For Quick Alerts
ALLOW NOTIFICATIONS  
For Daily Alerts

ಕುಂಬಳಕಾಯಿ ಫೇಸ್ ಮಾಸ್ಕ್- ಸೌಂದರ್ಯದ ಕೀಲಿಕೈ

By Manjula balaraj
|

ಮುಖಕ್ಕೆ ಮಾಸ್ಕ್‌ನ ವಿಷಯ ಬಂದಾಗ ಉತ್ತಮವಾದ ಫಲಿತಾಂಶ ಬರಲು ಎಲ್ಲರೂ ಅತ್ಯಂತ ಉತ್ತಮವಾದುದನ್ನು ಬಳಸಲು ಇಚ್ಚಿಸುತ್ತಾರೆ. ಕೆಲವು ಜಾಹೀರಾತುಗಳು ತಮ್ಮ ವಿಧ ವಿಧವಾದ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿಸುತ್ತವೆ.

ಜಾಹೀರಾತುಗಳಲ್ಲಿ ಬರುವ ಎಲ್ಲಾ ಮಾಸ್ಕ್‌ಗಳನ್ನು ಉಪಯೋಗಿಸಿ ನಿಜವಾದ ಫಲಿತಾಂಶ ಬರದೆ ನಿರಾಶರಾಗುವವರ ಸಂಖ್ಯೆಗೂ ಬರವಿಲ್ಲ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ನೈಸರ್ಗಿಕವಾಗಿ ಫೇಸ್ ಮಾಸ್ಕ್ ಮಾಡಿದರೆ ಇದರಿಂದ ಉತ್ತಮವಾದ ತ್ವಚೆ ಪಡೆಯುವುದರ ಬಗ್ಗೆ ಸಂಶಯವೇ ಬೇಡ.

Have You Heard Of Pumpkin Face Packs?

ಅರಿಶಿನ, ಜೇನು ಅಥವಾ ಲಿಂಬೆ ಹೀಗೆ ಮಾರುಕಟ್ಟೆಯಲ್ಲಿ ಹೀಗೆ ಹಲವು ವಿಧವಾದ ಫೇಸ್ ಪ್ಯಾಕ್‌ಗಳು ಲಭ್ಯವಿದೆ. ಇಂತಹ ಫೇಸ್ ಪ್ಯಾಕ್‌ಗಳು ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಕುಂಬಳಕಾಯಿಯ ಫೇಸ್ ಪ್ಯಾಕ್ ಎನ್ನುವುದರ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ತಿಳಿಸುತ್ತಿದೆ. ಇದರ ಬಳಕೆಯಿಂದ ಹೊಳೆ ಹೊಳೆಯುವ ತ್ವಚೆ ಪಡೆಯುವಲ್ಲಿ ಸಂಶಯವೇ ಇಲ್ಲ. ಕುಂಬಳಕಾಯಿ ಫೇಸ್ ಪ್ಯಾಕ್, ತಾರುಣ್ಯಕ್ಕೆ ಹೊಸ ಲುಕ್

ಈ ವಿಧಾನವನ್ನು ದಿನ ಬಳಕೆಯ ಫೇಸ್ ಪ್ಯಾಕ್ ನಲ್ಲಿ ಬಳಸುವುದು ಉತ್ತಮ. ಉತ್ತಮವಾದ ಕುಂಬಳಕಾಯಿ ಫೇಸ್ ಪ್ಯಾಕ್‌ ನ ಲಾಭಗಳ ಬಗ್ಗೆ ತಿಳಿದುಕೊಂಡು ಇಂದಿನಿಂದಲೇ ಅದನ್ನು ಪ್ರಯತ್ನಿಸಬಹುದು.

