For Quick Alerts
ALLOW NOTIFICATIONS  
For Daily Alerts

ಹುಣಸೆ ಹಣ್ಣಿನ ರಸ ಬಳಸಿ, ಸೌಂದರ್ಯ ಹೆಚ್ಚಿಸಿಕೊಳ್ಳಿ

By Jaya
|

ದಕ್ಷಿಣ ಭಾರತದ ಅಡುಗೆ ಮನೆಯಲ್ಲಿ ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿರುವ ಹುಳಿ ತನ್ನ ಹುಳಿ ಸಿಹಿ ಮಿಶ್ರಿತ ಸ್ವಾದದಿಂದ ಖಾದ್ಯಕ್ಕೆ ಹೊಸ ರುಚಿಯನ್ನು ನೀಡುತ್ತದೆ. ಬರಿಯ ಅಡುಗೆ ಮನೆಯಲ್ಲಿ ಮಾತ್ರ ಜಾದೂ ಮಾಡದೇ ಅರಶಿನ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲೂ ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ ಎಂದರೆ ನೀವು ನಂಬುತ್ತೀರಾ? ಈ ಹಣ್ಣಿಗೆ ಈ ರುಚಿ ಬರಲು ಕಾರಣ ಟಾರ್ಟಾರಿಕ್ ಆಮ್ಲವಾಗಿದೆ ಅಂತೆಯೇ ಈ ಆಮ್ಲದಲ್ಲಿ ಹಲವು ವಿಟಮಿನ್‎ಗಳು, ಆಂಟಿ ಆಕ್ಸೈಡ್‎ಗಳು ಮತ್ತು ಖನಿಜಗಳಿದ್ದು ಮುಖದ ಅಂದವನ್ನು ದ್ವಿಗುಣಗೊಳಿಸುವಲ್ಲಿ ಇವುಗಳು ಮಹತ್ವದ್ದಾಗಿದೆ. ಹುಣಸೆ ಹಣ್ಣು: ಕೊಂಚ ಹುಳಿ, ದುಪ್ಪಟ್ಟು ಸಿಹಿ..!

ವಿಟಮಿನ್ ಎ, ವಿಟಮಿನ್ ಸಿ, ಪ್ರಮುಖ ಉತ್ಕರ್ಷಣ ಅಂಶಗಳು ಇದರಲ್ಲಿದ್ದು ಮುಕ್ತ ರಾಡಿಕಲ್‎ಗಳ ರಚನೆಯನ್ನು ತಡೆಯಲು ಸಹಾಯಕವಾಗಿದೆ. ಒಂದು ಪೋಷಣೆಯ ಪೂರಕ ಮಾತ್ರವಾಗಿರದೇ ಊತ ಮತ್ತು ಕಿರಿಕಿರಿ ತ್ವಚೆಯನ್ನು ಉಪಚರಿಸಲೂ ಪರಿಣಾಮಕಾರಿ. ತ್ವಚೆಯಲ್ಲಿನ ವರ್ಣದ್ರವ್ಯಗಳನ್ನು ಮತ್ತು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿ ನಿಮ್ಮ ಮೈ ಬಣ್ಣವನ್ನು ಸುಧಾರಿಸಲು ಹುಣಸೆ ಹಣ್ಣು ಸಹಕಾರಿಯಾದುದು. ಹಾಗಿದ್ದರೆ ಇದನ್ನು ತ್ವಚೆಯ ಸೌಂದರ್ಯಕ್ಕಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಇಂದಿನ ಲೇಖನದಲ್ಲಿ ನಾವು ಪರಿಹಾರಗಳನ್ನು ನೀಡುತ್ತಿದ್ದೇವೆ...

ಹುಣಸೆ ಹಣ್ಣಿನ ರಸ

ಹುಣಸೆ ಹಣ್ಣಿನ ರಸ

ಹುಣಸೆ ಹಣ್ಣಿನ ರಸ ತ್ವಚೆಯ ಕಾಂತಿ ವರ್ಧಿಸಲು ಸಹಕಾರಿಯಾಗಿದೆ. 30 ಗ್ರಾಮ್‎ನಷ್ಟು ಹುಳಿಯನ್ನು ತೆಗೆದುಕೊಂಡು ಅದನ್ನು 100 ಎಮ್‎ಎಲ್ ನೀರಿನಲ್ಲಿ ಕುದಿಸಿಕೊಳ್ಳಿ. ತಿರುಳನ್ನು ಹೊರತೆಗೆಯಿರಿ. ಅರ್ಧ ಚಮಚ ಅರಿಶಿನವನ್ನು ತೆಗೆದುಕೊಂಡು ಈ ಹುಣಸೆ ರಸದೊಂದಿಗೆ ಬೆರೆಸಿಕೊಳ್ಳಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹುಣಸೆ ಹಣ್ಣಿನ ರಸ

ಹುಣಸೆ ಹಣ್ಣಿನ ರಸ

ಇನ್ನು ಇದನ್ನುನಿಮ್ಮ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಮುಖದ ಕಾಂತಿ ವರ್ಧನೆಯಾಗಿರುವುದನ್ನು ನಿಮಗೆ ಗಮನಿಸಿಕೊಳ್ಳಬಹುದು. ನೀವು ಜಿಡ್ಡಿನ ಇಲ್ಲವೇ ಕಪ್ಪು ವರ್ಣದ ತ್ವಚೆಯನ್ನು ಹೊಂದಿದ್ದೀರಿ ಎಂದಾದಲ್ಲಿ ವಾರಕ್ಕೆ ಮೂರು ಬಾರಿ ಈ ಪ್ಯಾಕ್ ಅನ್ನು ಹಚ್ಚಿಕೊಳ್ಳಿ ಮತ್ತು ಮುಖದ ಹೊಳೆಯುವುದನ್ನು ಗಮನಿಸಿ.

