For Quick Alerts
ALLOW NOTIFICATIONS  
For Daily Alerts

ಮುಖದ ಅಂದಕ್ಕೆ, ಕಲ್ಲಂಗಡಿ-ಮೊಸರಿನ ಫೇಸ್ ಪ್ಯಾಕ್‌

By Jaya Subramanya
|

ಹೊಳೆಯುವ ಕಾಂತಿಯುಕ್ತ ತ್ವಚೆಯನ್ನು ಯಾರು ತಾನೇ ಪಡೆದುಕೊಳ್ಳಲು ಬಯಸುವುದಿಲ್ಲ ಹೇಳಿ? ಪ್ರತಿಯೊಬ್ಬ ಮಹಿಳೆಯ ಕನಸು ಕೂಡ ಸೌಂದರ್ಯವತಿಯಂತೆ ಕಂಗೊಳಿಸುವುದಾಗಿದೆ. ಆದರೆ ಬದಲಾಗುತ್ತಿರುವ ನಮ್ಮ ಜೀವನ ಶೈಲಿಯಿಂದ ನಮ್ಮ ಕನಸು ನನಸಾಗದೇ ಹಾಗೇ ಉಳಿದಿದೆ. ನೀವು ರಾಸಾಯನಿಕಗಳನ್ನು ನಿಮ್ಮ ಸೌಂದರ್ಯ ವರ್ಧಿಸಲು ಹೆಚ್ಚು ಹೆಚ್ಚು ಬಳಸಿದಂತೆಲ್ಲಾ ಇದರಿಂದ ಹಾನಿ ಸಂಭವಿಸುವುದು ಖಂಡಿತ. ಆದಷ್ಟು ನೈಸರ್ಗಿಕ ವಿಧಾನಗಳನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ಕಾಂತಿಯುಕ್ತ ಹೊಳೆಯುವ ಸುಂದರ ಮುಖಾರವಿಂದವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!

ಅಂತಹುದೇ ಉತ್ತಮ ನೈಸರ್ಗಿಕ ಫೇಶಿಯಲ್ ಮಾಸ್ಕ್ ರೆಸಿಪಿಯೊಂದಿಗೆ ನಾವು ಬಂದಿದ್ದು ಕಲ್ಲಂಗಡಿ ರಸ ಮತ್ತು ಮೊಸರು ಇದರಲ್ಲಿ ಪ್ರಧಾನವಾಗಿದೆ. ಉತ್ತಮ ಅಂಶಗಳನ್ನು ಒಳಗೊಂಡಿರುವ ಈ ನೈಸರ್ಗಿಕ ಉತ್ಪನ್ನಗಳು ಜೊತೆಯಾಗಿ ಸೇರಿಕೊಂಡಾಗ ನಿಮ್ಮ ತ್ವಚೆಯಲ್ಲಿ ಕಮಾಲನ್ನೇ ಉಂಟುಮಾಡುತ್ತದೆ.

DIY: Watermelon Juice And Yoghurt Mask To Get Soft & Glowing Skin

ಕಲ್ಲಂಗಡಿ ಎಲ್ಲರಿಗೂ ಪ್ರಯೋಜನಕಾರಿಯಾಗಿರುವ ಸೌಂದರ್ಯ ಗುಣಗಳನ್ನು ಉತ್ಪಾದಿಸುತ್ತದೆ. ಮಲ್ಟಿವಿಟಮಿನ್‌ಗಳನ್ನು ಒಳಗೊಂಡಿರುವ ಈ ಹಣ್ಣು 93% ನೀರನ್ನೇ ಒಳಗೊಂಡಿದ್ದು ತ್ವಚೆಯನ್ನು ಹೈಡ್ರೇಟ್ ಮಾಡುವಲ್ಲಿ ಅತ್ಯುತ್ತಮ ಪರಿಹಾರಕವಾಗಿದೆ. ವಿಶ್ವದಾದ್ಯಂತ ಬೇಸಿಗೆಯ ಧಗೆ ನಿವಾರಕ ಪಾನೀಯವಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ನೈಸರ್ಗಿಕ ಹೊಳಪನ್ನು ತ್ವಚೆಗೆ ನೀಡುತ್ತದೆ. ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಇದರಲ್ಲಿದ್ದು ಉತ್ಕರ್ಷಣ ನಿರೋಧಿ ಅಂಶಗಳು ಈ ಹಣ್ಣಿನಲ್ಲಿದೆ. ತ್ವಚೆಯ ಸಂಪೂರ್ಣ ಆರೋಗ್ಯಕ್ಕೆ ಈ ಹಣ್ಣು ಅತ್ಯುತ್ತಮ.

