ಮೊಸರಿನ ಫೇಸ್ ಮಾಸ್ಕ್: ಕಡಿಮೆ ಖರ್ಚು ಅಧಿಕ ಲಾಭ...

ಮೊಸರನ್ನು ಆಹಾರದ ಮೂಲಕ ಸೇವಿಸುವುದರಿಂದ ಯಾವ ರೀತಿಯ ಲಾಭಗಳಿವೆ ಎಂದು ಪಟ್ಟಿ ಮಾಡಿದರೆ ದೊಡ್ಡ ಪಟ್ಟಿಯೇ ತಯಾರಾಗಬಹುದು. ಬರೆಯ ಆಹಾರವಾಗಿ ಮಾತ್ರವಲ್ಲ, ಸೌಂದರ್ಯವರ್ಧಕವಾಗಿಯೂ ಮೊಸರು ಹಲವು ರೀತಿಯಲ್ಲಿ ಬಳಸಲ್ಪಡುತ್ತದೆ.

By: Hemanth
Subscribe to Boldsky

ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಪ್ರತಿಯೊಬ್ಬರು ಬಯಸುವುದು ಸಹಜ. ಆದರೆ ಇದು ಎಲ್ಲರಿಗೂ ಸಾಧ್ಯವಾಗಲ್ಲ. ಉತ್ತಮ ಆರೋಗ್ಯ ಹಾಗೂ ನಾವು ದೇಹವನ್ನು ಯಾವ ರೀತಿ ಆರೈಕೆ ಮಾಡುತ್ತೇವೆ ಎನ್ನುವ ಮೇಲೆ ಎಲ್ಲವೂ ಅಲಂಬಿತವಾಗಿದೆ. ಅದರಲ್ಲೂ ತ್ವಚೆಯ ಆರೈಕೆಯ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು.

ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗುವಂತಹ ತ್ವಚೆಯ ಆರೈಕೆಯ ಉತ್ಪನ್ನಗಳು ಜೇಬಿಗೂ ಕತ್ತರಿ ಬೀಳಿಸುತ್ತದೆ ಮತ್ತು ಇದರಿಂದ ಅಡ್ಡಪರಿಣಾಮಗಳು ಕೂಡ ಇದೆ. ಆದರೆ ಕೆಲವೊಂದು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡಬಹುದಾಗಿದೆ. ಅದರಲ್ಲು ಲ್ಯಾಕ್ಟಿಕ್ ಆ್ಯಸಿಡ್ ಹೊಂದಿರುವಂತಹ ಮೊಸರು ತ್ವಚೆಯ ಆರೈಕೆಗೆ ತುಂಬಾ ಒಳ್ಳೆಯದು.

Yogurt
 

ಮೊಸರು ಚರ್ಮದ ರಂಧ್ರಗಳನ್ನು ಬಿಗಿಗೊಳಿಸಿ ವಯಸ್ಸಾಗುವ ಲಕ್ಷಣಗಳನ್ನು ನಿವಾರಣೆ ಮಾಡಿ, ಕಪ್ಪುಕಲೆ ಉಂಟು ಮಾಡುವಂತಹ ಸತ್ತ ಚರ್ಮದ ಕೋಶಗಳು ಶೇಖರಣೆಯಾಗದಂತೆ ತಡೆಯುತ್ತದೆ. ಮೊಸರು ತುಂಬಾ ನೈಸರ್ಗಿಕ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲ. ಮೊಸರನ್ನು ಜೇನುತುಪ್ಪ, ಲಿಂಬೆ ಇತ್ಯಾದಿಗಳೊಂದಿಗೆ ಬಳಸಿದಾಗ ಆರೋಗ್ಯಕರವಾದ ತ್ವಚೆ ಪಡೆಯಬಹುದು.  ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಮೊಸರನ್ನು ಬಳಸಿಕೊಂಡು ತ್ವಚೆಯ ಆರೈಕೆ ಮಾಡುವುದು ಹೇಗೆಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಮೊಸರಿನ ಈ ಮಾಸ್ಕ್ ಅನ್ನು ಪ್ರಯತ್ನಿಸಿ ನೋಡಿ. ಸೂಚನೆ: ಯಾವುದೇ ಮಾಸ್ಕ್ ಅನ್ನು ತಯಾರಿಸಿದ ಬಳಿಕ ಅದನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ದೇಹದ ಬೇರೆ ಭಾಗಕ್ಕೆ ಹಚ್ಚಿಕೊಂಡು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುತ್ತದೆಯಾ ಎಂದು ಪರೀಕ್ಷಿಸಿ ನೋಡಿ.

