿನ ಮೇಲ್ಭಾಗದ ಹಣೆ ಹಾಗೂ ನಮ್ಮ ಮೂಗು. ಇದು ಆಂಗ್ಲ ಭಾಷೆಯ ಟಿ ಅಕ್ಷರದ ಆಕಾರದಲ್ಲಿ ಇರುತ್ತದೆ ಆದ್ದರಿಂದ ಟಿ ಜೋನ್ ಅಥವಾ ಟಿ ಝೋನ್ ಎಂದೂ ಕರೆಯುತ್ತಾರೆ. ಕಲೆ ಬೀಳದಂತೆ ಮೊಡವೆ ನಿವಾರಣೆಗೆ ಮನೆಮದ್ದು

ಸಾಮಾನ್ಯವಾಗಿ ಟಿ ಜೋನ್ ಮತ್ತು ಗಲ್ಲ ಬಹಳ ಜನರಿಗೆ ಅತಿ ಹೆಚ್ಚು ಮೊಡವೆಗಳು ಉಂಟಾಗುವ ಸ್ಥಳ. ಈ ಸ್ಥಳದಲ್ಲಿ ಏಕೆ ಅಷ್ಟು ಮೊಡವೆಗಳ ಸಮಸ್ಯೆ ಎಂದು ನೋಡೋಣ: ಇದಕ್ಕೆ ಮೂರು ಮುಖ್ಯ ಕಾರಣಗಳು ಇವೆ.

ಕೊಳಕು
ನಮ್ಮ ಮೂಗಿನ ಪ್ರದೇಶ ಬಹಳ ಸೂಕ್ಷ್ಮವಾಗಿ ಇರುತ್ತದೆ. ಇದರಿಂದ ನಾವು ಹೊರಗಿನ ಮಾಲಿನ್ಯ, ಹೊಗೆ, ಧೂಳು ಇತ್ಯಾದಿ ಚರ್ಮದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಹಾಗೆಯೇ ಇದು ನಮಗೆ ಸಣ್ಣದಾಗಿ ತುರಿಕೆ ಉಂಟು ಮಾಡುವುದರಿಂದ ನಮ್ಮ ಅಂಗೈನಲ್ಲಿ ಮುಟುತ್ತ ಹಾಗೂ ತುರಿಸುತ್ತ ಇರುತ್ತೇವೆ. ಹೀಗೆ ತುರಿಸುವುದು ಅಂಗೈನ ಮೇಲಿರುವ ಅನೇಕ ಸೂಕ್ಷ್ಮಾಣುಗಳನ್ನು ನಮ್ಮ ಮುಖದ ಚರ್ಮಕ್ಕೆ ವರ್ಗಾಯಿಸುತ್ತದೆ.

ಒತ್ತಡ
ಒತ್ತಡ ಎನ್ನುವುದು ಮೊಡವೆಗಳಿಗೆ ಒಂದು ಪ್ರಮುಖ ಕಾರಣ. ಅದರಲ್ಲೂ ಈ ಟಿ ಜ಼ೋನ್‌ನಲ್ಲಿ ಒತ್ತಡದಿಂದ ಮೊಡವೆಗಳು ಏಳುತ್ತವೆ. ಇನ್ನೂ ಒಂದು ತಮಾಷೆಯ ಸಂಗತಿ ಎಂದರೆ, ನಾವು ಮೊಡವೆಗಳು ಬಂದಿವೆ ಎಂದು ಅವನ್ನು ಹಿಸುಕಿಹಾಕಲು ಹೋಗಿ ಮತ್ತೊಂದು ಅವಾಂತರ ಮಾಡಿಕೊಳ್ಳುತ್ತೇವೆ. ಇದು ಕೂಡ ಮೊಡವೆಗಳು ಎದ್ದಿವೆ ಎಂಬ ಒತ್ತಡವೇ.

ಎಣ್ಣೆಯ ಅಂಶದ ಸಂಗ್ರಹ
ಟಿ ಜೋನ್ ನಲ್ಲಿ ನಮ್ಮ ಚರ್ಮವು ಹೆಚ್ಚಿನ ಎಣ್ಣೆಯನ್ನು ಸ್ರವಿಸುತ್ತದೆ. ಇದಕ್ಕೆ ಕಾರಣ ನಮ್ಮ ಚರ್ಮ ಗ್ರಂಥಿಗಳು. ಇದರಿಂದ ಇಲ್ಲಿ ಹೆಚ್ಚು ಹೆಚ್ಚು ಎಣ್ಣೆ ಸಂಗ್ರಹ ಕೂಡ ಆಗುತ್ತದೆ. ಇದು ನಮ್ಮ ಚರ್ಮದ ರಂಧ್ರಗಳನ್ನು ಮುಚ್ಚಿ ಚರ್ಮವು ಸಾಧಾರಣವಾಗಿ ಉಸಿರಾಡಲು ಆಗದಂತೆ ಮಾಡುತ್ತವೆ. ಇದರಿಂದ ಮೊಡವೆಗಳು ಏಳುವುದು ಹೆಚ್ಚಾಗುತ್ತದೆ. ಅಯ್ಯೋ ದೇವರೆ, ಮೂಗಿನಲ್ಲಿ ಮೊಡವೆ ಏನು ಮಾಡ್ಲಿ..?