ಹುಣಸೆ ಫೇಸ್ ಸ್ಕ್ರಬ್

ಹುಣಸೆ ಫೇಸ್ ಸ್ಕ್ರಬ್

ಹುಣಸೆ ಫೇಸ್ ಸ್ಕ್ರಬ್ ಆಲ್ಫಾ ಹೈಡ್ರೋಕ್ಸೈಲ್ ಆಸಿಡ್‎ಗಳನ್ನು ಒಳಗೊಂಡಿರುವುದರಿಂದ ನಿಮ್ಮ ಮುಖ ಇದರಿಂದ ಹೊಳೆಯುತ್ತದೆ. ಕುದಿಸಿದ ನೀರಿನಲ್ಲಿ ಹುಣಸೆ ಹಣ್ಣನ್ನು ಹಾಕಿ ರಸ ಬೇರ್ಪಡಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ನಿಧಾನಕ್ಕೆ ಇವುಗಳನ್ನು ಮಿಶ್ರ ಮಾಡಿಕೊಂಡು ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮುಖಕ್ಕೆ ಹಚ್ಚಿಕೊಳ್ಳಿ ಮೃತ ಕೋಶಗಳ ನಿವಾರಣೆಗೆ ಈ ಸ್ಕ್ರಬ್ ಸಹಕಾರಿಯಾಗಿದೆ.

ಹುಣಸೆ ಬ್ಲೀಚ್

ಹುಣಸೆ ಬ್ಲೀಚ್

1 ಚಮಚ ಹುಣಸೆ ತಿರುಳನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚ ಜೇನು ಮತ್ತು ಲಿಂಬೆ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ವರ್ಣದ್ರವ್ಯಗಳನ್ನು ತಿಳಿಗೊಳಿಸಿ ಗಾಢ ತೇಪೆಗಳನ್ನು ದೂರಮಾಡಿ ಮೊಡವೆಗಳ ನಿವಾರಣೆಯನ್ನು ಮಾಡುತ್ತದೆ.

ಹುಣಸೆ ಗ್ಲೊ ಫೇಶಿಯಲ್

ಹುಣಸೆ ಗ್ಲೊ ಫೇಶಿಯಲ್

2 ಚಮಚದಷ್ಟು ಹಿಟ್ಟಿಗೆ ಒಂದು ಚಮಚ ಜೇನನ್ನು ಸೇರಿಸಿಕೊಳ್ಳಿ ಇದಕ್ಕೆ ಹುಣಸೆ ಹಣ್ಣಿನ ತಿರುಳಿನ ಕಿವುಚಿದ ರಸ ಸೇರಿಸಿಕೊಳ್ಳಿ ನಂತರ ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಹೊಳೆಯುವ ಮುಖ ಕಾಂತಿ ನಿಮ್ಮದಾಗುವುದರಲ್ಲಿ ಸಂಶಯವೇ ಇಲ್ಲ.

ಚರ್ಮ ಬಿಳಿಚಿಸಲು

ಚರ್ಮ ಬಿಳಿಚಿಸಲು

ಚರ್ಮ ಬಿಳಿಚಿಸಲು ಬಿಸಿಲು ಮತ್ತಿತರ ಕಾರಣಗಳಿಂದ ಚರ್ಮ ಸಹಜವರ್ಣದಿಂದ ದೂರವಾಗಿದ್ದರೆ ಇದನ್ನು ಸುಲಭವಾಗಿ ಬಿಳಿಚಿಸಬಹುದು. ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆ ಹುಳಿಯನ್ನು ಹಿಚುಕಿ ತೆಗೆದ ತಿರುಳು, ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಬಿಸಿಲಿಗೆ ಕಪ್ಪಗಾಗಿರುವ ಇತರ ಭಾಗಗಳಿಗೆ ತೆಳುವಾಗಿ ಹಚ್ಚಿ ಸುಮಾರು ಹನ್ನೆರಡು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಶೀಘ್ರವೇ ನಿಮ್ಮ ಚರ್ಮ ಸಹಜವರ್ಣ ಪಡೆಯುತ್ತದೆ.

ಫೇಸ್ ಟೋನರ್ ಆಗಿ ಬಳಸಿ

ಫೇಸ್ ಟೋನರ್ ಆಗಿ ಬಳಸಿ

ಹುಣಸೆಹಣ್ಣನ್ನು ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಬಳಸುವುದರ ಜೊತೆಗೆ, ಇದನ್ನು ನೀವು ನಿಮ್ಮ ತ್ವಚೆಯ ಪರಿಪೂರ್ಣ ಟೋನರ್ ಆಗಿ ಸಹ ಬಳಸಬಹುದು. ಹುಣಸೆ ಹಣ್ಣನ್ನು ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಮತ್ತು ಬೇಸಿಗೆಯಲ್ಲಿ ಟೋನರ್ ಆಗಿ ಬಳಸಿ.

English summary

Does Tamarind Juice Improve Your Skin Tone?

Tamarind juice contains vitamin B, vitamin C, fibre, alpha-hydroxyl acids and enzymes that help in getting rid of the dead cells on your skin. There are various face scrubs and face masks available in the market that contain tamarind juice. Therefore, following are the various ways how you can use tamarind juice to improve your skin tone
X
Desktop Bottom Promotion