For Quick Alerts
ALLOW NOTIFICATIONS  
For Daily Alerts

ಮೊಡವೆಗಳ ನಿವಾರಣೆಗೆ ಗ್ರೀನ್ ಟೀ ಅಸ್ತ್ರದ ಬಳಕೆ

By Jaya subramanya
|

ಸುಂದರವಾದ ತ್ವಚೆಯನ್ನು ಪಡೆಯುವುದು ಹೆಂಗಳೆಯರ ಮನದ ಕನಸಾಗಿರುತ್ತದೆ. ಕೆಲವರು ಕಲೆಗಳು ಮೊಡವೆಗಳಿಲ್ಲದೇ ಇರುವ ಸುಂದರವಾದ ತ್ವಚೆಯನ್ನು ಪಡೆದುಕೊಂಡಿದ್ದರೆ, ಇನ್ನು ಕೆಲವರು ಇಂತಹ ಸೌಂದರ್ಯವನ್ನು ಪಡೆಯುವುದಕ್ಕಾಗಿ ಹಗಲಿರುಳು ಕಷ್ಟಪಡುತ್ತಾರೆ. ಮೊಡವೆ, ಕಪ್ಪು ಚುಕ್ಕೆಗಳು, ಚರ್ಮದ ಬಣ್ಣ ಮಂಕಾಗುವುದು ಇದು ಸಾಮಾನ್ಯ ತ್ವಚೆಯ ಸಮಸ್ಯೆಗಳಾಗಿದ್ದು ಇವುಗಳು ನಮ್ಮ ಮಹತ್ವಾಕಾಂಕ್ಷೆಯನ್ನೇ ಕುಗ್ಗಿಸಿಬಿಡುತ್ತದೆ. ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

ತ್ವಚೆಯ ಸಮಸ್ಯೆಗಳಲ್ಲಿ ಪ್ರಮುಖವಾಗಿರುವುದು ಮೊಡವೆ. ಹೆಚ್ಚು ಮೇದೋಗ್ರಂಥಿಗಳ ಸ್ರಾವ ನಿರ್ಮಾಣ, ಉತ್ಪನ್ನ, ಹಾರ್ಮೋನುಗಳ ಅಸಮತೋಲನ, ನೈರ್ಮಲ್ಯ, ಮಾಲಿನ್ಯ, ಅನಾರೋಗ್ಯಕರ ಆಹಾರ ಇತ್ಯಾದಿ ಕಾರಣಗಳಿಂದ ಮೊಡವೆ ಉಂಟಾಗುತ್ತದೆ. ಮೊಡವೆ ಒಮ್ಮೊಮ್ಮೆ ಹೆಚ್ಚು ಹಠಮಾರಿಯಾಗಿದ್ದು ನಿವಾರಣೆಯಾಗಲು ಸ್ವಲ್ಪ ಸಮಯವನ್ನೇ ತೆಗೆದುಕೊಳ್ಳಬಹುದು. ಬೇರೆ ಬೇರೆ ಕಾರಣಗಳಿಗಾಗಿ ತ್ವಚೆಯಲ್ಲಿರುವ ಮೇದೋಗ್ರಂಥಿಗಳ ಸ್ರಾವ ಹೆಚ್ಚಾದಾಗ ಸೋಂಕಿಗೆ ಒಳಗಾಗುವ ರಂಧ್ರಗಳನ್ನು ಉಂಟುಮಾಡಿ ಮೊಡವೆಯನ್ನು ಉತ್ಪಾದನೆಯಾಗುತ್ತದೆ. ಹಣೆಯ ಮೇಲಿನ ಮೊಡವೆಗೆ ಪವರ್ ಫುಲ್ ಮನೆಮದ್ದು

ಮೊಡವೆಯನ್ನು ನಿವಾರಿಸಲು ಹಲವಾರು ವಿಧಾನಗಳಿದ್ದರೂ ನೈಸರ್ಗಿಕ ಮದ್ದುಗಳು ಹೆಚ್ಚು ಫಲಪ್ರದವಾಗಿರುವಂಥದ್ದು. ಇವುಗಳಿಂದ ಯಾವುದೇ ಹಾನಿಗಳುಂಟಾಗುವುದಿಲ್ಲ. ಅಂತಹುದೇ ಮನೆಮದ್ದುಗಳಲ್ಲಿ ಗ್ರೀನ್ ಟೀ ಕೂಡ ಒಂದು. ಮನೆಯಲ್ಲೇ ಸರಳವಾಗಿ ಲಭ್ಯವಾಗಿರುವ ಇದು ಮೊಡವೆಯನ್ನು ಪರಿಣಾಮಕಾರಿಯಾಗಿ ತೊಲಗಿಸುತ್ತದೆ. ಹೆಚ್ಚು ಉತ್ಕರ್ಷಣ ನಿರೋಧಿ ಅಂಶಗಳು ಗ್ರೀನ್ ಟೀಯಲ್ಲಿರುವುದರಿಂದ ತ್ವಚೆಯ ಸಂರಕ್ಷಕನಾಗಿ ಇದು ಕೆಲಸ ಮಾಡುತ್ತದೆ. ಅಂತೆಯೇ ತ್ವಚೆಯಲ್ಲಿ ಉಂಟಾಗುವ ಮೇದೋಗ್ರಂಥಿಗಳ ಉತ್ಪಾದನೆಯನ್ನು ಕಡಿಮೆ ಮಾಡಿ ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಹೋಗಲಾಡಿಸುತ್ತದೆ. ಹಾಗಿದ್ದರೆ ಮೊಡವೆಯನ್ನು ನಿವಾರಿಸಲು ಗ್ರೀನ್ ಟೀ ಮದ್ದನ್ನು ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ, ಮುಂದೆ ಓದಿ..