ಎಲ್ಲಾ ತರಹದ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್
ಅರ್ಧ ಲೋಟ ಕುಂಬಳಕಾಯಿಯ ಪೇಸ್ಟ್‌ಗೆ ಅರ್ಧ ಟೀ ಚಮಚ ಜೇನು ಮತ್ತು ಹಾಲನ್ನು ಸೇರಿಸಬೇಕು. ಇದಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಈ ಮಾಸ್ಕನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

ಒಣ ತ್ವಚೆಗಾಗಿ ಕುಂಬಳಕಾಯಿಯ ಮಾಸ್ಕ್
ಕುಂಬಳಕಾಯಿಯ ರಸ (ಪ್ಯೂರಿ) ಮತ್ತು ಮಲೈ (ಒಂದು ಬಗೆಯ ದಪ್ಪವಾದ ಹಾಲಿನ ಪದಾರ್ಥ) ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಎರಡು ಟೀ ಚಮಚ ಸಕ್ಕರೆಯನ್ನು ಕೂಡ ಸೇರಿಸಿಕೊಳ್ಳಬೇಕು. ಚೆನ್ನಾಗಿ ಮಿಶ್ರಣ ಮಾಡಿದ ನಂತರ ಇದನ್ನು ಮುಖಕ್ಕೆ ಹಚ್ಚಬೇಕು. ಇದರಿಂದ ತ್ವಚೆಗೆ ಒಂದು ತರಹದ ಹಿತವಾದ ಪರಿಣಾಮ ಉಂಟಾಗುತ್ತದೆ ಮಾತ್ರವಲ್ಲದೆ ತ್ವಚೆಯಲ್ಲಿನ ತೇವಾಂಶವನ್ನು ಕಾಪಾಡುತ್ತದೆ.

ಜಿಡ್ಡಿನ ತ್ವಚೆಗಾಗಿ ಕುಂಬಳಕಾಯಿಯ ಫೇಸ್ ಪ್ಯಾಕ್
ಕುಂಬಳಕಾಯಿಯ ರಸ (ಪ್ಯುರಿ) ಒಂದು ಟೇಬಲ್ ಚಮಚ ಇದಕ್ಕೆ ಒಂದು ಟೀ ಚಮಚ ಸೇಬಿನ ಹಣ್ಣಿನ ಪರಿಮಳವಿರುವ ವಿನೇಗರ್ ಅಥವಾ ನಿಂಬೆ ಹಣ್ಣಿನ ರಸ. ಇವೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ ನಂತರ ಇದನ್ನು ಮುಖದ ಮೇಲೆ ಹಚ್ಚಬೇಕು. ನಿಂಬೆ ರಸವು ಟೋನರ್ ನಂತೆ ಕಾರ್ಯ ನಿರ್ವಹಿಸುತ್ತದೆ ಇದು ಚರ್ಮದ ಪರಿಚಲನ ಕ್ರಿಯೆಗಳನ್ನು ಉತ್ತೇಜಿಸುತ್ತದೆ ಮತ್ತು ಚರ್ಮದ ಪಿಎಚ್ ಮಟ್ಟವನ್ನು ಹೆಚ್ಚಿಸುತ್ತದೆ.

ಮೊಡವೆಯ ನಿಯಂತ್ರಣಕ್ಕೆ ಕುಂಬಳಕಾಯಿಯ ಫೇಸ್ ಪ್ಯಾಕ್
ಒಂದು ಟೀ ಚಮಚ ಕುಂಬಳಕಾಯಿಯ ಪ್ಯೂರಿಗೆ ಒಂದು ಟೀ ಚಮಚ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇದನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಬೇಕು. ನಂತರ 20 ನಿಮಿಷಗಳ ಕಾಲ ಹಾಗೆ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಇದರ ಪ್ರಯೋಗದಿಂದ ಗಣನೀಯ ಬದಲಾವಣೆಯನ್ನು ಗಮನಿಸಬಹುದಾಗಿದೆ.

English summary

Have You Heard Of Pumpkin Face Packs?

When it comes to face masks, we would love to choose the best ones that give us the desired results. There is no face mask that one would not try when they hear it really works. This is one of the easiest ways to fool and increase their stand in the market. With all these issues cropping in, it is best that one sticks on to DIY home packs to get that perfect skin.
X
Desktop Bottom Promotion