ಬರೀ ಒಂದೇ ವಾರದಲ್ಲಿ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಿ!

ಅಜ್ಜಿಯ ಮದ್ದು ಎಂದೇ ಜನಜನಿತವಾಗಿರುವ (ಹಿಂದಿಯಲ್ಲಿ ದಾದಿಮಾ ಕೇ ನುಸ್ಖೇ) ಈ ಸಾಮಾಗ್ರಿಗಳು ಶತಶತಮಾನಗಳಿಂದ ಬಳಸಲ್ಪಡುತ್ತಾ ಬಂದಿದ್ದು ಸೌಂದರ್ಯವನ್ನು, ಅದರಲ್ಲೂ ಸಹಜ ಸೌಂದರ್ಯವನ್ನು ಕಾಪಾಡಿಕೊಂದು ಬಂದಿವೆ....

By: manu
Subscribe to Boldsky

ಮುಖದ ಬಣ್ಣ ಗೌರವರ್ಣವಾಗಿರಬೇಕೆಂದು ಹೆಚ್ಚಿನ ಮಹಿಳೆಯರು ದಪ್ಪನೆಯ ಮೇಕಪ್ ಲೇಪನವನ್ನು ಧರಿಸಿಯೇ ಮನೆಯಿಂದ ಹೊರಡುತ್ತಾರೆ. ಇದರಿಂದ ತಾತ್ಕಾಲಿಕ ಗೌರವರ್ಣ ಪ್ರಾಪ್ತಿಯಾದರೂ ಇದರಿಂದ ಹಾನಿಯೇ ಹೆಚ್ಚು. ಅಪ್ಸರೆಯಂತಹ ತ್ವಚೆಗಾಗಿ ನೈಸರ್ಗಿಕ ಫೇಸ್ ಪ್ಯಾಕ್ 

ಮೇಕಪ್ ಇಲ್ಲದೆಯೇ ಗೌರವರ್ಣ ಪಡೆಯುವಂತಾದರೆ ಎಷ್ಟು ಚೆನ್ನ ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದರೆ ಈಗ ಈ ಕಲ್ಪನೆಯನ್ನು ಸಾಕಾರಗೊಳಿಸಲು ಒಂದು ವಾರದ ಆರೈಕೆಯಿಂದ ಸಾಧ್ಯವಾಗುತ್ತದೆ. ಈ ಆರೈಕೆ ಸಮರ್ಪಕ ಮತ್ತು ಸರಿಯಾದ ಮುಖಲೇಪದಿಂದ ಮಾತ್ರ ಸಾಧ್ಯ.

ಮುಖಕ್ಕೆ ಕೇವಲ ಗೌರವರ್ಣ ಬಂದರೆ ಸಾಲದು, ಬದಲಿಗೆ ಮೊಡವೆ, ಕಪ್ಪುಚುಕ್ಕೆಗಳಿಲ್ಲದೇ ಆರೋಗ್ಯಕರವೂ ಆಗಿರಬೇಕು. ಈ ಮುಖಲೇಪಗಳು ಚರ್ಮದ ಸೂಕ್ಷ್ಮರಂಧ್ರಗಳ ಒಳಗೆ ಇಳಿದು ಕಲ್ಮಶವನ್ನು ಹೋಗಲಾಡಿಸಿ ನೈಸರ್ಗಿಕ ತೈಲ ಒಸರಲು ನೆರವಾಗುವ ಮೂಲಕ ಚರ್ಮಕ್ಕೆ ನೈಸರ್ಗಿಕ ಆರೈಕೆಯನ್ನು ನೀಡುತ್ತವೆ ಹಾಗೂ ಚರ್ಮ ಸಹಜವರ್ಣವನ್ನು ಪಡೆಯಲು ನೆರವಾಗುತ್ತದೆ. ತ್ವಚೆಯ ನಲ್ಮೆಯ ಆರೈಕೆಗೆ-ನೈಸರ್ಗಿಕ ಫೇಸ್‌ಪ್ಯಾಕ್