ಪರಿಹಾರ 1

ಪರಿಹಾರ 1

ಸಾಮಾಗ್ರಿಗಳು: ಗ್ರೀನ್ ಟೀ, ಲಿಂಬೆಯ ಸಮ್ಮಿಶ್ರಣ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಇವುಗಳು ನಾಶ ಮಾಡುತ್ತವೆ. ಅಂತೆಯೇ ಮೊಡವೆ ಉಂಟಾಗಲು ಇವು ಬಿಡುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪರಿಹಾರ 1

ಪರಿಹಾರ 1

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಸ್ವಲ್ಪ ಗ್ರೀನ್ ಟೀಯನ್ನು ಸಂಗ್ರಹಿಸಿ ಇದಕ್ಕೆ ಸ್ವಲ್ಪ ಲಿಂಬೆ ರಸವನ್ನು ಹಾಕಿ. ಹತ್ತಿಯ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ ತ್ವಚೆಯ ಮೇಲೆ ಉಜ್ಜಿಕೊಳ್ಳಿ. ರಾತ್ರಿ ಪೂರ್ತಿ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಪರಿಹಾರ 2

ಪರಿಹಾರ 2

ಸಾಮಾಗ್ರಿಗಳು: ಗ್ರೀನ್ ಟೀ, ಟೀ ಟ್ರಿ ಆಯಿಲ್ ನಿಮ್ಮ ತ್ವಚೆಗೆ ದೃಢತೆಯನ್ನು ಈ ಸಮ್ಮಿಶ್ರಣ ನೀಡಲಿದ್ದು ಮೊಡವೆಯ ಗಾತ್ರವನ್ನು ಕುಗ್ಗಿಸುತ್ತದೆ. ಅಂತೆಯೇ ಮೆದೋಗ್ರಂಥಿಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪರಿಹಾರ 2

ಪರಿಹಾರ 2

ಮಾಡುವ ವಿಧಾನ: ಗ್ರೀನ್ ಟೀ ಎಲೆಗಳನ್ನು ಜಜ್ಜಿ ಹುಡಿ ಮಾಡಿ. ಇದಕ್ಕೆ ಹನಿಯಷ್ಟು ಟೀ ಟ್ರಿ ಆಯಿಲ್ ಅನ್ನು ಬೆರೆಸಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ. ತ್ವಚೆಗೆ ಇದನ್ನು ಹಚ್ಚಿ 15-20 ನಿಮಿಷ ಹಾಗೆಯೇ ಬಿಡಿ. ಮೈಲ್ಡ್ ಸೋಪಿನಿಂದ ಮುಖವನ್ನು ತೊಳೆದುಕೊಳ್ಳಿ.

ಪರಿಹಾರ 3

ಪರಿಹಾರ 3

ಸಾಮಾಗ್ರಿಗಳು: ಗ್ರೀನ್ ಟೀ, ಮೊಟ್ಟೆಯ ಬಿಳಿ ಭಾಗ. ತ್ವಚೆಗೆ ಪರಿಣಾಮಕಾರಿಯಾಗಿರುವ ಈ ಸಾಮಾಗ್ರಿಗಳು ಮೊಡವೆಯನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ. ಮೊಟ್ಟೆಯ ಬಿಳಿ ಭಾಗದಲ್ಲಿರುವ ಪ್ರೊಟೀನ್ ತ್ವಚೆಯನ್ನು ಸುಕೋಮಲಗೊಳಿಸುತ್ತದೆ.

