ಸಿಂಪಲ್ ಬ್ಯೂಟಿ ಟಿಪ್ಸ್: ಸ್ಟ್ರಾಬೆರಿ ಫೇಸ್ ಸ್ಕ್ರಬ್!

ಸ್ಟ್ರಾಬೆರಿ ಹಣ್ಣುಗಳ ವಿಶೇಷತೆ ಏನು? ಹುಳಿ ಸಿಹಿ ಇರುವ ಈ ಹಣ್ಣಿನ ಬೀಜಗಳು ಇದರ ಹೊರಗಿರುತ್ತವೆ ಎಂಬುದೊಂದು ವಿಶೇಷವಾದರೆ ಹಣ್ಣನ್ನು ಸೇವಿಸುವ ಹೊರತಾಗಿ ತ್ವಚೆಯ ಆರೋಗ್ಯ ಮತ್ತು ಕಾಂತಿ ವೃದ್ಧಿಸುವ ಪ್ರಸಾಧನವಾಗಿಯೂ ಬಳಸಬಹುದು

By: jaya subramanya
Subscribe to Boldsky

ತ್ವಚೆಯನ್ನು ಸುಕೋಮಲಗೊಳಿಸುವುದಕ್ಕಾಗಿ ಹಲವಾರು ವಿಧಾನಗಳನ್ನು ನೀವು ಪ್ರಯತ್ನಿಸಿರುತ್ತೀರಿ ಅಲ್ಲವೇ? ಆದರೆ ಇವುಗಳು ನಿಮಗೆ ಬಯಸುವ ಫಲವನ್ನು ನೀಡಿಲ್ಲವೇ? ಹಾಗಿದ್ದರೆ ನೀವೇ ತಯಾರಿಸಬಹುದಾದ ಸ್ಟ್ರಾಬೆರಿ ಫೇಸ್ ಸ್ಕ್ರಬ್ ಮುಖಕ್ಕೆ ಯಾವ ರೀತಿಯಲ್ಲಿ ಪರಿಣಾಮವನ್ನು ಉಂಟುಮಾಡಲಿದೆ ಎಂಬುದನ್ನು ಕಂಡುಕೊಳ್ಳೋಣ.

Strawberry Face Scrub
 

ಸ್ಟ್ರಾಬೆರ್ರಿಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ವಿಟಮಿನ್ ಸಿ, ಮೊಡವೆಯನ್ನು ಹೋಗಲಾಡಿಸಿ ಒಣ ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ ಮತ್ತು ಹೊಸ ತ್ವಚೆಯ ಕೋಶಗಳನ್ನು ಮರುಉತ್ಪಾದಿಸುತ್ತದೆ. ಹಾಗಿದ್ದರೆ ಸ್ಟ್ರಾಬೆರಿ ಫೇಸ್ ಸ್ಕ್ರಬ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ನವ ತಾರುಣ್ಯದ ತ್ವಚೆಗಾಗಿ ಸ್ಟ್ರಾಬೆರಿ ಹಣ್ಣಿನ ಫೇಸ್ ಪ್ಯಾಕ್    

Strawberry
 

ಸ್ಟೆಪ್ #1
100 ಗ್ರಾಮ್‎ನಷ್ಟು ಸ್ಟ್ರಾಬೆರಿಯನ್ನು ತೆಗೆದುಕೊಂಡು ಅದನ್ನು ನುಣ್ಣನೆ ಪೇಸ್ಟ್ ಮಾಡಿಕೊಳ್ಳಿ

lime
 

ಸ್ಟೆಪ್ #2
1 ಚಮಚದಷ್ಟು ಲಿಂಬೆ ರಸವನ್ನು ಮತ್ತು ಎರಡು ಚಮಚ ಮಿಲ್ಕ್ ಪೌಡರ್ ಸೇರಿಸಿ. ಫೋರ್ಕ್ ಬಳಸಿಕೊಂಡು, ಎಲ್ಲಾ ಸಾಮಗ್ರಿಗಳನ್ನು ಮಿಶ್ರ ಮಾಡಿ ಮತ್ತು ನುಣ್ಣನೆಯ ಪೇಸ್ಟ್ ತಯಾರಿಸಿ.

ಸ್ಟೆಪ್ #3‎
ನಿಮ್ಮ ಮುಖವನ್ನು ತೊಳೆದುಕೊಳ್ಳಿ ಮತ್ತು ಮಾಸ್ಕ್‎ನಂತೆ ನಿಮ್ಮ ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ.

Strawberry Face Scrub
 

ಸ್ಟೆಪ್ #4
ಮಾಸ್ಕ್ ಅನ್ನು ಬಿಡಿಸಿಕೊಳ್ಳಲು ಸ್ವಲ್ಪ ನೀರನ್ನು ಚುಮುಕಿಸಿ. ವೃತ್ತಾಕಾರವಾಗಿ ಸ್ಕ್ರಬ್ ಮಾಡಿಕೊಳ್ಳಿ. ಇದರಿಂದ ರಕ್ತ ಪ್ರವಾಹ ವೃದ್ಧಿಗೊಳ್ಳುತ್ತದೆ. 5 ನಿಮಿಷಗಳ ಕಾಲ ಹೀಗೆ ಮಾಡಿ.          ಸ್ಟ್ರಾಬೆರಿಯಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು   

ಸ್ಟೆಪ್ #5
ಲಿಂಬೆ ರಸವಿರುವ ಕಪ್ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ತಣ್ಣನೆಯ ನೀರನ್ನು ಮುಖಕ್ಕೆ ಚಿಮುಕಿಸಿಕೊಳ್ಳಿ. 

Strawberry
 

ಸ್ಟೆಪ್ #6
ವಾರದಲ್ಲಿ ಎರಡು ಬಾರಿ ಸ್ಟ್ರಾಬೆರಿ ಫೇಸ್ ಸ್ಕ್ರಬ್ ಅನ್ನು ಬಳಸಿಕೊಂಡು ಮೃತಕೋಶಗಳನ್ನು ನಿವಾರಿಸಿಕೊಳ್ಳಿ. ತೆರೆದ ರಂಧ್ರಗಳನ್ನು ಮುಚ್ಚಿ ಸ್ವಚ್ಛ ಮುಖಕಾಂತಿಯನ್ನು ನಿಮಗೆ ಒದಗಿಸುತ್ತದೆ. ಸ್ಟ್ರಾಬೆರಿ ಫೇಸ್ ಸ್ಕ್ರಬ್ ಅನ್ನು ಪ್ರಯತ್ನಿಸಿ ನೋಡಿ ಮತ್ತು ಫಲಿತಾಂಶ ನಿಮ್ಮನ್ನು ಅಚ್ಚರಿಗೊಳಪಡಿಸಲಿದೆ. ನಿಮ್ಮ ಕಾಮೆಂಟ್ ಅನ್ನು ನಮಗೆ ತಿಳಿಸಿ.

English summary

DIY Strawberry Face Scrub You Need To Try Today!

Juicy, succulent, slightly tangy yet delectable, king of all fruits strawberry is coming up as a hot new ingredient in the beauty world. And we couldn't help but jump in the bandwagon and discover exactly what the buzz is all about!So, what makes herbal strawberry face scrub so good for your skin? have a look
Please Wait while comments are loading...
Subscribe Newsletter