Honey
 

ಮೊಸರು, ಓಟ್ಸ್ ಮತ್ತು ಜೇನುತುಪ್ಪ
*ಎರಡು ಚಮಚ ಮೊಸರಿಗೆ ಒಂದು ಚಮಚ ಓಟ್ಸ್ ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಿಕೊಳ್ಳಿ.
ಇದನ್ನು ಸರಿಯಾಗಿ ಮಿಶ್ರಣ ಮಾಡಿ.
*ಇನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ.
20 ನಿಮಿಷ ಹಾಗೆ ಬಿಟ್ಟು ಬಳಿಕ ಮುಖ ತೊಳೆಯಿರಿ.

Yogurt
 

2.ಮೊಸರು, ಕೋಕಾ ಹುಡಿ ಮತ್ತು ಜೇನುತುಪ್ಪ
*2 ಚಮಚ ತಾಜಾ ಮೊಸರಿಗೆ ಒಂದು ಚಮಚ ಕೋಕಾ ಹುಡಿ ಮತ್ತು ಒಂದು ಚಮಚ ಜೇನನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ.
ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮೃಧುವಾದ ಪೇಸ್ಟ್ ಮಾಡಿಕೊಳ್ಳಿ.
*ಇನ್ನು ಇದರ ಪೇಸ್ಟ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ ಮತ್ತು 20-25 ನಿಮಿಷ ಹಾಗೆ ಇರಲಿ.
ಉಗುರುಬೆಚ್ಚಗಿನ ನೀರಿನಿಂದ ಇದನ್ನು ತೊಳೆಯಿರಿ.

3.ಮೊಸರು, ಜೇನುತುಪ್ಪ ಮತ್ತು ರೋಸ್ ವಾಟರ್
*1 ಚಮಚ ತಾಜಾ ಮೊಸರು 1 ಚಮಚ ಜೇನುತುಪ್ಪ ಮತ್ತು 2-3 ಹನಿಯಷ್ಟು ರೋಸ್ ವಾಟರ್ ತೆಗೆದುಕೊಳ್ಳಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ.
*ತದನಂತರ ಮುಖ ಹಾಗೂ ಕುತ್ತಿಗೆ ಸರಿಯಾಗಿ ಹಚ್ಚಿಕೊಳ್ಳಿ.
*ಇದು 20 ನಿಮಿಷ ಕಾಲ ಇದು ಮುಖದಲ್ಲಿ ಹಾಗೆ ಇರಲಿ.
ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

turmeric
 

4. ಮೊಸರು ಹಾಗೂ ಅರಿಶಿನ ಹುಡಿ
*1 ಚಮಚ ತಾಜಾ ಮೊಸರು ಮತ್ತು ಒಂದು ಚಮಚ ಅರಿಶಿನ ಹುಡಿಯನ್ನು ಮಿಶ್ರಣ ಮಾಡಿಕೊಳ್ಳಿ.
ಇದನ್ನು ಸರಿಯಾಗಿ ತೊಳೆದ ಮುಖಕ್ಕೆ ಹಚ್ಚಿಕೊಳ್ಳಿ.
*ಈ ಮಾಸ್ಕ್ 20 ನಿಮಿಷ ಕಾಲ ಮುಖದ ಮೇಲಿರಲಿ.
*ಉಗುರುಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

cucumber
 

5. ಮೊಸರು ಮತ್ತು ಮುಳ್ಳುಸೌತೆ
*ಸಿಪ್ಪೆ ತೆಗೆದಿರುವ ಮುಳ್ಳುಸೌತೆಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಅದಕ್ಕೆ 2 ಚಮಚ ಮೊಸರನ್ನು ಹಾಕಿಕೊಳ್ಳಿ.
ಪೇಸ್ಟ್ ರೂಪಕ್ಕೆ ಬರುವ ತನಕ ಮಿಶ್ರಣ ಮಾಡಿ.
*ಇನ್ನು ಮುಖಕ್ಕೆ ಹಚ್ಚಿಕೊಳ್ಳಿ ಮತ್ತು 15-20 ನಿಮಿಷ ಕಾಲ ಹಾಗೆ ಇರಲಿ.
ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.            ಕೂದಲಿನ ಆರೈಕೆಗೆ, ಮೊಸರು-ಬೇವಿನ ಮ್ಯಾಜಿಕ್ ಚಿಕಿತ್ಸೆ

English summary

DIY Yogurt Face Masks For Gorgeous Skin

Tired of spending big bucks on skin care products and cosmetics to get a blemish-free, youthful skin? If so, then do read on, as today, we'll let you know about an excellent natural ingredient that caters to all your skin problems. The high content of lactic acid in yogurt makes it an ideal natural ingredient to get the kind of skin you've always yearned for. It is considered highly effective in tightening the pores, banishing the signs of ageing and preventing the buildup of dead skin cells that cause blackheads.
Please Wait while comments are loading...
Subscribe Newsletter