ಬನ್ನಿ, ಕೆಳಗೆ ನೀಡಿರುವ ವಿಧಾನಗಳಲ್ಲಿ ನಿಮಗೆ ಸೂಕ್ತವಾದುದನ್ನು ಆರಿಸಿಕೊಂಡು ಒಂದೇ ವಾರದಲ್ಲಿ ನಿಮ್ಮ ಆಪ್ತರನ್ನು ದಂಗುಬಡಿಸಿ. ಯಾವುದಕ್ಕೂ ಈ ವಿಧಾನ ನಿಮಗೆ ಸೂಕ್ತವೇ, ಅಲರ್ಜಿಕಾರಕವೇ ಎಂದು ಮೊದಲಿಗೆ ಮೊಣಕೈ ಚರ್ಮಕ್ಕೆ ಹಚ್ಚಿ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕವೇ ಮುಖಕ್ಕೆ ಹಚ್ಚಿ.....  

ಹಾಲು ಮತ್ತು ಅರಿಶಿನ

ಚರ್ಮದ ಕಾಂತಿ ಹೆಚ್ಚಿಸುವಲ್ಲಿ ಅರಿಶಿನದ ಪಾತ್ರ ಮಹತ್ತರವಾಗಿದ್ದು ಭಾರತದಲ್ಲಿ ನೂರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಒಂದು ಚಿಕ್ಕ ಚಮಚ ಅರಿಶಿನ ಪುಡಿಯನ್ನು ಕೊಂಚವೇ ಹಸಿಹಾಲಿನೊಂದಿಗೆ ಬೆರೆಸಿ ಮುಖಲೇಪ ತಯಾರಿಸಿ.... ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು

ಹಾಲು ಮತ್ತು ಅರಿಶಿನ

ಇದಕ್ಕೆ ಕೆಲವು ಹನಿ ಕೊಬ್ಬರಿ ಎಣ್ಣೆ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವಷ್ಟು ದಪ್ಪನಾಗಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಅರ್ಧ ಗಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಈ ವಿಧಾನ ಒಣಚರ್ಮಕ್ಕೆ ಹೆಚ್ಚು ಸೂಕ್ತವಾಗಿದೆ.

ಕಡ್ಲೆಹಿಟ್ಟು ಮತ್ತು ಹಾಲು

ಒಂದು ವೇಳೆ ಚರ್ಮದ ಹೊರಪದರದಲ್ಲಿ ತೆಳುವಾದ ಪದರ ಆವರಿಸಿದ್ದರೆ ಇದು ಸತ್ತ ಜೀವಕೋಶಗಳು ಗಟ್ಟಿಯಾಗಿ ಅಂಟಿಕೊಂಡಿದ್ದಿದ್ದಿರಬಹುದು. ಇದನ್ನು ನಿವಾರಿಸಲು ಕಡ್ಲೆಹಿಟ್ಟು ಮತ್ತು ಕೊಂಚ ಹಸಿಹಾಲನ್ನು ಬೆರೆಸಿ ಲೇಪನ ತಯಾರಿಸಿ ಮುಖದ ಮೇಲೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಸತ್ತಜೀವಕೋಶಗಳು ಸುಲಭವಾಗಿ ನಿವಾರಣೆಯಾಗಿ ಕಾಂತಿಯುಕ್ತ ಚರ್ಮ
ನಿಮ್ಮದಾಗುತ್ತದೆ.

ಹಸಿರು ಟೀ ಮತ್ತು ಜೇನು

ಸದಾ ಮೊಡವೆಗಳ ಕಾಟದಿಂದ ಬೇಸತ್ತು ಹೋಗಿರುವವರಿಗೆ ಈ ವಿಧಾನ ಉತ್ತಮ ಆಯ್ಕೆಯಾಗಿದೆ. ಸೂಕ್ಷ್ಮಸಂವೇದಿ ಚರ್ಮದವರಿಗೂ ಇದು ಸೂಕ್ತವಾಗಿದೆ. ಹಸಿರು ಟೀಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಚರ್ಮದ ಸೂಕ್ಷ್ಮರಂಧ್ರಗಳ ಒಳಗೆ ಆಗಿರುವ ಸೋಂಕನ್ನು ನಿವಾರಿಸಿ ಚರ್ಮ ಆರೋಗ್ಯದಿಂದ ಕಳಕಳಿಸಲು ನೆರವಾಗುತ್ತದೆ.