ಪರಿಹಾರ 3

ಪರಿಹಾರ 3

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಗ್ರೀನ್ ಟೀ ನೀರನ್ನು ಸಂಗ್ರಹಿಸಿ ಇದಕ್ಕೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ. ಪೇಸ್ಟ್ ಮಾಡಿಕೊಳ್ಳಿ. ಮುಖಕ್ಕೆ ಇದನ್ನು ಹಚ್ಚಿಕೊಂಡು ಒಣಗುವವರೆಗೆ ಹಾಗೆಯೇ ಬಿಡಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಪರಿಹಾರ 4

ಪರಿಹಾರ 4

ಸಾಮಾಗ್ರಿಗಳು: ಗ್ರೀನ್ ಟೀ, ಮೊಸರು ಈ ಮಿಶ್ರಣವು ತ್ವಚೆಗೆ ಪರಿಣಾಮಕಾರಿ ಎಂದೆನಿಸಿದ್ದು ಗ್ರೀನ್ ಟೀ ಮತ್ತು ಮೊಸರು ಆಂಟಿ ಸೆಪ್ಟಿಕ್ ಅಂಶಗಳನ್ನು ಒಳಗೊಂಡಿರುವುದರಿಂದ ತ್ವಚೆಯಲ್ಲಿ ನಿರ್ಮಾಣವಾಗುವ ಬ್ಯಾಕ್ಟೀರಿಯಾ ಬೆಳವಣಿಗೆಗೆ ಬ್ರೇಕ್ ಹಾಕುತ್ತದೆ. ಇದರಿಂದ ಮೊಡವೆ ಉಂಟಾಗುವುದು ಕಡಿಮೆಯಾಗುತ್ತದೆ. ತ್ವಚೆಯ ವರ್ಣದ್ರವ್ಯಗಳನ್ನು ಹೋಗಲಾಡಿಸಿ ತ್ವಚೆಯನ್ನು ಪ್ರಖರವಾಗಿಸುವ ಗುಣ ಮೊಸರಿಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪರಿಹಾರ 4

ಪರಿಹಾರ 4

ಮಾಡುವ ವಿಧಾನ: ನೀರಿನಲ್ಲಿ ಗ್ರೀನ್ ಟೀ ಬ್ಯಾಗ್ ಅನ್ನು ಕುದಿಸಿಕೊಳ್ಳಿ. ನಂತರ ಬ್ಯಾಗ್‎ನಿಂದ ನೀರನ್ನು ಬೇರ್ಪಡಿಸಿಕೊಳ್ಳಿ. ಪಾತ್ರೆಯಲ್ಲಿರುವ ಮೊಸರಿನೊಂದಿಗೆ ಈ ನೀರನ್ನು ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ತ್ವಚೆಗೆ ಇದನ್ನು ಹಚ್ಚಿಕೊಳ್ಳಿ. 5-10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

ಪರಿಹಾರ 5

ಪರಿಹಾರ 5

ಸಾಮಾಗ್ರಿಗಳು: ಗ್ರೀನ್ ಟೀ, ರೋಸ್ ವಾಟರ್. ತ್ವಚೆಯನ್ನು ಬಿಗಿಗೊಳಿಸಿ ಜಿಡ್ಡಿನ ಉತ್ಪಾದನೆಯನ್ನು ಈ ಸಮ್ಮಿಶ್ರಣ ಕಡಿಮೆ ಮಾಡಲಿದ್ದು, ಮೊಡವೆ ರಹಿತ ಸುಂದರ ತ್ವಚೆಯನ್ನು ಇದು ಒದಗಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪರಿಹಾರ 5

ಪರಿಹಾರ 5

ಮಾಡುವ ವಿಧಾನ: ಪಾತ್ರೆಯಲ್ಲಿ ರೋಸ್ ವಾಟರ್ ಅನ್ನು ಕುದಿಸಿಕೊಳ್ಳಿ. ಕುದಿದ ರೋಸ್ ವಾಟರ್‎ಗೆ ಗ್ರೀನ್ ಟೀ ಬ್ಯಾಗ್ ಅನ್ನು ಹಾಕಿ. ಸ್ವಲ್ಪ ನಿಮಿಷಗಳ ಕಾಲ ಹಾಗೆಯೇ ಬಿಡಿ. ಸ್ವಚ್ಛವಾದ ಪಾತ್ರೆಯಲ್ಲಿ ಮಿಶ್ರಣವನ್ನು ಹಾಕಿರಿ. ಇದು ತಣ್ಣಗಾಗಲು ಬಿಡಿ. ಹತ್ತಿಯನ್ನು ಬಳಸಿ ಮುಖಕ್ಕೆ ಹಚ್ಚಿಕೊಳ್ಳಿ. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

English summary

Easy Green Tea Remedies For Acne

A naturally flawless complexion is a privilege many of us do not enjoy. Some people are lucky enough to have spotless skin without much effort, while the rest of us have to work hard for it. Numerous skin conditions such as acne, blemishes, pigmentation, etc, can make our skin look dull and lifeless. Bad skin can also be a major turn off and it can kill our confidence. Let us learn more about a few green tea recipes for acne reduction.
X
Desktop Bottom Promotion