ಈಗ ತಿಳಿಯಿತಲ್ಲವೇ? ಟಿ ಜ಼ೋನ್ ಹಾಗೂ ಗಲ್ಲದ ಮೇಲೆ ಏಕಿಷ್ಟು ಮೊಡವೆಗಳು ಎಂದು. ಇದರಿಂದ ಪಾರಾಗಲು ಅನುಸರಿಸಬೇಕಾದ ಕೆಲವು ಟಿಪ್ಸ್ ಅನ್ನು ನೋಡೋಣ.

ಎಣ್ಣೆಯ ಅಂಶವು ನಮ್ಮನ್ನು ಪದೇ ಪದೇ ಮುಖವನ್ನು ಒರೆಸುವಂತೆ ಪ್ರಚೋದಿಸುತ್ತದೆ. ಆದರೆ ಮೂಗನ್ನು ಒರೆಸುವಾಗ ಅಂಗೈಯನ್ನು ಬಳಸಬೇಡಿ.

ಅಂಗೈನಲ್ಲಿ ಪ್ರತಿಕ್ಷಣ ನಾವು ಬಹಳ ವಸ್ತುಗಳನ್ನು ಮುಟ್ಟುತ್ತಿರುತ್ತೇವೆ. ಎಲ್ಲ ವಸ್ತುಗಳಲ್ಲಿನ ಕೊಳಕುಗಳು ನಮ್ಮ ಅಂಗೈನಲ್ಲಿ ಇರುತ್ತವೆ. ಇದರಿಂದ ಶುಚಿಯಾದ ಕರವಸ್ತ್ರ ಅಥವಾ ಟಿಶ್ಯೂ ಕಾಗದವನ್ನು ಮೂಗು ಹಾಗೂ ಹಣೆ ಒರೆಸಲು ಬಳಸಿ.

ಎಣ್ಣೆಯ ಅಂಶವನ್ನು ಹೋಗಲಾಡಿಸಲು ಒಳ್ಳೆಯ ಕ್ಲೆನ್ಸರ್ ಬಳಸಿ
ಮುಖವನ್ನು ಮುಟ್ಟಲು ಹಾಗೂ ತುರಿಸಲು ಎಷ್ಟೇ ಪ್ರಚೋದನೆಯಾದರೂ ನಿಮ್ಮನ್ನು ನೀವೇ ತಡೆಯಿರಿ. ಆದಷ್ಟು ಬೇಗ ಹೊರಗಿನಿಂದ ಒಳ ಬಂದ ಕೂಡಲೇ ಮುಖವನ್ನು ಶುಭ್ರವಾಗಿ ತೊಳೆಯಿರಿ. ಇದರಿಂದ ಮುಖದ ಮೇಲಿನ ಕೊಳೆ ಹೋಗಿ ಚರ್ಮ ರಂಧ್ರಗಳು ಉಸಿರಾಡಲು ಅನುವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಡಿಕೊಂಡ ಮೇಕಪ್ ಅನ್ನು ಮಲಗುವ ಮುನ್ನ ಅಥವಾ ಮನೆಗೆ ಬಂದ ಒಡನೆಯೇ ಶುಭ್ರವಾಗಿ ತೆಗೆದು ತೊಳೆಯಿರಿ. ಮೇಕಪ್ ನಮ್ಮ ಚರ್ಮ ರಂಧ್ರಗಳನ್ನು ಮುಚ್ಚಿ ಹಾಕಿರುತ್ತದೆ. ಈ ಟಿ ಜ಼ೋನ್‌ನಲ್ಲಿ ಇದರಿಂದ ಇನ್ನೂ ಹೆಚ್ಚು ಹಾನಿ ಆಗುತ್ತದೆ.

English summary

Here’s why you frequently get acne on the chin and T-zone

Are your chin and T- zone the favourite spots of acne and pimples? It is not abnormal. These are acne prone areas and are more prone to breakouts than other parts of your face. Some people believe that oily skin is most susceptible to acne breakouts. People with combination skin normally have T zone oily, and the rest of the face dry or normal.
Story first published: Friday, September 16, 2016, 19:49 [IST]
X
Desktop Bottom Promotion