ಹಸಿರು ಟೀ ಮತ್ತು ಜೇನು

ಒಂದು ಟೀ ಬ್ಯಾಗ್ ಹಸಿರು ಟೀ ಅನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ಇದಕ್ಕೆ ಕೆಲವು ಹನಿ ಜೇನನ್ನು ಬೆರೆಸಿ ಉಗುರುಬೆಚ್ಚಗಾಗುವಷ್ಟು ತಣಿಸಿ. ಈ ನೀರನ್ನು ಹತ್ತಿಯುಂಡೆಯಲ್ಲಿ ಅದ್ದಿ ಈಗತಾನೇ ತೊಳೆದುಕೊಂಡ ಮುಖವನ್ನು ಒರೆಸಿಕೊಳ್ಳಿ.  ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!

ಲಿಂಬೆ ಮತ್ತು ಜೇನು

ಬಿಸಿಲಿನಿಂದ ಚರ್ಮ ಕಪ್ಪಗಾಗಿದ್ದರೆ ಈ ವಿಧಾನ ಅತ್ಯುತ್ತಮವಾಗಿದೆ. ಲಿಂಬೆಯ ಬಿಳಿಚುಕಾರಕ ಗುಣ ಮತ್ತು ಜೇನಿನ ತಂಪೊಗೊಳಿಸುವ ಗುಣಗಳು ಒಟ್ಟಾಗಿ ಚರ್ಮದ ಬಣ್ಣವನ್ನು ಸಹಜವರ್ಣದತ್ತ ತರಲು ನೆರವಾಗುತ್ತವೆ. ಇದರಿಂದ ಕಳೆಗುಂದಿದ್ದ ಚರ್ಮ ಮತ್ತೆ ಕಾಂತಿ ಪಡೆಯುತ್ತದೆ. ಸಮಪ್ರಮಾಣದಲ್ಲಿ ಲಿಂಬೆಸರ ಮತ್ತು ಜೇನನ್ನು ಬೆರೆಸಿ ಕೊಂಚವೇ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಹತ್ತಿಯಿಂಡೆಯಿಂದ ಒರೆಸಿಕೊಳ್ಳುವ ಮೂಲಕ ಈ ಕಾಂತಿಯನ್ನು ಪಡೆಯಬಹುದು.

ಮೊಸರು

ಆರ್ದ್ರತೆಯ ಕೊರತೆಯಿಂದ ಬಿಳಿಚಿದ ಚರ್ಮಕ್ಕೆ ಮೊಸರಿನಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಉತ್ತಮ ಆರೈಕೆ ನೀಡುತ್ತದೆ. ಮೊಸರಿನಿಂದ ದಪ್ಪನಾಗಿ ಮುಖವನ್ನು ಆವರಿಸಿಕೊಳ್ಳುವ ಮೂಲಕ ಉತ್ತಮ ಆರೈಕೆ ಹಾಗೂ ಕಾಂತಿಯನ್ನು ಪಡೆಯಬಹುದು.  ಮುಖದ ಅಂದ-ಚೆಂದ ಹೆಚ್ಚಿಸುವ ಮೊಸರಿನ ಫೇಸ್ ಪ್ಯಾಕ್!

 

Story first published: Tuesday, November 22, 2016, 11:12 [IST]
English summary

Face Packs To Get Radiant Skin In Just 7 Days!

Everyone wants radiant skin that glows without any makeup at all. And honestly, face packs are the way to get it. Trust us, these face packs will give you radiant skin in just 7 days! Face packs can help cleanse your skin from deep within, removing all the impurities. And there's actually nothing better than using homemade face packs.
Please Wait while comments are loading...
Subscribe Newsletter