ರೀಫ್ರೆಶಿಂಗ್ ಅಂಶವನ್ನು ಈ ಹಣ್ಣು ಒಳಗೊಂಡಿದ್ದು ಫೇಶಿಯಲ್ ಮಾಸ್ಕ್‌ಗಾಗಿ ಅತ್ಯುತ್ತಮವಾದುದು. ಅಂತೆಯೇ ಹಲವಾರು ತ್ವಚೆಯ ಸಮಸ್ಯೆಗಳನ್ನು ದೂರಮಾಡಲು ಇದು ಪರಿಣಾಮಕಾರಿ. ಇದರೊಂದಿಗೆ ಬಳಸಲಾಗುವ ಮೊಸರು ಲ್ಯಾಕ್ಟಿಕ್ ಆಸಿಡ್‌ನೊಂದಿಗೆ ಶ್ರೀಮಂತಗೊಂಡಿದ್ದು ಮೊಡವೆಯೊಂದಿಗೆ ಹೋರಾಡುವ ಗುಣ, ಕಲೆ ಮತ್ತು ಚರ್ಮದ ಇತರೆ ತೊಂದರೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗಿದ್ದರೆ ಮತ್ತೇಕೆ ತ್ವಚೆಯನ್ನು ಸುಕೋಮಲಗೊಳಿಸುವ ಫೇಸ್ ಮಾಸ್ಕ್ ರೆಸಿಪಿಗೆ ಬೇಕಾಗಿರುವ ಉತ್ಪನ್ನಗಳ ಪಟ್ಟಿಯನ್ನು ನಾವು ಇಲ್ಲಿ ನೀಡಿದ್ದು ಅದನ್ನು ಬಳಸಿ ಮಾಸ್ಕ್ ತಯಾರಿಸಿ ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣು

ಸಾಮಾಗ್ರಿಗಳು
*2 ಚಮಚ ಕಲ್ಲಂಗಡಿ ರಸ
*2 ಚಮಚ ಮೊಸರು

ಬಳಸುವ ವಿಧಾನ
*2 ಸಾಮಾಗ್ರಿಗಳನ್ನು ಜೊತೆಯಾಗಿ ಬಳಸಿ
*ನಿಮ್ಮ ಕತ್ತು ಮತ್ತು ಮುಖಕ್ಕೆ ಇದನ್ನು ಸವರಿಕೊಳ್ಳಿ
*15-20 ನಿಮಿಷಗಳ ಕಾಲ ಹಾಗೆಯೇ ಬಿಡಿ
*ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ
ವಾರದಲ್ಲಿ ಎರಡು ಬಾರಿ ಈ ಪ್ರಯೋಗವನ್ನು ನಿಮ್ಮ ಮುಖಕ್ಕೆ ಮಾಡಿಕೊಳ್ಳಬಹುದು. ಈ ಮಾಸ್ಕ್ ಪರಿಣಾಮಕಾರಿಯಾಗಿ ಎಕ್ಸ್‌ಫೋಲಿಯೇಟ್, ಹೈಡ್ರೇಟ್ ಮತ್ತು ತ್ವಚೆಗೆ ಹೊಳೆಯುವ ಕಾಂತಿಯನ್ನು ನೀಡುತ್ತದೆ. ಇದರ ಜೊತೆಗೆ ತ್ವಚೆಯ ಹಲವಾರು ಸಮಸ್ಯೆಗಳನ್ನು ದೂರಮಾಡುತ್ತದೆ. ನಿಮ್ಮ ಬಿಡುವಿಲ್ಲದ ಸಮಯದಲ್ಲಿ ಕೇವಲ ಕೆಲವೇ ನಿಮಿಷಗಳನ್ನು ಈ ಮಾಸ್ಕ್ ತಯಾರಿಗಾಗಿ ಬಳಸಿಕೊಂಡು ಇದರ ಅತ್ಯುತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಿ.

English summary

DIY: Watermelon Juice And Yoghurt Mask To Get Soft & Glowing Skin

A soft and glowing skin is something that every woman dreams of. But, due to our lifestyle and environment, that dream stays unfulfilled.What if we told you that you can turn that dream into a reality by including a special facial mask in your beauty regimen. The facial mask that will make your dream of soft and radiant skin come true is of watermelon juice and yoghurt.
X
Desktop Bottom Promotion